1 : ಅದೇ ಸಂದರ್ಭದಲ್ಲಿ ಅಂತಿಯೋಕನು ಪರ್ಷಿಯಾ ಪ್ರಾಂತ್ಯದಿಂದ ದಿಕ್ಕಾಪಾಲಾಗಿ ಹಿಮ್ಮೆಟ್ಟಬೇಕಾಯಿತು.
2 : ಅವನು ‘ಪೆರ್ಸೆಪೊಲಿ’ ಎಂಬ ಪಟ್ಟಣವನ್ನು ಹೊಕ್ಕು ಅಲ್ಲಿನ ದೇವಾಲಯಗಳನ್ನು ಲೂಟಿಮಾಡಿ, ಪಟ್ಟಣವನ್ನು ಆಕ್ರಮಿಸಬೇಕೆಂದಿದ್ದನು. ಆಗ ಅಲ್ಲಿನ ಜನರು ರಕ್ಷಣೆಗಾಗಿ ಶಸ್ತ್ರಗಳೊಡನೆ ಧಾವಿಸಿಬರಲು ಅಂತಿಯೋಕನಿಗೆ ಮತ್ತು ಅವನ ಸೈನ್ಯಕ್ಕೆ ಸೋಲಾಯಿತು. ತತ್ಪರಿಣಾಮವಾಗಿ, ಸ್ಥಳೀಯ ನಿವಾಸಿಗಳು ಅಂತಿಯೋಕನನ್ನು ಓಡಿಸಿಬಿಟ್ಟರು; ನಾಚಿಕೆಗೇಡಿನಿಂದ ಅವನು ಹಿಮ್ಮೆಟ್ಟಬೇಕಾಯಿತು.
3 : ಅವನು ಎಕ್‍ಬತಾನಾದಲ್ಲಿರುವಾಗ, ನಿಕಾನೋರನಿಗೂ ತಿಮೊಥೇಯನ ಪಡೆಗಳಿಗೂ ಉಂಟಾದುದೆಲ್ಲದರ ಸಮಾಚಾರ ಸಿಕ್ಕಿತು.
4 : ಕೋಪದಿಂದ ಕೆರಳಿ, ಅವನನ್ನು ಓಡಿಸಿದ್ದಕ್ಕಾಗಿ ಯೆಹೂದ್ಯರಿಗೆ ಮುಯ್ಯಿತೀರಿಸುವ ಯೋಜನೆಯನ್ನು ಮಾಡಿದನು. ಆದುದರಿಂದ ಜೆರುಸಲೇಮನ್ನು ಮುಟ್ಟುವವರೆಗೂ ರಥವನ್ನು ನಿಲ್ಲಿಸಬಾರದೆಂದು ಸಾರಥಿಗೆ ಆಜ್ಞೆ ಇತ್ತನು. ಆದರೆ ದೇವರ ತೀರ್ಪು ಅವನೊಂದಿಗೆ ಸವಾರಿ ಮಾಡುತ್ತಿತ್ತು; ಕಾರಣ, “ನಾನು ಅಲ್ಲಿಗೆ ಹೋದಾಗ ಇಡೀ ಜೆರುಸಲೇಮನ್ನು ಯೆಹೂದ್ಯರ ಸಮಾಧಿಯನ್ನಾಗಿ ಮಾರ್ಪಡಿಸುವೆನು” ಎಂದು ದರ್ಪದಿಂದ ನುಡಿದಿದ್ದನು.
5 : ಆದರೆ ಎಲ್ಲವನ್ನೂ ನೋಡುವ ಸರ್ವೇಶ್ವರ, ಇಸ್ರಯೇಲಿನ ದೇವರು, ಅವನಿಗೆ ಅಗೋಚರವಾದೊಂದು ಮಾರಕ ವ್ಯಾಧಿ ಬರುವಂತೆ ಮಾಡಿದರು. ರಥವನ್ನು ನಿಲ್ಲಿಸಿ ಮಾತಾಡುತ್ತಿರುವಾಗಲೆ ದಿಢೀರೆಂದು ಹೊಟ್ಟೆಯಲ್ಲಿ ನೋವು ಉದ್ಭವಿಸಿತು; ಕಟುವಾಗಿ ಕರುಳು ಚುಚ್ಚಿದಂತಾಗುತ್ತಿತ್ತು. ಅದಕ್ಕೆ ಯಾವ ಔಷಧವೂ ದೊರಕಲಿಲ್ಲ.
6 : ಅದು ನ್ಯಾಯವಾದದ್ದೇ! ಕಾರಣ, ಅವನು ಇತರರ ಹೊಟ್ಟೆಯನ್ನು ಹಲವಾರು ವಿಚಿತ್ರ ರೀತಿಯಲ್ಲಿ ತಿವಿದಿದ್ದನು
7 : ಆದರೂ ಸಹ, ಅವನು ತನ್ನ ದಬ್ಬಾಳಿಕೆಯನ್ನು ನಿಲ್ಲಿಸಿರಲಿಲ್ಲ. ಬದಲಿಗೆ ಇನ್ನೂ ಹೆಚ್ಚು ಅಹಂಕಾರದಿಂದ ಯೆಹೂದ್ಯರ ಮೇಲೆ ಕೋಪಾಗ್ನಿಯನ್ನು ಕಾರುತ್ತಾ, ಇನ್ನೂ ವೇಗದಿಂದ ರಥವನ್ನು ನಡೆಸಬೇಕೆಂದು ಅಪ್ಪಣೆ ಮಾಡಿದನು. ಪರಿಣಾಮವಾಗಿ, ರಥವು ನಾಗಾಲೋಟದಿಂದ ಸಾಗುತ್ತಿರುವಾಗ ದೊಪ್ಪನೆ ಕೆಳಗೆ ಬಿದ್ದನು. ಹಾಗೆ ಬೀಳಲಾಗಿ ಅಡಿಯಿಂದ ಮುಡಿಯವರೆಗೂ ತುಂಬಾ ಏಟಾಯಿತು.
8 : ಸ್ವಲ್ಪಕಾಲಕ್ಕೆ ಮುಂಚೆ ಸಮುದ್ರದ ಅಲೆಗಳನ್ನೇ ತನ್ನ ಇಚ್ಛೆಯಂತೆ ನಡೆಸಲು ಸಾಧ್ಯ, ಬೆಟ್ಟವನ್ನೇ ತಕ್ಕಡಿಯಲ್ಲಿ ತೂಗಲು ತನಗೆ ಸಾಧ್ಯ ಎಂದು ಹೇಳಿಕೊಂಡವನು ತಟ್ಟನೆ ನೆಲದ ಮೇಲೆ ಬಿದ್ದುಬಿಟ್ಟನು. ಅವನನ್ನು ಹಾಸಿಗೆಯಲ್ಲಿ ಹೊತ್ತುಕೊಂಡು ಹೋಗಬೇಕಾಯಿತು. ಇದರಿಂದ ದೇವರ ಶಕ್ತಿ ಸರ್ವರಿಗೂ ಗೋಚರವಾಯಿತು.
9 : ಈ ವಿಶ್ವಾಸರಹಿತ ವ್ಯಕ್ತಿಯ ಕಣ್ಣುಗಳಿಗೂ ಹುಳು ಬಿದ್ದವು; ಅವನು ಜೀವದಿಂದ ಇರುವಾಗಲೇ ನರಕಯಾತನೆ ಅನುಭವಿಸಿದನು; ಅವನ ದೇಹ ಕೊಳೆತು ಹೋಯಿತು. ಕ್ಷಯಿಸುತ್ತಿದ್ದ ದೇಹದ ದುರ್ವಾಸನೆಯನ್ನು ಸೈನ್ಯಕ್ಕೆ ಸಹಿಸಲಸಾಧ್ಯವಾಯಿತು.
10 : ಸ್ವಲ್ಪಕಾಲಕ್ಕೆ ಮುಂಚೆ, ಆಕಾಶದ ನಕ್ಷತ್ರಗಳನ್ನೇ ಹಿಡಿಯಬಲ್ಲೆ ಎಂದು ಹೇಳಿದ ಮನುಷ್ಯನನ್ನು ಹೊತ್ತುಕೊಂಡು ಹೋಗುವುದು ಅಸಾಧ್ಯವಾಯಿತು. ಅವನು ಅಷ್ಟು ನಾರುತ್ತಿದ್ದನು!
ಅಂತಿಯೋಕನ ಮನಪರಿವರ್ತನೆ
11 : ಅಂತಿಯೋಕನು ಹೀಗೆ ದೇವ ಶಿಕ್ಷೆಗೆ ಗುರಿಯಾಗಿ ನಿರಂತರವಾದ ಘೋರಬಾಧೆಯನ್ನು ಅನುಭವಿಸಿದನು. ಈ ದುರವಸ್ಥೆಯ ಪರಿಣಾಮವಾಗಿ ಅಹಂಕಾರವನ್ನು ತ್ಯಜಿಸಿ ತಾಳ್ಮೆಯುಳ್ಳವನಾದನು.
12 : ತನ್ನ ದುರ್ವಾಸನೆಯನ್ನು ತಾನೇ ತಾಳಲಾಗದೆ, “ದೇವರಿಗೆ ವಿಧೇಯನಾಗಿರುವುದು ಒಳಿತು; ಮತ್ರ್ಯಮಾನವ ದೇವರಿಗೆ ಸಮನಾಗಲು ಬಯಸುವುದು ಸರಿಯಲ್ಲ,” ಎಂದನು.
13 : ಸರ್ವೇಶ್ವರಸ್ವಾಮಿ ಕರುಣೆ ತೋರದಿದ್ದುದರಿಂದ ಆ ದುಷ್ಟನು ದೇವರಿಗೆ ಹರಕೆಮಾಡಿಕೊಂಡನು.
14 : ಪವಿತ್ರ ಜೆರುಸಲೇಮನ್ನು ನೆಲಸಮ ಮಾಡಿ ಯೆಹೂದ್ಯರ ಸ್ಮಶಾನಭೂಮಿಯನ್ನಾಗಿ ಮಾರ್ಪಡಿಸುವೆನೆಂದವನು ಈಗ ಅದಕ್ಕೆ ಸ್ವಾತಂತ್ರ್ಯವನ್ನು ನೀಡುವುದಾಗಿ ಘೋಷಿಸಿದನು.
15 : ಮೃತರಾದ ಯೆಹೂದ್ಯರೂ ಅವರ ಮಕ್ಕಳೂ ಶವಸಂಸ್ಕಾರಕ್ಕೂ ಯೋಗ್ಯರಲ್ಲವೆಂದೂ ಅವರ ಶವಗಳು ಕಾಡುಪ್ರಾಣಿಗಳಿಗೂ ಪಕ್ಷಿಗಳಿಗೂ ಆಹಾರವಾಗಬೇಕೆಂದೂ ಹೇಳಿದಂಥವನು ಈಗ ಯೆಹೂದ್ಯರು ಹಕ್ಕು ಬಾಧ್ಯತೆಯಲ್ಲಿ ಅಥೆನ್ಸಿನ ಪ್ರಜೆಗಳಿಗೆ ಸಮಾನರೆಂದು ಸಾರಿದನು.
16 : ಮುಂಚೆ ಲೂಟಿ ಮಾಡಿದ ಮಹಾಪವಿತ್ರ ದೇವಾಲಯವನ್ನು ಈಗ ಅತಿ ಅಮೂಲ್ಯವಾದ ಕಾಣಿಕೆಗಳಿಂದ ಅಲಂಕರಿಸಬೇಕೆಂದನು. ಪವಿತ್ರ ಪಾತ್ರೆಗಳನ್ನೆಲ್ಲ ಇಮ್ಮಡಿ ಮುಮ್ಮಡಿಯಷ್ಟು ಹಿಂದಕ್ಕೆ ಕೊಡುವುದಾಗಿಯೂ ಬಲಿಯರ್ಪಣೆಗಳಿಗೆ ತಗಲುವ ವೆಚ್ಚವನ್ನು ತನ್ನ ರಾಜ್ಯದ ವರಮಾನದಿಂದ ಭರಿಸುವುದಾಗಿಯೂ ನಿರ್ಧರಿಸಿದನು.
17 : ಅಷ್ಟೇ ಅಲ್ಲದೆ, ತಾನೇ ಯೆಹೂದ್ಯ ಧರ್ಮವನ್ನು ಸ್ವೀಕರಿಸಿ, ದೇವರ ಶಕ್ತಿ ಸಾಮಥ್ರ್ಯಗಳನ್ನು ಸಾರಲು ಲೋಕದ ಜನರು ವಾಸವಾಗಿದ್ದೆಡೆಯೆಲ್ಲಾ ಸಂಚರಿಸುವುದಾಗಿ ತೀರ್ಮಾನಿಸಿಕೊಂಡನು.
ಯೆಹೂದ್ಯರಿಗೆ ಅಂತಿಯೋಕನ ಪತ್ರ
18 : ಯಾವ ವಿಧದಲ್ಲೂ ಅಂತಿಯೋಕನ ಯಾತನೆ ಕಡಿಮೆಯಾಗಲಿಲ್ಲ. ದೇವರ ತೀರ್ಪು ನ್ಯಾಯವಾಗಿ ಅವನ ಮೇಲೆ ಬಂದಿತ್ತು. ಅವನು ತನ್ನಲ್ಲಿಯೇ ನಿರಾಶೆಗೊಂಡವನಾಗಿ, ಯೆಹೂದ್ಯರಿಗೆ ಒಂದು ಪತ್ರವನ್ನು ಬರೆದನು. ಅದು ಬಿನ್ನವತ್ತಳೆಯ ರೂಪದಲ್ಲಿತ್ತು. ಅದರಲ್ಲಿ ಅಡಗಿದ್ದ ವಿಷಯ ಈ ಕೆಳಕಂಡಂತಿದೆ:
19 : ನನ್ನ ಗೌರವಾನ್ವಿತ ಪ್ರಜೆಗಳಾದ ಯೆಹೂದ್ಯರಿಗೆ, ಅರಸನೂ ಸೇನಾಧಿಪತಿಯೂ ಆದ ಅಂತಿಯೋಕನಿಂದ ಶುಭಾಶಯಗಳು! ನಿಮಗೆ ಕ್ಷೇಮವನ್ನೂ ಯಶಸ್ಸನ್ನೂ ಕೋರುತ್ತೇನೆ.
20 : ನೀವೂ ನಿಮ್ಮ ಮಕ್ಕಳೂ ಕ್ಷೇಮವಾಗಿದ್ದರೆ, ನಿಮ್ಮ ವ್ಯವಹಾರಗಳೆಲ್ಲ ಚೆನ್ನಾಗಿದ್ದರೆ, ನನಗೆ ಸಂತೋಷ.
21 : ನನ್ನ ಬಗ್ಗೆ ನಿಮಗಿದ್ದ ಪ್ರೀತಿಯನ್ನು ಸಂತೋಷದಿಂದ ಸ್ಮರಿಸುತ್ತೇನೆ.
ಪರ್ಷಿಯಾ ಪ್ರಾಂತ್ಯದಿಂದ ನಾನು ಹಿಂದಿರುಗುತ್ತಿರುವಾಗ ಘೋರವ್ಯಾಧಿಯಿಂದ ಸಂಕಟಪಟ್ಟೆ. ಆದುದರಿಂದ ಪ್ರಜೆಗಳ ಹಿತವನ್ನು ಕಾಪಾಡುವುದಕ್ಕಾಗಿ ಯೋಜನೆಗಳನ್ನು ಕೈಗೊಳ್ಳಬೇಕೆಂದು ತೀರ್ಮಾನಿಸಿದೆ.
22 : ನನ್ನ ದೇಹಸ್ಥಿತಿಯ ಬಗ್ಗೆ ನಂಬಿಕೆಯನ್ನು ಕಳೆದುಕೊಂಡಿಲ್ಲ: ನಾನು ಪುನಃ ಗುಣಮುಖನಾಗುತ್ತೇನೆಂಬ ಪೂರ್ಣ ನಂಬಿಕೆ ಇದೆ.
23 : ನನ್ನ ತಂದೆಯವರು ಯೂಫ್ರೆಟಿಸ್ ಪೂರ್ವಕ್ಕೆ ದಂಡಯಾತ್ರೆ ಹೋಗುವಾಗಲೆಲ್ಲಾ ಒಬ್ಬ ಉತ್ತರಾಧಿಕಾರಿಯನ್ನು ನೇಮಿಸುತ್ತಿದ್ದರು.
24 : ಇದರಿಂದ ಒಂದು ವೇಳೆ ಅನಿರೀಕ್ಷಿತವಾಗಿ ಏನಾದರೂ ಸಂಭವಿಸಿದರೆ ಅಥವಾ ಅಶುಭವಾದ ಸಮಾಚಾರ ಬಂದರೆ ರಾಜ್ಯದಾದ್ಯಂತ ಜನರಿಗೆ ತೊಂದರೆ ಯಾಗುವಂತಿರಲಿಲ್ಲ; ರಾಜ್ಯದ, ಜವಾಬ್ದಾರಿ ಯಾರ ಮೇಲಿದೆ ಎಂದು ಅವರಿಗೆ ತಿಳಿಯುತ್ತಿತ್ತು.
25 : ಇದಲ್ಲದೆ, ನಮ್ಮ ರಾಜ್ಯದ ಎಲ್ಲೆಯಲ್ಲಿರುವ ರಾಜರುಗಳು ಹಾಗು ನೆರೆ ರಾಜ್ಯದವರು ಸದಾವಕಾಶವನ್ನು ನಿರೀಕ್ಷಿಸುತ್ತಾ, ಏನಾಗುತ್ತದೋ ಎಂದು ನೋಡುತ್ತಾ ಇದ್ದಾರೆಂದು ನನಗೆ ಗೊತ್ತು. ಆದುದರಿಂದ ನಾನು ನನ್ನ ಮಗ ಅಂತಿಯೋಕನನ್ನು ಅರಸನನ್ನಾಗಿ ನೇಮಿಸಿದ್ದೇನೆ. ಹಲವು ಬಾರಿ ಅವನನ್ನು ನಿಮ್ಮ ಪಾಲನೆಗೆ ಒಪ್ಪಿಸಿದ್ದೇನೆ, ಯೂಫ್ರೆಟಿಸ್ ಪೂರ್ವ ಪ್ರದೇಶಕ್ಕೆ ಹೋದಾಗಲೆಲ್ಲ ನಿಮ್ಮಲ್ಲಿ ಅನೇಕರಿಗೆ ಅವನ ಬಗ್ಗೆ ಶಿಫಾರಸು ಮಾಡಿದ್ದೇನೆ. ಅವನಿಗೆ ಈ ಪತ್ರದ ನಕಲನ್ನು ಕಳುಹಿಸಿದ್ದೇನೆ.
26 : ನಾನು ನಿಮಗೆ ವೈಯಕ್ತಿಕವಾಗಿ ಹಾಗು ಇಡೀ ರಾಷ್ಟ್ರಕ್ಕಾಗಿ ಮಾಡಿದ್ದೆಲ್ಲವನ್ನು ನೆನಸಿಕೊಂಡು, ನನ್ನ ಹಾಗು ನನ್ನ ಮಗನ ಬಗ್ಗೆ ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಈಗ ಇರುವ ಪ್ರೀತಿ ವಿಶ್ವಾಸ ಮುಂದಕ್ಕೂ ಇರಲೆಂದು ಒತ್ತಾಯ ಪೂರ್ವಕವಾಗಿ ವಿನಂತಿಸುತ್ತೇನೆ.
27 : ಅವನು ನನ್ನ ರಾಜನೀತಿಯನ್ನು ಅನುಸರಿಸುತ್ತಾನೆ; ನಿಮ್ಮನ್ನು ಸಂಯಮ, ಸೌಜನ್ಯದಿಂದ ಕಾಣುತ್ತಾನೆ ಎಂಬ ಭರವಸೆ ನನಗಿದೆ.”
28 : ಬೆಳಗಾದಾಗ ಎರಡು ಸೈನ್ಯಗಳೂ ಕಾಳಗವನ್ನು ಪ್ರಾರಂಭಿಸಿದವು. ಒಂದು ಕಡೆಯವರು ತಮ್ಮ ಶಕ್ತಿಯಿಂದ ಮಾತ್ರವಲ್ಲ, ಸರ್ವೇಶ್ವರನ ಸಹಾಯದಿಂದ ವಿಜಯವನ್ನು ನಿರೀಕ್ಷಿಸುತ್ತಿರಲು ಮತ್ತೊಂದು ಕಡೆಯವರು ತಮ್ಮ ಶಕ್ತಿ ಸಾಮಥ್ರ್ಯವನ್ನೇ ಯುದ್ಧದ ಆಧಾರವನ್ನಾಗಿ ಮಾಡಿಕೊಂಡಿದ್ದರು.
29 : ಕಾಳಗವು ತೀವ್ರರೂಪ ತಾಳಲು ಶತ್ರುಗಳಿಗೆ ಸ್ವರ್ಗದಿಂದ ಒಂದು ದರ್ಶನವಾಯಿತು: ಅದರಲ್ಲಿ ಐದುಮಂದಿ ರಾಹುತರು ತೇಜಸ್ಸುಳ್ಳವರಾಗಿದ್ದು ತಮ್ಮ ಕುದುರೆಗಳ ಮೇಲೆ ಬಂಗಾರದ ಲಗಾಮುಗಳನ್ನು ಹಿಡಿದುಕೊಂಡು ಯೆಹೂದ್ಯರ ಮುಂದೆ ನಡೆಯುತ್ತಿದ್ದರು.
30 : ಅವರಲ್ಲಿ ಇಬ್ಬರು ತಮ್ಮ ಮಧ್ಯೆ ಯೂದಮಕ್ಕಬಿಯನನ್ನು ಇರಿಸಿಕೊಂಡು, ತಮ್ಮ ಸ್ವಂತ ಯುದ್ಧ ಕವಚಗಳು ಹಾಗು ಆಯುಧಗಳು ಅವನಿಗೆ ರಕ್ಷೆಯಾಗುವಂತೆಮಾಡಿ, ಅವನು ಗಾಯಗೊಳ್ಳದಂತೆ ನೋಡಿಕೊಂಡರು; ಶತ್ರುಗಳ ಮೇಲೆ ಬಾಣಗಳನ್ನು ಬಿಟ್ಟರು; ಸಿಡಿಲು ಬಡಿಯುವಂತೆ ಮಾಡಿದರು. ಪರಿಣಾಮವಾಗಿ ಶತ್ರುಗಳು ಕಣ್ಣುಕಟ್ಟುವಂತಾಗಿ ದಿಕ್ಕು ತೋಚದೆ ಚೆಲ್ಲಾಪಿಲ್ಲಿಯಾಗಿ ಓಡಿದರು; ತುಂಡು ತುಂಡಾಗಿ ಕಡಿಯಲ್ಪಟ್ಟರು.