1 : ಆ ಕಾಲದಲ್ಲಿ ಏಳುಮಂದಿ ಸಹೋದರರನ್ನು ಅವರ ತಾಯಿಯೊಂದಿಗೆ, ಅರಸನ ಅಪ್ಪಣೆಯ ಮೇರೆಗೆ ದಸ್ತಗಿರಿ ಮಾಡಲಾಯಿತು. ನಿಷೇಧಿಸಲಾಗಿದ್ದ ಹಂದಿಯ ಮಾಂಸವನ್ನು ತಿನ್ನಬೇಕೆಂದು ಅವರನ್ನು ಬಲವಂತ ಪಡಿಸಲಾಗಿತ್ತು. ಚಾಟಿಯಿಂದಲೂ ಬಾರುಗಳಿಂದಲೂ ಹೊಡೆದು ಅವರನ್ನು ಬಾಧಿಸಿದರು.
2 : ಅವರಲ್ಲೊಬ್ಬನು ಇತರರ ಪರವಾಗಿ ಮಾತನಾಡುತ್ತಾ, “ನಮ್ಮಿಂದ ನೀವು ಏನನ್ನು ತಿಳಿದುಕೊಳ್ಳಬಯಸುತ್ತೀರಿ? ನಮ್ಮ ಪೂರ್ವಜರ ಧರ್ಮವಿಧಿಗಳನ್ನು ಉಲ್ಲಂಘಿಸುವುದಕ್ಕೆ ಬದಲು, ನಾವು ಸಾಯುವುದಕ್ಕೆ ಸಿದ್ದ” ಎಂದನು.
3 : ಅರಸನು ಇದರಿಂದ ಕಡುಗೋಪಗೊಂಡು ಕಂಚಿನ ಹಂಡೆಗಳನ್ನೂ ಬಾಣಲೆಗಳನ್ನೂ ಕಾಯಿಸಬೇಕೆಂದು ಆಜ್ಞಾಪಿಸಿದನು.
4 : ತಕ್ಷಣವೇ ಅವುಗಳನ್ನು ಕಾಯಿಸಲಾಯಿತು. ಮೊದಲು ಮಾತನಾಡಿದವನ ನಾಲಗೆಯನ್ನು ಕೊಯ್ಯಲು, ತಲೆಯ ಚರ್ಮವನ್ನು ಸುಲಿಯಲು, ಕೈಕಾಲುಗಳನ್ನು ಕತ್ತರಿಸಿ ಹಾಕಲು ಅಜ್ಞಾಪಿಸಿದನು. ಅವನ ಇತರ ಸಹೋದರರೂ ತಾಯಿಯೂ ಅದನ್ನು ನೋಡುತ್ತಾ ನಿಂತಿರಬೇಕೆಂದು ಅಪ್ಪಣೆ ಮಾಡಿದನು.
5 : ಇದರಿಂದ ಸಂಪೂರ್ಣ ನಿಶ್ಯಕ್ತನಾಗಿರುವಾಗ ಇನ್ನೂ ಉಸಿರಾಡುತ್ತಿರುವಾಗಲೇ ಒಲೆಯ ಬಳಿ ತೆಗೆದುಕೊಂಡು ಹೊಗಿ, ಬಾಣಲೆಯಲ್ಲಿ ಅವನನ್ನು ಹಾಕಿ ಹುರಿಯಬೇಕೆಂದು ರಾಜನು ಆಜ್ಞಾಪಿಸಿದನು. ಬಾಣಲೆಯಿಂದ ಎಲ್ಲಾಕಡೆ ಹೊಗೆ ಹರಡಿತು. ಇತರ ಸಹೋದರರೂ ಅವರ ತಾಯಿಯೂ ಸಾಯಲು ಸಿದ್ಧರಾಗಬೇಕೆಂದು ಒಬ್ಬರನ್ನೊಬ್ಬರು ಹುರಿದುಂಬಿಸಿದರು;
6 : “ದೇವರಾದ ಸರ್ವೇಶ್ವರಸ್ವಾಮಿ ನಮ್ಮನ್ನು ಕಾಯುತ್ತಾರೆ; ನಿಜವಾಗಿಯೂ ನಮ್ಮ ಮೇಲೆ ದಯೆತೋರುತ್ತಾರೆ; ಮೋಶೆಯು, ಜನರ ಮುಂದೆ ಸಾಕ್ಷಿಯಾಗಿ ಹಾಡಿದ ಕೀರ್ತನೆಯಲ್ಲಿ, ‘ಅವರು ತಮ್ಮ ದಾಸರಿಗೆ ಕರುಣೆ ತೋರುತ್ತಾರೆ’ ಎಂದಂತೆ ನಮಗೂ ಉಪಶಮನವನ್ನೀಯುವರು,” ಎಂದು ಹೇಳಿಕೊಂಡರು.
7 : ಮೊದಲನೆಯ ಸಹೋದರನು ಈ ರೀತಿ ಸತ್ತನಂತರ, ವಿರೋಧಿಗಳು ಎರಡನೆಯವನನ್ನು ತಮ್ಮ ವಿನೋದಕ್ಕಾಗಿ ಮುಂದೆ ತಂದರು. ಅವನ ತಲೆಯ ಕೂದಲನ್ನು ಚರ್ಮದೊಂದಿಗೆ ಸುಲಿದು, “ಈಗ ಹಂದಿಮಾಂಸವನ್ನು ತಿನ್ನುತ್ತೀಯೋ ಅಥವಾ ಅಂಗಾಂಗಗಳನ್ನು ಒಂದೊಂದಾಗಿ ಕಡಿದು ಹಾಕೋಣವೋ?” ಎಂದು ಕೇಳಿದರು.
8 : ಆದರೆ ಅವನು ತನ್ನ ಮಾತೃಭಾಷೆಯಲ್ಲಿ, “ಇಲ್ಲ, ನಾನು ತಿನ್ನುವುದಿಲ್ಲ,” ಎಂದನು. ಆಗ ಮೊದಲಿನವನಿಗೆ ಮಾಡಿದಂತೆ ಎರಡನೆಯವನಿಗೂ ಚಿತ್ರಹಿಂಸೆ ಕೊಟ್ಟರು.
9 : ಅವನು ಕೊನೆಯುಸಿರು ಎಳೆಯುತ್ತಿರುವಾಗ ಅರಸನನ್ನು ನೋಡಿ, “ಹೇ ಕಟುಕನೇ, ಇಲ್ಲಿರುವಾಗ ನಮ್ಮ ಜೀವವನ್ನು ತೆಗೆದು ಬಿಡುತ್ತೀಯಾ ಸರಿ; ಆದರೆ ವಿಶ್ವದ ಒಡೆಯರಾದ ದೇವರು, ನಮ್ಮನ್ನು ಅಮರ ಹಾಗೂ ಪುನಶ್ಚೇತನಗೊಳಿಸುವ ಜೀವಕ್ಕೆ ಎಬ್ಬಿಸುತ್ತಾರೆ; ಕಾರಣ, ನಾವು ಅವರ ಆಜ್ಞಾಪಾಲನೆಗಾಗಿ ಪ್ರಾಣಬಿಟ್ಟಿದ್ದೇವೆ,” ಎಂದನು.
10 : ಅವನ ತರುವಾಯ ಅವರು ವಿನೋದಕ್ಕಾಗಿ ಮೂರನೆಯವನನ್ನು ಹಿಡಿದುಕೊಂಡರು. ನಾಲಗೆ ಚಾಚಬೇಕೆಂದು ಹೇಳಿದಾಗ ಅವನು ತಕ್ಷಣವೇ ನಾಲಗೆಯನ್ನು ಚಾಚಿದನು; ಧೈರ್ಯದಿಂದ ತನ್ನ ಕೈಗಳನ್ನೂ ಮುಂದಕ್ಕೆ ಒಡ್ಡುತ್ತಾ,
11 : “ನಾನು ಇವುಗಳನ್ನು ಪರಲೋಕದಿಂದ ಪಡೆದೆನು. ಅವರ ನಿಯಮಕ್ಕಾಗಿ ಇವುಗಳನ್ನು ತೊರೆಯುತ್ತೇನೆ. ಆದರೆ ಪುನಃ ನಾನು ಅವುಗಳನ್ನು ಪಡೆಯುವೆನು, ಇದು ನನ್ನ ದೃಢನಂಬಿಕೆ!” ಎಂದನು.
12 : ತತ್ಪರಿಣಾಮವಾಗಿ, ರಾಜನೂ ಅವನೊಂದಿಗಿದ್ದ ಇತರರೂ ಈ ಯುವಕನ ಧೈರ್ಯವನ್ನು ನೋಡಿ ನಿಬ್ಬೆರಗಾದರು; ಅವನು ತನ್ನ ಉಪದ್ರವಗಳನ್ನು ಕಿಂಚಿತ್ತು ಲೆಕ್ಕಿಸಲಿಲ್ಲ.
13 : ಅವನು ಸತ್ತಮೇಲೆ, ನಾಲ್ಕನೆಯವನನ್ನು ಸಹ ಅದೇ ಪ್ರಕಾರ ಹಿಂಸಿಸಿ ಉಪದ್ರವಪಡಿಸಿದರು.
14 : ಅವನು ಪ್ರಾಣಬಿಡುವಾಗ, “ಮತ್ರ್ಯಮಾನವರ ಕೈಗಳಿಂದ ಸಾವನ್ನು ಅನುಭವಿಸಿ, ದೇವರಿಂದ ಮರಳಿ ಎಬ್ಬಿಸಲ್ಪಡುವೆನೆಂಬ ದೇವದತ್ತ ನಿರೀಕ್ಷೆಯನ್ನು ಎದುರುನೋಡುವುದು ಶ್ರೇಯಸ್ಕರ; ನೀವಾದರೋ ಜೀವಕ್ಕೆ ಪುನಃ ಉತ್ಥಾನವಾಗುವಂತಿಲ್ಲ,” ಎಂದನು.
15 : ಬಳಿಕ ಐದನೆಯವನನ್ನು ಹಿಡಿದು ಉಪದ್ರವಪಡಿಸಿದರು.
16 : ಅವನು ರಾಜನನ್ನು ನೋಡಿ, “ನೀನು ಕೇವಲ ನರಮಾನವನಾಗಿ ಇದ್ದರೂ, ನಿನಗೆ ಮಾನವರ ಮೇಲೆ ಅಧಿಕಾರ ಇರುವುದರಿಂದ, ನಿನಗೆ ಇಷ್ಟಬಂದಂತೆ ಮಾಡುತ್ತಿರುವೆ. ಆದರೆ ದೇವರು ತಮ್ಮ ಜನರನ್ನು ತೊರೆದು ಬಿಟ್ಟಿದ್ದಾರೆಂದು ಮಾತ್ರ ನೆನೆಸಬೇಡ.
17 : ಸ್ವಲ್ಪಕಾಲ ಕಾದಿರು. ದೇವರು ತಮ್ಮ ಮಹಾಶಕ್ತಿಯಿಂದ ನಿನ್ನನ್ನೂ ನಿನ್ನ ಸಂತತಿಯನ್ನೂ ಹೇಗೆ ದಂಡಿಸುವರು ಎಂಬುದನ್ನು ಕಾಣುವಿಯಂತೆ!” ಎಂದನು.
18 : ಅವನಾದನಂತರ ಅವರು ಆರನೆಯವನನ್ನು ತಂದರು. ಅವನು ಸಾಯುವುದಕ್ಕೆ ಮುಂಚೆ, “ಅನಾವಶ್ಯಕವಾಗಿ ಮೋಸಹೋಗದಿರು; ನಾವು ನಮ್ಮ ದೇವರ ವಿರುದ್ಧ ಕಟ್ಟಿಕೊಂಡ ಪಾಪಗಳಿಗಾಗಿ ತಕ್ಕ ಯಾತನೆಯನ್ನು ಅನುಭವಿಸುತ್ತಿದ್ದೇವೆ. ವಿಪರೀತವಾದ ಸಂಗತಿಗಳು ನಡೆದುಹೋದವು;
19 : ನೀನಾದರೋ, ದೇವರಿಗೆ ವಿರುದ್ಧ ಹೋರಾಡಲು ಯತ್ನಿಸಿದ್ದರಿಂದ ಶಿಕ್ಷೆಯಿಂದ ತಪ್ಪಿಸಿಕೊಳ್ಳುವೆ ಎಂದು ನೆನೆಸಬೇಡ,” ಎಂದನು.
20 : ಎಲ್ಲಕ್ಕಿಂತಲೂ ಮಿಗಿಲಾಗಿ ಅವರ ತಾಯಿಯ ವರ್ತನೆ ಅತೀ ಆಶ್ವರ್ಯಕರವಾಗಿತ್ತು! ಆಕೆ ಚಿರಸ್ಮರಣೆಗೆ ಪಾತ್ರಳಾದವಳು. ಒಂದೇ ದಿನದಲ್ಲಿ ತನ್ನ ಏಳು ಮಕ್ಕಳು ಕಣ್ಮುಂದೆ ಸತ್ತಿದ್ದರೂ, ದೇವರಲ್ಲಿ ಅವಳಿಗಿದ್ದ ನಂಬಿಕೆಯ ನಿಮಿತ್ತ ಎಲ್ಲವನ್ನೂ ಧೈರ್ಯದಿಂದ ಸಹಿಸಿಕೊಂಡಳು.
21 : ಉದಾತ್ತ ಮನೋಭಾವದಿಂದ ತುಂಬಿದವಳಾಗಿ, ತನ್ನ ಸ್ತ್ರೀಸಹಜವಾದ ಆವೇಶದೊಂದಿಗೆ ಪೌರುಷತ್ವವನ್ನೂ ಕೂಡಿಸಿ, ಒಬ್ಬೊಬ್ಬನಿಗೂ ಮಾತೃಭಾಷೆಯಲ್ಲಿ:
22 : “ನೀವು ಹೇಗೆ ನನ್ನ ಉದರದಲ್ಲಿ ಉದ್ಭವಿಸಿದಿರಿ ಎಂಬುದನ್ನು ನಾನು ಅರಿಯೆ. ನಿಮಗೆ ಜೀವವನ್ನೂ ಉಸಿರನ್ನೂ ಕೊಟ್ಟದ್ದು ನಾನಲ್ಲ. ನಿಮ್ಮ ದೇಹದ ಅಂಗಾಂಗಗಳನ್ನು ಜೋಡಿಸಿದ್ದೂ ನಾನಲ್ಲ.
23 : ಲೋಕವನ್ನು ಸೃಷ್ಟಿಸಿದವರೇ ಅದನ್ನೆಲ್ಲ ಮಾಡಿದ್ದು. ಅವರೇ ಮಾನವ ಕೋಟಿಯನ್ನು ಉಂಟುಮಾಡಿದವರು. ಸಕಲಕ್ಕೂ ಆದಿಕಾರಣರು ಅವರೇ. ಅವರ ಆಜ್ಞೆಗಳನ್ನು ಪಾಲಿಸುವುದಕ್ಕಾಗಿ ನೀವು ಹಿಂಸೆಗೊಳಗಾಗುವುದರಿಂದ, ಅವರು ಕರುಣೆಯಿಂದ ನಿಮಗೆ ಜೀವವನ್ನೂ ಉಸಿರನ್ನೂ ಹಿಂದಕ್ಕೆ ಕೊಡುವರು,” ಎಂದು ಹುರಿದುಂಬಿಸಿದಳು.
24 : ಇದರಿಂದ ಅಂತಿಯೋಕನಿಗೆ ಅವಮಾನವಾದಂತೆ ತೋರಿತು. ತನ್ನನ್ನೇ ಅವಳು ಹೀನೈಸುತ್ತಿದ್ದಾಳೆಂಬುದರ ಬಗ್ಗೆ ಸಂಶಯ ಮೂಡಿತು. ಅವಳ ಕೊನೆಯ ಮಗ ಇನ್ನೂ ಉಳಿದಿದ್ದ. ಅಂತಿಯೋಕನು ಅವನನ್ನು ಮಾತುಗಳಿಂದ ಪುಸಲಾಯಿಸಿದನು; ಅವನು ತನ್ನ ಪೂರ್ವಜರ ಆಚಾರಗಳನ್ನು ತೊರೆದು ಬಿಡುವುದಾದರೆ ಅವನನ್ನು ಐಶ್ವರ್ಯವಂತನನ್ನಾಗಿ, ಉನ್ನತ ಪದವಿಯುಳ್ಳವನಾಗಿ ಮಾಡುವುದಾಗಿಯೂ ಅವನನ್ನು ತನ್ನ ಸ್ನೇಹಿತನೆಂದೆಣಿಸಿ ರಾಜ್ಯದ ವ್ಯವಹಾರಗಳ ಮೇಲ್ವಿಚಾರಕನಾಗಿ ನೇಮಿಸುವುದಾಗಿಯೂ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದನು.
25 : ಆದರೆ ಆ ಯುವಕನು ಅವನಿಗೆ ಯಾವ ವಿಧದಲ್ಲೂ ಕಿವಿಗೊಡಲಿಲ್ಲ. ಆಗ ಅರಸನು ಆ ತಾಯಿಯನ್ನು ಬಳಿಗೆ ಕರೆಸಿ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವಂತೆ ಆ ಹುಡುಗನಿಗೆ ಬುದ್ಧಿ ಹೇಳಬೇಕೆಂದು ಒತ್ತಾಯಿಡಿದನ.
26 : ಅರಸನು ಬಹಳವಾಗಿ ಒತ್ತಾಯಿಸಿದ ಮೇಲೆ, ತಾಯಿ ಮಗನಿಗೆ ಬುದ್ಧಿ ಹೇಳಿದಳು.
27 : ಮಗನ ಮೇಲೆ ಒರಗಿಕೊಂಡು, ಕ್ರೂರಿಯಾದ ಅರಸನನ್ನು ಪರಿಹಾಸ್ಯ ಮಾಡುತ್ತಾ, ಮಾತೃಭಾಷೆಯಲ್ಲೇ ಹೀಗೆಂದಳು: “ಮಗನೇ, ನನ್ನ ಮೇಲೆ ಮರುಕವಾಗಿರು. ಒಂಬತ್ತು ತಿಂಗಳು ನಿನ್ನನ್ನು ನನ್ನ ಉದರದಲ್ಲಿ ಹೊತ್ತೆ. ಮೂರು ವರ್ಷ ಮೊಲೆಯುಡಿಸಿ ನಿನ್ನನ್ನು ಸಾಕಿಸಲಹಿದೆ. ನಿನ್ನ ಜೀವನದ ಈ ಗಳಿಗೆಯವರೆಗೂ ನಿನ್ನನ್ನು ಪೋಷಿಸಿ ಸಾಕಿದೆ. ನಿನ್ನ ಆರೈಕೆ ಮಾಡಿದೆ.
28 : ಮಗನೇ, ಸ್ವರ್ಗವನ್ನೂ ಭೂಮಿಯನ್ನೂ ಅದರಲ್ಲಿರುವುದೆಲ್ಲವನ್ನೂ ನೋಡು, ಏನೂ ಇಲ್ಲದೆ ದೇವರು ಅದೆಲ್ಲವನ್ನೂ ಉಂಟುಮಾಡಿದರು. ಮಾನವ ಕೋಟಿಯು ಸಹ ಅದೇ ರೀತಿ ಉಂಟಾಯಿತು; ಇದನ್ನು ಒಪ್ಪಿಕೋ.
29 : ಈ ಕಟುಕನಿಗೆ ನೀನು ಹೆದರಬೇಡ. ನೀನು ನಿನ್ನ ಸಹೋದರರಿಗೆ ಯೋಗ್ಯ ತಮ್ಮನೆಂದು ಸಾಬೀತು ಪಡಿಸು. ಸಾವನ್ನು ಅಪ್ಪು. ಹೀಗೆ ದೇವರ ಕರುಣೆಯಿಂದ, ನಿನ್ನ ಸಹೋದರರೊಂದಿಗೆ ನಿನ್ನನ್ನು ನಾನು ಪುನಃ ಪಡೆಯುವಂತಾಗಲಿ!”
30 : ಈ ಕಟುಕನಿಗೆ ನೀನು ಹೆದರಬೇಡ. ನೀನು ನಿನ್ನ ಸಹೋದರರಿಗೆ ಯೋಗ್ಯ ತಮ್ಮನೆಂದು ಸಾಬೀತು ಪಡಿಸು. ಸಾವನ್ನು ಅಪ್ಪು. ಹೀಗೆ ದೇವರ ಕರುಣೆಯಿಂದ, ನಿನ್ನ ಸಹೋದರರೊಂದಿಗೆ ನಿನ್ನನ್ನು ನಾನು ಪುನಃ ಪಡೆಯುವಂತಾಗಲಿ!”
31 : ಹಿಬ್ರಿಯರಾದ ನಮ್ಮ ಜನರಿಗೆ ಇಂಥ ದುಷ್ಕøತ್ಯಗಳನ್ನು ಎಸಗಿರುವ ನೀನು ಖಂಡಿತವಾಗಿಯೂ ದೇವರ ಕೈಯಿಂದ ತಪ್ಪಿಸಿಕೊಳ್ಳುವಂತಿಲ್ಲ.
32 : ನಾವು ನಮ್ಮ ಪಾಪಗಳಿಗಾಗಿ ಹಿಂಸೆಯನ್ನು ಅನುಭವಿಸುತ್ತಿದ್ದೇವೆ.
33 : ಜೀವಸ್ವರೂಪರಾದ ನಮ್ಮ ಸರ್ವೇಶ್ವರ ತಾತ್ಕಾಲಿಕವಾಗಿ ನಮ್ಮೊಡನೆ ಕೋಪವಾಗಿದ್ದು ನಮ್ಮನ್ನು ಶಿಕ್ಷಿಸುತ್ತಿದ್ದಾರೆ; ಅವರು ತಮ್ಮ ದಾಸರೊಂದಿಗೆ ಪುನಃ ಸಂಧಾನ ಮಾಡಿಕೊಳ್ಳುತ್ತಾರೆ.
34 : ಆದರೆ ದುಷ್ಟಕೇಡಿಗನೇ, ದೇವದ್ರೋಹಿಯೇ, ಮಹಾದುರುಳನೇ, ಸ್ವರ್ಗೀಯ ದೇವರ ಮಕ್ಕಳ ಮೇಲೆ ಕೈಯೆತ್ತುವಂಥ ನೀನು ವ್ಯರ್ಥವಾಗಿ ಕೊಚ್ಚಿಕೊಳ್ಳಬೇಡ, ಅಸ್ಥಿರ ನಂಬಿಕೆಯಿಂದ ಉಬ್ಬಿಹೋಗಬೇಡ;
35 : ಸರ್ವಶಕ್ತ, ಸರ್ವಜ್ಞಾನಿಯಾದ ದೇವರ ತೀರ್ಪಿನಿಂದ ನೀನು ಇನ್ನೂ ತಪ್ಪಿಸಿಕೊಂಡಿಲ್ಲ.
36 : ಕೊಂಚಕಾಲ ಹಿಂಸೆಯನ್ನು ಅನುಭವಿಸಿದ ನನ್ನ ಸಹೋದರರು, ದೇವರು ಮಾಡಿದ ಒಡಂಬಡಿಕೆಯ ಪ್ರಕಾರ ನಿತ್ಯಕ್ಕೂ ಹರಿಯುವ ಜೀವಜಲವನ್ನು ಕುಡಿದಿದ್ದಾರೆ. ಆದರೆ ನೀನೋ, ದೇವರ ತೀರ್ಪಿನ ಪ್ರಕಾರ, ನಿನ್ನ ಅಹಂಕಾರಕ್ಕಾಗಿ ನ್ಯಾಯಯುತ ಶಿಕ್ಷೆಯನ್ನು ಪಡೆಯುವೆ.
37 : ನಾನೋ, ನನ್ನ ಅಣ್ಣಂದಿರಂತೆ, ನಮ್ಮ ಪೂರ್ವಜರ ನಿಯಮಗಳಿಗಾಗಿ, ದೇಹವನ್ನೂ ಜೀವವನ್ನೂ ತ್ಯಾಗ ಮಾಡುತ್ತೇನೆ. ಹಾಗೆಯೇ, ದೇವರು ತಮ್ಮ ಜನರ ಮೇಲೆ ಕರುಣೆತೋರಲಿ, ಅವರೊಬ್ಬರೇ ದೇವರೆಂದು ನೀನೂ ಕಷ್ಟ ಹಿಂಸೆಗಳ ನಡುವೆ ನಿವೇದಿಸುವಂತೆ ಮಾಡಲಿ ಎಂದು ದೇವರಲ್ಲಿ ವಿನಂತಿಸಿಕೊಳ್ಳುತ್ತೇನೆ.
38 : ಅದಲ್ಲದೆ, ನನ್ನ ಹಾಗು ನನ್ನ ಅಣ್ಣಂದಿರ ಮುಖಾಂತರ ನಮ್ಮ ರಾಷ್ಟ್ರದ ಮೇಲೆ ನ್ಯಾಯವಾಗಿ ಎರಗಿರುವ ತಮ್ಮ ಕೋಪಾಗ್ನಿಯನ್ನು ಕೊನೆಗಾಣಿಸಬೇಕೆಂದು ಆ ದೇವರಿಗೆ ಮೊರೆಯಿಡುತ್ತೇನೆ,” ಎಂದು ಹೇಳಿದನು.
39 : ಈ ನಿಂದೆಯ ಮಾತುಗಳಿಂದ ಉದ್ರೇಕಗೊಂಡ ಅಂತಿಯೋಕನು ಕೋಪದಿಂದ ಕೆರಳಿ, ಇತರರಿಗಿಂತಲೂ ಹೆಚ್ಚು ಕಠಿಣವಾಗಿ ಆ ಯುವಕನನ್ನು ಬಾಧಿಸಿದನು.
40 : ಯುವಕನು ಹೀಗೆ ಸರ್ವೇಶ್ವರನಲ್ಲಿ ಪೂರ್ಣ ಭರವಸೆಯಿಟ್ಟು ಸಜ್ಜನನಾಗಿ ಸತ್ತನು.
41 : ತನ್ನ ಎಲ್ಲಾ ಮಕ್ಕಳ ತರುವಾಯ ತಾಯಿಯೂ ಮಡಿದಳು
42 : ಬಲಿಭೋಜನ ಹಾಗೂ ಯೆಹೂದ್ಯರ ಘೋರಬಾಧೆಗಳ ಬಗ್ಗೆ ಸಾಕಷ್ಟು ಹೇಳಿದ್ದಾಯಿತು.
ಯೂದ ಮಕ್ಕಬಿಯನ ದಂಗೆ