Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಮಕ್ಕಬಿ


1 : 160ನೇ ವರ್ಷ ಅಂತಿಯೋಕನ ಮಗ ಅಲೆಕ್ಸಾಂಡರ್ ಎಪಿಫನೇಸನು ಪ್ತೊಲೆಮಾಯ ಪಟ್ಟಣವನ್ನು ಆಕ್ರಮಿಸಿಕೊಂಡನು. ಅಲ್ಲಿಯವರು ಅವನನ್ನು ಅಂಗೀಕರಿಸಲು, ಅವನು ದೊರೆಯಾಗಿ ಆಳಿದನು.
2 : ಅರಸ ದೆಮೆತ್ರಿಯನು ಇದನ್ನು ಕೇಳಿ ಮಹಾ ಸೈನ್ಯವೊಂದನ್ನು ಕೂಡಿಸಿಕೊಂಡು ಅವನ ಮೇಲೆ ಯುದ್ಧಕ್ಕೆ ಹೋದನು.
3 : ದೆಮೆತ್ರಿಯನು ಯೋನಾತನನನ್ನು ಹೊಗಳಿ, ಶಾಂತಿಯುತ ಮಾತುಗಳಿಂದ ಕೂಡಿದ ಕಾಗದಗಳನ್ನು ಅವನಿಗೆ ಕಳುಹಿಸಿದನು.
3 : ಪ್ತೊಲೆಮೇಯನು ತಾನು ಸೇರಿದ ಪ್ರತಿಯೊಂದು ನಗರದಲ್ಲಿಯೂ ತನ್ನ ರಕ್ಷಣ ಸೈನ್ಯವನ್ನು ಇರಿಸುತ್ತಾ ಬಂದನು.
4 : ಏಕೆಂದರೆ, “ಅವನು ನಮ್ಮ ವಿರೋಧವಾಗಿ ಅಲೆಕ್ಸಾಂಡರನೊಂದಿಗೆ ಶಾಂತಿ ಸಂಧಾನಮಾಡಿಕೊಳ್ಳುವ ಮೊದಲೇ ಅವನೊಂದಿಗೆ ಸಂಧಾನಮಾಡಿಕೊಳ್ಳೋಣ;
5 : ಏಕೆಂದರೆ ನಾವು ಅವನಿಗೂ ಅವನ ಸಹೋದರರಿಗೂ ಅವನ ಜನಾಂಗಕ್ಕೂ ಮಾಡಿದ ಎಲ್ಲಾ ಕೇಡನ್ನು ನೆನಪಿಗೆ ತಂದುಕೊಂಡಾನು,” ಎಂದು ಭಾವಿಸಿದನು.
6 : ಯೋನಾತನನಿಗೆ ದಂಡನ್ನು ಕೂಡಿಸಿಕೊಳ್ಳುವುದಕ್ಕೂ ಆಯುಧಗಳನ್ನು ಒದಗಿಸುವುದಕ್ಕೂ ತನ್ನ ಮಿತ್ರಪಕ್ಷದವನಾಗಿ ಇರುವುದಕ್ಕೂ ಅಧಿಕಾರ ಕೊಟ್ಟಿದ್ದಲ್ಲದೆ, ಕೋಟೆಯಲ್ಲಿ ಇದ್ದವರನ್ನೆಲ್ಲಾ ಅವನಿಗೆ ಒತ್ತೆಯಾಳುಗಳಾಗಿ ಒಪ್ಪಿಸಲು ಆಜ್ಞೆಮಾಡಿದನು.
7 : ಯೋನಾತನನು ಜೆರುಸಲೇಮಿಗೆ ಬಂದು ಎಲ್ಲಾ ಜನರ ಮುಂದೆ ಹಾಗು ಕೋಟೆಯಲ್ಲಿ ಇರುವವರ ಎದುರಿನಲ್ಲಿ ಆ ಕಾಗದಗಳನ್ನು ಓದಿದನು.
8 : ಸೈನ್ಯವನ್ನು ಕೂಡಿಸಿಕೊಳ್ಳುವುದಕ್ಕೆ ಅರಸನು ಅವನಿಗೆ ಅಧಿಕಾರ ಕೊಟ್ಟಿದ್ದಾನೆಂಬ ಸಂಗತಿಯನ್ನು ಅವರು ಕೇಳಿ ಬಹಳವಾಗಿ ಅಂಜಿಕೊಂಡರು.
9 : ಅಲ್ಲಿ ಒತ್ತೆಯಾಳುಗಳಾಗಿದ್ದವರನ್ನು ಯೋನಾತನನಿಗೆ ಒಪ್ಪಿಸಿದರು. ಅವನು ಅವರನ್ನು ಅವರ ತಂದೆತಾಯಿಗಳಿಗೆ ಒಪ್ಪಿಸಿಕೊಟ್ಟನು.
10 : ತರುವಾಯ ಯೋನಾತನನು ಜೆರುಸಲೇಮಿನಲ್ಲೆ ನೆಲಸಿ, ಆ ಪಟ್ಟಣವನ್ನು ಕಟ್ಟುವುದಕ್ಕೂ ಅದರ ಜೀರ್ಣೋದ್ಧಾರ ಮಾಡುವುದಕ್ಕೂ ಆರಂಭಿಸಿದನು.
11 : ಅವನು ಕೆಲಸದವರಿಗೆ, “ಭದ್ರತೆಗಾಗಿ, ಸಿಯೋನ್ ಗುಡ್ಡದ ಸುತ್ತಲೂ ಚೌಕುಕಲ್ಲುಗಳಿಂದ ಗೋಡೆಗಳನ್ನು ಕಟ್ಟಬೇಕು,” ಎಂದು ಆಜ್ಞಾಪಿಸಲು ಅವರು ಹಾಗೆಯೇ ಮಾಡಿದರು.
12 : ಇತ್ತ ಬಕ್ಕಿದಿಯನು ಕಟ್ಟಿಸಿದ್ದ ಕೋಟೆಗಳಲ್ಲಿದ್ದ ಪರದೇಶಿಯರು ಅಲ್ಲಿಂದ ಓಡಿ ಹೋದರು.
13 : ಪ್ರತಿಯೊಬ್ಬನು ತನ್ನ ತನ್ನ ಸ್ಥಳವನ್ನು ಬಿಟ್ಟು ತನ್ನ ಸ್ವದೇಶಕ್ಕೆ ಹೋದನು.
14 : ಆದರೆ ಆಜ್ಞಾನಿಯಮಗಳನ್ನು ಬಿಟ್ಟು ನಡೆಯುವ ಕೆಲವರು ಮಾತ್ರ ಬೇತ್ಸೂರೆಯಲ್ಲಿ ಉಳಿದುಕೊಂಡಿದ್ದರು; ಏಕೆಂದರೆ ಅದು ಅವರಿಗೆ ಆಶ್ರಯಸ್ಥಾನವಾಗಿತ್ತು.
15 : ಯೋನಾತನನಿಗೆ ದೆಮೆತ್ರಿಯನು ಕೊಟ್ಟಿದ್ದ ವಾಗ್ದಾನಗಳನ್ನೆಲ್ಲಾ ಅಲೆಕ್ಸಾಂಡರನು ಕೇಳಿದನು. ಇದಲ್ಲದೆ, ಯೋನಾತನನು ಮಾಡಿದ್ದ ಯುದ್ಧಗಳನ್ನೂ ಅವನೂ ಅವನ ಸಹೋದರರೂ ಗೈದಿದ್ದ ಶೂರಕೃತ್ಯಗಳನ್ನೂ ಅವನಿಗೆ ತಿಳಿಸಿದ್ದರು.
16 : ಅಲೆಕ್ಸಾಂಡರನು ಇದನ್ನು ಕೇಳಿ, “ಇಂತಹ ಇನ್ನೊಬ್ಬ ಮನುಷ್ಯನು ನಮಗೆ ಸಿಕ್ಕಾನೇ? ಅವನನ್ನು ನಾವು ನಮ್ಮ ಮಿತ್ರನನ್ನಾಗಿಯೂ ಸಹಾಯಕನನ್ನಾಗಿಯೂ ಮಾಡಿಕೊಳ್ಳೋಣ,” ಎಂದು ಹೇಳಿ
17 : ಈ ಕೆಳಗಿರುವಂತೆ ಅವನಿಗೆ ಪತ್ರಬರೆಯಿಸಿ ಕಳುಹಿಸಿದನು:
18 : “ಸಹೋದರನಾದ ಯೋನಾತನನಿಗೆ ಅರಸ ಅಲೆಕ್ಸಾಂಡರನು ಮಾಡುವ ವಂದನೆಗಳು!
19 : ನೀನು ಅತಿ ಶೂರಪುರುಷನೆಂದೂ ನಮ್ಮ ಮಿತ್ರನಾಗಿರಲು ಯೋಗ್ಯನೆಂದೂ ನಾವು ನಿನ್ನ ವಿಷಯವಾಗಿ ಕೇಳಿದ್ದೇವೆ;
20 : ಈ ಪ್ರಯುಕ್ತ ನೀನು ನಿನ್ನ ಜನಾಂಗಕ್ಕೆ ಪ್ರಧಾನ ಯಾಜಕನಾಗಿರಬೇಕೆಂದು ಹಾಗು ಅರಸನ ಮಿತ್ರನೆಂದು ಕರೆಯಲ್ಪಡಬೇಕೆಂದೂ ಈ ದಿನ ನಾವು ನೇಮಕ ಮಾಡಿದ್ದೇವೆ; (ಅವನಿಗೆ ರಾಜವಸ್ತ್ರಗಳನ್ನೂ ಬಂಗಾರದ ಕಿರೀಟವನ್ನೂ ಕಳುಹಿಸಿದನು.) ನೀನು ನಮ್ಮ ಪಕ್ಷದವನಾಗಿರಬೇಕು; ನಮ್ಮೊಂದಿಗೆ ಸ್ನೇಹದಿಂದಿರಬೇಕು.”
21 : 160ನೇ ವರ್ಷ, ಏಳನೆಯ ತಿಂಗಳು, ಪರ್ಣಶಾಲೆಗಳ ಜಾತ್ರೆಯ ಕಾಲದಲ್ಲಿ, ಯೋನಾತನನು ಪ್ರಧಾನ ಯಾಜಕನ ವಸ್ತ್ರಗಳನ್ನು ಧರಿಸಿಕೊಂಡನು. ಅವನು ಸೈನ್ಯವನ್ನು ಕೂಡಿಸಿ, ಅದಕ್ಕೆ ಬೇಕಾದ ಆಯುಧಗಳನ್ನು ಒದಗಿಸಿದನು.
23 : “ನಾವು ಮಾಡಿದ್ದೇನೆ! ಯೆಹೂದ್ಯರೊಂದಿಗೆ ಸ್ನೇಹವನ್ನು ಸ್ಥಿರಗೊಳಿಸಿ, ತನ್ನನ್ನೆ ಬಲಪಡಿಸಿಕೊಳ್ಳುವುದರಲ್ಲಿ ಅಲೆಕ್ಸಾಂಡರನೇ ನಮಗಿಂತ ಮುಂದಾದನಲ್ಲಾ;
23 : “ನಾವು ಮಾಡಿದ್ದೇನೆ! ಯೆಹೂದ್ಯರೊಂದಿಗೆ ಸ್ನೇಹವನ್ನು ಸ್ಥಿರಗೊಳಿಸಿ, ತನ್ನನ್ನೆ ಬಲಪಡಿಸಿಕೊಳ್ಳುವುದರಲ್ಲಿ ಅಲೆಕ್ಸಾಂಡರನೇ ನಮಗಿಂತ ಮುಂದಾದನಲ್ಲಾ;
24 : ಅವರು ನನ್ನೊಂದಿಗಿದ್ದು ನನಗೆ ನೆರವಾಗುವಂತೆ ಸ್ಥಾನ ಮಾನಗಳನ್ನೂ ದಾನಗಳನ್ನೂ ಕೊಡುತ್ತೇನೆಂದು ಉತ್ತೇಜನದಾಯಕ ಮಾತುಗಳನ್ನು ಬರೆಯುವೆನು,” ಎಂದುಕೊಂಡು
25 : ಈ ರೀತಿ ಬರೆದು ಕಳುಹಿಸಿದನು: “ಅರಸನಾದ ದೆಮೆತ್ರಯನು ಯೆಹೂದ್ಯ ಜನಾಂಗಕ್ಕೆ ಮಾಡುವ ವಂದನೆಗಳು!
26 : ನೀವು ನಮ್ಮೊಂದಿಗೆ ಮಾಡಿಕೊಂಡ ಒಡಂಬಡಿಕೆಗನುಸಾರ ನಮ್ಮ ಮಿತ್ರರಾಗಿಯೇ ಇರುವಿರೆಂದೂ ನಮ್ಮ ಹಗೆಗಳನ್ನು ಕೂಡಿಕೊಳ್ಳುವುದಿಲ್ಲವೆಂದೂ ನಾವು ಕೇಳಿ ಆನಂದಪಡುತ್ತೇವೆ.
27 : ಇನ್ನು ಮುಂದೆಯೂ ನೀವು ನಮ್ಮೊಂದಿಗೆ ವಿಶ್ವಾಸದಿಂದಲೇ ನಡೆದುಕೊಳ್ಳಿ. ನೀವು ನಮಗೆ ಮಾಡುವ ಸಹಾಯಕ್ಕಾಗಿ ನಾವು ನಿಮಗೆ ಒಳ್ಳೇ ಪ್ರತಿಫಲ ಕೊಡುತ್ತೇವೆ.
28 : ನಿಮಗೆ ಅನೇಕ ಸೌಲಭ್ಯಗಳನ್ನು ಮಾಡಿಕೊಡುತ್ತೇವೆ; ಮೇಲಾಗಿ ಬಹುಮಾನಗಳನ್ನೂ ಕೊಡುತ್ತೇವೆ.
29 : ನಾವೀಗ ನಿನ್ನನ್ನೂ ಯೆಹೂದ್ಯರನ್ನೂ ಕಂದಾಯದಿಂದಲೂ ಉಪ್ಪಿನ ಕರದಿಂದಲೂ ಅರಸನಿಗೆ ಸಲ್ಲತಕ್ಕ ಕಪ್ಪಕಾಣಿಕೆಗಳಿಂದಲೂ ಮುಕ್ತಮಾಡುತ್ತೇವೆ.
30 : ನನಗೆ ಸಲ್ಲತಕ್ಕ ನಿಮ್ಮ ಬೆಳೆಯ ಮೂರನೆಯ ಭಾಗವನ್ನೂ ಹಣ್ಣುಹಂಪಲುಗಳ ಅರ್ಧಭಾಗವನ್ನೂ ನಿಮ್ಮ ಸ್ವಾಧೀನ ಮಾಡುತ್ತೇವೆ. ಅದನ್ನು ಜುದೇಯ ನಾಡಿನಿಂದಾಗಲಿ, ಸಮಾರಿಯ, ಗಲಿಲೇಯಗಳಿಂದ ಪ್ರತ್ಯೇಕವಾಗಿ ಅದಕ್ಕೆ ಸೇರಿಸಲಾಗಿರುವ ಮೂರು ಅಧಿಪತ್ಯಗಳಿಂದಾಗಲಿ ಇನ್ನು ಮುಂದೆ ಎಂದಿಗೂ ತೆಗೆದುಕೊಳ್ಳುವುದಿಲ್ಲ.
31 : ಜೆರುಸಲೇಮ್ ಹಾಗು ಅದರ ಮೇರೆಗಳು ಮತ್ತು ಅದರ ದಶಮಾಂಶ ಸುಂಕಗಳು ಪವಿತ್ರವೂ ಸ್ವತಂತ್ರವೂ ಆಗಿರಲಿ.
32 : ಜೆರುಸಲೇಮಿನಲ್ಲಿರುವ ಕೋಟೆಯ ಮೇಲಿದ್ದ ನಮ್ಮ ಅಧಿಕಾರವನ್ನು ಬಿಟ್ಟುಕೊಟ್ಟಿದ್ದೇವೆ; ಅದನ್ನು ಪ್ರಧಾನ ಯಾಜಕನಿಗೆ ಕೊಟ್ಟಿದ್ದೇವೆ. ಅದನ್ನು ಕಾಯುವುದಕ್ಕೆ ತನಗೆ ಬೇಕಾದವರನ್ನು ಅವನು ಆರಿಸಿಕೊಳ್ಳಬಹುದು.
33 : ಜುದೇಯ ನಾಡಿನಿಂದ ನಮ್ಮ ರಾಜ್ಯದ ಯಾವ ಭಾಗದಲ್ಲೇ ಆಗಲಿ, ಸೆರೆ ಒಯ್ಯಲ್ಪಟ್ಟಿರುವ ಪ್ರತಿಯೊಬ್ಬ ಯೆಹೂದ್ಯನನ್ನು ಉಚಿತವಾಗಿ ಬಿಡುಗಡೆಮಾಡುತ್ತೇವೆ. ಎಲ್ಲರೂ ಅವರ ದನಕರುಗಳ ಮೇಲಿನ ತೆರಿಗೆಯನ್ನು ಸಹ ಕೊಡಬೇಕಾಗಿಲ್ಲ.
34 : ಎಲ್ಲ ಹಬ್ಬ, ಸಬ್ಬತ್‍ಗಳು, ಅಮಾವಾಸ್ಯೆ ಮತ್ತು ನಿಯತ ದಿನಗಳು, ಹಬ್ಬದ ಮುಂಚಿನ ಮೂರು ದಿನಗಳು, ಅದರ ನಂತರದ ಮೂರು ದಿನಗಳು, ನಮ್ಮ ರಾಜ್ಯದಲ್ಲಿರುವ ಎಲ್ಲಾ ಯೆಹೂದ್ಯರಿಗೆ ರಿಯಾಯಿತಿಯ ಮತ್ತು ಕರಮುಕ್ತ, ದಿನಗಳಾಗಿರಲಿ.
35 : ಅವರಿಂದ ಏನನ್ನಾದರೂ ಕಸಿದು ಕೊಳ್ಳುವುದಕ್ಕಾಗಲಿ, ಯಾವ ವಿಷಯದಲ್ಲೇ ಆಗಲಿ ಅವರಿಗೆ ತೊಂದರೆ ಕೊಡುವುದಕ್ಕಾಗಲಿ ಯಾರಿಗೂ ಅಧಿಕಾರವಿರಕೂಡದು.
36 : ಯೆಹೂದ್ಯರಲ್ಲಿ ಸುಮಾರು ಮೂವತ್ತು ಸಾವಿರ ಗಂಡಾಳುಗಳು ಅರಸನ ಸಐನ್ಯದಲ್ಲಿ ಸೇರಬಹುದು. ಅರಸನ ಸೈನ್ಯದವರಿಗೆ ಸಲ್ಲತಕ್ಕ ಸಂಬಳವನ್ನು ಅವರಿಗೂ ಕೊಡಲಾಗುವುದು.
37 : ಅದರಲ್ಲಿ ಕೆಲವರನ್ನು ಅರಸನ ದೊಡ್ಡ ದುರ್ಗಗಳಲ್ಲಿ ಇಡಲಾಗುವುದು; ಕೆಲವರನ್ನು ರಾಜ್ಯದ ಜವಾಬ್ದಾರಿಯ ಕೆಲಸದ ಮೇಲೆ ಇಡಲಾಗುವುದು. ಅವರ ಮೇಲ್ವಿಚಾರಕರೂ ಮೇಲಾಧಿಕಾರಿಗಳೂ ಅವರೊಳಗಿನವರೇ ಆಗಿರಲಿ. ಅವರು ಜುದೇಯ ನಾಡಿನಲ್ಲಿ ಅರಸನು ಅಪ್ಪಣೆ ಮಾಡಿರುವಂತೆ ತಮ್ಮ ನಿಯಮಗಳು ಪ್ರಕಾರ ನಡೆದುಕೊಳ್ಳಲಿ.
38 : ಸಮಾರಿಯ ಪ್ರಾಂತ್ಯದಿಂದ ಜುದೇಯಕ್ಕೆ ಜೋಡಿಸಲಾಗಿರುವ ಮೂರು ಅಧಿಪತ್ಯಗಳು ಜುದೇಯಕ್ಕೆ ಸೇರಲ್ಪಟ್ಟು ಒಬ್ಬ ಅಧಿಕಾರಿಯ ಕೈಕೆಳಗಿರುವಂತಾಗಲಿ; ಅವು ಪ್ರಧಾನ ಯಾಜಕನ ಹೊರತಾಗಿ ಬೇರೆ ಯಾವ ಅಧಿಕಾರಿಗೂ ಒಳಗಾಗದಿರಲಿ.
39 : ಪ್ತೊಲೆಮಾಯವನ್ನೂ ಅದಕ್ಕೆ ಸಂಬಂಧಿಸಿದ ಸೀಮೆಯನ್ನೂ ಜೆರುಸಲೇಮಿನಲ್ಲಿರುವ ಪವಿತ್ರಾಲಯಕ್ಕೆ ಉಂಬಳಿಯಾಗಿ ಕೊಟ್ಟಿದ್ದೇವೆ; ಅದು ಪವಿತ್ರಾಲಯದ ಖರ್ಚುವೆಚ್ಚಕ್ಕಾಗಿ ಆಗಲಿ.
40 : ಮೇಲಾಗಿ ರಾಜನ ಬೊಕ್ಕಸದಿಂದ ಪ್ರತಿವರ್ಷ ಹದಿನೈದು ಸಾವಿರ ಬೆಳ್ಳಿಯ ನಾಣ್ಯಗಳನ್ನು ಅನುಕೂಲವಾದ ಸ್ಥಳದಿಂದ ಅದಕ್ಕೆ ಸಲ್ಲಿಸುವೆವು.
41 : ಇದಲ್ಲದೆ ಈ ಮೊದಲಿನ ವರ್ಷಗಳಲ್ಲಿ ವೆಚ್ಚವಾಗುತ್ತಿದ್ದಂತೆ ವೆಚ್ಚವಾಗದೆ ಮಿಕ್ಕಿದುದನ್ನು ಇನ್ನು ಮೇಲೆ ದೇವಾಲಯದ ಕೆಲಸಗಳಿಗಾಗಿ ಕೊಡಲಾಗುವುದು.
42 : ಪವಿತ್ರಾಲಯದ ಆದಾಯದಿಂದ ವರ್ಷ ವರ್ಷವೂ ಅವರು ತೆಗೆದುಕೊಳ್ಳುತ್ತಿದ್ದ ಐದು ಸಾವಿರ ಬೆಳ್ಳಿಯ ನಾಣ್ಯಗಳನ್ನು ಬಿಟ್ಟು ಕೊಡಲಾಗಿದೆ; ಏಕೆಂದರೆ ಸೇವೆಮಾಡುವ ಯಾಜಕರಿಗೆ ಅದು ಸಂಬಂಧಪಟ್ಟದ್ದು.
43 : ಹಣದ ವಿಷಯದಲ್ಲೇ ಆಗಲಿ, ಇನ್ನಾವ ವಿಷಯದಲ್ಲೇ ಆಗಲಿ ರಾಜನಿಗೆ ಋಣಿಯಾದ ಯಾರಾದರು ಜೆರುಸಲೇಮಿನಲ್ಲಿರುವ ದೇವಾಲಯಕ್ಕೆ ಓಡಿಬಂದರೆ, ಇಲ್ಲವೆ ಅದರ ಗಡಿ ಒಳಗೆ ಆಶ್ರಯಿಸಿಕೊಂಡರೆ, ಅವರೂ ನಮ್ಮ ರಾಜ್ಯದಲ್ಲಿರುವ ಅವರದೆಲ್ಲವೂ ಬಿಡುಗಡೆ ಹೊಂದಲಿ.
44 : ದೇವಾಲಯದ ಕಟ್ಟಡಕ್ಕೂ, ಅದರ ಜೀರ್ಣೋದ್ಧಾರಕ್ಕೂ ತಗಲುವ ವೆಚ್ಚವನ್ನು ಅರಸನ ಬೊಕ್ಕಸದಿಂದಲೇ ಕೊಡಲಾಗುವುದು.
45 : ಮತ್ತು ಜೆರುಸಲೇಮಿನ ಗೋಡೆಗಳನ್ನು ಕಟ್ಟುವುದಕ್ಕೂ ಸುತ್ತಲೂ ಅವುಗಳನ್ನು ಭದ್ರಮಾಡುವುದಕ್ಕೂ ಜುದೇಯದೊಳಗಿನ ಗೋಡೆಗಳನ್ನು ಕಟ್ಟಿಸುವುದಕ್ಕೂ ತಗಲುವ ವೆಚ್ಚವು ಸಹ ರಾಜಭಂಡಾರದಿಂದಲೇ ಕೊಡಲಾಗುವುದು.”
46 : ಯೋನಾತನನೂ ಅವನ ಜನರೂ ಈ ಮಾತುಗಳನ್ನು ಕೇಳಿದಾಗ ಅವುಗಳನ್ನು ನಂಬಲೂ ಇಲ್ಲ, ಸ್ವೀಕರಿಸಲೂ ಇಲ್ಲ. ಏಕೆಂದರೆ, ಅವನು ಇಸ್ರಯೇಲರಿಗೆ ಮಾಡಿದ ದೊಡ್ಡ ಕೇಡನ್ನೂ ಅವರಿಗೆ ಕೊಟ್ಟ ಉಪದ್ರವವನ್ನೂ ಅವರು ನೆನಪಿಗೆ ತಂದುಕೊಂಡರು.
47 : ಆದುದರಿಂದ ಅವರು ಅಲೆಕ್ಸಾಂಡರನನ್ನೇ ಮೆಚ್ಚಿಕೊಂಡರು; ಕಾರಣ, ಸಮಾಧಾನದ ಮಾತುಗಳಿಗೆ ಮೊದಲು ಮಾತಾಡಿದವನು ಅವನೇ ಆಗಿದ್ದನು; ಅವರು ನಿತ್ಯವೂ ಅವನಿಗೆ ಸಹಕಾರಿಗಳಾಗಿದ್ದರು.
48 : ಹೀಗಿರಲು ಅಲೆಕ್ಸಾಂಡರನು ದೊಡ್ಡ ದಂಡನ್ನು ಕೂಡಿಸಿಕೊಂಡು ದೆಮೆತ್ರಿಯನ ಎದುರಾಗಿ ಪಾಳೆಯಮಾಡಿಕೊಂಡನು.
49 : ಉಭಯ ರಾಜರೂ ಕಾಳಗವನ್ನು ಆರಂಭಿಸಿದರು. ದೆಮೆತ್ರಿಯನ ಸೈನ್ಯವು ಪಲಾಯನಮಾಡಿತು. ಅಲೆಕ್ಸಾಂಡರನು ಅವರನ್ನು ಬೆನ್ನಟ್ಟಿಕೊಂಡು ಹೋಗಿ ಸೋಲಿಸಿದನು.
50 : ಅಂದು ಇಳಿಹೊತ್ತಿನವರೆಗೂ ವಿಶ್ರಾಂತಿ ತೊರೆದು ಬಲವಾಗಿ ಕಾದಾಡಿದನು. ಕಡೆಗೆ ದೆಮೆತ್ರಿಯನು ಮಡಿದನು.
51 : ಅಲೆಕ್ಸಾಂಡರನು ಈಜಿಪ್ಟಿನ ಅರಸ ಪ್ತೊಲೆಮೇಯನ ಬಳಿಗೆ ರಾಯಭಾರಿಗಳನ್ನು ಕಳುಹಿಸಿ,
52 : “ನಾನೀಗ ಹಿಂದಿರುಗಿ ನನ್ನ ರಾಜ್ಯಕ್ಕೆ ಬಂದಿದ್ದೇನೆ; ನನ್ನ ಪೂರ್ವಜರ ಸಿಂಹಾಸನವನ್ನು ಏರಿದ್ದೇನೆ; ನನ್ನ ಸಾಮ್ರಾಜ್ಯವನ್ನು ಮರಳಿ ಗಳಿಸಿಕೊಂಡಿದ್ದೇನೆ; ದೆಮೆತ್ರಿಯನನ್ನು ಪರಾಜಯಗೊಳಿಸಿ ನಮ್ಮ ನಾಡನ್ನು ಪಡೆದಿದ್ದೇನೆ.
53 : ನಾನು ಅವನೊಂದಿಗೆ ಯುದ್ಧಮಾಡಲಾಗಿ ಅವನೂ ಅವನ ಸೈನ್ಯವೂ ಪರಾಜಿತವಾದರು; ನಾವು ಹೋಗಿ ಅವನ ರಾಜ್ಯದ ಸಿಂಹಾಸನವನ್ನೇರಿದ್ದೇವೆ.
54 : ಹೀಗಿರುವುದರಿಂದ, ನಾವು ಪರಸ್ಪರ ಸ್ನೇಹವನ್ನು ದೃಢಪಡಿಸೋಣ. ಈಗ ನಿನ್ನ ಮಗಳನ್ನು ನನಗೆ ಮದುವೆಮಾಡಿಕೊಡು; ನಾನು ನಿನ್ನ ಸಂಗಡ ಸಂಬಂಧ ಬೆಳೆಸುವುದಲ್ಲದೆ ನಿನಗೂ ಅವಳಿಗೂ ಯೋಗ್ಯವಾದ ಕೊಡುಗೆಗಳನ್ನು ಕೊಡುವೆನು,” ಎಂದು ಹೇಳಿಸಿದನು.
55 : ರಾಜ ಪ್ತೊಲೆಮೇಯನು ಉತ್ತರಕೊಟ್ಟು, “ನೀನು ನಿನ್ನ ಪೂರ್ವಜರ ನಾಡಿಗೆ ಹಿಂದಿರುಗಿ ಬಂದ ದಿನವೂ ಅವರ ಸಿಂಹಾಸನವನ್ನು ಏರಿದ ದಿನವೂ ಶುಭಮಯವಾದುದೇ!
56 : ನೀನು ಬರೆದು ಕಳುಹಿಸಿದಂತೆ ನಾನು ಮಾಡುವೆನು; ಆದರೆ ನಾವು ಒಬ್ಬರನ್ನೊಬ್ಬರು ನೋಡುವಂತೆ ಪ್ತೊಲೆಮಾಯದಲ್ಲಿ ನನ್ನನ್ನು ಸಂಧಿಸು; ನೀನು ಹೇಳಿದಂತೆ ನಾನು ನಿನ್ನೊಂದಿಗೆ ಸಂಬಂಧ ಬೆಳೆಸುವೆನು,” ಎಂದು ಹೇಳಿಕಳುಹಿಸಿದನು.
57 : ಪ್ತೊಲೆಮೇಯನು 162ನೇ ವರ್ಷದಲ್ಲಿ ತನ್ನ ಮಗಳಾದ ಕ್ಲೆಯೊಪಾತ್ರಳೊಂದಿಗೆ ಈಜಿಪ್ಟನ್ನು ಬಿಟ್ಟು ಪ್ತೊಲೆಮಾಯಕ್ಕೆ ಬಂದನು.
58 : ಅರಸ ಅಲೆಕ್ಸಾಂಡರನನ್ನು ಭೇಟಿಯಾಗಿ ಅವನಿಗೆ ತನ್ನ ಮಗಳಾದ ಕ್ಲೆಯೊಪಾತ್ರಳನ್ನು ಕೊಟ್ಟು ಮದುವೆಯ ಕಾರ್ಯವನ್ನು ನೆರವೇರಿಸಿದನು. ಮದುವೆಯು ಅರಸನಿಗೆ ತಕ್ಕಂತೆ ಬಹು ಸಂಭ್ರಮದಿಂದ ನೆರವೇರಿತು.
59 : ಅರಸ ಅಲೆಕ್ಸಾಂಡರನು ಯೋನಾತನನಿಗೆ ಕಾಗದ ಬರೆದು ತನ್ನನ್ನು ಬಂದು ಕಾಣಬೇಕೆಂದು ತಿಳಿಸಿದನು.
60 : ಅವನು ಸಡಗರದಿಂದ ಪ್ತೊಲೆಮಾಯಕ್ಕೆ ಹೋಗಿ ರಾಜರಿಬ್ಬರನ್ನೂ ಕಂಡು, ಅವರಿಗೂ ಅವರ ಮಿತ್ರರಿಗೂ ಬೆಳ್ಳಿ ಬಂಗಾರವನ್ನೂ ಕಾಣಿಕೆಗಳನ್ನೂ ಕೊಟ್ಟು ಅವರ ಮೆಚ್ಚುಗೆಯನ್ನು ಪಡೆದನು.
61 : ಇಸ್ರಯೇಲರಲ್ಲಿ ಕೆಡುಕರೂ ದುರ್ಮಾರ್ಗಿಗಳೂ ಆಗಿದ್ದ ಕೆಲವರು ಅವನ ವಿರುದ್ಧ ದೂರು ಹೇಳಲು ಕೂಡಿಕೊಂಡು ಬಂದರು.
62 : ಆದರೆ ಅರಸನು ಅವರನ್ನು ಗಮನಿಸಲೇ ಇಲ್ಲ. ಬದಲಿಗೆ “ಯೋನಾತನನ ವಸ್ತ್ರಗಳನ್ನು ತೆಗೆದು ಅವನಿಗೆ ರಾಜವಸ್ತ್ರವನ್ನು ಹೊದಿಸಬೇಕು,” ಎಂದು ಅಪ್ಪಣೆಮಾಡಲು, ಅವರು ಹಾಗೆಯೇ ಮಾಡಿದರು.
63 : ಅರಸನು ಅವನನ್ನು ತನ್ನ ಬಳಿಯಲ್ಲಿ ಕೂರಿಸಿಕೊಂಡನು. ಅನಂತರ ತನ್ನ ಸರದಾರರಿಗೆ, “ಇವನೊಂದಿಗೆ ಊರೊಳಗೆ ಹೋಗಿರಿ, ಯಾರೂ ಯಾವ ವಿಷಯದಲ್ಲೂ ಇವನ ಮೇಲೆ ದೂರು ತರಬಾರದೆಂದೂ ಯಾರೂ ಯಾವ ವಿಷಯದಲ್ಲೂ ಇವನಿಗೆ ತೊಂದರೆ ಕೊಡಬಾರದೆಂದೂ ಪ್ರಕಟಿಸಿರಿ,” ಎಂದು ಹೇಳಿದನು.
64 : ಯೋನಾತನನ ಮೇಲೆ ದೂರು ತಂದವರೆಲ್ಲರು ಪ್ರಕಟಣೆ ಹೊರಡಿಸಿದಂತೆ ಅವನ ಘನತೆಯನ್ನೂ ಅವನ ಮೇಲಿದ್ದ ರಾಜವಸ್ತ್ರಗಳನ್ನೂ ಕಂಡಾಗ ಓಡಿಹೋದರು.
65 : ಅರಸನು ಅವನಿಗೆ ಸನ್ಮಾನ ಮಾಡಿ, ತನ್ನ ಮುಖ್ಯ ಸ್ನೇಹಿತರಲ್ಲಿ ಒಬ್ಬನಾಗಿ ಅವನನ್ನು ದಂಡನಾಯಕನನ್ನಾಗಿಯೂ, ಪ್ರಾಂತ್ಯದ ಅಧಿಪತಿಯನ್ನಾಗಿಯೂ ನೇಮಕಮಾಡಿದನು.
66 : ಯೋನಾತನನು ಶಾಂತಿ ಸಂತೋಷಗಳಿಂದ ಜೆರುಸಲೇಮಿಗೆ ಹಿಂದಿರುಗಿದನು.
67 : 165ನೇ ವರ್ಷ ದೆಮೆತ್ರಿಯನ ಮಗ ಇಮ್ಮಡಿ ದೆಮೆತ್ರಿಯನು ಕ್ರೇಟ್‍ನಿಂದ ತನ್ನ ಪೂರ್ವಿಕರ ನಾಡಿಗೆ ಬಂದನು.
68 : ಅರಸ ಅಲೆಕ್ಸಾಂಡರನು ಇದನ್ನು ಕೇಳಿ, ಬಹಳ ವ್ಯಸನಗೊಂಡು ಅಂತಿಯೋಕ್ಯಕ್ಕೆ ಹಿಂದಿರುಗಿದನು
69 : ದೆಮೆತ್ರಿಯನು ದಕ್ಷಿಣ ಸಿರಿಯಾದ ಸರದಾರನಾಗಿದ್ದ ಅಪೊಲ್ಲೋನಿಯನನ್ನು ಪುನಃ ಅದೇ ಪದವಿಗೆ ನೇಮಿಸಲಾಗಿ, ಅವನು ದೊಡ್ಡ ದಂಡನ್ನು ಕೂಡಿಸಿಕೊಂಡು, ಜಮ್ನಿಯದಲ್ಲಿ ಪಾಳೆಯಮಾಡಿ, ಪ್ರಧಾನಯಾಜಕನಾದ ಯೋನಾತನನಿಗೆ,
70 : “ನಮ್ಮ ವಿರುದ್ಧ ತಲೆ ಎತ್ತಿದವನು ನೀನೊಬ್ಬನೇ; ನಿನ್ನ ದೆಸೆಯಿಂದ ನಾನು ಅಪಹಾಸ್ಯಕ್ಕೂ ನಿಂದೆಗೂ ಗುರಿಯಾಗಬೇಕಾಯಿತು; ಗುಡ್ಡಗಳಲ್ಲಿದ್ದುಕೊಂಡು ನಿನಗೆ ಬಲವಿದೆ ಎಂದು ನಮ್ಮ ಎದುರಿನಲ್ಲಿ ಕೊಚ್ಚಿಕೊಳ್ಳುವುದು ಏಕೆ?
71 : ನಿನ್ನ ಸೈನ್ಯಬಲದಲ್ಲಿ ನಿನಗೆ ಭರವಸೆ ಇದ್ದಲ್ಲಿ ನಮ್ಮ ಬಳಿಗೆ ಬಯಲುಸೀಮೆಗೆ ಬಾ; ಅಲ್ಲಿ ನಾವಿಬ್ಬರೂ ಸಂಧಿಸಿ, ಈ ಸಮಸ್ಯೆಯನ್ನು ಒಮ್ಮೆಗೆ ಬಗೆಹರಿಸಿಬಿಡೋಣ; ಏಕೆಂದರೆ ಪಟ್ಟಣಗಳ ಬಲವು ನನಗಿದೆ.
72 : ನಾನೂ ನಿನಗೆ ನೆರವಾಗುವ ಇತರರೂ ಯಾರೆಂಬುದನ್ನು ಕೇಳಿ ತಿಳಿದುಕೋ; ನಿನ್ನ ಕಾಲು ನಮ್ಮೆದುರಿನಲ್ಲಿ ನಿಲ್ಲಲಾರದೆಂದು ಅವರು ನಿನಗೆ ತಿಳಿಸುವರು. ನಿನ್ನ ಪೂರ್ವಿಕರು ಅವರ ನಾಡಿನಲ್ಲಿಯೇ ಎರಡುಸಾರಿ ಪಲಾಯನ ಮಾಡಿದ್ದಾರಲ್ಲವೆ?
73 : ಕಲ್ಲು, ಬಂಡೆ ಹಾಗು ಓಡಿಹೋಗುವುದಕ್ಕೆ ಸ್ಥಳ ಇಲ್ಲದ ಬಯಲಿನಲ್ಲಿ ನಮ್ಮ ಅಶ್ವಬಲದ ಮುಂದೆ ಹಾಗು ಇಂಥ ಸೈನ್ಯದೆದುರಿಗೆ ನೀನು ನಿಲ್ಲಲಾರೆ,” ಎಂದು ಹೇಳಿಕಳುಹಿಸಿದನು.
74 : ಯೋನಾತನನು ಅಪೊಲ್ಲೋನಿಯನ ಈ ಮಾತುಗಳನ್ನು ಕೇಳಿ, ಕೆರಳಿ, ಹತ್ತು ಸಾವಿರ ಜನರನ್ನು ಆಯ್ದುಕೊಂಡು ಜೆರುಸಲೇಮಿನಿಂದ ಹೊರಟನು. ಅವನ ಅಗ್ರಜನಾದ ಸಿಮೋನನು ನೆರವಿಗಾಗಿ ಅವನನ್ನು ಕೂಡಿಕೊಂಡನು. ಯೋನಾತನನು ಜೊಪ್ಪದ ಎದುರಿಗೆ ಬೀಡು ಬಿಟ್ಟುಕೊಂಡನು.
75 : ಅಪೊಲ್ಲೋನಿಯನ ರಕ್ಷಣಾ ದಳವು ಜೊಪ್ಪದಲ್ಲಿದ್ದುದರಿಂದ ಆ ಪಟ್ಟಣದವರು ಬಾಗಿಲು ಹಾಕಿಕೊಳ್ಳಲು ಅವರು ಅದಕ್ಕೆ ಲಗ್ಗೆ ಹಚ್ಚಿದರು.
76 : ಆಗ ಅದರ ನಿವಾಸಿಗಳು ಅಂಜಿ ಬಾಗಿಲು ತೆರೆದರು; ಹೀಗೆ ಯೋನಾತನನು ಜೊಪ್ಪವನ್ನು ಕೈವಶಮಾಡಿಕೊಂಡನು.
77 : ಅಪೊಲ್ಲೋನಿಯನು ಇದನ್ನು ಕೇಳಿ, ಮೂರು ಸಾವಿರ ಕುದುರೆಗಳುಳ್ಳ ದೊಡ್ಡ ದಂಡನ್ನು ಕೂಡಿಸಿಕೊಂಡು ಪ್ರವಾಸಿಕನಂತೆ ಅಜೋತಿಗೆ ಹೋದನು. ಅಲ್ಲಿಂದ ಮುಂದೆ ಅವನು ಬಯಲು ಸೀಮೆಗೆ ಇಳಿದನು. ಏಕೆಂದರೆ ಅವನ ಬಳಿಯಿದ್ದ ದೊಡ್ಡ ಅಶ್ವಬಲದಲ್ಲಿ ಅವನಿಗೆ ತುಂಬಾ ಭರವಸೆ ಇತ್ತು.
78 : ಯೋನಾತನನು ಅವನ ಬೆನ್ನು ಹತ್ತಿ ಅಜೋತಿನ ಕಡೆಗೆ ಹೋದನು. ಅಲ್ಲಿ ಉಭಯ ಸೈನ್ಯಗಳ ನಡುವೆ ಯುದ್ಧವಾಯಿತು. 79ಅಪೊಲ್ಲೋನಿಯನು ಅವರ ಹಿಂದೆ ಒಂದು ಸಾವಿರ ರಾಹುತರನ್ನು ಅಡಗಿಸಿಟ್ಟಿದ್ದನು.
79 : ಅಪೊಲ್ಲೋನಿಯನು ಅವರ ಹಿಂದೆ ಒಂದು ಸಾವಿರ ರಾಹುತರನ್ನು ಅಡಗಿಸಿಟ್ಟಿದ್ದನು.
80 : ತನ್ನ ಹಿಂದೆ ಹೊಂಚು ಇದೆ ಎಂಬುದನ್ನು ಯೋನಾತನನು ಅರಿತಿದ್ದನು. ಅವರು ಅವನ ಸೈನ್ಯವನ್ನು ಸುತ್ತುವರಿದು ಬೆಳಗಿನಿಂದ ಬೈಗಿನವರೆಗೆ ತಮ್ಮ ಭರ್ಜಿಗಳನ್ನು ಇಸ್ರಯೇಲ್ ಜನರ ಮೇಲೆ ಎಸೆದರು.
81 : ಜನರು ಯೋನಾತನನ ಆಜ್ಞೆಯಂತೆ ನಿಂತಲ್ಲಿಯೇ ನಿಂತುಕೊಂಡಿದ್ದರು.
82 : ಅವರ ಕುದುರೆಗಳು ದಣಿದವು; ಹೀಗಿರಲು ಸಿಮೋನನು ತನ್ನ ದಳವನ್ನು ಮುಂದೆ ನೂಕಿ ಕಾಲ್ದಳದ ಮೇಲೆ ಬಿದ್ದನು. (ಏಕೆಂದರೆ ಕುದುರೆಗಳು ಆಗಲೇ ದಣಿದುಹೋಗಿದ್ದವು) - ಶತ್ರುಗಳು ಸಿಮೋನನಿಂದ ಪರಾಜಯಹೊಂದಿ ಪಲಾಯನ ಮಾಡಿದರು.
83 : ಕುದುರೆ ಸವಾರರು ಬಯಲಿನಲ್ಲಿ ಚದರಿ ಹೋದರು. ಅವರು ಅಜೋತಿಗೆ ಓಡಿಹೋಗಿ ತಮ್ಮ ಪ್ರಾಣರಕ್ಷಣೆಗಾಗಿ ಬೇತ್‍ದಾಗೋನ್ ಎಂಬ ಮೂರ್ತಿಯ ಗುಡಿಯನ್ನು ಸೇರಿದರು.
84 : ಯೋನಾತನನು ಅಜೋತನ್ನೂ ಅದರ ನೆರೆಹೊರೆಯ ಊರುಗಳನ್ನೂ ಸುಟ್ಟು ಸೂರೆಮಾಡಿದನು. ದಾಗೋನನ ಗುಡಿಯನ್ನೂ ಅದರಲ್ಲಿ ಸೇರಿಕೊಂಡಿದ್ದವರನ್ನೂ ಸುಟ್ಟುಹಾಕಿದನು.
85 : ಅಂದು ಕತ್ತಿಗೆ ತುತ್ತಾದವರು ಹಾಗು ಬೆಂಕಿಗೆ ಆಹುತಿ ಆದವರು ಸುಮಾರು ಎಂಟು ಸಾವಿರ ಜನ.
86 : ಯೋನಾತನನು ಅಲ್ಲಿಂದ ಹೊರಟು, ಅಷ್ಕೆಲೋನಿನ ಎದುರಾಗಿ ಪಾಳೆಯ ಮಾಡಿದನು. ಆ ಪಟ್ಟಣಿಗರು ಬಹು ಆಡಂಬರದಿಂದ ಅವನನ್ನು ಎದುರುಗೊಳ್ಳಲು ಬಂದರು.
87 : ಯೋನಾತನನು ಅಪಾರ ಸುಲಿಗೆಯೊಂದಿಗೆ ತನ್ನವರ ಸಂಗಡ ಜೆರುಸಲೇಮಿಗೆ ಹಿಂದಿರುಗಿದನು.
88 : ಅರಸ ಅಲೆಕ್ಸಾಂಡರನು ಈ ಸುದ್ದಿಯನ್ನು ಕೇಳಿದಾಗ ಯೋನಾತನನಿಗೆ ಇನ್ನು ಹೆಚ್ಚು ಮರ್ಯಾದೆ ಮಾಡಿದನು.
89 : ಅರಸರ ಬಳಗದವರಿಗೆ ಮಾತ್ರ ಕೊಡತಕ್ಕ ಬಂಗಾರದ ಒಡ್ಯಾಣವನ್ನು ಅವನಿಗೆ ಕಳುಹಿಸಿದನು. ಎಕ್ರೋನನ್ನೂ ಅದರ ನೆರೆಹೊರೆಯ ಸೀಮೆಯನ್ನೂ ಅವನಿಗೆ ಸೊತ್ತಾಗಿಕೊಟ್ಟನು.

· © 2017 kannadacatholicbible.org Privacy Policy