Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಬಾರೂಕ


1 : ಸುಜ್ಞಾನವೇ ದೈವಾಜ್ಞೆಗಳ ಗ್ರಂಥ ಸದಾಕಾಲಕ್ಕೂ ಸ್ಥಿರವಾದ ಧರ್ಮಶಾಸ್ತ್ರ. ಪಡೆಯುವರು ಸಜೀವ ಅದನ್ನು ಪ್ರಾಮಾಣಿಕವಾಗಿ ಪಾಲಿಸುವವರು; ಅದನ್ನು ಬಿಟ್ಟುಬಿಡುವವರು ಸಾಯುವರು.
2 : ಇಸ್ರಯೇಲೇ, ಹಿಂದಿರುಗಿ ಬಾ, ಸುಜ್ಞಾನವನ್ನು ಸ್ವೀಕರಿಸು, ಅದರ ಪ್ರಕಾಶದಲ್ಲಿ ಬೆಳಕಿನತ್ತ ಪ್ರವರ್ಧಿಸು.
3 : ನಿನ್ನ ಗೌರವವನ್ನು ಇನ್ನೊಬ್ಬನಿಗೆ ಸಲ್ಲಗೊಡಬೇಡ ನಿನ್ನ ಸೌಲಭ್ಯಗಳನ್ನು ಅನ್ಯಜನರಿಗೆ ಬಿಟ್ಟುಬಿಡಬೇಡ.
4 : ಇಸ್ರಯೇಲೇ, ನಾವು ಧನ್ಯರು ! ದೇವರಿಗೆ ಪ್ರಿಯವಾದುದು ನಮಗೆ ಬಯಲಾಗಿರುವುದು. ಜೆರುಸಲೇಮಿನ ವಿಲಾಪ ಹಾಗು ಸಾಂತ್ವನ
5 : ನನ್ನ ಜನರೇ, ಧೈರ್ಯದಿಂದಿರಿ ಇಸ್ರಯೇಲಿನ ಹೆಸರನ್ನು ನೀವು ಉಳಿಸಬಲ್ಲಿರಿ.
6 : ನೀವು ಅನ್ಯರಾಷ್ಟ್ರಗಳಿಗೆ ಮಾರಲ್ಪಟ್ಟಿರುವುದು ವಿನಾಶಕ್ಕಾಗಿ ಅಲ್ಲ ನೀವು ಶತ್ರುಗಳ ವಶವಾಗಿರುವುದು ದೇವರನ್ನು ಸಿಟ್ಟಿಗೆಬ್ಬಿಸಿದ್ದರಿಂದ;
7 : ದೇವರನ್ನು ತೊರೆದು ದೆವ್ವಗಳಿಗೆ ಬಲಿಯರ್ಪಿಸಿದ್ದರಿಂದ ನಿಮ್ಮ ಸೃಷ್ಟಿಕರ್ತನ ಕೋಪವನ್ನು ಕೆರಳಿಸಿದ್ದರಿಂದ;
8 : ನಿಮ್ಮನ್ನು ಸಾಕಿಸಲಹಿದ ನಿತ್ಯದೇವರನ್ನು ಮರೆತದ್ದರಿಂದ ನಿಮ್ಮನ್ನು ಪೋಷಿಸಿದ ಮಾತೆ ಜೆರುಸಲೇಮನ್ನು ನೋಯಿಸಿದ್ದರಿಂದ.
9 : ನಿಮ್ಮ ಮೇಲೆ ಎರಗಲಿದ್ದ ದೇವಕೋಪವನ್ನು ಆಕೆ ಹೀಗೆಂದು ಬಣ್ಣಿಸಿದಳು:
10 : ‘ಸಿಯೋನಿನ ನೆರೆಹೊರೆಯಲ್ಲಿ ವಾಸಿಸಿದವರೇ ಕೇಳಿ: ದೇವರು ನನ್ನ ಮೇಲೆ ಬರಮಾಡಿದ್ದಾರೆ ಮಹಾಕಸ್ತಿ ಶಾಶ್ವತರಾದ ದೇವರು ನನ್ನ ಪುತ್ರಪುತ್ರಿಯರ ಮೇಲೆ ಬರಮಾಡಿರುವ ಗಡೀಪಾರನ್ನು ನಾನು ಅರಿತಿರುವೆ.
11 : ಮುದದಿಂದ ನಾನಿವರನ್ನು ಸಲಹಿದೆ ದುಃಖದಿಂದ ಕಣ್ಣೀರಿಡುತ್ತಾ ಕಳುಹಿಸಿಕೊಟ್ಟೆ.
12 : ನಾನೊಬ್ಬ ವಿಧವೆ, ಹಲವರಿಂದ ನಿರಾಕೃತಳು ನನ್ನನ್ನು ನೋಡಿ ಯಾರೂ ಆನಂದಿಸಬಾರದು: ದೇವರ ಧರ್ಮಶಾಸ್ತ್ರವನ್ನು ಬಿಟ್ಟು ನನ್ನ ಮಕ್ಕಳು ದೂರಸರಿದರು ಅವರ ಪಾಪಕೃತ್ಯಗಳ ನಿಮಿತ್ತ ನಾನು ಹಾಳುಬೀಳಬೇಕಾಯಿತು.
13 : ದೇವರ ನಿಬಂಧನೆಗಳನ್ನು ಅವರು ಗಮನಕ್ಕೆ ತಂದುಕೊಳ್ಳಲಿಲ್ಲ ದೇವರ ಆಜ್ಞಾಮಾರ್ಗವನ್ನು ಕೈಗೊಳ್ಳಲಿಲ್ಲ ಅವರ ರಕ್ಷಣಾಪಥದಲ್ಲಿ ನಡೆಯಲಿಲ್ಲ.
14 : ಸಿಯೋನಿನ ನೆರೆಹೊರೆಯವರೇ, ಬನ್ನಿ ನಿತ್ಯದೇವರಿಂದ ನನ್ನ ಮಕ್ಕಳು ಗಡೀಪಾರಾದುದನ್ನು ನೆನಪಿಗೆ ತಂದುಕೊಳ್ಳಿ.
15 : ಅವರಿಗೆ ವಿರುದ್ಧ ಒಂದು ರಾಷ್ಟ್ರವನ್ನಾತ ಬರಮಾಡಿದ ಅದು ಅನ್ಯಭಾಷೆಯನ್ನಾಡುವ ಮಾನಹೀನ ಜನಾಂಗ ವೃದ್ಧರಿಗೆ ಮರ್ಯಾದೆತೋರದ, ಮಕ್ಕಳಿಗೂ ಕನಿಕರಿಸದ ಜನ.
16 : ವಿಧವೆಯ ಮುದ್ದುಮಕ್ಕಳನ್ನು ಎಳೆದೊಯ್ದರು ಅವಳ ಪುತ್ರಿಯರನ್ನು ಕಿತ್ತುಕೊಂಡುಹೋದರು ಅವಳನ್ನು ಒಬ್ಬಂಟಿಗಳನ್ನಾಗಿ ಬಿಟ್ಟು ತೆರಳಿದರು.
17 : ನಾನಾದರೋ, ನಿಮಗೆ ಹೇಗೆ ತಾನೆ ನೀಡಲಿ ನೆರವು?
18 : ಈ ಸಂಕಟ ಬರಮಾಡಿದಾತನೇ ಬಿಡಿಸುವನು ವೈರಿಯಿಂದ ನಿಮ್ಮನು.
19 : ಹೋಗಿ, ಮಕ್ಕಳೇ, ನಿಮ್ಮ ಹಾದಿಹಿಡಿದು ಹೋಗಿ ನಾನು ಉಳಿದಿದ್ದೇನೆ ಜನಶೂನ್ಯಳಾಗಿ.
20 : ಶಾಂತಿಸಮಾಧಾನದ ಉಡುಪನ್ನು ತೆಗೆದಿಟ್ಟು ಉಟ್ಟುಕೊಂಡಿದ್ದೇನೆ ಗೋಣಿತಟ್ಟು ನಿತ್ಯನಿಗೆ ಮೊರೆಯಿಡುವೆ ಬದುಕಿರುವಷ್ಟು ಕಾಲವು.
21 : ಮಕ್ಕಳೇ, ದೇವರಿಗೆ ಮೊರೆಯಿಡಿ, ಇರಿ ಧೈರ್ಯದಿಂದ ಆತನೇ ಬಿಡಿಸುವನು ವೈರಿಯ ಕೈಯಿಂದ, ದಬ್ಬಳಿಕೆಯಿಂದ.
22 : ಅನಂತ ದೇವರು ನಿಮ್ಮನ್ನು ರಕ್ಷಿಸುವ ನಂಬಿಕೆ ನನಗಿದೆ ನಿಮ್ಮ ಉದ್ಧಾರಕರಾದ ಆ ನಿತ್ಯದೇವರ ಕರುಣೆ ಬರಲಿದೆ ಇಷ್ಟರಲ್ಲೆ ನಿಮಗೆ ಎಂತಲೇ, ಆ ಪರಮಪಾವನ ಸ್ವಾಮಿಯಿಂದ ಸಂತೋಷವುಂಟಾಗಿದೆ ನನಗೆ.
23 : ಸಂಕಟದಿಂದ, ಕಣ್ಣೀರಿನಿಂದ ನಾ ನಿಮ್ಮನ್ನು ಕಳುಹಿಸಿದೆ ಹರ್ಷೋಲ್ಲಾಸದಿಂದ ದೇವರು ನಿಮ್ಮನ್ನೆ ನನಗೆ ಕೊಡುವರು ಸದಾಕಾಲಕ್ಕೆ.
25 : ನೀವು ಗಡೀಪಾರಾದುದನ್ನು ಸಿಯೋನಿನ ನೆರೆಯವರು ನೋಡಿದರು. ಅಂತೆಯೇ ದೇವರು ನಿಮಗೆ ನೀಡುವ ಉದ್ಧಾರವನ್ನು ಬೇಗನೆ ನೋಡುವರು. ಅದು ಮಹಾಪ್ರಭಾವದಿಂದ, ನಿತ್ಯಪ್ರಕಾಶದಿಂದ ನಿಮ್ಮ ಮೇಲೆ ಬರುವುದು.
25 : ಮಕ್ಕಳೇ, ದೇವರಿಂದ ಬಂದಿರುವ ಕೋಪವನು ತಾಳ್ಮೆಯಿಂದ ಸಹಿಸಿಕೊಳ್ಳಿ ನಿಮ್ಮನ್ನು ಹಿಂಸಿಸಿದ ವೈರಿಯ ವಿನಾಶವನ್ನು ಬೇಗನೆ ನೋಡುವಿರಿ ಅವನ ಕುತ್ತಿಗೆಯ ಮೇಲೆ ನೀವು ಕಾಲನ್ನಿಟ್ಟು ತುಳಿಯುವಿರಿ.
26 : ನನ್ನ ಹಸುಳೆಗಳು ಕಾಡುದಾರಿಯಲ್ಲಿ ನಡೆದು ಹೋಗಿರುವರು ಹಿಂಡನ್ನೋ ಎಂಬಂತೆ ಶತ್ರುಗಳು ಅವರನ್ನು ಅಟ್ಟಿಕೊಂಡು ಹೋದರು.
27 : ಮಕ್ಕಳೇ, ಧೈರ್ಯದಿಂದಿರಿ, ಮೊರೆಯಿಡಿ ದೇವರಿಗೆ; ಇದನ್ನೆಲ್ಲಾ ಬರಮಾಡಿದಾತ ತಂದುಕೊಳ್ಳುವನು ನಿಮ್ಮನ್ನು ನೆನಪಿಗೆ.
28 : ದೇವರಿಗೆ ವಿಮುಖರಾಗಲು ಮನಸ್ಸು ಮಾಡಿದಿರಿ ಈಗ ಅವರಿಗೆ ಅಭಿಮುಖರಾಗಲು ಹತ್ತರಷ್ಟು ಮನಸ್ಸುಮಾಡಿರಿ.
29 : ನಿಮಗೆ ಈ ವಿಪತ್ತನ್ನು ಬರಮಡಿದಾತನು ನಿಮ್ಮ ಉದ್ಧಾರದೊಂದಿಗೆ ಶಾಶ್ವತ ಸಂತಸವನ್ನುಂಟುಮಾಡುವನು. ಜೆರುಸಲೇಮಿಗೆ ಸಹಾಯ ನಿಶ್ಚಯ
30 : ಜೆರುಸಲೇಮೇ, ಧೈರ್ಯದಿಂದಿರು ನಿನ್ನನ್ನು ಹೆಸರಿಸಿದಾತ ನಿನಗೆ ಆದರಣೆ ನೀಡುವನು.
31 : ನಿನಗೆ ಕಷ್ಟಕೊಟ್ಟವಳಿಗೆ, ನಿನ್ನ ಪತನದಲ್ಲಿ ಹಿಗ್ಗಿದವಳಿಗೆ, ಇರಲಿ ಧಿಕ್ಕಾರ!
32 : ನಿನ್ನ ಮಕ್ಕಳನ್ನು ಕರೆದುಕೊಂಡವಳಿಗೆ, ಗುಲಾಮರಾಗಿಸಿಕೊಂಡವಳಿಗೆ ಧಿಕ್ಕಾರ!
33 : ನಿನ್ನ ಪತನದಲ್ಲಿ ಉಲ್ಲಾಸಪಟ್ಟವಳು, ನಿನ್ನ ಅಧೋಗತಿಯಲಿ ಹಿಗ್ಗಿದವಳು ತನ್ನ ಅಳಿವಿಗಾಗಿ ವ್ಯಥೆಪಡಬೇಕಾಗುವುದು.
34 : ತನ್ನ ಜನಸಂಖ್ಯೆಯಲ್ಲಿ ಹೆಚ್ಚಳಪಟ್ಟವಳ ಆನಂದವನ್ನು ತೆಗೆದುಬಿಡುವೆನು ಅವಳ ಅಹಂಕಾರ ಗೋಳಾಟವಾಗಿ ಮಾರ್ಪಡುವುದು.
35 : ಅವಳ ಮೇಲೆ ಬೆಂಕಿಯನ್ನು ಸುರಿಸುವನು ನಿತ್ಯವಾಗಿರುವಾತ ಅದು ಉರಿಯುತ್ತಲೇ ಇರುವುದು ಅಲ್ಲಿ ಬಹುಕಾಲ, ದೆವ್ವಗಳು ಬಂದು ನೆಲಸುವುವು ಅಲ್ಲಿ ಚಿರಕಾಲ.
36 : ಜೆರುಸಲೇಮೇ, ಪೂರ್ವಾಭಿಮುಖವಾಗಿ ನೋಡು ದೇವರಿಂದ ನಿನಗುಂಟಾಗುವ ಆನಂದವನ್ನು ನಿರೀಕ್ಷಿಸು.
37 : ನೀನು ಒಮ್ಮೆ ಬೀಳ್ಕೊಟ್ಟ ನಿನ್ನ ಮಕ್ಕಳು ಬರುವುದನ್ನು ನೋಡು ಪರಮಪಾವನನು ನುಡಿದಂತೆ ಪೂರ್ವದಿಂದ ಪಶ್ಚಿಮದವರೆಗೂ ಅವರು ಕೂಡಿಬರುವರು, ದೇವರ ಪ್ರಭಾವದಲ್ಲಿ ಹಿಗ್ಗುತಾ ಬರುವರು.

· © 2017 kannadacatholicbible.org Privacy Policy