Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಿರಾಖ


1 : ಯೆಹೋಶುವ ಯುದ್ಧವೀರನಾಗಿದ್ದನು ನೂನನ ಮಗ ಯೆಹೋಶುವನು ಪ್ರವಚನಗಳಲ್ಲಿ ಮೋಶೆಯ ಉತ್ತರಾಧಿಕಾರಿ ಇವನು. ಇವನು, ಹೆಸರಿಗೆ ತಕ್ಕಂತೆ, ಮಹಾರಕ್ಷಕನಾದ ದೇವರಾಯ್ದುಕೊಂಡವರಿಗೆ ಮುಯ್ಯಿ ತೀರಿಸುವವನಾದ ಜನರ ವಿರೋಧವಾಗಿ ಎದ್ದವರಿಗೆ ಸ್ವಾಸ್ತ್ಯವನ್ನು ಗಳಿಸಿಕೊಡುವಂಥವನಾದ ಇಸ್ರಯೇಲರಿಗೆ.
2 : ಎಷ್ಟು ಘನವಂತನಾದ ಈತ ತನ್ನ ಕೈಗಳನ್ನೆತ್ತಿದಾಗ ! ಪಟ್ಟಣಗಳ ವಿರುದ್ಧ ತನ್ನ ಕತ್ತಿಯನ್ನು ಇರಿದಾಗ !
3 : ಇಂಥ ಧೈರ್ಯಸ್ಥೈರ್ಯ ಯಾರಿಗಿತ್ತು ಇವನಿಗೆ ಮುಂಚೆ? ವೈರಿಗಳಿಗೆ ವಿರುದ್ಧ ಸರ್ವೇಶ್ವರನ ಯುದ್ಧಗಳನ್ನು ನಡೆಸಿದವನು ಇವನೇ.
4 : ಸೂರ್ಯನು ನಿಲ್ಲುವಂತೆ ಮಾಡಿದ್ದು ಇವನೇ ಅಲ್ಲವೇ? ಆಗ ಒಂದು ದಿನ ಎರಡರಷ್ಟಾಗಲಿಲ್ಲವೆ?
5 : ಶತ್ರುಗಳು ಸುತ್ತುಗಟ್ಟಿ ಇವನ ಮೇಲೆ ಬೀಳಲು, ಮಹೋನ್ನತ ಪರಾಕ್ರಮ ಆದಾತನಿಗೆ ಮೊರೆಯಿಟ್ಟನು. ಮಹಾದೇವನು ಇವನ ಮೊರೆಯನ್ನು ಕೇಳಿದನು ಬಲವಾದ ಕಲ್ಮಳೆಯನ್ನು ಸುರಿಸಿದನು.
6 : ಪ್ರಚಂಡ ಯುದ್ಧ ನಡೆಸಿದನು ಶತ್ರು ಜನಾಂಗದ ಮೇಲೆ ವಿರೋಧಿಗಳನ್ನು ನಾಶಗೊಳಿಸಿದನು (ಬೆಹೋರೋನಿನ) ಇಳಿಜಾರಿನಲ್ಲೆ. ಮನವರಿಕೆಯಾಯಿತಾಗ ಜನಾಂಗಗಳಿಗೆ ಅವನ ಯುದ್ಧಕವಚ ಎಂಥದೆಂದು! ಸರ್ವೇಶ್ವರನ ದೃಷ್ಟಿಯಲ್ಲಿ ಅವನು ಯುದ್ಧ ಮಾಡುತ್ತಿದ್ದಾನೆಂದು. ಏಕೆಂದರೆ ಪರಮಪರಾಕ್ರಮಶಾಲಿಯೇ ಅವನಿಗೆ ನಾಯಕನಾಗಿದ್ದನು.
7 : ಕಾಲೇಬ ಮೋಶೆಯ ಕಾಲದಲಿ ಯೆಹೋಶುವನು ತೋರಿದನು ಪ್ರಾಮಾಣಿಕತೆಯನ್ನು ಎಫೆನ್ನೆಯ ಮಗ ಕಾಲೇಬನೊಂದಿಗೆ ಕೈಗೂಡಿಸಿಕೊಂಡನು ಇವರಿಬ್ಬರೂ ಸೇರಿ ಎದುರಿಸಿದರು ವಿರೋಧ ಪಕ್ಷದವರನ್ನು ತಪ್ಪಿಸಿದರು ಪಾಪದೋಷಗಳಿಂದ ಜನರನ್ನು ಸಾಂತ್ವನಪಡಿಸಿದರು ದುರುಳರ ಗೊಣಗಾಟವನ್ನು.
8 : ಆರು ಲಕ್ಷ ಕಾಲಾಳುಗಳಲ್ಲಿ ಅಳಿದುಳಿದವರು ಇವರಿಬ್ಬರೇ, ಜನರನ್ನು ತಮ್ಮ ಸ್ವಾಸ್ತ್ಯಕ್ಕೆ, ಹಾಲೂಜೇನೂ ಹರಿಯುವ ನಾಡಿಗೆ ತಂದವರೂ ಇವರೇ.
9 : ಸರ್ವೇಶ್ವರ ಬಲವನ್ನು ಅನುಗ್ರಹಿಸಿದನು ಕಾಲೇಬನಿಗೆ ಅದು ಅವನೊಂದಿಗೆ ಇತ್ತು ಅವನ ಮುಪ್ಪಿನವರೆಗೆ ಆದುದರಿಂದ ಏರಿಹೋದನವನು ಮಲೆನಾಡಿಗೆ ಆ ನಾಡು ಸ್ವಾಸ್ತ್ಯವಾಯಿತು ಅವನ ಸಂತಾನದವರಿಗೆ.
10 : ದೇವರ ಚಿತ್ತಾನುಸಾರ ನಡೆಯುವುದು ಎಷ್ಟು ಒಳಿತು ! ಇದನ್ನು ಇಸ್ರಯೇಲ ಜನರು ಕಣ್ಣಾರೆ ನೋಡುವಂತಾಯಿತು.
11 : ನ್ಯಾಯಸ್ಥಾಪಕರು ಇದರಿಂದ ಪೂಜ್ಯವಾಗಲಿ ಪ್ರತಿಯೊಬ್ಬ ನ್ಯಾಯಸ್ಥಾಪಕನ ಸ್ಮರಣೆ ಕಾರಣ, ಬಾಳಿದರವರು ದೇವದ್ರೋಹಗೈಯದೆ, ಸರ್ವೇಶ್ವರನಿಂದ ಅಗಲದೆ.
12 : ಇದ್ದ ಸ್ಥಳದಿಂದಲೆ ಚಿಗುರಲಿ ಅವರ ಎಲುಬುಗಳು ಇವರ ಮಕ್ಕಳಿಗೂ ಬರಲಿ ಕೀರ್ತಿಕುಲಶವಾದ ಅವರ ಹೆಸರು !
13 : ಸಾಮುವೇಲನು ಸಾಮುವೇಲನು ಸರ್ವೇಶ್ವರನಿಗೆ ಪ್ರಿಯನಾಗಿದ್ದನು ಸರ್ವೇಶ್ವರನ ಪ್ರವಾದಿಯಾಗಿದ್ದು ರಾಜ್ಯವನ್ನು ಸ್ಥಾಪಿಸಿದನು ಆತನ ಜನಾಂಗಕ್ಕಾಗಿ ಅರಸರನ್ನು ಅಭಿಷೇಕಿಸಿದನು.
14 : ಸರ್ವೇಶ್ವರನ ಧರ್ಮಶಾಸ್ತ್ರಕ್ಕೆ ತಕ್ಕಂತೆ ಜನಸಮೂಹಕ್ಕೆ ನ್ಯಾಯತೀರಿಸಿದನು. ಸರ್ವೇಶ್ವರನು ಇಸ್ರಯೇಲರನ್ನು ಕಾಪಾಡಿದನು.
15 : ಇವನು ಪ್ರವಾದಿಯೆಂಬುದು ವ್ಯಕ್ತವಾಯಿತು ಇವನ ನೀತಿಸತ್ಯತೆಗಳಿಂದಲೆ ಇವನ ದರ್ಶನಗಳು ಸತ್ಯವೆಂದು ಕಂಡುಬಂತು ಇವನ ನುಡಿಗಳಿಂದಲೆ.
16 : ಶತ್ರುಗಳು ಮುತ್ತಿದಾಗ ಪರಾಕ್ರಮಿಯಾದ ಸರ್ವೇಶ್ವರನಿಗೆ ಮೊರೆಯಿಟ್ಟನು ಹಾಲುಕುಡಿಯುವ ಕುರಿಮರಿಯನ್ನು ಆತನಿಗೆ ಬಲಿಯಾಗಿ ಅರ್ಪಿಸಿದನು.
17 : ಸರ್ವೇಶ್ವರ ಗುಡುಗಿದನು ಆಕಾಶದಿಂದ ತನ್ನ ಧ್ವನಿಕೇಳುವಂತೆ ಮಾಡಿದ ಮಹಾ ಶಬ್ದದಿಂದ.
18 : ಸಂಪೂರ್ಣ ನಾಶಗೊಳಿಸಿದನು ಟೈರ್ ಸೀಮೆಯ ಅಧಿಪತಿಗಳನ್ನು, ಆ ಫಿಲಿಷ್ಟಿಯರ ಪ್ರಭುಗಳನ್ನು.
19 : ಇವನು ಶಾಶ್ವತ ನಿದ್ರೆ ಹೊಂದುವ ಮುಂಚೆ ಸರ್ವೇಶ್ವರನ ಹಾಗು ಆತನ ಅಭಿಷಿಕ್ತನ ಸನ್ನಿಧಿಯಲ್ಲೆ ‘ನಾನು ಯಾರಿಂದಲೂ ಹಣ ತೆಗೆದುಕೊಳ್ಳಲಿಲ್ಲ, ಕೆರಗಳನ್ನು ಕೂಡ ತೆಗೆದುಕೊಳ್ಳಲಿಲ್ಲ’ ಎಂದು ಪ್ರಮಾಣ ಮಾಡಿ ನುಡಿದನು, ಯಾರಿಂದಲೂ ತಪ್ಪು ಕಂಡು ಹಿಡಿಯಲಾಗಲಿಲ್ಲ ಅವನೊಳು.
20 : ಪ್ರವಾದನೆ ಮಾಡಿದನವನು ತೀರಿಹೋದ ಮೇಲೆಯೂ ಅರಸನಿಗೆ ತೋರಿಸಿದ ಆತನ ಅಂತ್ಯಸ್ಥಿತಿಯನ್ನು ಆನರ ದುಷ್ಟತನದ ಪರಿಹಾರಕ್ಕಾಗಿ ಎತ್ತಿದನು ಭೂಮಿಯೊಳಗಿಂದ ತನ್ನ ಧ್ವನಿಯನ್ನು.

· © 2017 kannadacatholicbible.org Privacy Policy