1 : ಇಸ್ರಯೇಲಿಗಾಗಿ ಪ್ರಾರ್ಥನೆ
ಎಲ್ಲರ ದೇವರಾದ ಒಡೆಯಾ,
ನಮ್ಮನು ಕರುಣಿಸು, ಕಟಾಕ್ಷಿಸು
ಎಲ್ಲ ಜನಾಂಗಗಳಲ್ಲು ನಿನ್ನ ಭಯಭಕ್ತಿಯನು
ಹುಟ್ಟಿಸು.
2 : ಇಸ್ರಯೇಲಿಗಾಗಿ ಪ್ರಾರ್ಥನೆ
ಎಲ್ಲರ ದೇವರಾದ ಒಡೆಯಾ,
ನಮ್ಮನು ಕರುಣಿಸು, ಕಟಾಕ್ಷಿಸು
ಎಲ್ಲ ಜನಾಂಗಗಳಲ್ಲು ನಿನ್ನ ಭಯಭಕ್ತಿಯನು
ಹುಟ್ಟಿಸು.
3 : ನಿನ್ನನ್ನರಿಯದ ಜನರ ಮೇಲೆ ಎತ್ತು ನಿನ್ನ
ಕೈಯನು
ಅವರು ಕಾಣಲಿ ನಿನ್ನ ಶಕ್ತಿಪರಾಕ್ರಮವನು.
4 : ನೀ ಪರಿಶುದ್ಧನೆಂಬುದನು ಪ್ರಕಟಿಸಿದೆ ಅವರಿಗೆ
ನಮ್ಮ ಮೂಲಕ
ಈಗ ನೀ ಮಹಾಮಹಿಮನೆಂಬುದನು
ತೋರ್ಪಡಿಸು ನಮಗೆ ಅವರ ಮೂಲಕ.
5 : ಸರ್ವೇಶ್ವರಾ ನೀನೊಬ್ಬನೇ ಹೊರತು ಬೇರೆ
ದೇವರಿಲ್ಲ
ನಾವು ನಿನ್ನನು ಅರಿತುಕೊಂಡಂತೆ
ಅರಿತುಕೊಳ್ಳಲಿ ಅವರೆಲ್ಲ.
6 : ಹೊಸ ಹೊಸ ಸೂಚಕಕಾರ್ಯಗಳನ್ನು
ತೋರಿಸು
ತರತರದ ಅದ್ಭುತಕಾರ್ಯಗಳನ್ನು ನಡೆಸು
ನಿನ್ನ ಹಸ್ತದ, ನಿನ್ನ ಭುಜಬಲದ ಶಕ್ತಿಯನ್ನು
ಪ್ರದರ್ಶಿಸು.
7 : ರೌದ್ರವನು ತಾಳು; ನಿನ್ನ ಕೋಪವನು
ಸುರಿದುಬಿಡು
ಎದುರಾಳಿಯನು ತೆಗೆದು ಹಾಕು, ವೈರಿಯನು
ಅಳಿಸಿಬಿಡು.
8 : ಬೇಗನೆ ಬರಮಾಡು ಆ ಸಮಯವನು
ಲಕ್ಷ್ಯಕ್ಕೆ ತೆಗೆದುಕೊ ನೀ ಮಾಡಿದ ಪ್ರಮಾಣವನು
ಸಾರಿ ಹೇಳಲಿ ಜನರು
ನಿನ್ನ ಮಹತ್ಕಾರ್ಯಗಳನು.
9 : ಇದರಿಂದ ತಪ್ಪಿಸಿಕೊಳ್ಳುವವನು ಬೆಂಕಿಯ
ದಳ್ಳುರಿಗೆ ತುತ್ತಾಗಲಿ
ನಿನ್ನ ಜನರಿಗೆ ಕೇಡು ಬಗೆವವರು
ಹಾಳಾಗಿ ಹೋಗಲಿ.
10 : ನಸುಕಿಬಿಡು ನಮ್ಮ ವಿರೋಧಿಜನರ
ಅಧಿಪತಿಗಳ ತಲೆಗಳನು
ನಮ್ಮ ಹೊರತು ಬೇರೆ ಯಾರೂ ಇಲ್ಲ
ಎಂದು ಕೊಚ್ಚಿಕೊಳ್ಳುವವರನು.
11 : ಒಟ್ಟುಗೂಡಿಸು ಯಕೋಬನ ಕುಲಗಳನ್ನೆಲ್ಲಾ
ಮೊದಲಿನಂತೆ ಸ್ವಾಸ್ತ್ಯವಾಗಿ ತೆಗೆದುಕೊ
ಅವರನ್ನೆಲ್ಲಾ.
12 : ಸರ್ವೇಶ್ವರಾ, ಕರುಣಿಸು ನಿನ್ನ ಹೆಸರಿನಿಂದ
ಕರೆಯಲಾಗುವ ಜನರನು
ಚೊಚ್ಚಲು ಮಗನಿಗೆ ಹೋಲಿಸಿದ
ಇಸ್ರಯೇಲನು.
13 : ದಯೆತೋರು ನಿನ್ನ ಪವಿತ್ರಾಲಯವಿರುವ
ಪಟ್ಟಣದ ಮೇಲೆ
ಹೌದು, ನಿನ್ನ ವಾಸಸ್ಥಾನವಾಗಿರುವ
ಜೆರುಸಲೇಮಿನ ಮೇಲೆ.
14 : ಸಿಯೋನ್ ನಗರ ತುಂಬಿರಲಿ ನಿನ್ನ
ಪರಾಕ್ರಮ ಕೃತ್ಯಗಳ ಸುದ್ದಿಯಿಂದ
ನಿನ್ನ ಜನರು ಬೆಳಗಲಿ ನಿನ್ನ
ಮಹಿಮಾ ಪ್ರಭಾವದಿಂದ.
15 : ಆದಿಯಲ್ಲೇ ಸೃಷ್ಟಿಯಾದವರಿಗೆ ನಿನ್ನ ಕುರಿತ
ಸಾಕ್ಷಿ ದೊರಕಲಿ
ನಿನ್ನ ಪ್ರವಾದಿಗಳು ನುಡಿದದ್ದೆಲ್ಲ ಈಡೇರಲಿ.
16 : ನಿನ್ನನು ನಿರೀಕ್ಷಿಸಿದವರಿಗೆ ಪ್ರತಿಫಲ ದೊರಕಲಿ
ಜನರು ನಿನ್ನ ಪ್ರವಾದಿಗಳಲಿ ಭರವಸೆಯಿಡಲಿ.
17 : ನಿನ್ನ ಜನರನು ಆರೋನನು ಆಶೀರ್ವದಿಸಿದಂತೆ
ಸರ್ವೇಶ್ವರಾ, ನಿನಗೆ ಸೇರಲಿ
ಮೊರೆಯಿಡುವವರ ಪ್ರಾರ್ಥನೆ.
ಆಗ ಭೂನಿವಾಸಿಗಳೆಲ್ಲ ಅರಿಯುವರು
ನೀ ಸರ್ವೇಶ್ವರನೆಂದು
ನೀನೇ ಸರ್ವಯುಗಗಳ ದೇವರೆಂದು.
18 : ವ್ಯತ್ಯಾಸದ ಅರಿವು
ಹೊಟ್ಟೆ ತಿನ್ನುತ್ತದೆ ಎಲ್ಲಾ ತರದ
ಆಹಾರ ಪದಾರ್ಥ
ಆದರೂ ಒಂದು ಪದಾರ್ಥ ಇನ್ನೊಂದಕ್ಕಿಂತ
ರುಚಿಕರ.
19 : ಬೇಟೆಮಾಂಸದ ರುಚಿನೋಡಿ
ತಿಳಿದುಕೊಳ್ಳುತ್ತದೆ ಬಾಯಿ
ಅದರಂತೆ ಸುಳ್ಳು ಮಾತುಗಳನು
ತಿಳಿದುಕೊಳ್ಳುತ್ತಾನೆ ವಿವೇಕವುಳ್ಳ ಹೃದಯಿ.
20 : ವಕ್ರ ಹೃದಯದಿಂದ ಉಂಟಾಗುವುದು ದುಃಖ
ಅನುಭವಿಯಿಂದ ಅದಕ್ಕಾಗುವುದು ತಕ್ಕ
ಪ್ರತೀಕಾರ.
21 : ವಧುವಿನ ಆಯ್ಕೆ
ಯಾವ ಪುರುಷನನ್ನಾದರು ವರಿಸಬಹುದು
ಮಹಿಳೆ
ಆದರೆ ಪುರುಷನಿಗೆ ಒಬ್ಬಳು
ಇನ್ನೊಬ್ಬಳಿಗಿಂತಲೂ ಚೆಲುವೆ.
22 : ಸ್ತ್ರೀ ಲಾವಣ್ಯದಿಂದ ಪುರುಷನ
ಮುಖಕ್ಕೇರುವುದು ಕಾಂತಿ
ಇನ್ನಾವ ಅಭಿಲಾಷೆಯಿಂದಲೂ ಅವನಿಗೆ
ದೊರಕದು ತೃಪ್ತಿ.
23 : ನಯವಿನಯ ಆಕೆಯ ಬಾಯಲ್ಲಿದ್ದರೆ
ಅವಳ ಗಂಡ ಶ್ರೇಷ್ಟ ಅದೃಷ್ಟವಂತನೆ!
24 : ಪತ್ನಿಯನು ಸಂಪಾದಿಸಿಕೊಂಡವನಿಗಿದೆ
ಸುಖಸಂಪತ್ತಿನ ಸಾಧನ
ಆಕೆ ಅವನಿಗೆ ಸರಿಬೀಳುವ ಸಹಕಾರಿ;
ಸ್ತಂಭದಂತಹ ಬೆಂಬಲ.
25 : ಆವರಣವಿಲ್ಲದವನ ಆಸ್ತಿ ಹಾಳು
ಹೆಂಡತಿಯಿಲ್ಲದವನ ಜೀವನ
ಗೊತ್ತುಗುರಿಯಿಲ್ಲದ ಗೋಳು.
26 : ಪಟ್ಟಣದಿಂದ ಪಟ್ಟಣಕ್ಕೆ ಜಿಗಿಯುವ
ಚಪಲಚೋರನನು ನಂಬುವರಾರು?
ಕತ್ತಲೆಯಾದಾಗ ಕಂಡಲ್ಲಿ ತಂಗುವ
ಗೂಡಿಲ್ಲದ ಮನುಷ್ಯನನ್ನು ನಂಬುವರಾರು?