Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಿರಾಖ


1 : ಧರ್ಮಶಾಸ್ತ್ರ - ಬಲಿಯರ್ಪಣೆ ಧರ್ಮಶಾಸ್ತ್ರವನ್ನು ಅನುಸರಿಸು ವವನು ಕಾಣಿಕೆಗಳನು ಹೆಚ್ಚಾಗಿ ಅರ್ಪಿಸಿದವನಂತೆ ಆಜ್ಞೆಗಳನ್ನು ಕೈಗೊಳ್ಳುವವನು ಶಾಂತಿ ಸಮಾಧಾನದ ಬಲಿಯರ್ಪಿಸಿದವನಂತೆ.
2 : ಪ್ರತ್ಯುಪಕಾರ ಮಾಡುವವನು ಗೋದಿಹಿಟ್ಟನ್ನು ನೈವೇದ್ಯ ಮಾಡಿದವನಂತೆ ದಾನಧರ್ಮ ಮಾಡುವವನು ಸ್ತುತಿಬಲಿಯನ್ನು ಅರ್ಪಿಸಿದವನಂತೆ.
3 : ದುಷ್ಟತನವನು ಬಿಟ್ಟುಬಿಡುವುದು, ಸರ್ವೇಶ್ವರನಿಗೆ ಸುಪ್ರೀತ ಅಧರ್ಮವನು ಬಿಟ್ಟುಬಿಡುವುದು ಪಾಪಕ್ಕೆ ಪ್ರಾಯಶ್ಚಿತ್ತ.
4 : ಸರ್ವೇಶ್ವರನ ಸನ್ನಿಧಿಯನು ಸೇರಬಾರದು ಬರಿಗೈಯಿಂದ, ಇವುಗಳನ್ನೆಲ್ಲ ಮಾಡಬೇಕಾಗಿದೆ ಆತನ ಆಜ್ಞೆಯ ನಿಮಿತ್ತ.
5 : ಸರ್ವೇಶ್ವರನ ಸನ್ನಿಧಿಯನು ಸೇರಬಾರದು ಬರಿಗೈಯಿಂದ, ಇವುಗಳನ್ನೆಲ್ಲ ಮಾಡಬೇಕಾಗಿದೆ ಆತನ ಆಜ್ಞೆಯ ನಿಮಿತ್ತ.
6 : ನೀತಿವಂತನ ಅರ್ಪಣೆ ಒಂದು ಅಲಂಕಾರ ಯಜ್ಞವೇದಿಕೆ ಅದರ ಸುವಾಸನೆ ಏರುವುದು ಮಹೋನ್ನತನ ಸನ್ನಿಧಿಗೆ.
7 : ಸಮರ್ಪಕವಾಗಿರುವುದು ನೀತಿವಂತ ನೀಡುವ ಬಲಿಕಾಣಿಕೆ ಮರೆತುಹೋಗುವುದಿಲ್ಲ ಅದರ ಸ್ಮರಣೆ.
8 : ಉದಾರದೃಷ್ಟಿಯಿಂದ ಸರ್ವೇಶ್ವರನನು ಮಹಿಮೆಪಡಿಸು ಕಡಿಮೆಮಾಡಬೇಡ ನಿನ್ನ ಕೈಯ ಪ್ರಥಮ ಫಲಗಳನು.
9 : ಕಾಣಿಕೆ ಕೊಡುವಾಗಲೆಲ್ಲ ಹಸನ್ಮುಖಿಯಾಗಿರು ಸಂತೋಷದಿಂದ ದಶಮಾಂಶವನು ಸಲ್ಲಿಸು.
10 : ಮಹೋನ್ನತನು ನಿನಗೆ ಕೊಟ್ಟ ಪ್ರಮಾಣಕ್ಕೆ ಕೊಡು ನಿನ್ನ ಕೈ ಗಳಿಸಿದ ಪ್ರಮಾಣಕ್ಕೆ ಸರಿಯಾಗಿ ಒಳ್ಳೇ ದೃಷ್ಟಿಯಿಂದ ಕೊಡು.
11 : ಏಕೆಂದರೆ ಸರ್ವೇಶ್ವರ ಪ್ರತಿಫಲ ನೀಡುವನು ಏಳ್ಮಡಿಯಾಗಿ ನಿನಗೆ ಕೊಡುವನು.
12 : ದೈವನೀತಿ ಲಂಚದೋಪಾದಿ ಕಾಣಿಕೆ ತರಬೇಡ, ಆತನು ಅವುಗಳನ್ನು ಅಂಗೀಕರಿಸುವುದಿಲ್ಲ ಅಕ್ರಮವಾದ ಬಲಿಯ ಮೇಲೆ ಮನಸ್ಸಿಡಬೇಡ, ಆತ ನ್ಯಾಯಾಧೀಶ, ಆತನಲ್ಲಿ ಮುಖದಾಕ್ಷಿಣ್ಯವಿಲ್ಲ.
13 : ಬಡವನ ವಿರೋಧವಾಗಿ ಯಾರನ್ನೂ ಅಂಗೀಕರಿಸನಾತ ಅನ್ಯಾಯಕ್ಕೀಡಾದವನ ಮೊರೆಯನು ಆಲಿಸುವನಾತ.
14 : ತಿರಸ್ಕರಿಸನಾತ ಯಾವ ದಿಕ್ಕುದೆಸೆಯಿಲ್ಲದವರ ವಿನಂತಿಯನು ತನ್ನ ಸ್ಥಿತಿಯನು ತೋಡಿಕೊಳ್ಳುವ ವಿಧವೆಯನು.
15 : ವಿಧವೆಯ ಕಣ್ಣೀರು ಅವಳ ಕೆನ್ನೆಯ ಮೇಲೆ ಇಳಿಯುವುದಿಲ್ಲವೆ? ಆಕೆಯ ಕೂಗು ಆಕೆಯನು ಗೋಳಾಡಿಸಿದವನ ವಿರುದ್ಧ ನಿಲ್ಲುವುದಿಲ್ಲವೆ?
16 : ದೇವರ ಸುಚಿತ್ತದಂತೆ ಸೇವೆ ಮಾಡುವವನು ಅಂಗೀಕೃತನಾಗುವನು ಇಂಥವನ ಪ್ರಾರ್ಥನೆ ಮುಟ್ಟುವುದು ಗಗನಮಂಡಲವನು.
17 : ಮೇಘಮಂಡಲವನು ದಾಟುವುದು ದೀನನ ಪ್ರಾರ್ಥನೆ ಅವನಿಗೆ ಉಪಶಮನವೇ ಇರದು ಅದು ದೇವರ ಸನ್ನಿಧೀ ಸೇರುವವರೆಗೆ.
18 : ಅವನು ಅಲ್ಲಿಂದ ಏಳುವುದಿಲ್ಲ ಮಹೋನ್ನತನು ಸದುತ್ತರ ಕೊಡುವವರೆಗೆ ಆತ ಉತ್ತರ ಕೊಡುವುದು ನ್ಯಾಯತೀರಿಸಿದ ನಂತರವೆ.
19 : ಸರ್ವೇಶ್ವರ ನಿಧಾನಮಾಡನು; ಅನ್ಯಾಯವನು ಸಹಿಸನು ಮುರಿದುಬಿಡುವನು ನಿರ್ದಯಿಗಳ ನಡುವನು.
20 : ಅನ್ಯರಿಗೆ ಮುಯ್ಯಿತೀರಿಸುವನು;
21 : ಸೊಕ್ಕಿನವರ ಗುಂಪನು ನಿರ್ನಾಮಗೊಳಿಸುವನು ಪುಡಿಪುಡಿ ಮಾಡುವನು ಅಧರ್ಮಿಗಳ ದಂಡಗಳನು.
22 : ಪ್ರತಿಯೊಬ್ಬನಿಗೂ ಪ್ರತಿಫಲವೀಯುವನು ಅವನವನ ಕೃತ್ಯಗಳ ಪ್ರಕಾರ; ಮಾನವರ ಕೃತ್ಯಗಳಿಗೆ ಫಲವೀಯುವನು ಅವರವರ ಉದ್ದೇಶಗಳಿಗೆ ಅನುಸಾರ.
23 : ನ್ಯಾಯ ತೀರಿಸುವನಾತ ತನ್ನ ಜನರ ಪಕ್ಷ ವಹಿಸಿ ಅವರು ಆನಂದಿಸುವಂತೆ ಮಾಡುವನು ತನ್ನ ಕೃಪೆ ತೋರಿಸಿ.
24 : ಅನಾವೃಷ್ಟಿಯಲಿ ಮಳೆಮೋಡಗಳು ಬಂದಂತೆ ಕಷ್ಟಬಾಧೆಗಳ ಕಾಲದಲ್ಲಿ ಸುಸ್ವಾಗತವಿದೆ ಆತನ ಕರುಣೆಗೆ.

· © 2017 kannadacatholicbible.org Privacy Policy