Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಿರಾಖ


1 : ಹೆತ್ತವರಿಗೆ ಮಾಡಬೇಕಾದ ಕರ್ತವ್ಯಗಳು ಮಕ್ಕಳೇ, ನಿಮ್ಮ ತಂದೆಯಾದ ನನ್ನ ಮಾತನು ಕೇಳಿರಿ ನೀವು ಸುರಕ್ಷಿತವಾಗಿರಲು ಅದರಂತೆ ನಡೆಯಿರಿ.
2 : ಸರ್ವೇಶ್ವರ, ಮಕ್ಕಳಿಗಿಂತ ಮಿಗಿಲಾಗಿ ತಂದೆಗೆ ಗೌರವ ನೀಡಿದ್ದಾರೆ ಗಂಡುಮಕ್ಕಳ ಮೇಲೆ ತಾಯಿಗೆ ಅಧಿಕಾರವನ್ನು ಅನುಗ್ರಹಿಸಿದ್ದಾರೆ.
3 : ತಂದೆಯನ್ನು ಸನ್ಮಾನಿಸುವವನು ತನ್ನ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿದವನಂತೆ;
4 : ತಾಯಿಯನ್ನು ಗೌರವಿಸುವವನು, ನಿಧಿ ಶೇಖರಿಸಿಟ್ಟುಕೊಂಡವನಂತೆ.
5 : ತಂದೆಯನ್ನು ಗೌರವಿಸುವವನಿಗೆ ತನ್ನ ಸ್ವಂತ ಮಕ್ಕಳಿಂದ ಆಗುವುದು ಸಂತೋಷ ಅವನು ಪ್ರಾರ್ಥನೆ ಮಾಡುವಾಗಲೆಲ್ಲ ದೊರಕುವುದವನಿಗೆ ಪ್ರತ್ಯುತ್ತರ.
6 : ತಂದೆಯನು ಗೌರವಿಸುವವನು ಬದುಕುವನು ಬಹುಕಾಲ ಸರ್ವೇಶ್ವರನಿಗೆ ವಿಧೇಯನಾಗಿರುವವನು ತಾಯಿಗೆ ಬರಮಾಡುವನು ಸಮಾಧಾನ.
7 : ಅಂಥವನು ಸರ್ವೇಶ್ವರನಿಗೆ ಸೇವೆ ಮಾಡುವಂತೆಯೆ ಮಾಡುವನು ಸೇವೆ ಹೆತ್ತವರಿಗೆ.
8 : ಹೆತ್ತವರನ್ನು ಸನ್ಮಾನಿಸು ನಿನ್ನ ನಡೆನುಡಿಗಳಿಂದ ಹೀಗೆ ನಿನಗೆ ದೊರಕುವುದು ಆಶೀರ್ವಾದ ಆತನಿಂದ.
9 : ತಂದೆಯ ಆಶೀರ್ವಾದ ಮಕ್ಕಳ ಮನೆಯನ್ನು ಸ್ಥಿರಗೊಳಿಸುತ್ತದೆ ತಾಯಿಯ ಶಾಪ ಅವುಗಳ ಅಸ್ತಿವಾರವನ್ನೇ ಕಿತ್ತುಹಾಕುತ್ತದೆ.
10 : ಹಿಗ್ಗದಿರು, ತಂದೆಗೆ ಅವಮಾನವಾಗುವಾಗ ತಂದೆಯ ಅವಮಾನ ನೀಡದು ನಿನಗೆ ಸನ್ಮಾನ.
11 : ಮನುಷ್ಯನಿಗೆ ಗೌರವ ಲಭಿಸುವುದು ತಂದೆಯ ಘನತೆಯಿಂದ ಅವಮಾನದಲ್ಲಿ ಬದುಕುವ ತಾಯಿ, ಮಕ್ಕಳಿಗೆ ಕಳಂಕ.
12 : ಮಗನೇ, ನಿನ್ನ ಮುಪ್ಪಿನ ತಂದೆಗೆ ಸಹಾಯಕನಾಗಿರು ಅವನು ಬದುಕುವವರೆಗೆ ಅವನ ಮನಸ್ಸನು ನೋಯಿಸದಿರು.
13 : ತಾಳ್ಮೆಯಿಂದಿರು ಅವನ ಬುದ್ಧಿ ಮಂಕಾದಾಗ ಅವನನ್ನು ಹೀನೈಸಬೇಡ ನೀನು ಬಲವಂತನಾಗಿರುವಾಗ.
14 : ತಂದೆಗೆ ಮಾಡಿದ ಉಪಶಮನ ಅಳಿದು ಹೋಗದು ಬದಲಿಗೆ, ನಿನ್ನ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಪರಿಣಮಿಸುವುದು.
15 : ದೇವರು ಅದನ್ನು ಸ್ಮರಿಸಿಕೊಳ್ಳುವರು ನೀನು ಕಷ್ಟಕ್ಕೆ ಗುರಿಯಾದಾಗ ಬಿಸಿಲಿನಲ್ಲಿ ಮಂಜಿನಂತೆ, ಕರಗುವುವು ನಿನ್ನ ಪಾಪಗಳೆಲ್ಲ.
16 : ತಂದೆಯನ್ನು ಕೈಬಿಡುವವನು ದೇವದೂಷಕನಂತಿರುವನು ತಾಯಿಯ ಕೋಪ ಕೆರಳಿಸುವವನು ದೇವರಿಂದ ಶಾಪಗ್ರಸ್ಥನು.
17 : ವಿನಮ್ರತೆ ಮಗನೇ, ಕರ್ತವ್ಯ ನಿರ್ವಹನೆಯಲ್ಲಿ ವಿನಯದಿಂದ ವರ್ತಿಸುವಿಯಾದರೆ, ದೇವರಿಗೆ ಯೋಗ್ಯರಾದವರ ಪ್ರೀತಿಗೆ ನೀನೂ ಪಾತ್ರನಾಗುವೆ.
18 : ನೀನು ದೊಡ್ಡವನಾಗಿರುವಷ್ಟು ನಿನ್ನನ್ನೇ ತಗ್ಗಿಸಿಕೊಂಡೆಯಾದರೆ ದೇವರ ಸನ್ನಿಧಿಯಲ್ಲಿ ನಿನಗೆ ಗಿಟ್ಟುವುದು ಕರುಣೆ.
19 : ಗಣ್ಯರೂ ಗರ್ವಿಗಳೂ ಅನೇಕರಿರುವರು ದೇವರು ತಮ್ಮ ಗುಟ್ಟನ್ನು ದೀನರಿಗೆ ಬಯಲು ಮಾಡುವರು.
20 : ಕಾರಣ, ಅಪೂರ್ವವಾದುದು ದೇವರ ಬಲ ದೀನರಿಂದ ಆತನಿಗೆ ಸಲ್ಲುವುದು ಘನಮಾನ.
21 : ನಿನ್ನ ಕೈಯಲ್ಲಾಗದ ಕೆಲಸಕ್ಕೆ ಕೈಹಾಕಬೇಡ ನಿನ್ನ ಶಕ್ತಿಗೆ ನಿಲುಕದವುಗಳನ್ನು ಹುಡುಕ ಬೇಡ.
22 : ಆಲೋಚಿಸುತ್ತಿರು ನಿನಗೆ ಹೇಳಿದ ಕೆಲಸವನ್ನು ಕುರಿತೇ ಮುಚ್ಚುಮರೆಯಾದ ವಿಷಯಗಳು ಬೇಕಿಲ್ಲ ನಿನಗೆ.
23 : ಅಧಿಕ ಪ್ರಸಂಗಿಯಾಗಿ ಕೈ ಹಾಕಬೇಡ ನಾನಾ ಕಾರ್ಯಗಳಿಗೆ ನಿನಗೆ ತಿಳಿಯಪಡಿಸಿದವುಗಳೇ ಮೀರಿವೆ ಮಾನವನ ಗ್ರಹಿಕೆಗೆ.
24 : ಸ್ವಂತ ಅಭಿಪ್ರಾಯವನ್ನೆಚ್ಚಿಕೊಂಡು ಹಿಡಿದಿಹರನೇಕರು ಅಡ್ಡಹಾದಿ ಕೆಟ್ಟ ಭ್ರಮೆಯಿಂದ ತಪ್ಪಿ ಹೋಗಿದೆ ಅವರ ಬುದ್ಧಿ.
25 : ಗರ್ವ ಕಾಣಿಸುವುದಿಲ್ಲ ನಿನಗೆ, ಕಣ್ಣಿಲ್ಲದಿದ್ದರೆ ತಿಳಿದವನಂತೆ ನಟಿಸಬೇಡ, ಅರಿವಿಲ್ಲದಿದ್ದರೆ.
26 : ಅಪಾಯದೊಂದಿಗೆ ಆಟವಾಡುವಾತನು ಬೀಳುವನು ಅದರಲ್ಲೇ ಹಟಮಾರಿ ಕಡೆಗೆ ಅನುಭವಿಸುವನು ಕೇಡನ್ನೇ.
27 : ಮೊಂಡುಹೃದಯಿಗೆ ತಪ್ಪದು ಕಷ್ಟದ ಭಾರ ಪಾಪಾತ್ಮನು ಕೂಡಿಸುವನು ಪಾಪಕ್ಕೆ ಪಾಪ.
28 : ಖಂಡನೆಯಿಂದ ಗುಣವಾಗದು ಗರ್ವಿಗೆ ದುಷ್ಟತನದ ಬಳ್ಳಿ ಬೇರೂರಿದೆ ಅವನಲ್ಲೇ.
29 : ವಿವೇಕ ಮನಸ್ಸುಳ್ಳವರು ಪಾಠ ಕಲಿಯುವರು ಸಾಮತಿಗಳಿಂದ ಲಕ್ಷ್ಯವಿಟ್ಟು ಕೇಳುವನು ಜ್ಞಾನಿ ಹೆಬ್ಬಯಕೆಯಿಂದ. ಬಡವರಿಗೆ ದಾನಧರ್ಮ
30 : ಉರಿಯುವ ಬೆಂಕಿ ನಂದಿಹೋಗುವುದು ನೀರಿನಿಂದ ಪಾಪಕ್ಕೆ ಪ್ರಾಯಶ್ಚಿತ್ತ ದೊರಕುವುದು ದಾನಧರ್ಮದಿಂದ.
31 : ಉಪಕಾರ ತೀರಿಸುವವನಿಗೆ ಯೋಚನೆಯುಂಟು ಭವಿಷ್ಯದಲ್ಲಿ ಆಧಾರ ಪಡೆಯುವನವನು ಪತನದ ವೇಳೆಯಲ್ಲಿ.

· © 2017 kannadacatholicbible.org Privacy Policy