Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಿರಾಖ


1 : ಸಾಲ ನೆರೆಯವನಿಗೆ ಸಾಲಕೊಡುವವನು ಕರುಣಾಳು ಅವರಿಗೆ ಕೈಯಲ್ಲಾದ ನೆರವೀಯುವವನು ದೈವಾಜ್ಞೆಯ ಪರಿಪಾಲಕನು.
2 : ನೆರೆಯವನಿಗೆ ಕೊರತೆ ಬಂದಾಗ ಸಾಲ ಕೊಡು ಎರವು ತಂದುದನ್ನು ಅವನಿಗೆ ಸಕಾಲದಲಿ ತೀರಿಸಿಬಿಡು.
3 : ಕೊಟ್ಟ ವಚನ ಪಾಲಿಸು; ಅವನೊಂದಿಗೆ ನಂಬಿಕಸ್ಥನಾಗಿರು ಹಾಗೆ ನಿನಗೆ ಬೇಕಾದುದೆಲ್ಲವು ಅಗತ್ಯವಿದ್ದಾಗ ಸಿಗುವುದು.
4 : ಅನೇಕರು ಸಾಲವನ್ನು ದೊರೆತ ಲಾಭವೆಂದೆಣಿಸಿದ್ದಾರೆ ತಮಗೆ ಸಹಾಯ ಮಾಡಿದವರಿಗೆ ತೊಂದರೆ ಕೊಟ್ಟಿದ್ದಾರೆ.
5 : ಸಾಲಸಿಕ್ಕುವತನಕ ಕೊಡುವವನ ಕೈಗೆ ಮುತ್ತಿಡುವನು ನೆರೆಯವನ ಹಣಕ್ಕಾಗಿ ಸವಿಮಾತು ಆಡುವನು. ಸಾಲತೀರಿಸುವ ಸಮಯ ಬಂದಾಗ ಕಳೆಯುವನು ಹೊತ್ತು ಕಾಲಕೆಟ್ಟದ್ದೆಂದು ಆಡುವನು ಇಲ್ಲಸಲ್ಲದ ನೆಪಮಾತು.
6 : ಸಾಲಕೊಟ್ಟದ್ದರಲ್ಲಿ ಅರ್ಧ ಹಿಂದಕ್ಕೆ ಬಂದರೆ ಬಂದದ್ದೇ ಲಾಭ ಎನ್ನಬೇಕಾಗುತ್ತದೆ ಅದೂ ಬಾರದಿದ್ದರೆ ಕೊಟ್ಟವನ ಕೈಯಿಂದ ಅದು ಅಪಹರಿಸಿದಂತೆಯೆ. ಕಾರಣವಿಲ್ಲದೆ ಅವನೊಡನೆ ಹಗೆತನ ಬೆಳೆಸಿದಂತಾಗುತ್ತದೆ ತಿರುಗಿಕೊಟ್ಟರೂ, ಕೊಡುವನವನು ಬೈಗುಳ ಶಾಪಗಳೊಡನೆ ವಂದನೆಗೆ ಬದಲು ನಿಂದನೆಯೊಡನೆ.
7 : ಆದಕಾರಣ ಅನೇಕರು ಸಾಲಕೊಡಲು ನಿರಾಕರಿಸಿಹರು ಇನ್ನೊಬ್ಬನ ಕೆಟ್ಟ ವ್ಯವಹಾರವನ್ನು ಕಂಡಿಹರು ವ್ಯರ್ಥವಂಚನೆಗೆ ಗುರಿಯಾದೇವು ಎಂದು ಅಂಜಿಹರು.
8 : ದಾನಧರ್ಮ ಆದರೂ ಬಡವನ ವಿಷಯದಲಿ ಸೈರಣೆಯುಳ್ಳವನಾಗಿರು ನಿನ್ನ ದಾನಕ್ಕಾಗಿ ಅವನು ಕಾದುಕೊಂಡಿರುವಂತೆ ಮಾಡದಿರು.
9 : ದೈವಾಜ್ಞೆಯ ಅನುಸಾರ ಬಡವನಿಗೆ ಸಹಾಯ ನಿರಾಕರಿಸಬೇಡ ಅವನ ಅವಶ್ಯಕತೆಯನ್ನು ಕಂಡೂ ಅವನನ್ನು ಬರೀಗೈಯಲಿ ಕಳುಹಿಸಬೇಡ.
10 : ಹಣವನ್ನು ನಿನ್ನ ಸಹೋದರನಿಗಾಗಿ, ಸ್ನೇಹಿತನಿಗಾಗಿ ಖರ್ಚುಮಾಡು ಅದು ಕಲ್ಲು ಮುಚ್ಚಿದ ಗುಳಿಯಲ್ಲೇ ಕಿಲುಬು ಹತ್ತಿ ನಾಶವಾಗದಿರಲಿ.
11 : ನಿನ್ನ ಐಶ್ವರ್ಯವನ್ನು ಉಪಯೋಗಿಸು, ಮಹೋನ್ನತನ ಆಜ್ಞಾನುಸಾರ ಆಗ ಅದು ನಿನಗೆ ಚಿನ್ನಕಿಂತಲೂ ಹೆಚ್ಚು ಲಾಭಕರ.
12 : ದಾನಧರ್ಮವನ್ನು ನಿನ್ನ ಉಗ್ರಾಣದಲ್ಲಿ ಶೇಖರಿಸಿಡು ಅದು ಎಲ್ಲ ತೊಂದರೆ ತಾಪತ್ರಯಗಳಿಂದ ನಿನ್ನನು ಪಾರುಮಾಡುವುದು.
13 : ಅದು ಕಾದಾಡುವುದು ವೈರಿಗಳ ವಿರುದ್ಧ ನಿನ್ನ ಪರವಾಗಿ ಬಿಲ್ಲುಗುರಾಣಿಗಳಿಗಿಂತ ಹೆಚ್ಚು ಸಮರ್ಪಕವಾಗಿ.
14 : ಹೊಣೆಗಾರಿಕೆ ಸತ್ಪುರುಷನು ತನ್ನ ನೆರೆಯವನಿಗಾಗಿ ಹೊಣೆ ನಿಲ್ಲುವನು ಮಾನಗೇಡಿಯು ಅವನನ್ನು ಕೈಬಿಡುವನು.
15 : ಮರೆಯದಿರು ನಿನ್ನ ಹೊಣೆಗಾರನ ಉಪಕಾರವನ್ನು ನಿನಗಾಗಿ ಕೊಟ್ಟಿರುವನು ತನ್ನ ಪ್ರಾಣವನ್ನು.
16 : ದುಷ್ಟನು ಹಾಳುಮಾಡುವನು ತನ್ನ ಹೊಣೆಗಾರನ ಆಸ್ತಿಯನ್ನು.
17 : ಕೃತಘ್ನನು ಕಷ್ಟದಲ್ಲಿ ಕೈಬಿಡುವನು ತನ್ನನು ಬಿಡುಗಡೆ ಮಾಡಿದವನನ್ನು.
18 : ಹೊಣೆಗಾರಿಕೆ ಧನಾಢ್ಯರನೇಕರನ್ನು ಬರಿದು ಮಾಡಿಬಿಟ್ಟಿದೆ ಸಮುದ್ರದ ತೆರೆಯಂತೆ ಅವರನ ಅಲ್ಲಾಡಿಸಿ ಬಿಟ್ಟಿದೆ ಬಲ್ಲಿದರೆಂಬುವರನ್ನು ಮನೆಬಿಡಿಸಿದೆ ಪರರ ಮಧ್ಯದಲ್ಲಿ ಅವರನು ಅಲೆದಾಡಿಸಿದೆ.
19 : ಲಾಭಕ್ಕಾಗಿ ಹೊಣೆಗಾರಿಕೆ ಹೊತ್ತು ನಿಲ್ಲಲು ಆತುರಪಡುವವನು ವ್ಯಾಜ್ಯಗಳಲ್ಲಿ ಸಿಕ್ಕಿಬೀಳುವನು ಆ ಪಾಪಿಷ್ಠನು.
20 : ನಿನ್ನ ಶಕ್ತಿಗನುಸಾರ ನೆರವಾಗು ನಿನ್ನ ನೆರೆಯವನಿಗೆ ಆದರೆ ಎಚ್ಚರದಿಂದಿರು ಅವನ ಗತಿಗೆ ನೀನೂ ಇಳಿಯದಂತೆ.
21 : ಅತಿಥಿ ಸತ್ಕಾರ ಜೀವನಕ್ಕೆ ಅಗತ್ಯವಾದವು ಅನ್ನ, ನೀರು, ಬಟ್ಟೆ, ಮೇಲಾಗಿ ಮಾನ ಕಾಪಾಡುವುದಕ್ಕೆ ಮನೆ.
22 : ಪರರ ಮನೆಯಲಿ ಮೃಷ್ಟಾನ್ನ ಉಣ್ಣುವುದಕ್ಕಿಂತಲೂ ಹುಲ್ಲಿನ ಗುಡಿಸಲಿನಲ್ಲಿ ಬಡವನಾಗಿ ಜೀವಿಸುವುದು ಮೇಲು
23 : ಹೆಚ್ಚಿರಲಿ, ಕಡಿಮೆಯಿರಲಿ ಇದ್ದುದರಲ್ಲೇ ಸಂತುಷ್ಟಿಯಿರಲಿ.
24 : ಏತಕ್ಕೂ ಬೇಡ ಮನೆಯಿಂದ ಮನೆಗೆ ಅಲೆಯುವ ಜೀವನ ಯಾವುದಕ್ಕೂ ನೀ ಬಾಯ್ದೆರೆಯಲಾರೆ ಪರರ ಮನೆಯಲ್ಲಿ ಇರುವಾಗ.
25 : ನೀನು ಅಲ್ಲಿ ಉಣ್ಣಬಹುದು, ಕುಡಿಯ ಬಹುದು, ಆದರೆ ಮರ್ಯಾದೆ ಇರದು ಅಷ್ಟೇ ಅಲ್ಲದೆ, ನಿನ್ನ ಕಿವಿಗೆ ಬೀಳುವುವು ಇಂಥ ಕಠಿಣವಾದ ಮಾತುಗಳು:
26 : “ಪರಕೀಯನೇ, ಇತ್ತ ಬಾ, ಮಣೆ ಹಾಕು ನಿನ್ನಲ್ಲಿರುವುದನ್ನು ನನಗೆ ಬಡಿಸು.
27 : “ಪರಕೀಯನೇ, ಜಾಗಬಿಡು ನಿನಗಿಂತಲೂ ಉತ್ತಮ ವ್ಯಕ್ತಿಗಾಗಿ “ಬಂದಿರುವನು ನನ್ನ ಸೋದರ ಇಲ್ಲಿರುವುದಕ್ಕಾಗಿ, ಮನೆ ಬೇಕಾಗಿದೆ ಅವನಿಗಾಗಿ.”
28 : ಹೀಗೆ ಬೇಸರವಾಗುವುದು ತಿಳುವಳಿಕೆಯುಳ್ಳ ವ್ಯಕ್ತಿಗೆ ಅಣಕಿಸುವ ಮನೆಯಲ್ಲಿರುವುದಕ್ಕೆ ಸಾಲ ಕೊಟ್ಟವನ ಕೀಳುನುಡಿ ಕೇಳುವುದಕ್ಕೆ.

· © 2017 kannadacatholicbible.org Privacy Policy