1 : ಅನೇಕರು ಪಾಪಕಟ್ಟಿಕೊಳ್ಳುತ್ತಾರೆ
ಲಾಭ ವಿಷಯಕ್ಕೆ
ಗಳಿಕೆಯಲ್ಲೇ ನಿರತರಾಗಿರುವವರು ಕಣ್ಣು
ಮುಚ್ಚಿಕೊಳ್ಳುತ್ತಾರೆ.
2 : ಮೊಳೆಯು ಜಡಿಯಲಾಗುವುದು ಕಲ್ಲು
ಸಂದಿಯಲ್ಲಿ
ಅಂತೆಯೇ ಪಾಪವು ಸೇರಿಕೊಳ್ಳುವುದು
ಮಾರುವ ಕೊಳ್ಳುವ ಮಧ್ಯದಲ್ಲಿ.
3 : ದೇವರಲ್ಲಿ ಸ್ಥಿರ ಭಯಭಕ್ತಿ ಇಲ್ಲದವನೇ,
ಬೇಗನೆ ವಿನಾಶವಾಗುವುದು ನಿನ್ನ ಮನೆ.
4 : ಮಾತುಕತೆ
ಕಾಳನು ಸಾಣಿಸುವಾಗ ಹಿಪ್ಪೆ ಉಳಿಯುವುದು
ಜರಡಿಯಲ್ಲಿ
ಮನುಷ್ಯನ ಹೊಲೆತನ ಕಂಡುಬರುವುದು
ಅವನ ಆಲೋಚನೆಯಲ್ಲಿ.
5 : ಕುಂಬಾರನ ಮಡಕೆಯ ಪರೀಕ್ಷೆ ಬೆಂಕಿಯ
ಆವಿಗೆಯಿಂದ
ಮನುಷ್ಯನ ಪರೀಕ್ಷೆ ಅವನ ಸಂಭಾಷಣೆಯಿಂದ.
6 : ಮರದ ಫಲ ತೋರಿಸುವುದು ಅದನ್ನು
ಬೆಳೆಯಿಸಿದ ಹದವನ್ನು
ಮಾತು ವ್ಯಕ್ತಪಡಿಸುವುದು ಮನಸ್ಸಿನ
ಆಲೋಚನೆಯನ್ನು.
7 : ಒಬ್ಬನನ್ನು ಹೊಗಳಬೇಡ ಅವನ ಸಂಭಾಷಣೆ
ಯನ್ನು ಅಳೆಯುವ ಮೊದಲೇ
ಏಕೆಂದರೆ ಅವನ ಸತ್ವಪರೀಕ್ಷೆ ಅಡಗಿರುವುದು
ಅದರಲ್ಲೇ.
8 : ಪ್ರಾಮಾಣಿಕತೆ
ನ್ಯಾಯನೀತಿಯನ್ನು ಅನುಸರಿಸಿದರೆ ನೀನು
ಅದನ್ನು ಹೊಂದಿಕೊಳ್ಳುವೆ
ಚಂದವಾದ ನಿಲುವಂಗಿಯಂತೆ ಅದನ್ನು
ಧರಿಸಿಕೊಳ್ಳುವೆ.
9 : ಪಕ್ಷಿಗಳು ತಂಗುವುವು ಸ್ವಜಾತಿಯ ಜೊತೆಗೆ
ಅದರಂತೆ ಸತ್ಯವು ಸೇರುವುದು ಸತ್ಯಶೀಲರ
ಬಳಿಗೆ.
10 : ಸಿಂಹವು ಕಾದುಕೊಂಡಿರುವುದು ಬೇಟೆಗಾಗಿ
ಪಾಪವು ಕಾದುಕೊಂಡಿರುವುದು
ಅಧರ್ಮಿಗಳಿಗಾಗಿ.
11 : ಮೂರ್ಖನ ಮಾತುಕತೆ
ಸದಾ ಜ್ಞಾನದಿಂದ ತುಂಬಿದೆ ನೀತಿವಂತರ
ಸಂಭಾಷಣೆ
ಆದರೆ ಮೂರ್ಖನು ಬದಲಾಗುವನು
ಚಂದ್ರನಂತೆ.
12 : ತಿಳಿಗೇಡಿಗಳ ಮಧ್ಯೆ ಇರುವಾಗ ಸಮಯ
ನೋಡಿಕೊಂಡು ತಪ್ಪಿಸಿಕೊ
ವಿಚಾರವಂತರ ಸಹವಾಸ ನಿರಂತರವಾಗಿ
ಮಾಡಿಕೊ.
13 : ಮೂರ್ಖರ ಸಂಭಾಷಣೆ ಅಸಹನೀಯ
ಅವರ ಕುಚೋದ್ಯ ಪಾಪವಿಲಾಸ.
14 : ಸದಾ ಪ್ರಮಾಣಮಾಡುವವರ ಮಾತು
ಮೈನವಿರೇಳಿಸುತ್ತದೆ
ಅವರ ಕಚ್ಚಾಟ ಕಿವಿಯನ್ನು ಮುಚ್ಚಿಕೊಳ್ಳುವಂತೆ
ಮಾಡುತ್ತದೆ.
15 : ಸೊಕ್ಕಿನವರ ಕಚ್ಚಾಟ ರಕ್ತಪಾತಕ್ಕೆ
ಇಳಿಸುತ್ತದೆ
ಅವರ ಬೈದಾಟ ಕೇಳಲೂ
ಸಲ್ಲದಾಗಿ ಇರುತ್ತದೆ.
16 : ಗುಟ್ಟನ್ನು ರಟ್ಟಾಗಿಸುವುದು
ಗುಟ್ಟನು ರಟ್ಟುಮಾಡುವವನು ನಂಬಿಕೆಯನ್ನು
ಕಳೆದುಕೊಳ್ಳುವನು
ಇಂಥವನು ತನ್ನ ಮನಸ್ಸಿಗೆ ಹಿಡಿಸುವಂಥ
ಸ್ನೇಹಿತನನ್ನು ಕಂಡುಕೊಳ್ಳಲಾರನು.
17 : ನಿನ್ನ ಸ್ನೇಹಿತನನ್ನು ಪ್ರೀತಿಸು; ಅವನೊಂದಿಗೆ
ನಂಬಿಕೆಯಿಂದ ನಡೆ
ಅವನ ಗುಟ್ಟನ್ನು ಮಾತ್ರ ರಟ್ಟು ಮಾಡಿದರೆ,
ನೀ ಹೋಗಲಾರೆ ಅವನ ಹಿಂದೆ;
18 : ಏಕೆಂದರೆ ಒಬ್ಬನು ತನ್ನ ವೈರಿಯನ್ನು
ನಾಶಗೊಳಿಸುವಂತೆ
ನೀನು ನಾಶಗೊಳಿಸಿರುವೆ ನಿನ್ನ ನೆರೆಯವನ
ಗೆಳೆತನವನ್ನೇ.
19 : ಒಬ್ಬನು ತನ್ನ ಕೈಯಲ್ಲಿರುವ ಹಕ್ಕಿಯನ್ನು
ಹೋಗಬಿಟ್ಟಂತೆ
ನೀನು ನಿನ್ನ ಹತ್ತಿರದ ಗೆಳೆಯನನ್ನು
ಹೋಗಬಿಟ್ಟಿರುವೆ;
ಪುನಃ ನೀನು ಅವನನ್ನು ಸಂಪಾದಿಸಿಕೊಳ್ಳಲಾರೆ.
20 : ಇನ್ನು ನೀನವನನ್ನು ಹಿಂಬಾಲಿಸದಿರು;
ನಿನ್ನಿಂದ ಬಹುದೂರ ಹೋಗಿರುವನು
ಬಲೆಯಿಂದ ತಪ್ಪಿಸಿಕೊಂಡ
ಜಿಂಕೆಯಂತಿರುವನು.
21 : ಗಾಯವಾಗಿದ್ದರೆ ಕಟ್ಟಬಹುದು;
ಜಗಳವಾಗಿದ್ದರೆ ಒಂದಾಗಬಹುದು.
ಆದರೆ ಗುಟ್ಟು ರಟ್ಟು ಮಾಡುವವನಿಗೆ
ಸರಿಪಡಿಸುವ ನಿರೀಕ್ಷೆಯೇ ಇಲ್ಲದಿರಬಹುದು.
22 : ಕಪಟತನ
ಕಣ್ಣು ಮಿಟುಕಿಸುವವನು ಕೆಟ್ಟದ್ದನ್ನು
ಹವಣಿಸುವನು
ಅವನನ್ನು ಅದರಿಂದ ದೂರಮಾಡಲಾರನು
ಯಾವನು.
23 : ನಿನ್ನ ಎದುರಿನಲ್ಲಿ ಸವಿಮಾತಾಡುವನು;
ನಿನ್ನ ಮಾತನು ಹೊಗಳುವನು
ತರುವಾಯ ಬಾಯಿ ಬಡಿದು ನಿನ್ನ ಮಾತಲ್ಲೇ
ನಿನಗೆ ಬೋನು ಒಡ್ಡುವನು.
24 : ನಾನು ಇಂಥ ಕಪಟಿಯನ್ನು ಹಗೆಮಾಡಿದಷ್ಟು
ಬೇರೆ ಯಾವುದನ್ನೂ ಹಗೆಮಾಡಿಲ್ಲ
ಇಂಥವನನ್ನು ದೇವರೂ ಹಗೆಮಾಡುವುದರಲ್ಲಿ
ಸಂದೇಹವಿಲ್ಲ.
25 : ಮೇಲಕ್ಕೆ ಕಲ್ಲೆಸೆಯುವವನು ತಲೆಯ
ಮೇಲೆಯೇ ಎಸೆದುಕೊಳ್ಳುತ್ತಾನೆ
ಮೋಸದ ಹೊಡೆತ ಗಾಯಗಳನ್ನು
ಉಲ್ಬಣಗೊಳಿಸಿದಂತೆ.
26 : ಗುಂಡಿಯನ್ನು ತೋಡುವವನು
ತಾನೇ ಅದರಲ್ಲಿ ಬೀಳುವನು
ಬಲೆಯನ್ನು ಒಡ್ಡುವವನು
ತಾನೇ ಅದರಲ್ಲಿ ಸಿಕ್ಕಿಬೀಳುವನು.
27 : ಕೆಡಕು ಮಾಡುವವನ ಮೇಲೆ ಹೊರಳುವುದು
ಅವನ ಕೆಡಕೆ
ಅದು ತನ್ನ ಮೇಲೆ ಎಲ್ಲಿಂದ ಬಂತೆಂಬುದು
ತಿಳಿಯದು ಅವನಿಗೆ.
28 : ನಿಂದೆ ಅಪಹಾಸ್ಯಗಳು ಬರುವುವು
ಸೊಕ್ಕಿನವರಿಂದಲೇ ಇಂಥವರಿಗೆ ಪ್ರತೀಕಾರ
ಹೊಂಚಿಕೊಂಡಿರುವುದು ಸಿಂಹದಂತೆ.
29 : ಶಿಷ್ಯನ ಪತನವನ್ನು ಕಂಡು ನಗುವವರು
ತಾವೇ ಬಲೆಯಲ್ಲಿ ಸಿಕ್ಕಿಬೀಳುವರು
ಇವರು ಸಾಯುವ ಮೊದಲೆ ಇವರನ್ನು
ವ್ಯಥೆ ಸುಟ್ಟುಸೂರೆಗೊಳ್ಳುವುದು.
30 : ಸಿಟ್ಟು ಸಿಡುಕು
ಸಿಟ್ಟುಸಿಡುಕುಗಳು ಹೇಯವಾದವುಗಳು
ಅವೆರಡೂ ಇರುವುವು ಪಾಪಾತ್ಮನೊಳು.