1 : ಸ್ತುತ್ಯಾರ್ಹ ವ್ಯಕ್ತಿಗಳು
ಮೂರು ವಿಷಯಗಳಲ್ಲಿ ನಾನು
ಗೌರವಾನ್ವಿತಳಾದೆ,
ದೇವರ ಹಾಗು ಮಾನವರ ಮುಂದೆ
ಕೀರ್ತಿವಂತಳಾದೆ:
ಸೋದರರ ಐಕ್ಯಮತ್ಯ, ನೆರೆಯವರ ಸ್ನೇಹ,
ಗಂಡಹೆಂಡಿರ ಸಾಮರಸ್ಯ ಇವೇ.
2 : ಮೂರು ವಿಧದ ಜನರನ್ನು ನನ್ನ ಮನಸ್ಸು
ಹೇಸುತ್ತದೆ
ಅವರ ಬಾಳು ನನಗೆ ಜಿಗುಪ್ಸೆ
ಉಂಟುಮಾಡುತ್ತದೆ:
ಜಂಬದ ಬಡವ, ಸುಳ್ಳಾಡುವ ಸಿರಿವಂತ,
ಬುದ್ಧಿಗೆಟ್ಟ ಮಂದಿ ವ್ಯಭಿಚಾರ – ಇವರೇ.
3 : ವೃದ್ಧಾಪ್ಯರು
ಯೌವನದಲ್ಲಿ ನೀನು ಏನನ್ನೂ ಕೂಡಿಸಿಟ್ಟು
ಕೊಳ್ಳದಿದ್ದರೆ
ಮುಪ್ಪಿನ ಕಾಲದಲ್ಲಿ ಹೇಗೆ ಪಡೆದುಕೊಳ್ಳುವೆ?
4 : ಆಹಾ ! ನ್ಯಾಯತೀರಿಸುವುದು ನರೆಗೂದಲಿಗೆ
ಎಷ್ಟು ರಮ್ಯ !
ಬುದ್ಧಿಹೇಳುವುದು ಹಿರಿಯರಿಗೆ
ಎಷ್ಟು ಚಂದ !
5 : ವೃದ್ಧರಿಗೆ ಜ್ಞಾನ ಎಷ್ಟು ಸೊಗಸು !
ಮರ್ಯಾದಸ್ಥರಿಗೆ ಆಲೋಚನೆ,
ಬುದ್ಧಿವಾದಗಳು ಎಷ್ಟು ಇಂಪು !
6 : ಅನುಭವವೇ ಮುದುಕರಿಗೆ ಮುಕುಟ
ದೇವರ ಭಯವೇ ಅವರಿಗೆ ಗೌರವ.
7 : ಧನ್ಯರು
ಒಂಬತ್ತು ವ್ಯಕ್ತಿಗಳು ಧನ್ಯರೆಂಬುದು
ನನ್ನ ಮನದಾಲೋಚನೆ
ಅಂಥ ಹತ್ತನೆಯವನು ಯಾರೆಂದು
ನನ್ನ ನಾಲಿಗೆ ನುಡಿಯಲಿದೆ:
ಅವರುಗಳು ಯಾರೆಂದರೆ:
ತನ್ನ ಮಕ್ಕಳ ವಿಷಯದಲಿ ಹೆಮ್ಮೆಪಡುವ
ಮನುಜನು
ವೈರಿಯ ಪತನ ನೋಡುವವರೆಗೆ ಬಾಳುವ
ನರನು.
8 : ಧನ್ಯನು ! ಗುಣವತಿಯಾದ ಸತಿಯೊಡನೆ ಮನೆ
ನಡೆಸುವವನು
ಎತ್ತನ್ನು ಕತ್ತೆಯೊಂದಿಗೆ ನೊಗಕ್ಕೆ ಕಟ್ಟಿ ಹೊಲ
ಉಳದವನು.
ಅಂತೆಯೇ ಧನ್ಯನು ನಾಲಿಗೆಯಿಂದ
ಪಾಪಕಟ್ಟಿಕೊಳ್ಳದವನು
ಮತ್ತು ಅಯೋಗ್ಯನ ಸೇವೆ ಮಾಡದವನು.
9 : ಧನ್ಯನು ! ನಿಜವಾದ ಗೆಳೆಯನನ್ನು
ಕಂಡುಕೊಂಡವನು
ಶ್ರದ್ಧೆಯುಳ್ಳ ಶ್ರೋತೃಗಳನ್ನು ಪಡೆದು
ಇರುವವನು.
10 : ಆಹಾ! ಜ್ಞಾನವನ್ನು ಕಂಡುಕೊಂಡವನು
ಎಷ್ಟೋ ಘನವಂತ
ಆದರೆ ಸರ್ವೇಶ್ವರನಲ್ಲಿ ಭಯಭಕ್ತಿ
ಉಳ್ಳವನಿಗಿಂತ ಮೇಲಾದವನಿಲ್ಲ.
11 : ದೇವರಲ್ಲಿ ಭಯಭಕ್ತಿ ಎಲ್ಲ
ವಿಷಯಗಳಿಗಿಂತಲೂ ಶ್ರೇಷ್ಠ
ಅದರಲ್ಲಿ ಸ್ಥಿರವಾಗಿ ನಿಲ್ಲುವವರನ್ನು ಯಾರಿಗೆ
ಹೋಲಿಸಲು ಸಾಧ್ಯ?
12 : ದೇವಭಯವೇ ದೇವಪ್ರೀತಿಯ ಮೊದಲ
ಹೆಜ್ಜೆ
ಆತನ ಭಕ್ತನಾಗಿರಲು ವಿಶ್ವಾಸವೇ ಮೊದಲ
ಪವಟಿಗೆ.
13 : ಕೆಟ್ಟ ಹಾಗು ಒಳ್ಳೆಯ ಮಹಿಳೆಯರು
ನನಗೆ ಬೇಕಾದ ನೋವು ಕೊಡು;
ಹೃದಯ ವೇದನೆ ಮಾತ್ರ ಬೇಡ
ಬೇಕಾದ ಕೀಟಲೆ ಕೊಡು;
ಹೆಣ್ಣಿನ ಕೀಟಲೆ ಮಾತ್ರ ಬೇಡ.
14 : ಬೇಕಾದ ದುಃಖ ಬರಲಿ;
ನನ್ನ ಹಗೆಗಳಿಂದ ಮಾತ್ರ ಬೇಡ
ಬೇಕಾದ ಪ್ರತೀಕಾರವಿರಲಿ;
ನನ್ನ ವೈರಿಗಳ ಪ್ರತೀಕಾರ ಬೇಡ.
15 : ಸರ್ಪದ ವಿಷಕ್ಕಿಂತ ಮಿಗಿಲಾದ ವಿಷವಿಲ್ಲ
ವೈರಿಯ ರೋಷವನ್ನು ಮೀರಿದ ರೋಷವಿಲ್ಲ.
16 : ದುಷ್ಟಳ ಜೊತೆಯಲ್ಲಿ ಬಾಳುವುದಕ್ಕಿಂತ
ಸರ್ಪಗಳೊಂದಿಗೆ ಬಾಳುವುದು ಸುಲಭ.
17 : ಸ್ತ್ರೀಯ ದುಷ್ಟತನ ಬದಲಾಯಿಸುತ್ತದೆ
ಅವಳ ರೂಪವನ್ನು
ಕರಡಿಯಂತೆ ಕಪ್ಪು ಮಾಡುವುದು
ಅವಳ ಮುಖವನ್ನು.
18 : ಅವಳ ಗಂಡನು ತನ್ನವರೊಂದಿಗೆ ಊಟಕ್ಕೆ
ಕೂತಿರುವಾಗ
ನಿಟ್ಟುಸಿರಿಡುವನು ಅವರ ಮಾತು ಕೇಳುವಾಗ.
19 : ಸ್ತ್ರೀಯ ದುಷ್ಟತನದ ಮುಂದೆ ಉಳಿದ
ದುಷ್ಟತನ ಅಲ್ಪವೇ ಸರಿ;
ಅವಳಿಗೂ ಬರಲಿ ಪಾಪಿಷ್ಠನ ಗತಿ.
20 : ಮರಳಿನ ದಿಣ್ಣೆ ಏರುವುದು ಮುದಿಕಾಲುಗಳಿಗೆ
ಹೇಗೋ ಹಾಗೆ
ವಾಚಾಳಿ ಹೆಂಡತಿಯ ಸಂಘ ಸಾಧು
ಮನುಷ್ಯನಿಗೆ.
21 : ಮರುಳಾಗಬೇಡ ಸ್ತ್ರೀಯ ಬೆಡಗಿಗೆ
ಬಯಕೆಬೇಡ ಆಕೆಯ ಚೆಲುವಿಕೆಗೆ.
22 : ಗಂಡನಿಗೆ ಹೆಂಡತಿ ದುಡಿದು ಹಾಕಿದರೆ
ದಕ್ಕುವುದು ಸಿಡುಕು, ಸೊಕ್ಕು, ಅವಮಾನ ಅವನಿಗೆ.
23 : ದುಷ್ಟ ಹೆಂಡತಿ ಎದೆಗುಂದಿಸುವಳು,
ವ್ಯಥೆ ಕೊಡುವಳು, ಮನನೋಯಿಸುವಳು;
ಜೋಲುಗೈಯಂತೆ, ನಡುಗುವ ಮೊಣ
ಕಾಲಿನಂತೆ, ಗಂಡನಿಗೆ ಸುಖಕೊಡಳು.
24 : ಪಾಪವು ಆರಂಭವಾದುದು ಸ್ತ್ರೀಯಿಂದ
ನಾವೆಲ್ಲ ಸಾಯುವುದು ಆಕೆಯ ದೆಸೆಯಿಂದ.
24 : ಆದ್ದರಿಂದ ಸಮಾಧಾನ ಒಡಂಬಡಿಕೆ
ಮಾಡಲಾಯಿತು ಇವನೊಂದಿಗೆ
ಪವಿತ್ರಸ್ಥಾನದಲ್ಲಿ ಜರನ
ಮುಂದಾಳಾಗಿರುವಂತೆ
ಆತನಿಗೂ ಅವನ ಸಂತತಿಗೂ ಯಾಜಕತ್ವದ
ಶಾಶ್ವತ ಗೌರವ ದೊರಕುವಂತೆ.
25 : ನೀರಿಗೆ ಹಾದಿ ಕೊಡಬೇಡ
ದುಷ್ಟಳಿಗೆ ಅಧಿಕಾರ ಕೊಡಬೇಡ.
26 : ನಿನ್ನಿಷ್ಟದಂತೆ ಅವಳು ನಡೆಯದಿದ್ದರೆ
ಅವಳ ಸಹವಾಸ ಬೇಡ ನಿನಗೆ.