Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಿರಾಖ


1 : ಕುಡುಕನಾದ ಕೆಲಸಗಾರನು ಧನವಂತನಾಗನು ಸಣ್ಣ ವಿಷಯಗಳನ್ನು ತಾತ್ಸಾರ ಮಾಡುವವನು ಕ್ರಮೇಣ ಬಿದ್ದುಹೋಗುವನು.
2 : ಮದ್ಯವೂ ಮಹಿಳೆಯೂ ವಿನಾಶಕಾರಿ ವಿವೇಕಿಗಳಿಗೆ, ನಾಚಿಕೆಗೇಡು ಸೂಳೆಯ ಸಹವಾಸ ಮಾಡುವವನಿಗೆ.
3 : ಅಂಥವನು ನುಸಿಹುಳುಗಳ ಪಾಲಾಗುವನು ಆ ನಾಚಿಕೆಗೀಡಾದವನು ನಾಶವಾಗುವನು.
4 : ಹರಟೆ ಬೇಗನೇ ನಂಬುವುದು ಹಗುರ ಮನಸ್ಸಿನ ಲಕ್ಷಣ ಪಾಪಮಾಡುವವನು ತನಗೆ ತಾನೆ ತಂದುಕೊಳ್ಳುವನು ನಾಶನ.
5 : ಪಾಪದಲ್ಲಿ ಹಿಗ್ಗುವವನು ದಂಡನೆಗೆ ಗುರಿಯಾಗುವನು.
6 : ಹರಟೆಮಾತನ್ನು ಹೇಸುವವನಿಗೆ ಕಡಿಮೆಯಾಗುವುದು ತರಕಾರು ತಂಟೆ.
7 : ನಿನಗೆ ಕೇಳಿಸಿದ್ದನು ಹೇಳಬೇಡ ಇನ್ನೊಬ್ಬನ ಮುಂದೆ ಅದರಿಂದ ನಿನಗೆಂದಿಗೂ ಆಗದು ಕೊರತೆ.
8 : ಅದು ಸ್ನೇಹಿತನ ವಿಷಯವಾಗಿರಲಿ, ವೈರಿಯ ವಿಷಯವಾಗಿರಲಿ ತಿಳಿಸಬೇಡ ತಿಳಿಸದಿರುವುದು ಪಾಪವಾದರೆ ಹೊರತು ಬಯಲು ಮಾಡಬೇಡ.
9 : ನೀನಾಡುವುದನ್ನು ಕೇಳಿ ಗುರುತಿಟ್ಟು ಕೊಂಡವರು ಸಮಯ ಒದಗಿದಾಗ ನಿನ್ನನು ದ್ವೇಷಿಸುವರು.
10 : ಗಾಳಿಸುದ್ದಿಯನು ಕೇಳಿರುವಿಯೋ ಅದು ಸಾಯಲಿ ನಿನ್ನೊಂದಿಗೆ ಹೆದರಬೇಡ; ಅದು ಸಿಡಿಯಾಗದು ನಿನ್ನ ಒಡಲಿಗೆ.
11 : ಮೂರ್ಖನು ಪ್ರಸವವೇದನೆಯ ಸ್ತ್ರೀಯಂತೆ ವೇದನೆಪಡುತ್ತಾನೆ ಆ ಒಂದು ಸುದ್ದಿಗೆ.
12 : ಮೂರ್ಖನ ಒಡಲಿಗೆ ಬಿದ್ದಾ ಮಾತು ತೊಡೆಗೆ ತಾಕಿಕೊಂಡ ಬಾಣದ ಮೊನಚು.
13 : ಕೇಳಿದ್ದೆಲ್ಲವನ್ನು ನಂಬದಿರು ನಿನ್ನ ಸ್ನೇಹಿತನನ್ನು ವಿಚಾರಿಸು; ಅವನು ಅಲ್ಲದ್ದೇನೂ ಮಾಡಿರಲಿಕ್ಕಿಲ್ಲ ಒಂದು ವೇಳೆ ಮಾಡಿದ್ದರೆ, ಬುದ್ಧಿಹೇಳು; ಪುನಃ ಅವನು ಹಾಗೆ ಮಾಡುವುದಿಲ್ಲ.
14 : ನಿನ್ನ ನೆರೆಯವನನ್ನು ವಿಚಾರಿಸು; ಅವನು ಅಲ್ಲದ್ದೇನೂ ಹೇಳಿರಲಿಕ್ಕಿಲ್ಲ ಒಂದು ವೇಳೆ ಹೇಳಿದ್ದರೆ, ಬುದ್ಧಿಹೇಳು; ಪುನಃ ಅವನು ಹಾಗೆ ಹೇಳುವುದಿಲ್ಲ.
14 : ನಿನ್ನ ನೆರೆಯವನನ್ನು ವಿಚಾರಿಸು; ಅವನು ಅಲ್ಲದ್ದೇನೂ ಹೇಳಿರಲಿಕ್ಕಿಲ್ಲ ಒಂದು ವೇಳೆ ಹೇಳಿದ್ದರೆ, ಬುದ್ಧಿಹೇಳು; ಪುನಃ ಅವನು ಹಾಗೆ ಹೇಳುವುದಿಲ್ಲ.
15 : ನಿನ್ನ ಸ್ನೇಹಿತನನ್ನು ವಿಚಾರಿಸು; ನೀನು ಕೇಳಿದ್ದು ಚಾಡಿ ಮಾತಾಗಿರಬಹುದು ಒಂದು ವೇಳೆ ಚಾಡಿ ಹೇಳಿದ್ದರೆ, ಬುದ್ಧಿ ಹೇಳು; ನೀ ಕೇಳಿದ್ದೆಲ್ಲವನು ನಂಬಬಾರದು.
16 : ತಪ್ಪು ಮಾಡುವುದು ಸಹಜ; ಆದರೆ ಉದ್ದೇಶಪೂರ್ವಕವಾಗಿ ಅಲ್ಲ ತನ್ನ ನಾಲಗೆಯಿಂದ ತಪ್ಪು ಮಾಡದವನು ಯಾರೂ ಇಲ್ಲ.
17 : ನೆರೆಯವನಿಗೆ ನೀಡು ಎಚ್ಚರಿಕೆ, ಬೆದರಿಕೆ ಹಾಕುವ ಪ್ರಸಂಗ ಬರುವ ಮುನ್ನ ಕೋಪಿಸಿಕೊಳ್ಳದೆ, ಪರಾತ್ಪರನ ನಿಯಮಕ್ಕೆ ಬಿಡು ಸಮಸ್ಯೆಯನ್ನು.
18 : ಸುಜ್ಞಾನದ ಗುರುತು ಸರ್ವೇಶ್ವರನಿಗೆ ಭಯಪಡುವುದೇ ಕರುಣೆಗೆ ನಾಂದಿ ಸುಜ್ಞಾನಿಗೆ ದೊರಕುವುದು ಪ್ರೀತಿ.
19 : ಸರ್ವೇಶ್ವರನ ಆಜ್ಞೆಗಳನ್ನು ಕಲಿತವರು ಪಡೆವರು ಜೀವದಾಯಕ ಶಿಕ್ಷಣವನ್ನು ಆತನ ಇಷ್ಟಾರ್ಥ ನೆರವೇರಿಸುವವರು, ಪಡೆವರು ಅಮರಜೀವ ವೃಕ್ಷದ ಫಲವನ್ನು.
20 : ಎಲ್ಲಾ ಜ್ಞಾನವು ಅಡಗಿರುತ್ತದೆ ಸರ್ವೇಶ್ವರನ ಭಯಭಕ್ತಿಯಲ್ಲಿ ಎಲ್ಲಾ ಜ್ಞಾನವು ಲಭ್ಯವಾಗುತ್ತದೆ ಧರ್ಮಶಾಸ್ತ್ರದ ಅನುಸರಣೆಯಲ್ಲಿ.
21 : ‘ನೀವು ಹೇಳಿದ್ದನ್ನು ನಾನು ಮಾಡುವುದಿಲ್ಲ’ ಎನ್ನುತ್ತಾನೆ ಆಳು ದಣಿಗೆ ಅನಂತರ ಆ ಆಳು ಮಾಡಿದರೂ ಕಾರಣನಾಗುತ್ತಾನೆ ದಣಿಯ ಕೋಪಕ್ಕೆ.
22 : ಕೆಟ್ಟದ್ದರ ತಿಳುವಳಿಕೆ ನಿಜವಾದ ಜ್ಞಾನವಲ್ಲ ಪಾಪಾತ್ಮರ ಯೋಚನೆಯಲ್ಲಿ ವಿವೇಕ ಇರುವುದಿಲ್ಲ.
23 : ಕೇಡು ಮಾಡುವುದರಲ್ಲಿರುವ ಜಾಣತನ ಹೇಯವಾದುದೇ ಜ್ಞಾನಹೀನನಾಗಿರುವುದೂ ಮೂರ್ಖತನವೇ.
24 : ಬುದ್ಧಿವಂತನಾಗಿದ್ದು ಧರ್ಮಶಾಸ್ತ್ರವನ್ನು ಮೀರುವುದಕ್ಕಿಂತಲೂ ಅಲ್ಪ ತಿಳುವಳಿಕೆಯಿಂದಿದ್ದು ದೇವರಿಗೆ ಭಯಪಡುವುದೇ ಲೇಸು.
25 : ಸೂಕ್ಷ್ಮವಾದ ಕುಯುಕ್ತಿ ಒಂದಿದೆ; ಅದು ಅನ್ಯಾಯವಾದುದೇ ತಮಗೆ ಬೇಕಾದ ತೀರ್ಪನು ಗಿಟ್ಟಿಸಿಕೊಳ್ಳಲು ನಿರ್ದಯೆಯಿಂದ ವರ್ತಿಸುವವರಿದ್ದಾರೆ.
26 : ದುಷ್ಟನು ತಲೆತಗ್ಗಿಸಿಕೊಂಡು ನಿಲ್ಲುವನು ಖಿನ್ನವದನದಿಂದ ಅವನ ಅಂತರಂಗ ತುಂಬಿಕೊಂಡಿರುವುದು ಮೋಸದಿಂದ.
27 : ಅವನು ತಲೆತಗ್ಗಿಸಿಕೊಂಡು ಕಿವುಡನಂತೆ ನಟಿಸುತ್ತಾನೆ ಅವನನ್ನು ಪತ್ತೆಹಚ್ಚದಿದ್ದರೆ, ಅಷ್ಟರಲ್ಲೇ ನಿನಗೆ ಮೋಸಮಾಡುತ್ತಾನೆ.
28 : ಪಾಪಮಾಡನವನು ಶಕ್ತಿ ಸಾಲದಿದ್ದಾಗ ಖಂಡಿತ ಮಾಡುವನದನ್ನು ಅವಕಾಶ ಸಿಕ್ಕಿದಾಗ.
29 : ಮನುಷ್ಯನ ಸ್ವಭಾವ ವ್ಯಕ್ತವಾಗುವುದು ಅವನ ತೋರಿಕೆಯಿಂದ ಅವನು ಜ್ಞಾನಿಯಾಗಿದ್ದರೆ, ಅದು ಗೊತ್ತಾಗುವುದು ಮುಖಚರ್ಯೆಯಿಂದ.
30 : ಮನುಷ್ಯನು ಎಂಥವನೆಂಬುದನು ಅರಿಯುವೆ ಅವನ ಉಡುಗೆ ತೊಡುಗೆ, ನಗು ನಡಿಗೆಗಳಿಂದಲೆ.

· © 2017 kannadacatholicbible.org Privacy Policy