Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಿರಾಖ


1 : ಸರ್ವೇಶ್ವರನ ಹಿರಿಮೆ ಸದಾ ಜೀವಂತವಾಗಿರುವಾತನೇ ನಿರ್ಮಿಸಿದನು ಒಟ್ಟಿನಲ್ಲಿ ಎಲ್ಲವನ್ನು. ಸರ್ವೇಶ್ವರನೊಬ್ಬನೇ ಸತ್ಯಸ್ವರೂಪನೆಂದು ಎಣಿಸಲ್ಪಡುವನು ಆತನನ್ನು ಬಿಟ್ಟರೆ ಅಂಥವನಿಲ್ಲ ಮತ್ತೆ ಯಾವನು.
2 : ಸರ್ವೇಶ್ವರನ ಹಿರಿಮೆ ಸದಾ ಜೀವಂತವಾಗಿರುವಾತನೇ ನಿರ್ಮಿಸಿದನು ಒಟ್ಟಿನಲ್ಲಿ ಎಲ್ಲವನ್ನು. ಸರ್ವೇಶ್ವರನೊಬ್ಬನೇ ಸತ್ಯಸ್ವರೂಪನೆಂದು ಎಣಿಸಲ್ಪಡುವನು ಆತನನ್ನು ಬಿಟ್ಟರೆ ಅಂಥವನಿಲ್ಲ ಮತ್ತೆ ಯಾವನು.
3 : ಆತ ನಡೆಸುತ್ತಾನೆ ಕೈಚಳಕದಿಂದ ಲೋಕವನ್ನು ಎಲ್ಲವು ಪಾಲಿಸುತ್ತವೆ ಆತನ ಚಿತ್ತವನ್ನು, ಆತನೆ ಸರ್ವಕ್ಕೂ ಅರಸ ಪವಿತ್ರಾಪವಿತ್ರವಾದುವುಗಳನ್ನು ವಿಂಗಡಿಸುತ್ತಾನೆ ಶಕ್ತಿಯಿಂದ.
4 : ತನ್ನ ಕೆಲಸಗಳನ್ನು ಪ್ರಕಟಿಸಲು ಯಾರಿಗೂ ಆತ ಸಾಕಷ್ಟು ಶಕ್ತಿಯನ್ನಿತ್ತಿಲ್ಲ ಆತನ ಮಹತ್ಕಾರ್ಯಗಳ ಪರಿಯನ್ನರಿಯಲು ಯಾರಿಗೂ ಸಾಧ್ಯವಿಲ್ಲ.
5 : ಆತನ ಮಹಿಮಾಶಕ್ತಿಯ ನೆಲೆಯನ್ನು ತಿಳಿಯಬಲ್ಲವನಾರು? ಆತನ ಕೃಪಾಕಾರ್ಯಗಳನ್ನು ಬಣ್ಣಿಸ ಬಲ್ಲವನಾರು?
6 : ಯಾರಿಗೂ ಸಾಧ್ಯವಿಲ್ಲ ಅವುಗಳಿಗೆ ಒಂದನ್ನು ಕೂಡಿಸಲಿಕ್ಕೆ ಅಥವಾ ಕಳೆಯಲಿಕ್ಕೆ; ಸರ್ವೇಶ್ವರನಾ ಮಹತ್ಕಾರ್ಯಗಳು ಅಗಮ್ಯ ಪರಿಶೋಧನೆಗೆ.
7 : ಮನುಷ್ಯ ತನಗೆ ಸಾಧ್ಯವಿದ್ದಷ್ಟನ್ನು ಹೇಳಿ ಮುಗಿಸುವಾಗಲೂ ಆರಂಭದಲ್ಲೇ ಇರುತ್ತಾನೆ ಮುಕ್ತಾಯ ಮಾಡುವಾಗಲೂ ತೋಚದೆಯಿರುತ್ತಾನೆ ಏನು ಹೇಳಬೇಕೆಂದು.
8 : ಮಾನವನ ಶೂನ್ಯತೆ ಮನುಷ್ಯನು ಎಷ್ಟು ಮಾತ್ರದವ? ಅವನಿಂದ ಏನು ಪ್ರಯೋಜನ? ಅವನಿಗೆ ಯಾವುದು ಹಿತ, ಯಾವುದು ಅಹಿತ?
9 : ಮನುಷ್ಯನ ಆಯುಷ್ಕಾಲ ಹೆಚ್ಚೆಂದರೆ ನೂರು ವರ್ಷ.
10 : ಆ ವರ್ಷಗಳು ಕೆಲವೇ ನಿತ್ಯಕಾಲದ ಮುಂದೆ ಸಮುದ್ರದ ನೀರಹನಿಯಂತೆ, ಉಸುಬಿನ ಕಣದಂತೆ.
11 : ಈ ಕಾರಣ, ದೇವರು ದಿರ್ಘಶಾಂತರು ನರರ ಬಗ್ಗೆ ತಮ್ಮ ಕೃಪೆಯನ್ನು ಸುರಿಸಿದರು ಅವರ ಮೇಲೆ.
12 : ಮನುಷ್ಯನ ಅಂತ್ಯವು ಕೆಟ್ಟದ್ದೇ ಎಂಬುದನ್ನು ಮನಗಂಡರು ಆದುದರಿಂದ ತಮ್ಮ ಕ್ಷಮಾದಾನವನ್ನು ಹೆಚ್ಚಿಸಿದರು.
13 : ಮನುಷ್ಯನ ದಯಾರಸ ನೆರೆಯವರಿಗೆ ಮಾತ್ರ ಹರಿಯುವುದು ದೇವರ ದಯೆಯೋ ಸಕಲ ಮನುಷ್ಯರ ಮೇಲೂ ಇರುವುದು. ಕುರುಬನು ಕುರಿಹಿಂಡನು ಸಲಹುವಂತೆ ಆತ ಮಾಡುತ್ತಾನೆ ಗದರಿಸಿ, ಎಚ್ಚರಿಸಿ, ಬುದ್ಧಿಹೇಳಿ, ಸನ್ಮಾರ್ಗಕ್ಕೆ ತಿರುಗಿಸುತ್ತಾನೆ.
14 : ಆತ ದಯೆತೋರಿಸುವನು ತನ್ನ ಎಚ್ಚರಿಕೆಯ ಮಾತನ್ನು ಗಮನಿಸುವವರಿಗೆ ಆಸಕ್ತಿಯಿಂದ ಆತನ ವಿಧಿನಿಯಮಗಳನ್ನು ಅರಸುವವರಿಗೆ.
15 : ದಾನ-ವಿಧಾನ ಮಗನೇ, ನಿನ್ನ ಸತ್ಕಾರ್ಯಗಳಿಗೆ ಕಳಂಕ ತರಬೇಡ ದಾನಕೊಡುವಾಗ ಬೈದು ಕೊಡಬೇಡ.
16 : ಸೆಕೆಯನ್ನು ಆರಿಸುತ್ತದೆ ಮಂಜು ಕೊಟ್ಟ ದಾನಕ್ಕಿಂತ ಆಡಿದ ಮಾತೇ ಮೇಲು.
17 : ದಾನಕ್ಕಿಂತ ಒಳ್ಳೆಯ ಮಾತು ಲೇಸು ದಯಾಳುವಿನಲ್ಲಿರುತ್ತವೆ ಇವೆರಡೂ.
18 : ಮೂಢನು ಕೊಡುವನು ನಿಷ್ಕರುಣೆಯಿಂದ ಹಂಗಿಸುತ್ತಾ ಅರೆಮನಸ್ಸಿನವನು ದಾನನೀಡುತ್ತಾನೆ ಕಣ್ಣಿನ ಕಳೆಯನ್ನು ಕುಂದಿಸುತ್ತಾ.
19 : ಚಿಂತನೆ ಮುಂದಾಲೋಚನೆ ಮಾತಾಡುವ ಮೊದಲು ಕಲಿತುಕೊ ಕಾಯಿಲೆ ಬರದಂತೆ ಆರೋಗ್ಯ ಕಾಪಾಡಿಕೊ.
20 : ನಿನ್ನನ್ನೆ ಪರೀಕ್ಷಿಸಿಕೊ ನ್ಯಾಯತೀರ್ಪು ಬರುವ ಮುಂಚೆಯೇ ದೇವರು ಬರುವ ದಿನದಂದು ದೊರಕುವುದು ನಿನಗೆ ದಯೆ.
21 : ಕಾಯಿಲೆ ಬರುವುದಕ್ಕೆ ಮೊದಲು ನಿನ್ನನ್ನೇ ತಗ್ಗಿಸಿಕೊ ಪಾಪಕಟ್ಟಿಕೊಂಡ ಮೇಲಾದರು ದೇವರ ಕಡೆ ತಿರುಗಿಕೊ.
22 : ಅಡ್ಡಿಬಾರದಿರಲಿ ತಕ್ಕ ಸಮಯದಲಿ ಹರಕೆ ಸಲ್ಲಿಸಲು ಮರಣದವರೆಗೆ ಕಾದಿರಬಾರದು ನಿನ್ನ ಋಣ ತೀರಿಸಲು.
23 : ನಿನ್ನನ್ನೇ ಸಿದ್ಧಪಡಿಸಿಕೊ ಹರಕೆ ಮಾಡುವ ಮುಂಚೆ ನೀನಾಗಬೇಡ ಸರ್ವೇಶ್ವರನನ್ನು ಪರೀಕ್ಷಿಸುವವನಂತೆ.
24 : ಅಂತ್ಯಕಾಲದಲ್ಲಿ ಬರುವ ದೈವಕೋಪವನ್ನು ಕುರಿತು ಯೋಚಿಸು ಮುಯ್ಯಿ ತೀರಿಸುವ ದಿನದಲ್ಲಿ ಆತ ವಿಮುಖನಾಗುವುದನ್ನು ನೆನಸು.
25 : ಹೊಟ್ಟೆ ತುಂಬಾ ಇರುವಾಗ ಹಸಿವೆಯ ದಿನಗಳನ್ನು ನೆನಸಿಕೊ ಶ್ರೀಮಂತಿಕೆ ಬಂದಾಗ ಬಡತನದ ಬವಣೆಯನ್ನು ಸ್ಮರಿಸಿಕೊ.
26 : ಬೆಳಗಿನಿಂದ ಬೈಗಿನವರೆಗೆ ಸಮಯ ಸಾಗುತ್ತಾ ಇರುತ್ತದೆ ಅಂತೆಯೆ ಸರ್ವೇಶ್ವರನ ಸಮ್ಮುಖದಲ್ಲಿ ಎಲ್ಲವೂ ಶೀಘ್ರದಲ್ಲಿ ಗತಿಸಿಹೋಗುತ್ತದೆ.
27 : ಬುದ್ಧಿವಂತನು ಎಲ್ಲದರಲ್ಲಿಯೂ ಭಯದಿಂದ ಬದುಕುತ್ತಾನೆ. ಶೋಧನೆ ಬಂದಾಗ ಪಾಪದಲ್ಲಿ ಬೀಳದಂತೆ ಎಚ್ಚರಿಕೆವಹಿಸುತ್ತಾನೆ.
28 : ಪ್ರತಿಯೊಬ್ಬ ವಿವೇಕಿಯು ಸುಜ್ಞಾನವನ್ನು ಬಲ್ಲನು ಅದನ್ನು ಕಂಡುಕೊಂಡವನನ್ನು ಹೊಗಳುವನು.
29 : ಜ್ಞಾನೋಕ್ತಿಗಳಲ್ಲಿ ನುರಿತವರು ಬುದ್ಧಿವಂತರಾದರು ಸಮಯೋಚಿತ ಸಾಮತಿಗಳನ್ನು ಮಳೆಗರೆದರು.
30 : ಆತ್ಮ ಸಂಯಮ ಹಿಂಬಾಲಿಸಬೇಡ ದೇಹದ ಆಶೆಗಳನ್ನು ತಡೆಹಿಡಿ ನಿನ್ನ ಬಯಕೆಗಳನ್ನು.
31 : ಮನ ಬಯಸಿದ್ದನ್ನೆಲ್ಲಾ ಈಡೇರಿಸುತ್ತಾ ಬಂದರೆ ನಗೆಪಾಟಲಿಗೆ ಈಡಾಗುವೆ ಹಗೆಮಾಡುವ ವೈರಿಗಳ ಮುಂದೆ.
32 : ಭೋಗಜೀವನದಲ್ಲಿ ಮೈಮರೆಯಬೇಡ ಅಂಥವರ ಒಡನಾಟ ನಿನಗೆ ಬೇಡ.
33 : ಕೈಯಲ್ಲಿ ಕಾಸಿಲ್ಲದಿರುವಾಗ ಸಾಲಮಾಡಬೇಡ ಹೀಗೆ ತಿಂದು ಕುಡಿದು, ತಿರುಕನಾಗಬೇಡ.

· © 2017 kannadacatholicbible.org Privacy Policy