1 : ಅಮರವಾದ ನಿಮ್ಮ ಚೈತನ್ಯವು
ಇರುವುದು ಪ್ರತಿಯೊಂದರಲ್ಲೂ.
2 : ಎಂದೇ ಸನ್ಮಾರ್ಗದಿಂದ ತಪ್ಪಿಹೋದವರನು
ಸ್ವಲ್ಪಸ್ವಲ್ಪವಾಗಿ ತಿದ್ದುತ್ತೀರಿ
ಮಾಡಿದ ಅಪರಾಧಗಳನು ನೆನಪಿಗೆ
ತಂದುಕೊಟ್ಟು ಎಚ್ಚರಿಸುತ್ತೀರಿ.
ಸರ್ವೇಶ್ವರಾ, ದುಷ್ಟತನ ಬಿಟ್ಟು
ನಿಮ್ಮನ್ನವರು ನಂಬಲೆಂದೇ ಹೀಗೆ
ಮಾಡುತ್ತೀರಿ.
ಆದಿ ಕಾನಾನ್ಯರ ಅಕ್ರಮ
3 : ಹೇ ಸರ್ವೇಶ್ವರಾ, ನೀವು ಬೇಸರಗೊಂಡಿರಿ
ನಿಮ್ಮ ಪೂಜ್ಯನಾಡಿನ ಪೂರ್ವನಿವಾಸಿಗಳ
ವಿಷಯದಲಿ.
4 : ಮಾಯಮಾಟ; ಅಶುದ್ಧ ಆಚಾರ
ನಿರ್ದಯವಾದ ಶಿಶುಹತ್ಯೆ, ನರಬಲಿ,
ರಕ್ತಮಾಂಸ ಭೋಜನ
ಇಂಥ ಹೇಯ ಕೃತ್ಯಗಳನ್ನೆಲ್ಲ ಅವರು
ನಡೆಸಿದರಲ್ಲಾ !
5 : ಮಾಯಮಾಟ; ಅಶುದ್ಧ ಆಚಾರ
ನಿರ್ದಯವಾದ ಶಿಶುಹತ್ಯೆ, ನರಬಲಿ,
ರಕ್ತಮಾಂಸ ಭೋಜನ
ಇಂಥ ಹೇಯ ಕೃತ್ಯಗಳನ್ನೆಲ್ಲ ಅವರು
ನಡೆಸಿದರಲ್ಲಾ !
6 : ಅಸಹ್ಯವಾದ ಅನ್ಯಮತಕೆ ದೀಕ್ಷೆ
ಹೊಂದಿದವರ ಹಾಗೆ
ಬಲಿಕೊಡುತ್ತಿದ್ದರವರು ತಮ್ಮ ಸ್ವಂತ
ಮಕ್ಕಳನೆ.
7 : ಇವರು ನಿರ್ಮೂಲರಾದರು ನಮ್ಮ
ಪೂರ್ವಜರ ಕೈಯಿಂದ
ನಿಮ್ಮೊಲವಿನಾ ನಾಡು, ದೇವಜನರ
ನಿವಾಸವಾಗಬೇಕೆಂದೆ ನಿಮ್ಮ ಸಂಕಲ್ಪ.
8 : ಆದರೂ, ಮನುಷ್ಯರಾದ ಅವರು ಕ್ರಮೇಣ
ನಾಶವಾಗಲೆಂದು
ನಿಮ್ಮ ಸೈನ್ಯದ ಮುಂದಾಗಿ ಕಳುಹಿಸಿದಿರಿ
ಕಣಜದ ಹುಳುಗಳನು.
9 : ದುರ್ಜನರನು ಸಜ್ಜನರ ಕೈಯಿಂದ
ಯುದ್ಧದಲಿ ನೀವು ಸದೆಬಡಿಯಬಹುದಿತ್ತು
ಉಗ್ರಮೃಗಗಳಿಂದ, ಒಂದೇ ಬಿರುನುಡಿ
ಯಿಂದ ಸಾಯಿಸಬಹುದಿತ್ತು.
10 : ಆದರೆ ಕ್ರಮೇಣ ದಂಡನೆಯಿಂದ
ಪಶ್ವಾತ್ತಾಪಪಡಲು ಸದವಕಾಶ
ನೀಡಿದಿರಿ.
ಹುಟ್ಟಿನಿಂದ ಕೆಟ್ಟವರು, ದುಷ್ಟಗುಣ
ಉಳ್ಳವರು, ಬಗ್ಗದ ಹಠಮಾರಿಗಳೆಂದು
ಅರಿತಿದ್ದೀರಿ.
11 : ಅವರ ಸಂತಾನ ಆದಿಯಿಂದ ಶಾಪಗ್ರಸ್ತ
ಅವರಿಗೆ ಕ್ಷಮೆ ನೀಡುತ್ತಾ ಬಂದುದು
ಭಯದಿಂದೇನೂ ಅಲ್ಲ.
ದೇವರ ಸಹನೆಗೆ ಕಾರಣ
12 : ಏನು ಮಾಡಿರುವೆ? ಎಂದು ನಿಮ್ಮನ್ನು
ಯಾವನು ಕೇಳಿಯಾನು?
ನಿಮ್ಮ ತೀರ್ಪನು ಕುರಿತು ಯಾರು ತಾನೆ
ಪ್ರತಿಭಟಿಸಿಯಾನು?
ನೀನೆ ಸೃಷ್ಟಿಸಿದ ಜನಾಂಗವನ್ನೇಕೆ ನಾಶ
ಮಾಡಿದೆ ಎಂದು ದೂರುವವನಾರು?
ದುಷ್ಟರ ಪರವಾಗಿ ನಿಂತು ಮುಯ್ಯಿ
ತೀರಿಸಲು ನಿಮ್ಮ ಮುಂದೆ
ನಿಲ್ಲಬಲ್ಲವನಾರು?
13 : ಸರ್ವಜನರ ಸುಖ ಕೋರುವ ದೇವರು
ನೀವಲ್ಲದೆ ಇನ್ನಾರೂ ಇಲ್ಲ.
ನೀವು ವಿಧಿಸಿದ ದಂಡನೆ ಅನ್ಯಾಯವಲ್ಲ
ಎಂದು ನೀವು ತೋರಿಸಬೇಕಾಗಿಲ್ಲ.
14 : ನೀವು ಶಿಕ್ಷಿಸಿದವರ ಪಕ್ಷವಹಿಸಿ
ನಿಲ್ಲತಕ್ಕವನಿಲ್ಲ
ಅರಸನಾಗಲಿ, ದೊರೆಯಾಗಲಿ, ಯಾರೂ ಇಲ್ಲ.
15 : ನ್ಯಾಯಸ್ವರೂಪಿಯಾದ ನೀವು ಸರ್ವ
ವನೂ ನ್ಯಾಯವಾಗಿಯೆ ಆಳುತ್ತೀರಿ.
ನಿರಪರಾಧಿಯನು ಅಪರಾಧಿಯೆಂದು
ದಂಡಿಸುವುದು ಅಯೋಗ್ಯ
ಎಂದರಿತಿದ್ದೀರಿ.
16 : ನಿಮ್ಮ ಶಕ್ತಿಯೇ ನ್ಯಾಯನೀತಿಗೆ ಆಧಾರ
ನಿಮ್ಮ ಸಾರ್ವಭೌಮತ್ವವೇ
ಎಲ್ಲ ಸಹನೆಗೆ ಮೂಲ ಕಾರಣ.
17 : ನೀವು ಸರ್ವಶಕ್ತರೆಂದು ಜನರು
ನಂಬದಿರುವಾಗ
ನೀವು ಶಕ್ತಿಯನ್ನು ತೋರಿಸುತ್ತೀರಿ;
ಅದನು ಬಲ್ಲವರೊಂದಿಗೆ ವರ್ತಿಸುವಾಗ
ಅವರ ಉದ್ಧಟತನವನ್ನು ಖಂಡಿಸುತ್ತೀರಿ.
18 : ಶಕ್ತಿಯಲ್ಲಿ ನೀವೇ ಸಾರ್ವಭೌಮ
ಎಂದೇ, ತೀರ್ಪಿಡುತ್ತೀರಿ ಸಾಮ್ಯತೆಯಿಂದ
ನಮ್ಮನ್ನಾಳುತ್ತೀರಿ ಬಹು ತಾಳ್ಮೆಯಿಂದ
ನಿಮ್ಮ ಶಕ್ತಿ ನಿಮ್ಮಲ್ಲಿದೆ ಇಚ್ಛಿಸಿದಾಗಲೆಲ್ಲ
19 : ಇಂಥ ಕಾರ್ಯಗಳಿಂದ ಸಜ್ಜನನು ಜನಪ್ರಿಯ
ನಾಗಿರಲು ಕಲಿಸಿಕೊಟ್ಟಿರುವಿರಿ
ಪಾಪಗಳಿಗೆ ಪಶ್ಚಾತ್ತಾಪದ ಅವಕಾಶವಿತ್ತು
ನಿಮ್ಮ ಮಕ್ಕಳನು
ಭರವಸೆಯುಳ್ಳವರಾಗಿಸಿದಿರಿ.
20 : ನಿಮ್ಮ ಮಕ್ಕಳ ಶತ್ರುಗಳನ್ನು ಶಿಕ್ಷಿಸಿದಿರಿ
ಸಾವಧಾನದಿಂದ, ತಾಳ್ಮೆಯಿಂದ.
ಮರಣದಂಡನೆಗೆ ಅರ್ಹರಾಗಿದ್ದರೂ
ಪಶ್ವಾತ್ತಾಪಕೆ ಅವರಿಗಿತ್ತಿರಿ
ಕಾಲಾವಕಾಶ.
21 : ಇಂತಿರಲು ನಿಮ್ಮ ಮಕ್ಕಳ ನ್ಯಾಯವನು
ನಿರ್ಣಯಿಸಿದಿರಿ ಎಷ್ಟೋ
ಜಾಗ್ರತೆಯಿಂದ
ಅವರ ಪಿತೃಗಳೊಂದಿಗೆ ಮಾಡಿದಿರಿ
ದೃಢ ಒಪ್ಪಂದ,
ಇತ್ತಿರಲ್ಲವೆ ಸೌಭಾಗ್ಯದ ವಾಗ್ದಾನ?
22 : ಹೌದು, ಶಿಕ್ಷಿಸುತ್ತೀರಿ ನೀವು ನಮ್ಮನು,
ಆದರೆ ಸಾವಿರ ಪಾಲು ಹೆಚ್ಚಾಗಿ
ದಂಡಿಸುತ್ತೀರಿ ವೈರಿಗಳನು.
ನಾವು ತೀರ್ಪಿಡುವಾಗ ಮನದಲ್ಲಿಡಬೇಕು
ನಿಮ್ಮ ಒಳ್ಳೆಯತನವನು
ನಾವೇ ತೀರ್ಪಿಗೊಳಗಾದಾಗ
ನಿರೀಕ್ಷಿಸಬೇಕು ನಿಮ್ಮ ಕರುಣೆಯನು.
ಕ್ರಮೇಣ ಈಜಿಪ್ಟರಿಗಾದ ದಂಡನೆ
23 : ಮಂದಮತಿಯಿಂದ ದುರುಳರು ನಡೆಸಿದರು
ದುಂದು ಜೀವನವನೆ
ಬಾಧಿಸಿದಿರಿ ನೀವು ಅವರನು ಅವರ
ಹೇಯಕೃತ್ಯಗಳಿಂದಲೆ.
24 : ತಪ್ಪುದಾರಿಯಲ್ಲಿ ಅವರು ನಡೆದರು
ಬಹುದೂರ
ದೇವರನ್ನಾಗಿಸಿಕೊಂಡರು, ವೈರಿಗಳಿಗೂ
ಹೇಯವಾದ ಪ್ರಾಣಿಗಳನು,
ಮೋಸಹೋದರು ಬುದ್ಧಿಯಿಲ್ಲದ
ಚಿಕ್ಕಮಕ್ಕಳ ಪರಿಯೊಳು.
25 : ಆದುದರಿಂದ ಆ ತಿಳಿಗೇಡಿ ಮಕ್ಕಳಿಗೆ
ಕೊಟ್ಟಿರಿ ನೀವು ಹುಸಿಪೆಟ್ಟನು.
26 : ಮಕ್ಕಳಿಗೆ ಕೊಡುವ ಆ ತಿದ್ದುಪಾಟಿನಿಂದ
ಬುದ್ಧಿಕಲಿಯದವರು
ದೇವರಿಂದ ಬರುವ ಕಠಿಣ ದಂಡನೆಗೆ
ಗುರಿಯಾಗುವರು.
27 : ದೇವರುಗಳೆಂದುಕೊಂಡ ಪ್ರಾಣಿಗಳ
ಮೂಲಕ ಕಷ್ಟಕ್ಕೀಡಾಗಿ
ಕುಪಿತಗೊಂಡರು
ಈವರೆಗೆ ದೇವರೆಂದು ನಿರಾಕರಿಸಿದ
ತಮ್ಮನೆ ಸತ್ಯದೇವನೆಂದು
ಗುರುತಿಸಿದರು.
ಈ ಕಾರಣವೇ ಎರಗಿತು ಅವರ ಮೇಲೆ
ಕಟ್ಟಕಡೆಯ ಘೋರ ದಂಡನೆ.