1 : ಕಾಪಾಡಿದಳು ಸುಜ್ಞಾನ
ಒಂಟಿಯಾಗಿ ಸೃಷ್ಟಿಯಾದ
ಜಗದಾದಿ ಪಿತನನು
ಅವನ ತಪ್ಪಿನಿಂದ ಅವನನು
ಉದ್ಧಾರಮಾಡಿದಳು.
2 : ಎಲ್ಲವುಗಳ ಮೇಲೆ ದೊರೆತನ ನಡೆಸಲು
ಅವನಿಗೆ ಶಕ್ತಿ ನೀಡಿದಳು.
ಕಾಯಿನ
3 : ಅಧರ್ಮಿಯೊಬ್ಬನು ಸಿಟ್ಟಿನಿಂದ ಆಕೆಯನು
ಬಿಟ್ಟುಹೋದಾಗ
ತನ್ನ ತಮ್ಮನನ್ನೆ ಕೊಂದಾ ಪಾಪದಲ್ಲಿ
ತಾನೇ ಹಾಳಾಗಿ ಹೋದ.
ನೋವ
4 : ಅವನ ಪ್ರಯುಕ್ತ ಜಲಪ್ರಳಯದೊಳು
ಜಗವು ಮುಳುಗಿಹೋಗುತ್ತಿರಲು
ಉಳಿಸಿದಳು ಜ್ಞಾನಪ್ರಭೆಯಾದವಳು
ಮರತುಂಡಿನಾ ನಾವಿಗೆಯನು ಸೂಚಿಸಿ
ನೀತಿವಂತನಾದವನಿಗೆ ಗತಿಯನು ತೋರಿಸಿ.
ಅಬ್ರಹಾಮ
5 : ದುಷ್ಟತನದಲಿ ರಾಷ್ಟ್ರಗಳು ಒಂದಾಗಿ
ಗಲಿಬಿಲಿಗೊಂಡಿದ್ದಾಗ
ಸಜ್ಜನನೊಬ್ಬನಾಯ್ದು,
ದೋಷರಹಿತನನ್ನಾಗಿಸಿತು ಆ ಸುಜ್ಞಾನ
ಈ ಕಾರಣ ಪುತ್ರವಾತ್ಸಲ್ಯ ಮೀರಿ
ದೇವಾಜ್ಞೆಗೆ ತಲೆಬಾಗಿದನಾತ.
ಲೋಟ
6 : ದುರುಳ ಜನರು ಅಳಿದುಹೋಗುತ್ತಿದ್ದಾಗ
ಸಜ್ಜನನೊಬ್ಬನನ್ನು ಉಳಿಸಿತು ಸುಜ್ಞಾನ.
ಈ ಕಾರಣ, ಪಂಚಪಟ್ಟಣಗಳು
ಆಕಾಶದಗ್ನಿಯಿಂದ ಉರಿವಾಗ
ಅವನೊಬ್ಬನೇ ಅಲ್ಲಿಂದ ತಪ್ಪಿಸಿಕೊಂಡು
ಓಡಿಹೋದ.
6 : ದುರುಳ ಜನರು ಅಳಿದುಹೋಗುತ್ತಿದ್ದಾಗ
ಸಜ್ಜನನೊಬ್ಬನನ್ನು ಉಳಿಸಿತು ಸುಜ್ಞಾನ.
ಈ ಕಾರಣ, ಪಂಚಪಟ್ಟಣಗಳು
ಆಕಾಶದಗ್ನಿಯಿಂದ ಉರಿವಾಗ
ಅವನೊಬ್ಬನೇ ಅಲ್ಲಿಂದ ತಪ್ಪಿಸಿಕೊಂಡು
ಓಡಿಹೋದ.
7 : ಆ ಊರುಗಳ ದುಷ್ಟತನವನು ತೋರಿಸಲು
ಹೊಗೆಯಾಡುವ ಹಾಳುಭೂಮಿ
ಸಾಕ್ಷಿಯಾಗಿ ನಿಂತಿದೆ ಇಂದಿಗೂ.
ಅಲ್ಲಿಯ ಸಸಿಗಳು ಫಲಬಿಟ್ಟರೂ
ಅವುಗಳ ಕಾಯಿ ಮಾಗವು;
ನಂಬದೆ ಹೋದ ಜೀವಾತ್ಮಕೆ ಸ್ಮಾರಕವಾಗಿ
ನಿಂತಿದೆ ಉಪ್ಪಿನ ಕಂಬವು.
8 : ಸುಜ್ಞಾನದ ಹಾದಿಯನ್ನು ಅವರು
ಉಲ್ಲಂಘಿಸಿದರು.
ಈ ಕಾರಣ ಅವರಿಂದಾಗಲಿಲ್ಲ
ಒಳಿತನು ಗುರುತಿಸಲು;
ಮಾತ್ರವಲ್ಲ, ತಮ್ಮ ಮೂರ್ಖತನದ
ಗುರುತನು ಬಿಟ್ಟುಹೋದರು;
ಆ ಪತನದ ಘಟನೆಯನ್ನು ಮರೆಮಾಚಲು
ಅವರಿಂದಾಗದು.
9 : ಸುಜ್ಞಾನವೆಂಬಾಕೆ ಸಂರಕ್ಷಿಸಿದಳು
ಕಷ್ಟದುಃಖಗಳಿಂದ ತನ್ನ ಶರಣರನು.
ಯಕೋಬ
10 : ಅಣ್ಣನ ಕೋಪಕ್ಕೆ ಅಂಜಿ ಓಡುತ್ತಿದ್ದಾ
ಸಜ್ಜನನನ್ನು
ಸುಜ್ಞಾನಿ ನೆಟ್ಟನೆಯ ದಾರಿಯಲ್ಲಿ
ನಡೆಸಿದಳು.
ದೇವರ ರಾಜ್ಯವನು ಅವನಿಗೆ
ತೋರಿಸಿಕೊಟ್ಟಳು.
ಪರಮಾರ್ಥ ಜ್ಞಾನನೀಡಿ,
ಪರಿಶ್ರಮೆಯನ್ನು ಸಫಲಗೊಳಿಸಿದಳು
ಅವನ ದುಡಿಮೆಯ ಫಲ ಹೆಚ್ಚಾಗುವಂತೆ
ಮಾಡಿದಳು.
11 : ಸ್ವಾರ್ಥಿಗಳ ಹಿಡಿತದಲ್ಲಿ ಅವನು
ಸಿಕ್ಕಿಬಿದ್ದಿರಲು
ಸುಜ್ಞಾನಿ ಅವನಿಗೆ ಬೆಂಬಲವಿತ್ತು
ಸಿರಿವಂತನನ್ನಾಗಿಸಿದಳು.
12 : ವೈರಿಗಳಿಂದ ತಪ್ಪಿಸಿ, ಬಲೆಯೊಡ್ಡಿದವರಿಂದ
ರಕ್ಷಿಸಿದಳು;
ದೇವಭಕ್ತಿಯೇ ಎಲ್ಲಕು
ಪ್ರಬಲವಾದುದೆಂದು ಕಲಿಸಲು
ಉಗ್ರ ಹೋರಾಟದಲಿ ಅವನನು
ಜಯಶಾಲಿಯನ್ನಾಗಿಸಿದಳು.
ಜೋಸೆಫ್
13 : ಸತ್ಪುರುಷನೊಬ್ಬನು ವಿಕ್ರಯಿಸಲ್ಪಟ್ಟಾಗ
ಸುಜ್ಞಾನಿ ಅವನನು ಕೈಬಿಡದೆ
ಕಾಪಾಡಿದಳು ಪಾಪದಿಂದ.
14 : ಬಂಧನದಲ್ಲಿದ್ದಾಗಲು ಬಿಡದೆ
ಅವನೊಂದಿಗೆ ಸೆರೆಗೆ ಹೋದಳು.
ರಾಜದಂಡ ಸಿಕ್ಕಿ, ಅಧಿಕಾರಿಗಳ ಮೇಲೆ
ಅಧಿಕಾರ ನಡೆಸುವ ತನಕ
ನೆರವಾದಳು.
ಅವನ ಮೇಲೆ ತಪ್ಪು ಹೊರಿಸಿದವರೇ
ಸುಳ್ಳುಗಾರರೆಂದು ತೋರ್ಪಡಿಸಿದಳು
ಆತನಿಗೆ ಚಿರವಾದ ಕೀರ್ತಿಯನ್ನು
ತಂದುಕೊಟ್ಟಳು.
ವಿಮೋಚನೆ
15 : ಪವಿತ್ರ ಹಾಗು ನಿಷ್ಕಳಂಕ ಪ್ರಜೆಯನು
ಪೀಡಿಸುತ್ತಿದ್ದ ಜನಾಂಗದಿಂದ
ವಿಮೋಚಿಸಿದಳು.
16 : ಸರ್ವೇಶ್ವರನ ದಾಸನೊಬ್ಬನ
ಅಂತರಾಳವನ್ನು ಹೊಕ್ಕು
ಅದ್ಭುತ ಮಹತ್ಕಾರ್ಯಗಳಿಂದ ಭಯಾನಕ
ರಾಜನನ್ನೆದುರಿಸಿದಳು.
17 : ದೇವಜನರು ಪಟ್ಟ ಪ್ರಯಾಸಕೆ
ತಕ್ಕ ಪ್ರತಿಫಲವನ್ನಿತ್ತಳು
ಅಗಾಧ ಮಾರ್ಗದಲ್ಲಿ ಅವರನು
ಸಾಗಿಸಿಕೊಂಡು ಹೋದಳು
ಅವರಿಗೆ ಬಿಸಿಲಲ್ಲಿ ನೆರಳಂತೆ,
ಇರುಳಲ್ಲಿ ತಾರಾದೀಪದಂತೆ ಇದ್ದಳು.
18 : ಅವರನ್ನು ಕೆಂಪುಸಮುದ್ರ ದಾಟಿಸಿ ತಂದಳು
ಜಲರಾಶಿಯಿಂದ ಸಾಗಿಸಿಕೊಂಡು
ಹೋದಳು.
19 : ಅವರ ವೈರಿಗಳನು ನೀರಿನಲ್ಲಿ
ಮುಳುಗಿಸಿದಳು
ಉಕ್ಕುವ ಸಾಗರದಡಿಯಿಂದ ಅವರನು
ಕಕ್ಕಿಬಿಟ್ಟಳು.
20 : ಸರ್ವೇಶ್ವರಾ, ಹೀಗೆ ಸಜ್ಜನರು
ಸದೆಬಡಿದರು ದುರ್ಜನರನು
ಸಂಕೀರ್ತಿಸಿದರು ನಿಮ್ಮ ಪರಮ ಪವಿತ್ರ
ನಾಮವನು
ಒಕ್ಕೊರಲಿನಿಂದ ಹೊಗಳಿದರು, ಅವರಪರ
ಹೋರಾಡಿದ ನಿಮ್ಮ ಭುಜಬಲವನು.
21 : ಮೂಕರ ಬಾಯನು ತೆರೆದವಳು
ಆ ಸುಜ್ಞಾನಿಯೇ
ಹಸುಳೆಯರ ನಾಲಿಗೆಯನು
ಚುರುಕುಗೊಳಿಸಿದವಳು ಆಕೆಯೇ.
ಮೋಶೆ