Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಎಸ್ತೇರಳು


1 : ಭಾರತ (ಇಂಡಿಯಾ) ದೇಶದಿಂದ ಮೊದಲುಗೊಂಡು
2 : ಇಥಿಯೋಪಿಯ ದೇಶದವರೆಗೂ ಇದ್ದ 127 ಸಂಸ್ಥಾನಗಳನ್ನು ಅರಸ ಅಹಷ್ಟೇರೋಷನು ಆಳುತ್ತಿದ್ದನು.
3 : ಅರಸನು ತನ್ನ ರಾಜಧಾನಿಯಾಗಿದ್ದ ಶೂಷನ್ ನಗರದಲ್ಲಿ ರಾಜ ಸಿಂಹಾಸನವನ್ನೇರಿ ಆಡಳಿತ ನಡೆಸುತ್ತಿದ್ದ ಮೂರನೆಯ ವರ್ಷದಲ್ಲಿ ತನ್ನ ಎಲ್ಲಾ ಉನ್ನತ ಅಧಿಕಾರಿಗಳಿಗೂ ಪರಿವಾರದವರಿಗೂ ಒಂದು ಭಾರಿ ಔತಣವನ್ನೇರ್ಪಡಿಸಿದನು. ಪರ್ಷಿಯ ಮತ್ತು ಮೇದ್ಯ ದೇಶಗಗಳ ದಂಡನಾಯಕರೂ, ಪದಾಧಿಕಾರಿಗಳೂ ಸಂಸ್ಥಾನಾಧಿಕಾರಿಗಳೂ ಅರಸನ ಮುಂದೆ ಉಪಸ್ಥಿತರಿದ್ದರು.
4 : ಇಗೋ, ಎಲ್ಲೆಲ್ಲೂ ಗದ್ದಲ ಹಾಗು ಗೊಂದಲ, ಗುಡುಗು ಮತ್ತು ಭೂಕಂಪ, ಭೂಮಿಯಲ್ಲೆಲ್ಲಾ ಕೋಲಾಹಲ ಕಂಡುಬಂದಿತು. ಆಗ ಎರಡು ಭೀಕರ ಘಟಸರ್ಪಗಳು ಕಾಣಿಸಿಕೊಂಡವು:
4 : ಅರಸನು ತನ್ನ ಘನರಾಜ್ಯದ ಸಿರಿಸಂಪತ್ತನ್ನೂ ವೈಭವವನ್ನೂ ರಾಜ್ಯದ ಆಡಂಬರವನ್ನೂ ಅವರೆಲ್ಲರ ಮುಂದೆ ಬಹಳ ದಿನಗಳವರೆಗೆ, ಅಂದರೆ, ನೂರೆಂಬತ್ತು ದಿನಗಳವರೆಗೆ ಪ್ರದರ್ಶಿಸಿದನು.
5 : ಅವು ಒಂದಕ್ಕೊಂದು ವಿರುದ್ಧ ಕಾಳಗಕ್ಕೆ ಸಜ್ಜಾಗಿ ನಿಂತಿದ್ದವು.
6 : ಘೋರವಾಗಿ ಗರ್ಜಿಸಿದವು. ಸಜ್ಜನರಿಂದ ಕೂಡಿದ ದೇವರ ರಾಷ್ಟ್ರದ ವಿರುದ್ಧ ಎಲ್ಲಾ ರಾಜ್ಯಗಳು ಯುದ್ಧಮಾಡಲು ಸಿದ್ಧವಾದವು.
7 : ಜಗತ್ತಿನಾದ್ಯಂತ ಕಾರ್ಗತ್ತಲೆ ಕವಿದಿತ್ತು. ಕಷ್ಟ ಸಂಕಟದ, ನಾಶಪರಿವಿನಾಶದ ಕರಾಳ ದಿನ ಆಗಿತ್ತು ಅದು.
8 : ದೇವರ ಸಜ್ಜನರೆಲ್ಲರಿಗೆ ಉಪದ್ರವವುಂಟಾಗಿ ತಮಗೇನಾಗುವುದೋ ಎಂಬ ಭೀತಿ ಅವರನ್ನು ಆವರಿಸಿತು. ಎಲ್ಲರು ಮರಣಕ್ಕೆ ಸಿದ್ಧರಾದರು;
9 : ದೇವರ ಸಹಾಯಕ್ಕಾಗಿ ಮೊರೆ ಇಟ್ಟರು. ಇದರ ಪರಿಣಾಮವಾಗಿ ಸಣ್ಣ ಬುಗ್ಗೆಯೊಂದು ಚಿಮ್ಮಿ ದೊಡ್ಡ ನದಿಯಾಗಿ ರಭಸದಿಂದ ಹರಿಯತೊಡಗಿತು.
10 : ಸೂರ್ಯೋದಯ ಆಗಿ ಬೆಳಗಾಯಿತು. ದೀನದಲಿತರು ಶಕ್ತಿಯುತರಾಗಿ ಸೊಕ್ಕಿನ ಶತ್ರುಗಳನ್ನು ಕಬಳಿಸಿದರು.
11 : ಮೊರ್ದೆಕೈ ಎಚ್ಚೆತ್ತನು. ಕನಸಿನಲ್ಲಿ ಕಂಡ ದೈವಯೋಜನೆಯನ್ನು ಚಿಂತಿಸಿದನು. ದಿನವಿಡೀ ಅದರ ಬಗ್ಗೆ ಆಲೋಚಿಸಿ ಅದರ ಅರ್ಥವನ್ನು ಗ್ರಹಿಸಿಕೊಳ್ಳಲು ಪ್ರಯತ್ನಿಸಿದನು.
12 : ಮೊರ್ದೆಕೈಯಿಂದ ಅರಸನ ಪ್ರಾಣರಕ್ಷಣೆ ಮೊರ್ದೆಕೈ ಅರಮನೆಯ ಅಂಗಳದಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದನು. ಅಲ್ಲಿ ರಾಜಕಂಚುಕಿಗಳಾದ ಗಬಥ ಮತ್ತು ತರ್ರಾ ಎಂಬ ಇಬ್ಬರು ಕಾವಲಿದ್ದರು.
13 : ಅವರು ಒಳಸಂಚು ಮಾಡುತ್ತಿರುವುದು ಕೇಳಿಬಂದಿತು. ಮೊರ್ದೆಕೈ ಅವರ ಮಾತುಗಳನ್ನು ಎಚ್ಚರಿಕೆಯಿಂದ ಕೇಳಿಸಿಕೊಂಡನು. ಅವರಿಬ್ಬರು ಅರಸನನ್ನು ಕೊಲ್ಲಲು ಸಂಚು ಮಾಡುತ್ತಿರುವುದು ತಿಳಿದುಬಂದಿತು. ಕೂಡಲೆ ಮೊರ್ದೆಕೈ, ಅಹಷ್ಟೇರೋಷ ರಾಜನ ಬಳಿಗೆ ತೆರಳಿ ಕಂಚುಕಿಯರ ಒಳಸಂಚಿನ ಬಗ್ಗೆ ವರದಿ ಮಾಡಿದನು.
14 : ಅರಸ ಕಂಚುಕಿಯರನ್ನು ಕರೆಸಿ ಪ್ರಶ್ನಿಸಿದನು. ಅವರಿಬ್ಬರು ತಪ್ಪನ್ನು ಒಪ್ಪಿಕೊಂಡದ್ದರಿಂದ ಅವರಿಗೆ ಮರಣದಂಡನೆ ವಿಧಿಸಲಾಯಿತು.
15 : ಈ ಘಟನೆಯನ್ನು ಅರಸನು ತನ್ನ ಅಧಿಕೃತ ಪುಸ್ತಕದಲ್ಲಿ ದಾಖಲೆಯಾಗಬೇಕೆಂದು ಆಜ್ಞಾಪಿಸಿದನು. ಮೊರ್ದೆಕೈಯನು ಕೂಡ ಇದನ್ನು ದಾಖಲೆ ಮಾಡಿಕೊಂಡನು.
16 : ಬಳಿಕ ಅರಸನು ಮೊರ್ದೆಕೈಯನ್ನು ತನ್ನ ಆಸ್ಥಾನದಲ್ಲಿ ಉನ್ನತ ಪದವಿಗೆ ನೇಮಿಸಿದನು. ಮಾತ್ರವಲ್ಲ, ಅವನು ಮಾಡಿದ ಉಪಕಾರಕ್ಕಾಗಿ ತಕ್ಕ ಬಹುಮಾನವನ್ನು ಕೊಟ್ಟನು.
17 : ಆಗ ಅಗಾಗನ ವಂಶದವನೂ ಹೆಮ್ಮೆದಾತನ ಮಗನೂ ಆದ ಹಾಮಾನನು ಆಸ್ಥಾನದಲ್ಲಿ ಗಣ್ಯಸ್ಥಾನವನ್ನು ಅಲಂಕರಿಸಿದ್ದನು. ಮೊರ್ದೆಕೈಯನು ರಾಜಕಂಚುಕಿಗಳ ಮರಣ ದಂಡನೆಗೆ ಕಾರಣನಾಗಿದ್ದರಿಂದ ಅವನಿಗೂ ಅವನ ಸ್ವಜನ ಯೆಹೂದ್ಯರಿಗೂ ಹಾನಿಯನ್ನು ಉಂಟುಮಾಡಲು ಅವನು ಹವಣಿಸಿದನು

· © 2017 kannadacatholicbible.org Privacy Policy