1 : ಅರಸ ಅಹಷ್ಟೇರೋಷನ ಹಾಗೂ ಮೊರ್ದೆಕೈನ ಹಿರಿಮೆ
ಅರಸ ಅಹಷ್ಟೇರೋಷನು ತನ್ನ ರಾಜ್ಯಕ್ಕೆ ಸೇರಿದ ಎಲ್ಲಾ ದೇಶಗಳ ಮೇಲೂ ಸಮುದ್ರ ದ್ವೀಪಗಳ ಮೇಲೂ ತೆರಿಗೆಯನ್ನು ವಿಧಿಸಿದನು.
2 : ಅವನ ಶಕ್ತಿಸಾಮಥ್ರ್ಯದ ಸಾಹಸ ಕಾರ್ಯಗಳೆಲ್ಲವೂ ಹಾಗೂ ಅರಸನು ಮೊರ್ದೆಕೈಯನ್ನು ಅತ್ಯುನ್ನತ ಗೌರವಸ್ಥಾನಕ್ಕೆ ಏರಿಸಿದ್ದನ್ನು ಕುರಿತ ಪೂರ್ಣ ವಿವರವು ಮೇದ್ಯ ಮತ್ತು ಪರ್ಷಿಯಾ ದೇಶಗಳ ಅರಸರ ಕಾಲವೃತ್ತಾಂತ ಗ್ರಂಥದಲ್ಲಿ ಬರೆಯಲಾಗಿದೆ.
3 : ಯೆಹೂದ್ಯನಾದ ಮೊರ್ದೆಕೈ ಆದರೋ ಅರಸ ಅಹಷ್ಟೇರೋಷನಿಗೆ ದ್ವಿತೀಯ ಸ್ಥಾನವನ್ನು ಹೊಂದಿದವನೂ ಯೆಹೂದ್ಯರಲ್ಲಿ ಸನ್ಮಾನಿತನೂ ತನ್ನ ಬಂಧುಬಳಗದವರಲ್ಲಿ ಪ್ರೀತಿ ಪಾತ್ರನೂ ಸ್ವಜನರ ಹಿತಚಿಂತಕನೂ ಸ್ವಕುಲದವರೆಲ್ಲರಿಗೆ ಶಾಂತಿದೂತನೂ ಆಗಿದ್ದನು.