1 : ಅರಸನ ಆಜ್ಞೆಯನ್ನು, ನಿರ್ಣಯವನ್ನು ನೆರವೇರಿಸತಕ್ಕ ದಿನವು ಅಂದರೆ, ಹನ್ನೆರಡನೆಯ ತಿಂಗಳಾದ ಫಾಲ್ಗುಣ ಮಾಸದ ಹದಿಮೂರನೆಯ ದಿನವು ಬಂದಿತು. ಆ ದಿನದಲ್ಲಿ ಯೆಹೂದ್ಯರನ್ನು ತಾವೇ ಸ್ವಾಧೀನ ಪಡಿಸಿಕೊಳ್ಳಬಹುದೆಂದು ಅವರ ವೈರಿಗಳು ನಿರೀಕ್ಷಿಸಿದ್ದರು. ಆದರೆ ಅದಕ್ಕೆ ಬದಲಾಗಿ ಯೆಹೂದ್ಯರೇ ತಮ್ಮ ವೈರಿಗಳನ್ನು ಸ್ವಾಧೀನ ಮಾಡಿಕೊಂಡರು.
1 : ಯೆಹೂದ್ಯರಿಂದ ಶತ್ರುಗಳಿಗೆ ಸೋಲು
9 ಅರಸನ ಆಜ್ಞೆಯನ್ನು, ನಿರ್ಣಯವನ್ನು ನೆರವೇರಿಸತಕ್ಕ ದಿನವು ಅಂದರೆ, ಹನ್ನೆರಡನೆಯ ತಿಂಗಳಾದ ಫಾಲ್ಗುಣ ಮಾಸದ ಹದಿಮೂರನೆಯ ದಿನವು ಬಂದಿತು. ಆ ದಿನದಲ್ಲಿ ಯೆಹೂದ್ಯರನ್ನು ತಾವೇ ಸ್ವಾಧೀನ ಪಡಿಸಿಕೊಳ್ಳಬಹುದೆಂದು ಅವರ ವೈರಿಗಳು ನಿರೀಕ್ಷಿಸಿದ್ದರು. ಆದರೆ ಅದಕ್ಕೆ ಬದಲಾಗಿ ಯೆಹೂದ್ಯರೇ ತಮ್ಮ ವೈರಿಗಳನ್ನು ಸ್ವಾಧೀನ ಮಾಡಿಕೊಂಡರು.
2 : ಆದುದರಿಂದ ಅರಸ ಅಹಷ್ಟೇರೋಷನ ಸಮಸ್ತ ಸಂಸ್ಥಾನಗಳ ಪ್ರತಿಯೊಂದು ನಗರದಲ್ಲೂ ಯೆಹೂದ್ಯರು ತಮಗೆ ಕೇಡು ಬಗೆದವರಿಗೆ ವಿರುದ್ಧವಾಗಿ ಕೈಯೆತ್ತಲು ಒಟ್ಟಾಗಿ ಸೇರಿದರು. ಎಲ್ಲರಿಗೂ ಅವರ ಭಯವಿದ್ದುದರಿಂದ ಯಾರೂ ಅವರ ಮುಂದೆ ನಿಲ್ಲಲಾಗಲಿಲ್ಲ.
3 : ಇದಲ್ಲದೆ ಅರಮನೆಯಲ್ಲಿ ಮೊರ್ದೆಕೈಯ ಅಧಿಕಾರ ದಿನೇದಿನೇ ಪ್ರಬಲವಾಗುತ್ತಾ ಬಂದುದರಿಂದ ಅವನ ಕೀರ್ತಿ ಎಲ್ಲಾ ಸಂಸ್ಥಾನಗಳಲ್ಲಿಯೂ ಹಬ್ಬಿತು.
4 : ಇದಲ್ಲದೆ ಅರಮನೆಯಲ್ಲಿ ಮೊರ್ದೆಕೈಯ ಅಧಿಕಾರ ದಿನೇದಿನೇ ಪ್ರಬಲವಾಗುತ್ತಾ ಬಂದುದರಿಂದ ಅವನ ಕೀರ್ತಿ ಎಲ್ಲಾ ಸಂಸ್ಥಾನಗಳಲ್ಲಿಯೂ ಹಬ್ಬಿತು.
5 : ಹೀಗಾಗಿ ಯೆಹೂದ್ಯರು ತಮ್ಮ ವೈರಿಗಳನ್ನೆಲ್ಲಾ ಸೋಲಿಸಿ, ಕತ್ತಿಯಿಂದ ಇರಿದು, ಕೊಂದು, ನಿರ್ನಾಮಗೊಳಿಸಿದರು. ತಮ್ಮನ್ನು ಹಗೆಮಾಡುತ್ತಿದ್ದ ಶತ್ರುಗಳಿಗೆ ತಮ್ಮ ಇಷ್ಟಾನುಸಾರ ಮಾಡಿದರು.
6 : ಶೂಷನ್ ನಗರದಲ್ಲೇ ಐನೂರು ಮಂದಿ ಹತರಾದರು.
7 : ಹತರಾದವರಲ್ಲಿ ಯೆಹೂದ್ಯರ ವೈರಿಯಾಗಿದ್ದ ಹೆಮ್ಮೆದಾತನ ಮಗ ಹಾಮಾನನ ಹತ್ತುಮಂದಿ ಮಕ್ಕಳೂ ಇದ್ದರು. ಅವರ ಹೆಸರುಗಳು ಯಾವುವೆಂದರೆ ಷರ್ಷಂದಾತ, ದಲ್ಫೋನ್, ಅಸ್ಪಾತ, ಪೋರಾತ, ಅದಲ್ಯ, ಅರೀದಾತ, ಪರ್ಮಷ್ಟ, ಅರೀಸೈ, ಅರಿದೈ, ವೈಜಾತ. ಇಷ್ಟು ಮಂದಿಯನ್ನು ಕೊಂದರೂ ಯೆಹೂದ್ಯರು ಸುಲಿಗೆಗೆ ಕೈ ಹಾಕಲಿಲ್ಲ.
8 : ಹತರಾದವರಲ್ಲಿ ಯೆಹೂದ್ಯರ ವೈರಿಯಾಗಿದ್ದ ಹೆಮ್ಮೆದಾತನ ಮಗ ಹಾಮಾನನ ಹತ್ತುಮಂದಿ ಮಕ್ಕಳೂ ಇದ್ದರು. ಅವರ ಹೆಸರುಗಳು ಯಾವುವೆಂದರೆ ಷರ್ಷಂದಾತ, ದಲ್ಫೋನ್, ಅಸ್ಪಾತ, ಪೋರಾತ, ಅದಲ್ಯ, ಅರೀದಾತ, ಪರ್ಮಷ್ಟ, ಅರೀಸೈ, ಅರಿದೈ, ವೈಜಾತ. ಇಷ್ಟು ಮಂದಿಯನ್ನು ಕೊಂದರೂ ಯೆಹೂದ್ಯರು ಸುಲಿಗೆಗೆ ಕೈ ಹಾಕಲಿಲ್ಲ.
8 : ಹತರಾದವರಲ್ಲಿ ಯೆಹೂದ್ಯರ ವೈರಿಯಾಗಿದ್ದ ಹೆಮ್ಮೆದಾತನ ಮಗ ಹಾಮಾನನ ಹತ್ತುಮಂದಿ ಮಕ್ಕಳೂ ಇದ್ದರು. ಅವರ ಹೆಸರುಗಳು ಯಾವುವೆಂದರೆ ಷರ್ಷಂದಾತ, ದಲ್ಫೋನ್, ಅಸ್ಪಾತ, ಪೋರಾತ, ಅದಲ್ಯ, ಅರೀದಾತ, ಪರ್ಮಷ್ಟ, ಅರೀಸೈ, ಅರಿದೈ, ವೈಜಾತ. ಇಷ್ಟು ಮಂದಿಯನ್ನು ಕೊಂದರೂ ಯೆಹೂದ್ಯರು ಸುಲಿಗೆಗೆ ಕೈ ಹಾಕಲಿಲ್ಲ.
9 : ಹತರಾದವರಲ್ಲಿ ಯೆಹೂದ್ಯರ ವೈರಿಯಾಗಿದ್ದ ಹೆಮ್ಮೆದಾತನ ಮಗ ಹಾಮಾನನ ಹತ್ತುಮಂದಿ ಮಕ್ಕಳೂ ಇದ್ದರು. ಅವರ ಹೆಸರುಗಳು ಯಾವುವೆಂದರೆ ಷರ್ಷಂದಾತ, ದಲ್ಫೋನ್, ಅಸ್ಪಾತ, ಪೋರಾತ, ಅದಲ್ಯ, ಅರೀದಾತ, ಪರ್ಮಷ್ಟ, ಅರೀಸೈ, ಅರಿದೈ, ವೈಜಾತ. ಇಷ್ಟು ಮಂದಿಯನ್ನು ಕೊಂದರೂ ಯೆಹೂದ್ಯರು ಸುಲಿಗೆಗೆ ಕೈ ಹಾಕಲಿಲ್ಲ.
11 : ಆ ದಿನ ಶೂಷನ್ ನಗರದಲ್ಲಿ ಹತರಾದವರ ಸಂಖ್ಯೆ ಅರಸನಿಗೆ ತಿಳಿದು ಬಂದಾಗ ಅವನು ಎಸ್ತೇರ್ ರಾಣಿಗೆ,
12 : ಯೆಹೂದ್ಯರು ಶೂಷನ್ ನಗರದಲ್ಲೇ ಐನೂರು ಮಂದಿಯನ್ನೂ ಹಾಮಾನನ ಹತ್ತು ಮಕ್ಕಳನ್ನೂ ಸಂಹರಿಸಿಬಿಟ್ಟಿದ್ದಾರೆ. ಉಳಿದ ರಾಜಸಂಸ್ಥಾನಗಳಲ್ಲಿ ಇನ್ನೆಷ್ಟು ಮಂದಿಯನ್ನು ಹತಮಾಡಿರಬಹದೋ! ನಿನ್ನ ವಿಜ್ಞಾಪನೆ ಯಾವುದಿದ್ದರೂ ನೆರವೇರಿಸುವೆನು ಹೇಳು, ನೀನು ಏನು ಕೇಳಿದರೂ ಕೊಡುವೆನು ಕೇಳು,” ಎಂದನು.
13 : ಪ್ರತ್ಯುತ್ತರವಾಗಿ ಎಸ್ತೇರಳು ಅರಸನಿಗೆ, “ಇಂದಿನಂತೆ ನಾಳೆಯೂ ರಾಜಾಜ್ಞೆಯು ಜಾರಿಯಲ್ಲಿರಬೇಕು ಹಾಗೂ ಹಾಮಾನನ ಹತ್ತು ಮಕ್ಕಳ ಶವಗಳನ್ನು ಗಲ್ಲಿಗೇರಿಸುವಂತೆ ಅಪ್ಪಣೆ ಆಗಬೇಕು,” ಎಂದು ಬೇಡಿಕೊಂಡಳು.
14 : ಅರಸನು, ಎಸ್ತೇರಳು ತನ್ನ ಇಚ್ಛೆಯಂತೆ ಮಾಡಬಹುದೆಂದು ಅಪ್ಪಣೆಕೊಟ್ಟನು. ಕೂಡಲೆ ಇದಕ್ಕೆ ಸಂಬಂಧಪಟ್ಟ ರಾಜಾಜ್ಞೆ ಶೂಷನ್ ನಗರದಲ್ಲಿ ಪ್ರಕಟವಾಯಿತು. ಹಾಮಾನನ ಹತ್ತು ಮಂದಿ ಮಕ್ಕಳ ಶವಗಳನ್ನು ಗಲ್ಲಿಗೇರಿಸಲಾಯಿತು.
15 : ಶೂಷನಿನ ಯೆಹೂದ್ಯರು ಫಾಲ್ಗುಣ ಮಾಸದ ಹದಿನಾಲ್ಕನೆಯ ದಿನದಂದೂ ಒಟ್ಟಾಗಿ ಸೇರಿ ಮುನ್ನೂರು ಮಂದಿಯನ್ನು ಕೊಂದು ಹಾಕಿದರು. ಆದರೆ ಸುಲಿಗೆಗೆ ಕೈಹಾಕಲಿಲ್ಲ.
16 : ಹಾಗೆಯೆ ಇತರ ರಾಜಸಂಸ್ಥಾನಗಳಲ್ಲೂ ಯೆಹೂದ್ಯರು ತಮ್ಮ ವಿರೋಧಿಗಳ ಕಾಟವನ್ನು ನಿಲ್ಲಿಸಿ, ತಮ್ಮ ಪ್ರಾಣರಕ್ಷಣೆಗಾಗಿ ಒಟ್ಟಾಗಿ ಸೇರಿ ತಮ್ಮ ವೈರಿಗಳಲ್ಲಿ ಎಪ್ಪತ್ತೈದು ಸಾವಿರ ಮಂದಿಯನ್ನು ಕೊಂದು ಹಾಕಿದರು. ಆದರೆ ಸುಲಿಗೆಗೆ ಕೈಹಾಕಲಿಲ್ಲ.
17 : ಇದು ಫಾಲ್ಗುಣ ಮಾಸದ ಹದಿಮೂರನೆಯ ದಿನ ನಡೆಯಿತು. ಅವರು ಹದಿನಾಲ್ಕನೆಯ ದಿನದಂದು ವಿಶ್ರಮಿಸಿದರು. ಅಂದು ಸಂಭ್ರಮದ ಉತ್ಸವ ದಿನವನ್ನಾಗಿ ಆಚರಿಸಿದರು.
18 : ಶೂಷನಿನ ಯೆಹೂದ್ಯರು ಹದಿಮೂರನೆ ಹಾಗೂ ಹದಿನಾಲ್ಕನೆ ದಿನ ಒಟ್ಟಾಗಿ ಸೇರಿ ಬಂದುದರಿಂದ, ಅವರು ಹದಿನೈದನೆಯ ದಿನದಲ್ಲಿ ವಿಶ್ರಮಿಸಿಕೊಂಡರು. ಅಂದು ಸಂಭ್ರಮದ ಉತ್ಸವ ದಿನವನ್ನಾಗಿ ಆಚರಿಸಿದರು.
19 : ಈ ಕಾರಣದಿಂದಾಗಿ ಬಯಲುಪ್ರದೇಶದ ಗ್ರಾಮ ನಿವಾಸಿ ಯೆಹೂದ್ಯರು ಹದಿನಾಲ್ಕನೆ ದಿನವನ್ನು ಶುಭದಿನ ಎಂತಲೂ ನಗರವಾಸಿ ಯೆಹೂದ್ಯರು ಹದಿನೈದನೆಯ ದಿನವನ್ನು ಶುಭದಿನವೆಂತಲೂ ಆಚರಿಸಿ, ಉತ್ಸವ ಭೋಜನ ಮಾಡಿ ಒಬ್ಬರಿಗೊಬ್ಬರು ತಿಂಡಿತೀರ್ಥಗಳನ್ನು ವಿನಿಮಯಿಸಿ ಕೊಳ್ಳುತ್ತಾರೆ.
20 : ಪೂರಿಮ್ ಹಬ್ಬ
ಮೊರ್ದೆಕೈಯು ಅಹಷ್ಟೇರೋಷನ ಸಂಸ್ಥಾನಗಳಲ್ಲಿ ವಾಸಿಸುತ್ತಿದ್ದ ಎಲ್ಲಾ ಯೆಹೂದ್ಯರಿಗೆ, ಸಮೀಪದಲ್ಲೂ ದೂರದಲ್ಲೂ ಇದ್ದವರೆಲ್ಲರಿಗೂ ಪತ್ರಗಳ ಮುಖಾಂತರ ಈ ಕೆಳಕಂಡ ಸಂಗತಿಗಳನ್ನು ತಿಳಿಯಪಡಿಸಿದನು.
21 : ಪ್ರತಿ ವರ್ಷವೂ ಫಾಲ್ಗುಣಮಾಸದ ಹದಿನಾಲ್ಕನೆ ಮತ್ತು ಹದಿನೈದನೆಯ ದಿನಗಳನ್ನು ಹಬ್ಬದ ದಿನಗಳಾಗಿ ಆಚರಿಸುವುದು ಶಾಶ್ವತ ನಿಯಮ ಎಂದು ಭಾವಿಸಬೇಕು;
22 : ಆ ದಿನಗಳಲ್ಲಿ ಯೆಹೂದ್ಯರಿಗೆ ಶತ್ರುಗಳ ಕಾಟ ತಪ್ಪಿ ವಿಶ್ರಾಂತಿ ದೊರೆಯಿತು. ಆ ತಿಂಗಳಿನಲ್ಲಿ ಸಂತಾಪವು ಪರಿಹಾರವಾಗಿ ಸಂತೋಷ ಪ್ರಾಪ್ತಿಯಾಯಿತು, ದುಃಖವು ಕಳೆದು ಸುಖಕಾಲ ಬಂದಿತು. ಆದ್ದರಿಂದ ಆ ದಿನಗಳಲ್ಲಿ ಉತ್ಸವ ಭೋಜನ ಮಾಡಿ ಪರಸ್ಪರ ತಿಂಡಿ ತೀರ್ಥಗಳನ್ನು ವಿನಿಮಯ ಮಾಡಿಕೊಳ್ಳಬೇಕು ಹಾಗೂ ಬಡಬಗ್ಗರಿಗೆ ದಾನಧರ್ಮ ಮಾಡಬೇಕು.
23 : ಮೊರ್ದೆಕೈಯ ಪತ್ರದಲ್ಲಿ ನಿರೂಪಿತವಾಗಿದ್ದ ಪ್ರಕಾರ ಯೆಹೂದ್ಯರು ಅನುಸರಿಸಿದರು. ಅಂದಿನ ವರ್ಷ ಆಚರಿಸಿದ ಹಬ್ಬವು ತಮ್ಮಲ್ಲಿ ವಾರ್ಷಿಕೋತ್ಸವವಾಗಿ ಊರ್ಜಿತಗೊಳ್ಳಬೇಕೆಂದು ತೀರ್ಮಾನಿಸಿಕೊಂಡರು.
24 : ಯೆಹೂದ್ಯರೆಲ್ಲರ ಕಡುವೈರಿಯಾಗಿದ್ದ ಆಗಾನನ ವಂಶದವನೂ ಹೆಮ್ಮೆದಾತನ ಮಗನೂ ಆದ ಹಾಮಾನನು ಯೆಹೂದ್ಯರನ್ನು ಸಂಹರಿಸಬೇಕೆಂದು ತೀರ್ಮಾನಿಸಿಕೊಂಡು ಅವರನ್ನು ಹಾಳು ಮಾಡಲು, ನಿರ್ನಾಮಗೊಳಿಸಲು ‘ಪೂರನ್ನು’ ಅಂದರೆ ಚೀಟನ್ನು ಹಾಕಿದ್ದನು.
25 : ಈ ವಿಷಯ ಅರಸನ ಕಿವಿಗೆ ಬಿದ್ದಾಗ, ಅವನು- “ಹಾಮಾನನು ಯೆಹೂದ್ಯರ ವಿರುದ್ಧ ಯೋಚಿಸಿದ ಕೇಡು ಅವನ ತಲೆಯ ಮೇಲೆಯೆ ಬರಲಿ. ಅವನನ್ನು ಅವನ ಮಕ್ಕಳನ್ನೂ ಗಲ್ಲಿಗೇರಿಸಿರಿ,” ಎಂದು ಅಪ್ಪಣೆ ಮಾಡಿದ್ದನು.
26 : ಆ ಪೂರ್ ಎಂಬ ಪದದ ಆಧಾರದ ಮೇಲೆ ಆ ದಿನಗಳಿಗೆ ‘ಪೂರಿಮ್’ ಎಂಬ ಹೆಸರಾಯಿತು. ಅರಸನು ಪತ್ರದಲ್ಲಿ ಬರೆದ ಮಾತುಗಳನ್ನು, ಅವುಗಳ ಸಂಬಂಧವಾಗಿ ತಾವೇ ಸ್ವತಃ ಅನುಭವಿಸಿದ್ದನ್ನು, ತಮಗೆ ಸಂಭವಿಸಿದ್ದನ್ನು ಸ್ಮರಿಸಿಕೊಂಡು ಪ್ರತಿವರ್ಷವೂ ಆ ಎರಡು ದಿನಗಳನ್ನು
27 : ಅವುಗಳಿಗೆ ಸಂಬಂಧಪಟ್ಟ ಶಾಸನದ ಪ್ರಕಾರ ನಿಯಮಿತ ಕಾಲದಲ್ಲಿ ಆಚರಿಸಬೇಕೆಂದು ತೀರ್ಮಾನಿಸಿಕೊಂಡರು. ಅದು ತಮ್ಮಲ್ಲಿಯೂ ತಮ್ಮ ಸಂತಾನದವರಲ್ಲಿಯೂ, ತಮ್ಮೊಂದಿಗೆ ಸೇರಿಕೊಳ್ಳುವವರಲ್ಲಿಯೂ ಮೀರಕೂಡದ ಪದ್ಧತಿ ನಿಯಮಗಳಾಗಬೇಕು ಎಂದು,
28 : ಯುಗಯುಗಾಂತರಕ್ಕೂ ಎಲ್ಲಾ ಗೋತ್ರಸಂಸ್ಥಾನ ನಗರದವರು ಈ ದಿನಗಳನ್ನು ಸ್ಮರಿಸಿ ಆಚರಿಸಬೇಕೆಂದು ಹಾಗೂ ಈ ಪೂರಿಮ್ ಹಬ್ಬವು ಯೆಹೂದ್ಯರಲ್ಲಿ ಎಂದಿಗೂ ನಿಂತು ಹೋಗಬಾರದು, ಅದರ ಸ್ಮರಣೆ ಅವರ ಸಂತಾನದವರಲ್ಲಿ ಅಳಿದು ಹೋಗಲೇ ಬಾರದೆಂದು ತೀರ್ಮಾನಿಸಿಕೊಂಡರು.
29 : ಇದಲ್ಲದೆ ಅಬೀಹೈಲನ ಮಗಳಾದ ಎಸ್ತೇರ್ ರಾಣಿಯು ಪೂರಿಮ್ ಹಬ್ಬದ ಆಚರಣೆಗೆ ಸಂಬಂಧಪಟ್ಟ ಆ ಎರಡನೇ ಶಾಸನವನ್ನು ದೃಢಪಡಿಸುವುದಕ್ಕಾಗಿ ಮೊರ್ದೆಕೈಯ ಸಹಾಯವನ್ನು ಪಡೆದು ಅಧಿಕೃತ ಪತ್ರಗಳನ್ನು ಬರೆದಳು.
30 : ಮೊರ್ದೆಕೈ, ಅಹಷ್ಟೇರೋಷನ ರಾಜ್ಯದ ನೂರ ಇಪ್ಪತ್ತೇಳು ಸಂಸ್ಥಾನಗಳಲ್ಲಿ ವಾಸಿಸುತ್ತಿದ್ದ ಯೆಹೂದ್ಯರೆಲ್ಲರಿಗೂ ಆ ಪತ್ರಗಳನ್ನು ಕಳುಹಿಸಿದನು.
31 : ದಯೆ ಹಾಗೂ ಸತ್ಯತೆಯ ಮಾತುಗಳಿಂದ ತುಂಬಿದ್ದ ಆ ಪತ್ರಗಳಲ್ಲಿ ಎಸ್ತೇರಳು “ಯೆಹೂದ್ಯರು ತಾವೂ ತಮ್ಮ ಸಂತತಿಯವರೆಲ್ಲರೂ ಉಪವಾಸ ಪ್ರಲಾಪ ದಿನಗಳನ್ನು ಪ್ರತಿವರ್ಷ ತಪ್ಪದೆ ಆಚರಿಸಬೇಕೆಂದು ತಾವೇ ಗೊತ್ತುಮಾಡಿಕೊಂಡ ಪ್ರಕಾರ ಈ ಪೂರಿಮ್ ದಿನಗಳನ್ನು ತನ್ನ ಮತ್ತು ಯೆಹೂದ್ಯನಾದ ಮೊರ್ದೆಕೈಯನ ಆದೇಶದಂತೆ ಪ್ರತಿವರ್ಷವೂ ನಿಯಮಿತ ಕಾಲದಲ್ಲಿ ತಪ್ಪದೆ ಆಚರಿಸಬೇಕು,” ಎಂದು ಬರೆದಿದ್ದಳು.
32 : ಎಸ್ತೇರಳು ಹೊರಡಿಸಿದ ಈ ನಿರೂಪ ಪೂರಿಮ್ ಹಬ್ಬದ ಆಚರಣೆಯನ್ನು ಸ್ಥಾಪಿಸಿತು ಮತ್ತು ಅದು ಗ್ರಂಥದಲ್ಲೂ ಲಿಖಿತವಾಯಿತು.