Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಎಸ್ತೇರಳು


1 : “ಈ ಪತ್ರದ ಪ್ರತಿಯನ್ನು ಪ್ರತಿಯೊಂದು ಸಂಸ್ಥಾನದಲ್ಲಿ ರಾಜಾಜ್ಞೆಯೆಂದು ಎಲ್ಲಾ ಜನರಲ್ಲಿ ಪ್ರಕಟಿಸಬೇಕು. ಆ ದಿನಗಳಲ್ಲಿ ಯೆಹೂದ್ಯರು ತಮ್ಮ ಶತ್ರುಗಳ ಮೇಲೆ ಮುಯ್ಯಿ ತೀರಿಸಿಕೊಳ್ಳುವುದಕ್ಕೂ ಸನ್ನದ್ಧರಾಗಿರಬೇಕು.”
2 : ಅರಸನ ಈ ರಾಜಾಜ್ಞೆಯು ಶೂಷನ್ ನಗರದಲ್ಲಿ ಪ್ರಕಟವಾದ ಕೂಡಲೆ ಅದರಿಂದ ಪ್ರೇರಿತವಾದ ಅಂಚೆಯವರು ಅರಮನೆಯ ಸವಾರಿ ಕುದುರೆಗಳನ್ನೇರಿ ಅತಿ ಶೀಘ್ರವಾಗಿ ಧಾವಿಸಿದರು.
3 : ಮೊರ್ದೆಕೈಯಾದರೋ ನೀಲ ಶುಭ್ರ ವರ್ಣಗಳುಳ್ಳ ರಾಜವಸ್ತ್ರಗಳನ್ನು ಧರಿಸಿ, ಬಂಗಾರದ ದೊಡ್ಡ ಪಟ್ಟಿಯನ್ನು ಹಣೆಗೆ ಕಟ್ಟಿಕೊಂಡು ರಕ್ತವರ್ಣದ ನಾರಿನ ಶಾಲನ್ನು ಹೊದ್ದು ರಾಜಸನ್ನಿಧಿಯಿಂದ ಹೊರಟನು. ಶೂಷನ್ ನಗರದಲ್ಲಿ ಹರ್ಷೋದ್ಗಾರ ಮೊಳಗಿತು.
4 : ಅಲ್ಲಿನ ಯೆಹೂದ್ಯರು ಹರ್ಷಾನಂದ ಪ್ರಭಾವಗಳಿಂದ ಪುಳಕಿತರಾದರು.
4 : ಆದುದರಿಂದ ಸಕಲ ಸಂಸ್ಥಾನಾಧಿಕಾರಿಗಳೂ ಉಪರಾಜರೂ ದೇಶಾಧಿಪತಿಗಳೂ ಮತ್ತು ಇತರ ರಾಜಸೇವಕರೂ ಅವನಿಗೆ ಭಯಪಟ್ಟು ಯೆಹೂದ್ಯರಿಗೆ ನೆರವಾದರು.
5 : ಅನೇಕ ಸಾರಿ ಆಡಳಿತ ಜವಾಬ್ದಾರಿ ವಹಿಸಿಕೊಂಡಿರುವವರು ನಿರಪರಾಧಿಗಳ ರಕ್ತಧಾರೆಗೆ ಹೊಣೆಗಾರರಾಗುತ್ತಾರೆ. ಬಗೆಹರಿಸಲಾಗದ ವಿಪತ್ತನ್ನು ಜನರ ಮೇಲೆ ಬರಮಾಡುತ್ತಾರೆ.
5 : ರಾಜ ನಿರ್ಣಯ ಶಾಸನಗಳು ಪ್ರಕಟವಾದ ಸಂಸ್ಥಾನಗಳಲ್ಲೂ ನಗರಗಳಲ್ಲೂ ವಾಸಿಸುತ್ತಿದ್ದ ಯೆಹೂದ್ಯರೆಲ್ಲರಿಗೆ ಶುಭದಿನ ಉದಯವಾಯಿತು. ಅವರು ಅದನ್ನು ಸಂತೋಷದ ಹಾಗೂ ಸಂಭ್ರಮದ ಹಬ್ಬದ ದಿನವನ್ನಾಗಿ ಆಚರಿಸಿದರು. ಜನರಲ್ಲಿ ಅನೇಕರು ಯೆಹೂದ್ಯರಿಗೆ ಭಯಪಟ್ಟು ಅವರ ಧರ್ಮಕ್ಕೆ ಸೇರಿದರು.

· © 2017 kannadacatholicbible.org Privacy Policy