2 : ಯುದ್ಧಮಾಡಲು ಯೆಹೂದ್ಯರಿಗೆ ಕರೆ
ಆ ದಿನದಲ್ಲಿ ಅರಸ ಅಹಷ್ಟೇರೋಷನು, ಯೆಹೂದ್ಯರ ಶತ್ರು ಹಾಮಾನನು ವಾಸ ಆಗಿದ್ದ ನಿವಾಸವನ್ನು ರಾಣಿ ಎಸ್ತೇರಳಿಗೆ ಕೊಟ್ಟನು. ಆಕೆ ತನಗೂ ಮೊರ್ದೆಕೈಗೂ ಇದ್ದ ನಿಜ ಸಂಬಂಧವನ್ನು ಅರಸನಿಗೆ ತಿಳಿಸಿದಳು. ಆಗ 2ಅರಸನು ಮೊರ್ದೆಕೈಯನ್ನು ಗೌರವದಿಂದ ಸ್ವಾಗತಿಸಿ ಹಾಮಾನನಿಂದ ತೆಗೆಸಿದ ತನ್ನ ಮುದ್ರೆಯುಂಗುರವನ್ನು ಅವನಿಗೆ ತೊಡಿಸಿದನು. ಎಸ್ತೇರಳು ಹಾಮಾನನ ಮನೆಯ ಆಡಳಿತವನ್ನು ಮೊರ್ದೆಕೈಯನಿಗೆ ವಹಿಸಿದಳು.
2 : ಯುದ್ಧಮಾಡಲು ಯೆಹೂದ್ಯರಿಗೆ ಕರೆ
8 ಆ ದಿನದಲ್ಲಿ ಅರಸ ಅಹಷ್ಟೇರೋಷನು, ಯೆಹೂದ್ಯರ ಶತ್ರು ಹಾಮಾನನು ವಾಸ ಆಗಿದ್ದ ನಿವಾಸವನ್ನು ರಾಣಿ ಎಸ್ತೇರಳಿಗೆ ಕೊಟ್ಟನು. ಆಕೆ ತನಗೂ ಮೊರ್ದೆಕೈಗೂ ಇದ್ದ ನಿಜ ಸಂಬಂಧವನ್ನು ಅರಸನಿಗೆ ತಿಳಿಸಿದಳು. ಆಗ 2ಅರಸನು ಮೊರ್ದೆಕೈಯನ್ನು ಗೌರವದಿಂದ ಸ್ವಾಗತಿಸಿ ಹಾಮಾನನಿಂದ ತೆಗೆಸಿದ ತನ್ನ ಮುದ್ರೆಯುಂಗುರವನ್ನು ಅವನಿಗೆ ತೊಡಿಸಿದನು. ಎಸ್ತೇರಳು ಹಾಮಾನನ ಮನೆಯ ಆಡಳಿತವನ್ನು ಮೊರ್ದೆಕೈಯನಿಗೆ ವಹಿಸಿದಳು.
3 : ಎಸ್ತೇರಳು ಪುನಃ ಅರಸನ ಮುಂದೆ ಹೋಗಿ ಅವನ ಪಾದಗಳಿಗೆರಗಿ, ಅಳುತ್ತಾ, ಆಗಾನನ ವಂಶದವನಾದ ಹಾಮಾನನು ಯೆಹೂದ್ಯರ ಹಾನಿಗಾಗಿ ಹೂಡಿದ್ದ ದುಷ್ಟ ಯೋಜನೆಯನ್ನು ರದ್ದುಪಡಿಸುವಂತೆ ವಿಜ್ಞಾಪಿಸಿದಳು.
4 : ಅರಸನು ತನ್ನ ಸ್ವರ್ಣದಂಡವನ್ನು ಆಕೆಯ ಕಡೆಗೆ ಚಾಚಲು, ಆಕೆ ಅವನ ಮುಂದೆ ಎದ್ದು ನಿಂತು,
5 : ಅವು ಒಂದಕ್ಕೊಂದು ವಿರುದ್ಧ ಕಾಳಗಕ್ಕೆ ಸಜ್ಜಾಗಿ ನಿಂತಿದ್ದವು.
5 : “ತಾವು ನನ್ನ ಮೇಲೆ ಕೃಪಾಕಟಾಕ್ಷವಿರಿಸಿ ನನ್ನನ್ನು ಮೆಚ್ಚಿ ನಾನು ಹೇಳುವ ಮಾತು ಸಮಂಜಸವಾದುದೆಂದು ಎಣಿಸಿ ಅದಕ್ಕೆ ಸಮ್ಮತಿಸುವುದಾದರೆ, ತಮ್ಮ ಎಲ್ಲಾ ಸಂಸ್ಥಾನಗಳಲ್ಲಿರುವ ಯೆಹೂದ್ಯರನ್ನು ಸಂಹರಿಸುವ ಸಲುವಾಗಿ ಆಗಾನನ ವಂಶದವನೂ ಹೆಮ್ಮೆದಾತನ ಮಗನೂ ಆದ ಹಾಮಾನನು ಬರೆಸಿದ ಪತ್ರಗಳನ್ನು ರದ್ದುಗೊಳಿಸಲು ಆಜ್ಞೆ ಹೊರಡಿಸಬೇಕು.
6 : ನನ್ನ ಜನರಿಗೆ ಕೇಡು ಸಂಭವಿಸುವುದನ್ನು ಕಣ್ಣಾರೆ ಕಂಡು ನಾನು ಹೇಗೆತಾನೆ ಸಹಿಸಲಿ? ನನ್ನ ಕುಲನಾಶವನ್ನು ಕಂಡು ಸುಮ್ಮನಿರುವುದಾದರೂ ಹೇಗೆ?” ಎಂದು ಬಿನ್ನವಿಸಿದಳು.
7 : ಆಗ ಅರಸನು, ರಾಣಿ ಎಸ್ತೇರಳಿಗೂ ಯೆಹೂದ್ಯನಾದ ಮೊರ್ದೆಕೈಗೂ, “ಹಾಮಾನನು ಯೆಹೂದ್ಯರ ವಿರುದ್ಧ ಕೈಯೆತ್ತಿದ್ದರಿಂದ ಅವನನ್ನು ಗಲ್ಲಿಗೇರಿಸಿ ಅವನ ಮನೆಯನ್ನು ಎಸ್ತೇರಳಿಗೆ ದಾನಮಾಡಿದೆನಲ್ಲವೆ?
8 : ಅರಸನ ಹೆಸರಿನಲ್ಲಿ ಬರೆಯಲಾದ ರಾಜಮುದ್ರೆಯನ್ನು ಹೊಂದಿರುವ ಲೇಖನವನ್ನು ಯಾರೂ ರದ್ದುಮಾಡಲಾಗದು. ಆದ್ದರಿಂದ ಯೆಹೂದ್ಯರ ವಿಷಯದಲ್ಲಿ ನಿಮಗೆ ಸರಿತೋರಿದಂತೆ ಅರಸನ ಹೆಸರಿನಲ್ಲಿ ನೀವೂ ಪತ್ರ ಬರೆಯಿಸಿ, ಅದಕ್ಕೆ ರಾಜಮುದ್ರೆಯನ್ನು ಹಾಕಿರಿ,” ಎಂದು ಹೇಳಿದನು.
9 : ಆಗ ರಾಜಲೇಖಕರನ್ನು ಕರೆಸಲಾಯಿತು. ಇವರು ಮೂರನೆಯ ತಿಂಗಳಾದ ಜೇಷ್ಠಮಾಸದ ಇಪ್ಪತ್ತಮೂರನೇ ದಿನದಲ್ಲಿ ಬಂದು ಮೊರ್ದೆಕೈಯ ಆಜ್ಞಾನುಸಾರ ಯೆಹೂದ್ಯರಿಗೂ ಭಾರತ (ಇಂಡಿಯಾ)ದಿಂದ ಮೊದಲ್ಗೊಂಡು ಇಥಿಯೋಪಿಯವರೆಗೂ ಹರಡಿರುವ ನೂರಿಪ್ಪತ್ತೇಳು ಸಂಸ್ಥಾನಗಳ ಉಪರಾಜರಿಗೂ ದೇಶಾಧಿಪತಿಗಳಿಗೂ ಅಧಿಕಾರಿಗಳಿಗೂ ಆಯಾ ಸಂಸ್ಥಾನಗಳ ಲಿಪಿಯಲ್ಲೂ, ಆಯಾ ಜನಾಂಗಗಳ ಭಾಷೆಯಲ್ಲೂ ಪತ್ರಗಳನ್ನು ಬರೆದರು.
10 : ಅರಸನ ಹೆಸರಿನಲ್ಲಿ ಬರೆಯಲಾದ ಈ ಪತ್ರಗಳಿಗೆ ಮೊರ್ದೆಕೈ ರಾಜಮುದ್ರೆಯನ್ನು ಒತ್ತಿ, ಅರಮನೆಯ ಅಶ್ವಾಲಯಗಳಲ್ಲೇ ಹುಟ್ಟಿ ಬೆಳೆದ ಸವಾರಿ ಕುದುರೆಗಳನ್ನೇರಿ ಹೊರಟ ಅಂಚೆಯವರ ಮುಖಾಂತರ ಕಳುಹಿಸಿದನು.
11 : ಆ ಪತ್ರದ ಪ್ರಕಾರ ಅರಸ ಅಹಷ್ಟೇರೋಷನ ಎಲ್ಲಾ ಸಂಸ್ಥಾನಗಳ ಆಯಾ ಪಟ್ಟಣಗಳಲ್ಲಿ ಇರುವ ಎಲ್ಲಾ ಯೆಹೂದ್ಯರು ಒಂದೇ ದಿನದಲ್ಲಿ,
12 : ಅಂದರೆ, ಹನ್ನೆರಡನೆಯ ತಿಂಗಳಾದ ಫಾಲ್ಗುಣ ಮಾಸದ ಹದಿಮೂರನೆಯ ದಿನದಲ್ಲಿ ಒಟ್ಟಾಗಿ ಸೇರಿ ತಮ್ಮ ಪ್ರಾಣರಕ್ಷಣೆಗಾಗಿ ದಂಗೆಯೆದ್ದು, ತಮಗೆ ವಿರೋಧವಾಗಿ ಆಯುಧಗಳೊಡನೆ ನೆರೆದು ಬರುವ ಎಲ್ಲಾ ಜನಾಂಗಗಳವರನ್ನೂ ಸಂಸ್ಥಾನಗಳವರನ್ನೂ ಮಕ್ಕಳು ಮಹಿಳೆಯರೆನ್ನದೆ ಎಲ್ಲರನ್ನೂ ಕೊಂದು ಸಂಹರಿಸಿ, ನಿರ್ನಾಮಗೊಳಿಸಿ, ಅವರ ಆಸ್ತಿ ಪಾಸ್ತಿಯನ್ನೆಲ್ಲಾ ಸೂರೆಮಾಡಲು ರಾಜಾಜ್ಞೆ ಕೊಡಲಾಗಿತ್ತು.