Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಎಸ್ತೇರಳು


1 : ಮೊರ್ದೆಕೈಗೆ ರಾಜಗೌರವ ಆ ರಾತ್ರಿ ಅರಸನಿಗೆ ನಿದ್ದೆಯೇ ಬರಲಿಲ್ಲ. ಆದ್ದರಿಂದ, ಸ್ಮರಿಸತಕ್ಕ ಪೂರ್ವ ಘಟನೆಗಳನ್ನು ಬರೆದಿಟ್ಟಿದ್ದ ಗ್ರಂಥವನ್ನು ತರಿಸಿ, ಅದನ್ನು ಪಾರಾಯಣ ಮಾಡಿಸುತ್ತಿದ್ದಾಗ
2 : ಅರಸನನ್ನು ಕೊಲ್ಲಲು ದ್ವಾರಪಾಲಕರಾದ ಬಿಗೆತಾನ್, ತೆರೆಷ್ ಎಂಬಿಬ್ಬರು ರಾಜ ಕಂಚುಕಿಗಳು ಪಿತೂರಿ ನಡೆಸಿದ್ದ ಪ್ರಕರಣ ಹಾಗೂ ಅದು ಮೊರ್ದೆಕೈಯ ಮುಖಾಂತರ ತಿಳಿದುಬಂದ ಲಿಖಿತವಿಷಯ ಅದರಲ್ಲಿ ಸಿಕ್ಕಿದವು.
3 : ಆಗ ಅರಸನು, “ಈ ಸತ್ಕಾರ್ಯಕ್ಕಾಗಿ ಮೊರ್ದೆಕೈಯನಿಗೆ ಯಾವ ಸನ್ಮಾನ ಮಾಡಲಾಯಿತು?” ಎಂದು ವಿಚಾರಿಸಿದಾಗ, ಅವನ ಆಸ್ಥಾನ ಸೇವಕರು “ಯಾವುದೂ ಇಲ್ಲ” ಎಂದು ಉತ್ತರವಿತ್ತರು.
4 : ಕೂಡಲೆ ಅರಸನು, “ಯಾರಲ್ಲಿ, ಅಂಗಳದಲ್ಲಿ?” ಎಂದು ವಿಚಾರಿಸಿದನು. ಅಷ್ಟರಲ್ಲಿ, ತಾನೆ ಸಿದ್ಧಮಾಡಿಕೊಂಡಿದ್ದ ಗಲ್ಲುಮರಕ್ಕೆ ಮೊರ್ದೆಕೈಯನ್ನು ನೇಣುಹಾಕಿಸಲು ಅರಸನ ಅಪ್ಪಣೆಯನ್ನು ಪಡೆಯುವುದಕ್ಕೋಸ್ಕರ ಹಾಮಾನನು ಆಗತಾನೆ ಅರಮನೆಯ ಹೊರಾಂಗಣ ಅಂಗಳಕ್ಕೆ ಬಂದಿದ್ದನು.
5 : ಆದ್ದರಿಂದ ರಾಜಸೇವಕರು, “ಇಗೋ, ಹಾಮಾನನು ಅಂಗಳದಲ್ಲಿ ನಿಂತುಕೊಂಡಿದ್ದಾನೆ,” ಎಂದರು. ಅರಸನು, “ಅವನು ಒಳಗೆ ಬರಲಿ,” ಎಂದು ಅಪ್ಪಣೆ ಮಾಡಿದನು.
6 : ಹಾಮಾನನು ಒಳಗೆ ಬಂದಾಗ ಅರಸನು ಅವನಿಗೆ, “ಅರಸನು ಒಬ್ಬ ವ್ಯಕ್ತಿಯನ್ನು ಗೌರವಿಸಲು ಬಯಸಿದರೆ ಅಂಥ ವ್ಯಕ್ತಿಗೆ ನೀಡಬಹುದಾದ ತಕ್ಕ ಸನ್ಮಾನ ಯಾವುದು?” ಎಂದು ವಿಚಾರಿಸಿದನು.
7 : ಹಾಮಾನನು ತನ್ನನ್ನಲ್ಲದೆ ಬೇರೆ ಯಾರನ್ನು ಸನ್ಮಾನಿಸಲು ಅರಸನು ಬಯಸಿಯಾನು ಎಂದು ತನ್ನಲ್ಲೆ ಅಂದುಕೊಂಡು ಅವನಿಗೆ ಪ್ರತ್ಯುತ್ತರವಾಗಿ, “ಅರಸನು ಸನ್ಮಾನಿಸಬೇಕೆಂದಿರುವ ವ್ಯಕ್ತಿಗೆ ಈ ರೀತಿ ಮಾಡಬೇಕು:
8 : ಅರಸನು ಧರಿಸಿಕೊಳ್ಳುವ ರಾಜವಸ್ತ್ರಗಳನ್ನೂ ಸವಾರಿ ಮಾಡುವ ಪಟ್ಟದ ಕುದುರೆಯನ್ನೂ ತರಿಸಬೇಕು.
9 : ಆ ವಸ್ತ್ರಗಳನ್ನೂ ಕುದುರೆಯನ್ನೂ ಅರಸನ ಪ್ರಧಾನ ಸರದಾರರಲ್ಲೊಬ್ಬನ ವಶಕ್ಕೆ ಕೊಡಬೇಕು; ಇವನು, ಅರಸನು ಸನ್ಮಾನಿಸಬೇಕೆಂದಿರುವ ವ್ಯಕ್ತಿಗೆ ರಾಜವಸ್ತ್ರಗಳನ್ನು ತೊಡಿಸಿ, ಕುದುರೆಯ ಮೇಲೆ ಕೂರಿಸಿ ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಿಸುತ್ತಾ, ಅವನ ಮುಂದೆ ‘ಅರಸನು ಸನ್ಮಾನಿಸಬೇಕೆಂದಿರುವ ವ್ಯಕ್ತಿಯನ್ನು ಗೌರವಿಸುವ ರೀತಿ ಇದೇ’ ಎಂದು ಪ್ರಕಟಪಡಿಸಬೇಕು” ಎಂದನು.
10 : ಕೂಡಲೆ ಅರಸನು ಹಾಮಾನನಿಗೆ, “ನೀನು ಹೇಳಿದ ಪ್ರಕಾರವೇ ಬೇಗನೆ ಹೋಗಿ ರಾಜ ವಸ್ತ್ರಗಳನ್ನೂ ಪಟ್ಟದ ಕುದುರೆಯನ್ನೂ ತೆಗೆದುಕೊಂಡು ಅರಮನೆಯ ಬಾಗಿಲಲ್ಲಿ ಕುಳಿತಿರುವ ಮೊರ್ದೆಕೈ ಎಂಬ ಯೆಹೂದ್ಯನಿಗೆ ಹಾಗೆಯೇ ಮಾಡು. ನೀನು ಸಲಹೆ ಮಾಡಿದವುಗಳಲ್ಲಿ ಒಂದನ್ನೂ ಬಿಡದೆ ಚಾಚೂ ತಪ್ಪದೆ ನೆರವೇರಿಸು,” ಎಂದು ಅಪ್ಪಣೆ ಮಾಡಿದನು.
11 : ಬೇರೆ ವಿಧಿಯಿಲ್ಲದೆ ಹಾಮಾನನು ಹೊರಟು ಆ ವಸ್ತ್ರಗಳನ್ನು, ಕುದುರೆಯನ್ನು ತೆಗೆದುಕೊಂಡು ಮೊರ್ದೆಕೈಗೆ ಆ ವಸ್ತ್ರಗಳನ್ನು ತೊಡಿಸಿ, ಅವನನ್ನು ಕುದುರೆಯ ಮೇಲೆ ಕೂರಿಸಿ ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಿಸಿ ಅವನ ಮುಂದೆ, “ಅರಸನು ಸನ್ಮಾನಿಸಬೇಕೆಂದಿರುವ ವ್ಯಕ್ತಿಯನ್ನು ಗೌರವಿಸುವ ರೀತಿ ಇದೇ” ಎಂದು ಪ್ರಕಟಪಡಿಸಿದನು
12 : ಮೊರ್ದೆಕೈ ಪುನಃ ಅರಮನೆಯ ಬಾಗಿಲಿಗೆ ಬಂದನು. ಹಾಮಾನನಾದರೋ ವ್ಯಸನಕ್ರಾಂತನಾಗಿ ಮುಖಮುಚ್ಚಿಕೊಂಡು ಶೀಘ್ರವಾಗಿ ಮನೆಗೆ ಧಾವಿಸಿದನು.
13 : ತನ್ನ ಪತ್ನಿ ಜೆರೆಷಳಿಗೂ ಎಲ್ಲಾ ಆಪ್ತರಿಗೂ ತನಗೆ ಸಂಭವಿಸಿದ್ದುದನ್ನೆಲ್ಲಾ ವರದಿ ಮಾಡಿದನು. ಆಗ ಅವನ ಪಂಡಿತರೂ ಪತ್ನಿಯೂ ಅವನಿಗೆ, “ಯಾವನಿಂದ ನಿನ್ನ ಪತನವು ಪ್ರಾರಂಭವಾಯಿತೋ ಆ ವ್ಯಕ್ತಿ ಒಂದು ವೇಳೆ ಯೆಹೂದ್ಯನಾಗಿದ್ದರೆ, ನೀನು ಅವನನ್ನು ಎಂದಿಗೂ ಜಯಿಸಲಾರೆ. ಅವನ ಮುಂದೆ ಬಿದ್ದು ಹಾಳಾಗುವೆ,” ಎಂದು ಎಚ್ಚರವಿತ್ತರು.
14 : ಹಾಮಾನನ ಹತ್ಯೆ ಅವರು ಇನ್ನೂ ಮಾತಾಡುತ್ತಿರುವಾಗಲೇ ರಾಜಕಂಚುಕಿಗಳು ಬಂದು, ಎಸ್ತೇರಳು ಏರ್ಪಡಿಸಿರುವ ಔತಣಕ್ಕೆ ಬೇಗನೆ ಹೊರಟು ಬರಬೇಕೆಂದು ಹಾಮಾನನನ್ನು ಕರೆದರು.

· © 2017 kannadacatholicbible.org Privacy Policy