1 : ಊಟೋಪಚಾರಗಳೆಲ್ಲ ಮುಗಿದ ನಂತರ, ಮಲಗುವ ಸಮಯದಲ್ಲಿ ತೊಬಿಯಾಸನನ್ನು ಶಯನದ ಕೊಠಡಿಗೆ ಕರೆತರಲಾಯಿತು.
2 : ಆಗ ರಫಯೇಲನ ಮಾತುಗಳು ತೊಬಿಯಾಸನ ನೆನಪಿಗೆ ಬಂದವು. ತನ್ನ ಚೀಲದಿಂದ ಮೀನಿನ ಹೃದಯ ಮತ್ತು ಯಕೃತ್ತನ್ನು ತೆಗೆದು ಉರಿಯುತ್ತಿದ್ದ ಧೂಪಕೆಂಡದ ಮೇಲೆ ಹಾಕಿದನು.
3 : ಅಲ್ಲಿಂದ ಹೊರಟ ಹೊಗೆಯ ದುರ್ವಾಸನೆ ದೆವ್ವಕ್ಕೆ ಹಿಡಿಸಲಿಲ್ಲ. ಅದನ್ನು ತಡೆಯಲಾರದೆ ಅದು ಈಜಿಪ್ಟಿನ ಕಟ್ಟಕಡೆಯವರೆಗೆ ಓಡಲಾರಂಭಿಸಿತು. ರಫಯೇಲನು ಕೂಡಲೆ ಅದನ್ನು ಹಿಮ್ಮೆಟ್ಟಿ, ಬಂಧಿಸಿ, ನಸುಕಿಹಾಕಿದನು.
4 : ಸಾರಳ ತಂದೆತಾಯಿಗಳು ಶಯನ ಕೊಠಡಿಯ ಬಾಗಿಲನ್ನು ಮುಚ್ಚಿ ಹೊರಟು ಹೋದ ಮೇಲೆ, ತೊಬಿಯಾಸನು ಹಾಸಿಗೆಯಿಂದೆದ್ದು ಸಾರಳನ್ನು ಉದ್ದೇಶಿಸಿ, “ಪ್ರಿಯಳೇ, ಎದ್ದೇಳು, ಪ್ರಾರ್ಥಿಸೋಣ; ನಮಗೆ ಕರುಣೆಯನ್ನೂ ರಕ್ಷಣೆಯನ್ನೂ ದಯಪಾಲಿಸಲೆಂದು ಸರ್ವೇಶ್ವರನನ್ನು ಬೇಡಿಕೊಳ್ಳೋಣ,” ಎಂದನು.
5 : ಸಾರಳು ಎದ್ದು ನಿಂತಳು. ಅವರಿಬ್ಬರೂ ಪ್ರಾರ್ಥನೆಮಾಡಿ, ಸರ್ವೇಶ್ವರ ತಮ್ಮನ್ನು ಸುರಕ್ಷಿತವಾಗಿಡುವಂತೆ ಬಿನ್ನಯಿಸಿಕೊಂಡರು. ತೊಬಿಯಾಸನು ಹೀಗೆಂದು ಪ್ರಾರ್ಥಿಸಿದನು:
“ನಮ್ಮ ಪೂರ್ವಜರ ದೇವರೇ, ನಿಮಗೆ
ಸ್ತುತಿಸ್ತೋತ್ರ!
ನಿಮ್ಮ ನಾಮವು ಯುಗಯುಗಾಂತರಕ್ಕೂ
ಪೂಜಿತ
ಸ್ವರ್ಗಲೋಕವು, ಸೃಷ್ಟಿಸಮಸ್ತವು ಸ್ತುತಿಸಲಿ
ನಿಮ್ಮನು ಸತತ.
6 : “ಆದಾಮನನ್ನು ಸೃಷ್ಟಿಸಿದಾತ ನೀವೇ
ಆತನಿಗೆ ಹವ್ವಳನ್ನು ಸತಿಯಾಗಿ ಕೊಟ್ಟಿರಿ ನೀವೇ.
ಕೊಟ್ಟಿರಿ ಆಕೆಯನ್ನು ಸಹಾಯಕಳನ್ನಾಗಿ,
ಬೆಂಬಲವಾಗಿ.
ಉಗಮವಾಯಿತು ಮಾನವಕುಲ
ಇವರಿರ್ವರಿಂದಾಗಿ.
‘ಮನುಷ್ಯ ಒಂಟಿಯಾಗಿರುವುದು ಒಳಿತಲ್ಲ’
ಎಂದಿರಿ
ಅವನಿಗೆ ಸರಿಬೀಳುವ ಸಹಕಾರಿಯನ್ನು
ಸೃಷ್ಟಿಸಿಕೊಟ್ಟಿರಿ.
7 : “ನಾನೀಗ ನನ್ನೀ ಸೋದರಿಯನ್ನು
ಸ್ವೀಕರಿಸುವುದು ಕಾಮತೃಪ್ತಿಗಾಗಿ ಅಲ್ಲ
ಧರ್ಮಾನುಸಾರಕ್ಕಾಗಿಯೇ ಹೌದು.
ದಯಮಾಡಿ ಕೃಪೆತೋರಿ ನಮಗೆ
ನಾವಿಬ್ಬರು ವೃದ್ಧಾಪ್ಯ ಹೊಂದುವವರೆಗೆ.”
8 : ಈ ಪ್ರಾರ್ಥನೆಯ ಅಂತ್ಯದಲ್ಲಿ
ಅವರಿಬ್ಬರೂ ‘ಆಮೆನ್, ಆಮೆನ್,’ ಎಂದು ಹೇಳಿ ಮಲಗಿಕೊಂಡರು.
9 : ಅದೇ ರಾತ್ರಿ ರಾಗುಯೇಲನಾದರೋ ನಿದ್ದೆಯಿಂದೆದ್ದು, ತನ್ನ ಸೇವಕರನ್ನು ಕರೆದು, ಸಮಾಧಿಯನ್ನು ಅಗೆಯಲು ಹೊರಗೆ ಹೋದನು.
10 : ಏಕೆಂದರೆ, “ತೊಬಿಯಾಸನು ಸಹ ಸಾಯಬಹುದು. ಜನರ ನಿಂದೆ ಪರಿಹಾಸ್ಯಕ್ಕೆ ನಾವು ಮತ್ತೆ ಗುರಿಯಾಗಬಹುದು,” ಎಂದುಕೊಂಡನು.
11 : ಸಮಾಧಿಯ ಗುಣಿ ಅಗೆದಾದ ಮೇಲೆ, ರಾಗುಯೇಲನು ಮನೆಗೆ ಹೋಗಿ ತನ್ನ ಹೆಂಡತಿಯನ್ನು ಕರೆದು,
12 : “ದಾದಿಯರಲ್ಲಿ ಒಬ್ಬಳನ್ನು ಕಳುಹಿಸು, ತೊಬಿಯಾಸನು ಸತ್ತಿರಬಹುದೇ ಎಂದು ನೋಡಿಕೊಂಡು ಬರಲಿ. ಸತ್ತಿದ್ದರೆ, ಯಾರಿಗೂ ಗೊತ್ತಾಗದಂತೆ ಅವನನ್ನು ಸಮಾಧಿ ಮಾಡಿಬಿಡೋಣ,” ಎಂದನು.
13 : ಅಂತೆಯೇ, ಅವರು ದಾದಿಯೊಬ್ಬಳನ್ನು ಕಳುಹಿಸಿದರು. ದೀಪಹಚ್ಚಿ ಬಾಗಿಲು ತೆರೆದು, ಅವಳನ್ನು ಒಳಕ್ಕೆ ಬಿಟ್ಟರು. ಆಕೆ ಒಳಗೆ ಹೋಗಿ ನೋಡಿದಾಗ ಅವರಿಬ್ಬರು ಹಾಯಾಗಿ ಮಲಗಿರುವುದನ್ನು ಕಂಡಳು.
14 : ಎಂದೇ ದಾದಿಯು ಹೊರಗೆ ಬಂದು ತೊಬಿಯಾಸನು ಸುರಕ್ಷಿತ ವಾಗಿರುವುದಾಗಿ ರಾಗುಯೇಲನಿಗೂ ಎಡ್ನಳಿಗೂ ತಿಳಿಸಿದಳು.
15 : ಆಗ ರಾಗುಯೇಲನು ಪರಲೋಕ ದೇವರನ್ನು ಹೀಗೆಂದು ಕೀರ್ತಿಸಿದನು:
ರಾಗುಯೇಲನ ಪ್ರಾರ್ಥನೆ
“ಸರ್ವೇಶ್ವರಾ, ನೀವು ಸ್ತುತ್ಯಾರ್ಹರು!
ಪ್ರತಿಯೊಂದು ಪೂಜ್ಯಸ್ತುತಿಗೆ ಪಾತ್ರರು
ಆಯ್ಕೆಯಾದ ಜನಾಂಗ ಸ್ತುತಿಸಲಿ
ನಿಮ್ಮನ್ನು ಎಂದೆಂದಿಗೂ !
16 : “ನನ್ನನ್ನು ಸಂತೋಷಪಡಿಸಿದ್ದಕ್ಕಾಗಿ ನಿಮಗೆ
ಸ್ತೋತ್ರ !
ಜರುಗಲಿಲ್ಲ ನಾನು ಹೆದರಿದ ದುರಂತ
ನನಗೆಸಗಿರುವಿರಿ ನಿಮ್ಮ ಮಹಾಕೃಪಾನುಸಾರ.
17 : “ಈಕೆ ಏಕಮಾತ್ರ ಪುತ್ರಿ; ಈತ ಏಕಮಾತ್ರ ಪುತ್ರ
ಇವರಿಗೆ ದಯೆತೋರಿದ ನಿಮಗೆ ಸ್ತುತಿಸ್ತೋತ್ರ!
ಗುರುದೇವಾ, ಅನುಗ್ರಹಿಸು ಇವರಿಗೆ
ಕೃಪಾಶ್ರಯ
ಪ್ರೀತ್ಯಾನಂದದಿಂದ ತುಂಬಿರಲಿ ಇವರ
ದಾಂಪತ್ಯ.”
18 : ರಾಗುಯೇಲನು ತಾನು ತೋಡಿದ್ದ ಗುಳಿಯನ್ನು ಮುಂಜಾನೆಯೇ ಮುಚ್ಚಿಬಿಟ್ಟನು.
19 : ತರುವಾಯ ರಾಗುಯೇಲನು ಹಂಡೆ ತುಂಬ ರೊಟ್ಟಿಯನ್ನು ಸುಡುವಂತೆ ಹೆಂಡತಿಗೆ ಆಜ್ಞಾಪಿಸಿದನು. ತಾನೇ ಮಂದೆಗೆ ಹೋಗಿ ಎರಡು ಹೋರಿಕರುಗಳನ್ನು, ನಾಲ್ಕು ಟಗರುಗಳನ್ನು ತಂದು ಅಡಿಗೆ ಮಾಡಲು ಅಪ್ಪಣೆ ಕೊಟ್ಟನು. ಔತಣಕ್ಕೆ ಸಿದ್ಧತೆ ನಡೆಯಿತು.
20 : ತರುವಾಯ ರಾಗುಯೇಲನು ಹಂಡೆ ತುಂಬ ರೊಟ್ಟಿಯನ್ನು ಸುಡುವಂತೆ ಹೆಂಡತಿಗೆ ಆಜ್ಞಾಪಿಸಿದನು. ತಾನೇ ಮಂದೆಗೆ ಹೋಗಿ ಎರಡು ಹೋರಿಕರುಗಳನ್ನು, ನಾಲ್ಕು ಟಗರುಗಳನ್ನು ತಂದು ಅಡಿಗೆ ಮಾಡಲು ಅಪ್ಪಣೆ ಕೊಟ್ಟನು. ಔತಣಕ್ಕೆ ಸಿದ್ಧತೆ ನಡೆಯಿತು.
21 : ಆ ಬಳಿಕ ನನ್ನ ಆಸ್ತಿಯಲ್ಲಿ ಅರ್ಧಭಾಗವನ್ನು ತೆಗೆದುಕೊಂಡು ಈಕೆಯನ್ನು ಸುರಕ್ಷಿತವಾಗಿ ನಿನ್ನ ತಂದೆಯ ಬಳಿಗೆ ಕರೆದುಕೊಂಡು ಹೋಗು. ನಾನೂ ನನ್ನ ಹೆಂಡತಿಯೂ ತೀರಿಕೊಂಡ ಮೇಲೆ, ಉಳಿದ ಅರ್ಧಭಾಗವೂ ನಿನ್ನದಾಗುವುದು. ಧೈರ್ಯವಾಗಿರು, ಮಗೂ, ನಾನು ನಿನ್ನ ತಂದೆ, ಎಡ್ನ ನಿನ್ನ ತಾಯಿ. ಸಾರಾ ನಮಗೆ ಮಗಳಾಗಿರುವಂತೆ ನೀನೂ ನಮಗೆ ಇಂದಿಗೂ ಎಂದೆಂದಿಗೂ ಮಗನಾಗಿರುವೆ. ಮಗೂ, ಎದೆಗುಂದಬೇಡ!” ಎಂದು ಪ್ರಮಾಣಪೂರ್ವಕವಾಗಿ ಹೇಳಿದನು.