Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಂಖ್ಯಾಕಾಂಡ


1 : ಇಸ್ರಯೇಲರು ಈಜಿಪ್ಟ್ ದೇಶವನ್ನು ಬಿಟ್ಟು ಹೊರಟ ಎರಡನೆಯ ವರ್ಷದ ಎರಡನೆಯ ತಿಂಗಳ ಮೊದಲನೆಯ ದಿನ, ಸರ್ವೇಶ್ವರಸ್ವಾಮಿ ಸೀನಾಯಿ ಮರುಭೂಮಿಯಲ್ಲಿ ದೇವದರ್ಶನದ ಗುಡಾರದಿಂದ ಮೋಶೆಗೆ ಹೀಗೆಂದು ಆಜ್ಞಾಪಿಸಿದರು:
2 : “ನೀನು ಮತ್ತು ಆರೋನ ಇಸ್ರಯೇಲ್ ಜನಸಮೂಹದ ಗಂಡಸರನ್ನು ಗೋತ್ರ ಹಾಗೂ ಕುಟುಂಬಗಳಿಗೆ ಅನುಗುಣವಾಗಿ ಹೆಸರು ಹಿಡಿದು ಒಬ್ಬೊಬ್ಬರನ್ನಾಗಿ ಎಣಿಸಬೇಕು.
3 : ಇಸ್ರಯೇಲರಲ್ಲಿ ಸೈನಿಕಸೇವೆಸಲ್ಲಿಸತಕ್ಕವರನ್ನು, ಅಂದರೆ ಇಪ್ಪತ್ತು ವರ್ಷ ಮೇಲ್ಪಟ್ಟ ವಯಸ್ಸುಳ್ಳ ಎಲ್ಲರನ್ನು ಸೈನ್ಯ ಸೈನ್ಯವಾಗಿ ಪಟ್ಟಿಮಾಡಬೇಕು.
4 : ಈ ಕೆಲಸಕ್ಕಾಗಿ ಒಂದೊಂದು ಕುಲದಿಂದ ಆಯಾಕುಲದ ಮುಖ್ಯಸ್ಥನನ್ನು ಸಹಾಯಕನನ್ನಾಗಿ ತೆಗೆದುಕೊಳ್ಳಿ;
5 : ನಿಮಗೆ ಸಹಾಯಕರಾಗಿರಬೇಕಾದವರ ಹೆಸರುಗಳು ಇವು: “ರೂಬೇನ್ ಕುಲದಿಂದ ಶೆದೇಯೂರನ ಮಗ ಎಲೀಚೂರ್,
6 : ಸಿಮೆಯೋನ್ ಕುಲದಿಂದ ಚೂರೀಷದ್ದೈಯನ ಮಗ ಶೆಲುವಿೂಯೇಲ್,
7 : ಯೆಹೂದ ಕುಲದಿಂದ ಅವ್ಮಿೂನಾದಾಬನ ಮಗ ನಹಶೋನ್,
8 : ಇಸ್ಸಾಕಾರ್ ಕುಲದಿಂದ ಚೂವಾರನ ಮಗ ನೆತನೇಲ್,
9 : ಜೆಬುಲೂನ್ ಕುಲದಿಂದ ಹೇಲೋನನ ಮಗ ಎಲೀಯಾಬ್,
10 : ಜೋಸೆಫನ ವಂಶದವರಲ್ಲಿ - ಎಫ್ರಯಿಮ್ ಕುಲದಿಂದ ಅಮ್ಮೀಹೂದನ ಮಗ ಎಲೀಷಾಮಾ, ಮನಸ್ಸೆ ಕುಲದಿಂದ ಪೆದಾಚೂರನ ಮಗನಾದ ಗವ್ಲಿೂಯೇಲ್,
11 : ಬೆನ್ಯಾವಿೂನ್ ಕುಲದಿಂದ ಗಿದ್ಯೋನಿಯ ಮಗ ಅಬೀದಾನ್,
12 : ದಾನ್ ಕುಲದಿಂದ ಅವ್ಮಿೂಷದ್ದೈಯನ ಮಗ ಅಹೀಗೆಜೆರ್,
13 : ಆಶೇರ್ ಕುಲದಿಂದ ಒಕ್ರಾನನ ಮಗ ಪಗೀಯೇಲ್,
14 : ಗಾದ್ ಕುಲದಿಂದ ರೆಗೂವೇಲನ ಮಗ ಎಲ್ಯಾಸಾಫ್,
15 : ನಫ್ತಾಲಿ ಕುಲದಿಂದ ಏನಾನನ ಮಗ ಅಹೀರ.”
16 : ಇವರು ಸಮಾಜದಲ್ಲಿ ಹೆಸರು ಪಡೆದವರು. ತಮ್ಮ ತಮ್ಮ ಕುಲಗಳಲ್ಲಿ ಪ್ರಧಾನ ಪುರುಷರು, ಇಸ್ರಯೇಲರಲ್ಲಿ ಸಹಸ್ರಾಧಿಪತಿಗಳು.
17 : ಹೀಗೆ ಹೆಸರಿನಿಂದ ಸೂಚಿತರಾದ ವ್ಯಕ್ತಿಗಳನ್ನು ಮೋಶೆ ಮತ್ತು ಆರೋನರು ಕರೆದರು.
18 : ಎರಡನೆಯ ತಿಂಗಳಿನ ಮೊದಲನೆ ದಿನ ಜನ ಸಮೂಹವನ್ನು ಕೂಡಿಸಿದರು. ಇಪ್ಪತ್ತು ವರ್ಷ ಮೇಲ್ಪಟ್ಟ ವಯಸ್ಸಿನವರೆಲ್ಲರೂ ಒಬ್ಬೊಬ್ಬರಾಗಿ ಗೋತ್ರ, ಕುಟುಂಬಗಳ ಪ್ರಕಾರ ತಮ್ಮ ತಮ್ಮ ವಂಶಾವಳಿಯನ್ನು ತಿಳಿಸಿ ಹೆಸರುಗಳನ್ನು ನೊಂದಾಯಿಸಿಕೊಂಡರು.
19 : ಸರ್ವೇಶ್ವರ ಆಜ್ಞಾಪಿಸಿದಂತೆ ಮೋಶೆ ಸೀನಾಯಿ ಮರುಭೂಮಿಯಲ್ಲಿ ಜನಗಣತಿ ಮಾಡಿದನು.
20 : ಇಸ್ರಯೇಲನ ಚೊಚ್ಚಲ ಮಗ ರೂಬೇನ್ ವಂಶದವರಲ್ಲಿ ಸೈನಿಕಸೇವೆ ಸಲ್ಲಿಸಲು ಶಕ್ತರಾದವರ,
21 : ಅಂದರೆ ಮೂವತ್ತು ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ 46,500.
22 : ಸಿಮೆಯೋನ್ ವಂಶದವರಲ್ಲಿ ಸೈನಿಕ ಸೇವೆ ಸಲ್ಲಿಸಲು ಶಕ್ತರಾದವರ,
23 : ಅಂದರೆ 30 ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ 59,300.
24 : ಗಾದ್ ವಂಶದವರಲ್ಲಿ ಸೈನಿಕಸೇವೆ ಸಲ್ಲಿಸಲು ಶಕ್ತರಾದವರ,
25 : ಅಂದರೆ ಮೂವತ್ತು ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ 45,650.
26 : ಯೆಹೂದ ವಂಶದವರಲ್ಲಿ ಸೈನಿಕಸೇವೆ ಸಲ್ಲಿಸಲು ಶಕ್ತರಾದವರ,
27 : ಅಂದರೆ ಮೂವತ್ತು ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ 74,600.
28 : ಇಸ್ಸಾಕಾರ್ ವಂಶದವರಲ್ಲಿ ಸೈನಿಕ ಸೇವೆ ಸಲ್ಲಿಸಲು ಶಕ್ತರಾದವರ,
29 : ಅಂದರೆ ಮೂವತ್ತು ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ 54,400.
30 : ಜೆಬುಲೂನ್ ವಂಶದವರಲ್ಲಿ ಸೈನಿಕ ಸೇವೆಸಲ್ಲಿಸಲು ಶಕ್ತರಾದವರ,
31 : ಅಂದರೆ ಮೂವತ್ತು ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ 57,400.
32 : ಜೋಸೆಫನಿಂದ ಹುಟ್ಟಿದವರೊಳಗೆ: ಎಫ್ರಯಿಮ್ ವಂಶದವರಲ್ಲಿ ಸೈನಿಕಸೇವೆ ಸಲ್ಲಿಸಲು ಶಕ್ತರಾದವರ,
33 : ಅಂದರೆ ಮೂವತ್ತು ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆ ಆದ ಗಂಡಸರ ಸಂಖ್ಯೆ 40,500.
34 : ಮನಸ್ಸೆ ವಂಶದವರಲ್ಲಿ ಸೈನಿಕಸೇವೆ ಸಲ್ಲಿಸಲು ಶಕ್ತರಾದವರ,
35 : ಅಂದರೆ ಮೂವತ್ತು ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ 32,200.
36 : ಬೆನ್ಯಾವಿೂನ್ ವಂಶದವರಲ್ಲಿ ಸೈನಿಕ ಸೇವೆ ಸಲ್ಲಿಸಲು ಶಕ್ತರಾದವರ,
37 : ಅಂದರೆ ಮೂವತ್ತು ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ 35,400.
38 : ದಾನ್ ವಂಶದವರಲ್ಲಿ ಸೈನಿಕಸೇವೆ ಸಲ್ಲಿಸಲು ಶಕ್ತರಾದವರ,
39 : ಅಂದರೆ ಮೂವತ್ತು ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ 62,700.
40 : ಅಶೇರ್ ವಂಶದವರಲ್ಲಿ ಸೈನಿಕಸೇವೆ ಸಲ್ಲಿಸಲು ಶಕ್ತರಾದವರ,
41 : ಅಂದರೆ ಮೂವತ್ತು ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ 41,500.
42 : ನಫ್ತಾಲಿ ವಂಶದವರಲ್ಲಿ ಸೈನಿಕಸೇವೆ ಸಲ್ಲಿಸಲು ಶಕ್ತರಾದವರ,
43 : ಅಂದರೆ ಮೂವತ್ತು ವರ್ಷಮೇಲ್ಪಟ್ಟ ವಯಸ್ಸಿನ ಹಾಗೂ ಗೋತ್ರ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರಿಸಿ ಎಣಿಕೆಯಾದ ಗಂಡಸರ ಸಂಖ್ಯೆ 53,400.
44 : ಮೋಶೆ, ಆರೋನ್ ಮತ್ತು ಕುಲಪ್ರತಿನಿಧಿಗಳಾದ ಆ ಹನ್ನೆರಡು ಪ್ರಧಾನರು ಎಣಿಸಿದ ಇಸ್ರಯೇಲರ ಸಂಖ್ಯೆ ಇಷ್ಟು.
45 : ಹೀಗೆ ಇಸ್ರಯೇಲರಲ್ಲಿ ಎಣಿಕೆಯಾದ,
46 : ಅಂದರೆ ಮೂವತ್ತು ವರ್ಷ ಮೇಲ್ಪಟ್ಟ ವಯಸ್ಸಿನವರಾಗಿದ್ದು ಸೈನಿಕಸೇವೆ ಕೈಗೊಳ್ಳಲು ಶಕ್ತರಾಗಿದ್ದವರ ಒಟ್ಟು ಸಂಖ್ಯೆ 6,03,550.
47 : ಆದರೆ ಲೇವಿಕುಲದ ಕುಟುಂಬಗಳು ಮೇಲ್ಕಂಡ ಲೆಕ್ಕದಲ್ಲಿ ಸೇರಿರಲಿಲ್ಲ.
48 : ಏಕೆಂದರೆ ಸರ್ವೇಶ್ವರಸ್ವಾಮಿ ಮೋಶೆಗೆ ಹೀಗೆಂದು ಆಜ್ಞಾಪಿಸಿದ್ದರು:
49 : “ನೀನು ಇಸ್ರಯೇಲರನ್ನು ಎಣಿಸುವಾಗ ಲೇವಿಯರನ್ನು ಎಣಿಸಬಾರದು.
50 : ಆಜ್ಞಾಶಾಸನಗಳಿರುವ ಗುಡಾರವನ್ನು ಹಾಗು ಅದರ ಸಾಮಾನು ಸರಂಜಾಮುಗಳನ್ನು ನೋಡಿಕೊಳ್ಳುವುದಕ್ಕೆ ಅವರನ್ನು ನೇಮಿಸಬೇಕು. ಅವರು ಆ ಗುಡಾರವನ್ನು ಹಾಗು ಅದರ ಉಪಕರಣಗಳನ್ನು ಹೊರುವವರಾಗಿರಬೇಕು. ಅದರ ಸೇವೆಮಾಡುವವರಾಗಿ ಅದರ ಸುತ್ತಲೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು.
51 : ಹೊರಡುವಾಗ ಆ ಗುಡಾರವನ್ನು ಲೇವಿಯರೇ ಬಿಚ್ಚಬೇಕು; ಇಳಿದುಕೊಳ್ಳುವಾಗ ಲೇವಿಯರೇ ಅದನ್ನು ಹಾಕಬೇಕು. ಇತರರು ಹತ್ತಿರಕ್ಕೆ ಬಂದರೆ ಅವರಿಗೆ ಮರಣ ಶಿಕ್ಷೆಯಾಗಬೇಕು.
52 : ಇಸ್ರಯೇಲರೆಲ್ಲರ ಆಯಾ ಸೇನೆಗಳು ತಮ್ಮ ಡೇರೆಗಳನ್ನು ತಮ್ಮ ತಮ್ಮ ದಂಡಿನ ಧ್ವಜದ ಹತ್ತಿರ ಹಾಕಿಕೊಳ್ಳಬೇಕು.
53 : ಲೇವಿಯರು ಮಾತ್ರ ತಮ್ಮ ಡೇರೆಗಳನ್ನು ದೇವದರ್ಶನದ ಗುಡಾರದ ಸುತ್ತಲೂ ಹಾಕಿಕೊಳ್ಳಬೇಕು. ಹೀಗೆ ಮಾಡಿದರೆ ನನ್ನ ಕೋಪ ಇಸ್ರಯೇಲರ ಮೇಲೆ ಎರಗಲು ಆಸ್ಪದವಿರದು. ಲೇವಿಯರು ದೇವದರ್ಶನದ ಗುಡಾರವನ್ನು ಕಾಯುವವರಾಗಿರಬೇಕು.”
54 : ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಯೇಲರು ನಡೆದುಕೊಂಡರು. ದಂಡು ಹೊರಡುವ ಹಾಗೂ ಬೀಡುಬಿಡುವ ಕ್ರಮ

· © 2017 kannadacatholicbible.org Privacy Policy