Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ವಿಮೋಚನಕಾಂಡ


1 : “ಬಲಿಪೀಠವನ್ನು ಜಾಲೀಮರದಿಂದ ಮಾಡಿಸಬೇಕು. ಅದು ಐದು ಮೊಳ ಉದ್ದ, ಐದು ಮೊಳ ಅಗಲ ಹಾಗು ಮೂರು ಮೊಳ ಎತ್ತರವಿರಬೇಕು. ಅದನ್ನು ಚಚೌಕವಾಗಿ ಮಾಡಿಸಬೇಕು.
2 : ಅದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಂಬುಗಳನ್ನು ಮಾಡಿಸಬೇಕು. ಅವು ಬಲಿಪೀಠದ ಅಂಗವಾಗಿರಬೇಕು. ಆ ಪೀಠಕ್ಕೆ ತಾಮ್ರದ ತಗಡುಗಳನ್ನು ಹೊದಿಸಬೇಕು.
3 : ಅದರಲ್ಲಿರುವ ಬೂದಿಯನ್ನು ತೆಗೆಯುವುದಕ್ಕಾಗಿ ಬಟ್ಟಲುಗಳನ್ನು ಮಾಡಿಸಬೇಕು. ಸಲಿಕೆಗಳನ್ನು, ಬೋಗುಣಿಗಳನ್ನು, ಮುಳ್ಳುಗಳನ್ನು ಹಾಗು ಅಗ್ಗಿಷ್ಟಿಕೆಗಳನ್ನು ಕೂಡ ಮಾಡಿಸಬೇಕು. ಈ ಉಪಕರಣಗಳೆಲ್ಲಾ ತಾಮ್ರದವುಗಳಾಗಿರಬೇಕು
4 : ಪೀಠಕ್ಕೆ ಹೆಣಿಗೆ ಕೆಲಸದಿಂದ ತಾಮ್ರದ ಜಾಳಿಗೆಯನ್ನು ಮಾಡಿಸಬೇಕು. ಆ ಜಾಳಿಗೆಯ ನಾಲ್ಕು ಮೂಲೆಗಳಲ್ಲಿ ತಾಮ್ರದ ಬಳೆಗಳನ್ನು ಹಾಕಿಸಬೇಕು
5 : ಆ ಜಾಳಿಗೆಯು ಪೀಠದ ಸುತ್ತಲಿರುವ ಕಟ್ಟಿಗೆಯ ಕಟ್ಟೆಯ ಕೆಳಗೆ ಇದ್ದು, ಪೀಠದ ಬುಡದಿಂದ ನಡುವಿನ ತನಕ ಇರುವಂತೆ ಹಾಕಿಸಬೇಕು.
6 : ಪೀಠವನ್ನು ಹೊರುವ ಗುದಿಗೆಗಳನ್ನು ಜಾಲಿಮರದಿಂದ ಮಾಡಿಸಿ ತಾಮ್ರದ ತಗಡುಗಳನ್ನು ಹೊದಿಸಬೇಕು.
7 : ಆ ಗುದಿಗೆಗಳನ್ನು ಆ ಬಳೆಗಳಿಗೆ ಸೇರಿಸಿದಾಗ ಅವು ಬಲಿಪೀಠವನ್ನು ಹೊರುವುದಕ್ಕಾಗಿ ಅದರ ಎರಡು ಕಡೆಗಳಲ್ಲಿ ಇರುವುವು.
8 : ಆ ಬಲಿಪೀಠವನ್ನು ಹಲಗೆಗಳಿಂದ ಪೆಟ್ಟಿಗೆಯಂತೆ ಮಾಡಿಸಬೇಕು. ನಾನು ಬೆಟ್ಟದಲ್ಲಿ ನಿನಗೆ ತೋರಿಸಿದಂತೆಯೇ ಅದನ್ನು ಮಾಡಿಸಬೇಕು.
9 : “ಗುಡಾರಕ್ಕೆ ಅಂಗಳವನ್ನು ಏರ್ಪಡಿಸಬೇಕು. ಆ ಅಂಗಳದ ದಕ್ಷಿಣ ಕಡೆಯಲ್ಲಿ ತೆರೆಗಳು ಇರಬೇಕು, ಹುರಿನಾರಿನ ಬಟ್ಟೆಯಿಂದ ತಯಾರಿಸಿದ ಆ ತೆರೆಗಳು ನೂರುಮೊಳ ಉದ್ದವಿರಬೇಕು.
10 : ಆ ಕಡೆಯಲ್ಲಿ ಇಪ್ಪತ್ತು ಕಂಬಗಳು ಹಾಗು ಅವುಗಳಿಗೆ ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳೂ ಇರಬೇಕು. ಕಂಬಗಳಿಗೆ ಬೆಳ್ಳಿಯ ಕೊಂಡಿಗಳೂ ಇರಬೇಕು.
11 : ಅದೇ ರೀತಿ ಉತ್ತರ ಕಡೆಯಲ್ಲೂ ನೂರು ಮೊಳ ಉದ್ದದ ತೆರೆಗಳು, ಇಪ್ಪತ್ತು ಕಂಬಗಳು ಹಾಗು ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳೂ ಇರಬೇಕು. ಕಂಬಗಳ ಕೊಂಡಿಗಳು ಮತ್ತು ಕಟ್ಟುಗಳು ಬೆಳ್ಳಿಯಿಂದ ಮಾಡಿದವಾಗಿರಬೇಕು.
12 : ಪಶ್ಚಿಮ ಕಡೆಯಲ್ಲಿ ಅಂಗಳದ ಅಗಲಕ್ಕೆ ಐವತ್ತು ಮೊಳ ಉದ್ದವಾದ ತೆರೆಗಳು, ಹತ್ತು ಕಂಬಗಳು ಹಾಗು ಹತ್ತು ಗದ್ದಿಗೇಕಲ್ಲುಗಳು ಇರಬೇಕು.
13 : ಪೂರ್ವದಿಕ್ಕಿನಲ್ಲೂ ಅಂಗಳದ ಅಗಲವು ಐವತ್ತು ಮೊಳವಿರಬೇಕು
14 : ಅಲ್ಲೆ ಬಾಗಿಲಿನ ಎರಡು ಕಡೆಗಳಲ್ಲೂ ಹದಿನೈದು ಮೊಳ ಉದ್ದವಾದ ತೆರೆಗಳೂ ಅವುಗಳಿಗೆ ಮೂರುಮೂರು ಕಂಬಗಳೂ ಮೂರುಮೂರು ಗದ್ದಿಗೇಕಲ್ಲುಗಳೂ ಇರಬೇಕು
15 : ಅಲ್ಲೆ ಬಾಗಿಲಿನ ಎರಡು ಕಡೆಗಳಲ್ಲೂ ಹದಿನೈದು ಮೊಳ ಉದ್ದವಾದ ತೆರೆಗಳೂ ಅವುಗಳಿಗೆ ಮೂರುಮೂರು ಕಂಬಗಳೂ ಮೂರುಮೂರು ಗದ್ದಿಗೇಕಲ್ಲುಗಳೂ ಇರಬೇಕು
16 : ಅಂಗಳದ ಬಾಗಿಲಲ್ಲೇ ಇಪ್ಪತ್ತು ಮೊಳದ ಪರದೆ ಇರಬೇಕು. ಅದನ್ನು ಹುರಿನಾರಿನ ಬಟ್ಟೆಯಲ್ಲಿ ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದ ಕಸೂತಿ ಕೆಲಸದವರ ಕೈಯಿಂದ ಮಾಡಿಸಬೇಕು. ಬಾಗಿಲಿಗೆ ನಾಲ್ಕು ಕಂಬಗಳು ಮತ್ತು ನಾಲ್ಕು ಗದ್ದಿಗೇಕಲ್ಲುಗಳು ಇರಬೇಕು.
17 : ಅಂಗಳದ ಸುತ್ತಲಿರುವ ಎಲ್ಲ ಕಂಬಗಳಿಗೂ ಬೆಳ್ಳಿಯ ಕಟ್ಟುಗಳು, ಬೆಳ್ಳಿಯ ಕೊಂಡಿಗಳು ಹಾಗು ತಾಮ್ರದ ಗದ್ದಿಗೇಕಲ್ಲುಗಳು ಇರಬೇಕು.
18 : ಅಂಗಳವು ಮೂರು ಮೊಳ ಉದ್ದ ಹಾಗು ಐವತ್ತು ಮೊಳ ಅಗಲವಿರಬೇಕು. ಅದಕ್ಕೆ ಅದರ ಸುತ್ತಲಿರುವ ಪರದೆ ಹುರಿನಾರಿನ ಬಟ್ಟೆಯಿಂದ ಮಾಡಿದ್ದಾಗಿ ಐದು ಮೊಳ ಎತ್ತರವಿರಬೇಕು. ಅದಕ್ಕೆ ಸೇರಿದ ಗದ್ದಿಗೇ ಕಲ್ಲುಗಳು ತಾಮ್ರದವುಗಳಾಗಿರಬೇಕು
19 : ಗುಡಾರದ ಎಲ್ಲಾ ವಿಧ ಕೆಲಸಕ್ಕೆ ಬೇಕಾದ ಉಪಕರಣಗಳು, ಗುಡಾರದ ಹಾಗು ಅಂಗಳದ ಗೂಟಗಳು ತಾಮ್ರದವುಗಳಾಗಿರಬೇಕು.
20 : “ಆ ದೀಪವು ಯಾವಾಗಲೂ ಉರಿಯುತ್ತಿರಬೇಕು. ಅದಕ್ಕೆ ಎಣ್ಣೇ ಮರದ ಕಾಯಿಗಳನ್ನು ಕುಟ್ಟಿ ನಿರ್ಮಲವಾದ ಎಣ್ಣೆಯನ್ನು ತೆಗೆದುಕೊಡಬೇಕೆಂದು ಇಸ್ರಯೇಲರಿಗೆ ಅಪ್ಪಣೆಮಾಡು.
21 : ದೇವದರ್ಶನದ ಗುಡಾರದಲ್ಲಿ, ಆಜ್ಞಾಶಾಸನಗಳ ಮಂಜೂಷದ ಮುಂದಿರುವ ತೆರೆಯ ಹೊರಗೆ, ಆರೋನನು ಮತ್ತು ಅವನ ಮಕ್ಕಳು ಸಂಜೆಯಿಂದ ಮುಂಜಾನೆಯವರೆಗೆ ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ಆ ದೀಪವನ್ನು ಸರಿಪಡಿಸುತ್ತಾ ಉರಿಸುತ್ತಿರಬೇಕು. ಈ ನಿಯಮವನ್ನು ಇಸ್ರಯೇಲರು ಮತ್ತು ಅವರ ಸಂತತಿಯವರು ತಲತಲಾಂತರದವರೆಗೂ ಅನುಸರಿಸಬೇಕು.

· © 2017 kannadacatholicbible.org Privacy Policy