Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಜೆಕಿಯೇಲ


1 : ಆ ಕುಲಗಳ ಹೆಸರುಗಳು ಇವು: ನಾಡಿನ ಉತ್ತರದಲ್ಲಿ ಹಮಾತ್ ಸೀಮೆಯ ಹತ್ತಿರ ದಾನಿಗೆ ಒಂದು ಪಾಲು; ಅದರ ಉತ್ತರದ ಮೇರೆ ಹೆತ್ಲೋನಿನ ದಾರಿಯ ಪಕ್ಕದಲ್ಲಿ ಹೊರಟು ಹಮಾತಿನ ದಾರಿಯನ್ನು ದಾಟಿ ದಮಸ್ಕದ ಸರಹದ್ದಿನಲ್ಲಿರುವ ಹಚರ್ ಏನಾನಿನವರೆಗೆ ಹಬ್ಬುವುದು;
2 : ಅದರ ಪಾಶ್ರ್ವಗಳು ನಾಡಿನ ಪೂರ್ವ ಪಶ್ಚಿಮಗಳ ಎಲ್ಲೆಗಳ ತನಕ ಚಾಚಿಕೊಂಡಿರುವುವು.
3 : ದಾನಿನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ನಫ್ತಾಲಿಗೆ ಒಂದು ಪಾಲು.
4 : ನಫ್ತಾಲಿಯ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಮನಸ್ಸೆಗೆ ಒಂದು ಪಾಲು.
5 : ಮನಸ್ಸೆಯ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಎಫ್ರಯಿಮಿಗೆ ಒಂದು ಪಾಲು.
6 : ಎಫ್ರಯಿಮಿನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ರೂಬೇನಿಗೆ ಒಂದು ಪಾಲು.
7 : ರೂಬೇನಿನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಯೆಹೂದಕ್ಕೆ ಒಂದು ಪಾಲು.
8 : ಜುದೇಯದ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ನೀವು ಮೀಸಲಾಗಿ ಸಮರ್ಪಿಸುವ ಪಾಲು ಇರುವುದು; ಅದರ ಅಗಲ ಹನ್ನೆರಡುವರೆ ಕಿಲೋಮೀಟರ್, ಉದ್ದ ಪಶ್ಚಿಮದಿಂದ ಪೂರ್ವಕ್ಕೆ ಕುಲಗಳ ಪಾಲುಗಳ ಉದ್ದಕ್ಕೆ ಸರಿಸಮಾನ; ಅದರ ಮಧ್ಯದಲ್ಲಿ ಪವಿತ್ರಾಲಯವಿರುವುದು.
9 : ನೀವು ಮೀಸಲು ಭೂಮಿಯಲ್ಲಿ ಸರ್ವೇಶ್ವರನಿಗೆ ವಿಶೇಷವಾದ ಮೀಸಲಾಗಿ ಸಮರ್ಪಿಸುವ ಪಾಲಿನ ಉದ್ದ ಹನ್ನೆರಡುವರೆ ಕಿಲೋಮೀಟರ್, ಅಗಲ ಐದು ಕಿಲೋಮೀಟರ್.
10 : ಮೀಸಲಾದ ಆ ಪವಿತ್ರಕ್ಷೇತ್ರವು ಯಾಜಕರಿಗೆ ಸಲ್ಲತಕ್ಕದ್ದು. ಉತ್ತರದಲ್ಲಿ ಅದರ ಉದ್ದವು ಹನ್ನೆರಡುವರೆ ಕಿಲೋಮೀಟರ್, ಪಶ್ಚಿಮದಲ್ಲಿ ಅಗಲವು ಐದು ಕಿಲೋಮೀಟರ್, ಪೂರ್ವದಲ್ಲಿ ಅಗಲವು ಐದು ಕಿಲೋಮೀಟರ್, ಉತ್ತರದಲ್ಲಿ ಉದ್ದವು ಹನ್ನೆರಡುವರೆ ಕಿಲೋಮೀಟರ್. ಅದರ ಮಧ್ಯೆ ಸರ್ವೇಶ್ವರನ ಪವಿತ್ರಾಲಯವಿರುವುದು.
11 : ಆ ಕ್ಷೇತ್ರ ಚಾದೋಕನ ಸಂತಾನದವರಲ್ಲಿ ನನಗಾಗಿ ಪ್ರತಿಷ್ಠಿತರು ಹಾಗು ನನ್ನ ಆಲಯದ ಪಾರುಪತ್ಯವನ್ನು ನೆರವೇರಿಸಿದವರು ಆದ ಯಾಜಕರಿಗೇ ಸೇರತಕ್ಕದ್ದು. ಇಸ್ರಯೇಲರು ನನ್ನನ್ನು ತೊರೆದಾಗ ಲೇವಿಯರೂ ತೊರೆದಂತೆ ಇವರು ತೊರೆಯಲಿಲ್ಲ.
12 : ಲೇವಿಯರ ಪಾಲಿನ ಸರಹದ್ದಿಗೆ ಪಕ್ಕದಲ್ಲಿರುವ ಆ ಕ್ಷೇತ್ರ್ರ ಅಪವಿತ್ರವೂ ನಾಡಿನಲ್ಲಿನ ಮೀಸಲಲ್ಲಿ ಮೀಸಲೂ ಆಗಿ ಯಾಜಕರದಾಗಿರುವುದು.
13 : ಹನ್ನೆರಡುವರೆ ಕಿಲೋಮೀಟರ್ ಉದ್ದದ, ಐದು ಕಿಲೋಮೀಟರ್ ಅಗಲದ, ಒಂದು ಪಾಲು, ಯಾಜಕರ ಪಾಲಿನ ಸರಹದ್ದಿಗೆ ಪಕ್ಕದಲ್ಲಿ, ಲೇವಿಯರಿಗೆ ಸಲ್ಲತಕ್ಕದ್ದು; ಈ ಎರಡು ಪಾಲುಗಳ ಒಟ್ಟಳತೆ ಎಷ್ಟೆಂದರೆ ಉದ್ದ ಹನ್ನೆರಡುವರೆ ಕಿಲೋಮೀಟರ್, ಅಗಲ ಹತ್ತು ಕಿಲೋಮೀಟರ್.
14 : ಆ ಕ್ಷೇತ್ರ ಸರ್ವೇಶ್ವರನಿಗೆ ಮೀಸಲಾದುದರಿಂದ ಅದರಲ್ಲಿ ಯಾವ ಭಾಗವನ್ನೂ ಮಾರಬಾರದು, ಅದಲುಬದಲು ಮಾಡಕೂಡದು. ನಾಡಿನ ಆ ಶ್ರೇಷ್ಠಾಂಶ ಪರರವಶವಾಗದಿರಲಿ.
15 : ಹನ್ನೆರಡುವರೆ ಕಿಲೋಮೀಟರ್ ಉದ್ದದ ಆ ಕ್ಷೇತ್ರದ ಪಕ್ಕದಲ್ಲಿ, (ಮೀಸಲುಪಾಲಿನ ಒಟ್ಟಳತೆಯಲ್ಲಿ), ಮಿಕ್ಕ ಎರಡುವರೆ ಕಿಲೋಮೀಟರ್ ಅಗಲದ ಭೂಮಿ ಮೀಸಲಿಲ್ಲವೆಂದೆಣಿಸಿ, ರಾಜಧಾನಿಗೆ ಅಂದರೆ, ಜನರ ನಿವಾಸಕ್ಕೂ ಸುತ್ತಣ ಪ್ರದೇಶಕ್ಕೂ ಪ್ರತ್ಯೇಕವಾಗಿರಲಿ. ರಾಜಧಾನಿ ಅದರ ಮಧ್ಯದಲ್ಲಿರಲಿ.
16 : ರಾಜಧಾನಿಯ ಅಳತೆ ಹೀಗಿರಬೇಕು: ಉತ್ತರದ ಪಕ್ಕವು 2,240 ಮೀಟರ್, ದಕ್ಷಿಣದ ಪಕ್ಕವು 2,250 ಮೀಟರ್, ಪೂರ್ವದ ಪಕ್ಕವು 2,250 ಮೀಟರ್, ಪಶ್ಚಿಮದ ಪಕ್ಕವು 2,250 ಮೀಟರ್.
17 : ರಾಜಧಾನಿಗೆ ಸುತ್ತಣ ಪ್ರದೇಶವಿರಬೇಕು; ಅದರ ಅಗಲ ಉತ್ತರದಲ್ಲಿ 125 ಮೀಟರ್, ದಕ್ಷಿಣದಲ್ಲಿ 125 ಮೀಟರ್, ಪೂರ್ವದಲ್ಲಿ 125 ಮೀಟರ್, ಪಶ್ಚಿಮದಲ್ಲಿ 125 ಮೀಟರ್.
18 : ರಾಜಧಾನಿ ಹೊರತು ಅದಕ್ಕೆ ಒಳಪಟ್ಟ ಮಿಕ್ಕ ಭೂಮಿಯ ಉದ್ದ ಮೀಸಲಾದ ಪವಿತ್ರ ಕ್ಷೇತ್ರದ ಪಕ್ಕದಲ್ಲಿ ಪೂರ್ವದ ಕಡೆ ಐದು ಕಿಲೋಮೀಟರ್, ಪಶ್ಚಿಮದ ಕಡೆ ಐದು ಕಿಲೋಮೀಟರ್. ಆ ಭೂಮಿ ಮೀಸಲಾದ ಪವಿತ್ರ ಕ್ಷೇತ್ರದ ಎಲ್ಲೆಯನ್ನು ಅನುಸರಿಸಿರುವುದು; ಅದರ ಉತ್ಪತ್ತಿಯು ಅದನ್ನು ಕೃಷಿಮಾಡುವ ಆ ಪುರನಿವಾಸಿಗಳಿಗೆ ಆಹಾರವಾಗುವುದು.
19 : ಅವರು ಇಸ್ರಯೇಲಿನ ಯಾವ ಕುಲಕ್ಕೆ ಸೇರಿದ್ದರೂ ಪುರದಲ್ಲಿ ವಾಸಿಸುತ್ತಾ ಆ ಭೂಮಿಯನ್ನು ಕೃಷಿಮಾಡುವರು.
20 : ಮೀಸಲಾದ ಪೂರ್ಣ ಕ್ಷೇತ್ರದ ಉದ್ದ ಹನ್ನೆರಡುವರೆ ಕಿಲೋಮೀಟರ್, ಅಗಲ ಹನ್ನೆರಡುವರೆ ಕಿಲೋಮೀಟರ್; ನೀವು ಮೀಸಲಾಗಿ ಅರ್ಪಿಸುವ ಪವಿತ್ರ ಕ್ಷೇತ್ರ ರಾಜಧಾನಿಗೆ ಒಳಪಟ್ಟ ಭೂಮಿ ಸಹಿತವಾಗಿ ಚಚ್ಚೌಕವಾಗಿರಬೇಕು.
21 : ಮೀಸಲಾದ ಪವಿತ್ರಕ್ಷೇತ್ರದ ಮತ್ತು ರಾಜಧಾನಿಗೆ ಒಳಪಟ್ಟ ಭೂಮಿಯ ಎರಡು ಕಡೆಗಳಲ್ಲಿ ಮಿಕ್ಕ ಭೂಮಿ ರಾಜನ ಪಾಲಾಗಿರಲಿ; ಆ ಪಾಲು ಮೀಸಲಾದ ಕ್ಷೇತ್ರದ ಪೂರ್ವದ ಕಡೆ ಹನ್ನೆರಡುವರೆ ಕಿಲೋಮೀಟರ್ ಉದ್ದದ ಎಲ್ಲೆಯ ಪಕ್ಕದಲ್ಲೂ ಪೂರ್ವದ ಕಡೆ ಹನ್ನೆರಡುವರೆ ಕಿಲೋಮೀಟರ್ ಉದ್ದದ ಎಲ್ಲೆಯ ಪಕ್ಕದಲ್ಲೂ ಕುಲಗಳ ಪಾಲಿನಷ್ಟು ಉದ್ದವಾಗಿ ಹಬ್ಬುವುದು; ಅದು ರಾಜನದು; ಮೀಸಲಾದ ಪವಿತ್ರಕ್ಷೇತ್ರ ಹಾಗು ಪವಿತ್ರಾಲಯ ಅದರ ಎರಡು ಭಾಗಗಳ ಮಧ್ಯೆ ಇರುವುವು;
22 : ರಾಜನ ಪಾಲಿನ ಎರಡು ಭಾಗಗಳ ನಡುವಣ ಲೇವಿಯರ ಪಾಲಿನ ಉತ್ತರದ ಮೇರೆಯಿಂದ ರಾಜಧಾನಿಗೆ ಒಳಪಟ್ಟ ಭೂಮಿಯ ದಕ್ಷಿಣ ಮೇರೆಯ ತನಕ ಅಂದರೆ ಯೆಹೂದ್ಯದ ದಕ್ಷಿಣ ಸರಹದ್ದಿನಿಂದ ಬೆನ್ಯಾಮೀನಿನ ಸರಹದ್ದಿನವರೆಗೆ ರಾಜನ ಪಾಲು ಹರಡಿರುವುದು.
23 : ಮಿಕ್ಕ ಕುಲಗಳ ಪಾಲಿನ ಕ್ರಮವೇನೆಂದರೆ: ಪೂರ್ವದಿಂದ ಪಶ್ಚಿಮದ ತನಕ ಬೆನ್ಯಾಮೀನಿಗೆ ಒಂದು ಪಾಲು;
24 : ಬೆನ್ಯಾಮೀನಿನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಸಿಮೆಯೋನಿಗೆ ಒಂದು ಪಾಲು;
25 : ಸಿಮೆಯೋನಿನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಇಸ್ಸಾಕಾರಿಗೆ ಒಂದು ಪಾಲು;
26 : ಇಸ್ಸಾಕಾರಿನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಜೆಬುಲೂನಿಗೆ ಒಂದು ಪಾಲು;
27 : ಜೆಬುಲೂನಿನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಗಾದಿಗೆ ಒಂದು ಪಾಲು;
28 : ಗಾದಿನ ತೆಂಕಣ ಸರಹದ್ದಿನಲ್ಲಿ ನಾಡಿನ ಮೇರೆಯು ತಾಮಾರಿನಿಂದ ಹೊರಟು ಮೇರೀಬತ್ ಕಾದೇಶಿನ ಹಳ್ಳವನ್ನು ದಾಟಿ ಈಜಿಪ್ಟಿನ ಮುಂದಣ ತೊರೆಯ ಮಾರ್ಗವಾಗಿ ದೊಡ್ಡ ಸಮುದ್ರಕ್ಕೆ ಮುಟ್ಟುವುದು.
29 : ನೀವು ಇಸ್ರಯೇಲಿನ ಕುಲಗಳಿಗೆ ಸೊತ್ತಾಗಿ ಹಂಚಿಕೊಡಬೇಕಾದ ನಾಡು ಇದೇ; ಕುಲಗಳ ಪಾಲುಗಳೂ ಇವೇ; ಇದು ಸರ್ವೇಶ್ವರನಾದ ದೇವರ ನುಡಿ.
30 : ರಾಜಧಾನಿಯ ಗಡಿಗಳು ಹೀಗಿರಬೇಕು: ಉತ್ತರದ ಗಡಿಯ ಉದ್ದ 2,250 ಮೀಟರ್;
31 : ಪಟ್ಟಣದ ಬಾಗಿಲುಗಳಿಗೆ ಇಸ್ರಯೇಲಿನ ಕುಲಗಳ ಆಯಾ ಹೆಸರುಗಳು ಇರಲಿ; ಉತ್ತರದಲ್ಲಿ ಮೂರು ಬಾಗಿಲುಗಳು; ಒಂದು ರೂಬೇನ್ ಬಾಗಿಲು, ಇನ್ನೊಂದು ಯೆಹೂದ್ಯ ಬಾಗಿಲು, ಮತ್ತೊಂದು ಲೇವಿಬಾಗಿಲು.
32 : ಪೂರ್ವದ ಗಡಿಯ ಉದ್ದ 2,250 ಮೀಟರ್; ಅದರಲ್ಲಿ ಮೂರು ಬಾಗಿಲುಗಳು; ಒಂದು ಜೋಸೆಫ್ ಬಾಗಿಲು; ಇನ್ನೊಂದು ಬೆನ್ಯಾಮೀನ್ ಬಾಗಿಲು, ಮತ್ತೊಂದು ದಾನ್ ಬಾಗಿಲು.
33 : ದಕ್ಷಿಣದ ಗಡಿಯ ಉದ್ದ 2,250 ಮೀಟರ್; ಅದರಲ್ಲಿ ಮೂರು ಬಾಗಿಲುಗಳು; ಒಂದು ಸಿಮೆಯೋನ್ ಬಾಗಿಲು, ಇನ್ನೊಂದು ಇಸ್ಸಾಕಾರ್ ಬಾಗಿಲು, ಮತ್ತೊಂದು ಜೆಬುಲೂನ್ ಬಾಗಿಲು.
34 : ಪಶ್ಚಿಮದ ಗಡಿಯ ಉದ್ದ 2,250 ಮೀಟರ್; ಅದರಲ್ಲಿ ಮೂರು ಬಾಗಿಲುಗಳು; ಒಂದು ಗಾದ್‍ಬಾಗಿಲು, ಇನ್ನೊಂದು ಆಶೇರ್ ಬಾಗಿಲು; ಮತ್ತೊಂದು ನಫ್ತಾಲಿ ಬಾಗಿಲು.
35 : ಪಟ್ಟಣದ ಸುತ್ತಳತೆ ಒಂಬತ್ತು ಸಾವಿರ ಮೀಟರ್‍ಗಳು. ಅದನ್ನು ನಿರ್ಮಿಸಿದಂದಿನಿಂದ ಆ ಪಟ್ಟಣಕ್ಕೆ ‘ಸರ್ವೇಶ್ವರನ ನೆಲೆ’ ಎಂದು ಹೆಸರಾಗುವುದು.

· © 2017 kannadacatholicbible.org Privacy Policy