Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಜೆಕಿಯೇಲ


1 : ಆಮೇಲೆ ಅವನು ನನ್ನನ್ನು ಉತ್ತರದ ಮಾರ್ಗವಾಗಿ ಹೊರಗಣ ಪ್ರಾಕಾರಕ್ಕೆ ಬರಮಾಡಿ ದೀಕ್ಷಿತರ ಪ್ರಾಕಾರಕ್ಕೂ ಉತ್ತರದ ಪೌಳಿಗೋಡೆಗಳಿಗೂ ನಡುವಣ ಕೋಣೆಗಳಿಗೆ ಕರೆದುತಂದು
2 : ಉತ್ತರದ ಬಾಗಿಲುಳ್ಳ ಕೋಣೆಗಳ ಸಾಲಿನ ಮುಂದೆ ನಿಲ್ಲಿಸಿದನು. ಆ ಸಾಲಿನ ಉದ್ದ ಐವತ್ತು ಮೀಟರ್.
4 : ಆ ಸಾಲುಗಳ ನಡುವೆ ಐವತ್ತು ಮೀಟರ್ ಉದ್ದದ, ಐದು ಮೀಟರ್ ಅಗಲದ ಓಣಿಯೊಂದಿತ್ತು; ಕೋಣೆಗಳ ಬಾಗಿಲುಗಳು ಉತ್ತರದ ಕಡೆಗಿದ್ದವು.
5 : ಮೇಲಣ ಕೋಣೆಗಳು ನಡುವಣ ಮತ್ತು ಕೆಳಗಣ ಕೋಣೆಗಳಿಗಿಂತ ಇಕ್ಕಟ್ಟಾಗಿದ್ದವು. ಅಂಚಿನ ದಾರಿಗಳು ಅವುಗಳ ಅಗಲವನ್ನು ತಿಂದುಬಿಟ್ಟಿದ್ದವು.
7 : ಹೊರಗಿನ ಪ್ರಾಕಾರದ ಕಡೆಗಿರುವ ಕೋಣೆಗಳ ಸಾಲಿಗೆ ಸಮವಾಗಿ ಹೊರಗೋಡೆಯೊಂದಿತ್ತು. ಅದು ಇಪ್ಪತ್ತೈದು ಮೀಟರ್ ಉದ್ದವಾಗಿ ಎರಡನೆಯ ಸಾಲಿಗೆ ಎದುರಾಗಿತ್ತು.
8 : ಹೊರಗಣ ಪ್ರಾಕಾರದ ಕಡೆಗಿರುವ ಕೋಣೆಗಳ ಸಾಲಿನ ಉದ್ದವು ಇಪ್ಪತ್ತೈದು ಮೀಟರ್, ದೇವಸ್ಥಾನದ ಕಡೆಗಿರುವ ಕೋಣೆಗಳ ಸಾಲಿನ ಉದ್ದವು ಐವತ್ತು ಮೀಟರ್.
9 : ಕೋಣೆಗಳ ಪ್ರಾಕಾರದ ಪೂರ್ವದಲ್ಲಿ ಕೆಳಗಿನ ಮಟ್ಟದಲ್ಲಿ ಆ ಪ್ರಾಕಾರದ ಗೋಡೆಯ ನಡುವೆ ಹೊರಗಿನ ಪ್ರಾಕಾರದಿಂದ ಅಲ್ಲಿಗೆ ಸೇರುವ ಮಾರ್ಗವಿತ್ತು.
10 : ಇದಲ್ಲದೆ, ಪೂರ್ವದಕಡೆ ದೀಕ್ಷಿತರ ಪ್ರಾಕಾರಕ್ಕೂ ಪೌಳಿಗೋಡೆಗೂ ನಡುವೆ ಕೊಠಡಿಗಳಿದ್ದವು.
11 : ಇವುಗಳ ಮುಂದೆ ಓಣಿಯೊಂದಿತ್ತು; ಅವು ಉತ್ತರದ ಕೋಣೆಗಳಂತೆ ಕಾಣಿಸುತ್ತಿದ್ದವು. ಇವುಗಳ ಉದ್ದ ಹಾಗು ಅಗಲ ಅವುಗಳ ಉದ್ದ ಹಾಗು ಅಗಲ ಒಂದೆ. ಇವುಗಳ ರಚನಾ ಕ್ರಮದ್ವಾರ, ನಿರ್ಗಮಸ್ಥಾನಗಳೆಲ್ಲವೂ ಅವುಗಳಂತಿದ್ದವು. ದಕ್ಷಿಣ ಕೋಣೆಗಳು ಹಾಗೆಯೇ ಇದ್ದವು.
12 : ಕೋಣೆಗಳ ಪ್ರಾಕಾರವನ್ನು ಪೂರ್ವದಲ್ಲಿ ಸೇರುವ ಕಡೆ, ಗೋಡೆಯ ಪಕ್ಕದಲ್ಲಿ ಇರುವ ದಾರಿಯ ಕೊನೆಯಲ್ಲಿ ಒಂದು ಬಾಗಿಲಿತ್ತು.
13 : ಆಗ ನನಗೆ, ‘ದೀಕ್ಷಿತರ ಪ್ರಾಕಾರದ ಉತ್ತರ ದಕ್ಷಿಣ ಕಡೆಗಳಲ್ಲಿನ ಕೋಣೆಗಳು ಪರಿಶುದ್ಧವಾದವು; ಅಲ್ಲಿ ಸರ್ವೇಶ್ವರನ ಸನ್ನಿಧಿ ಸೇವಕರಾದ ಯಾಜಕರು ಮಹಾಪರಿಶುದ್ಧ ಪದಾರ್ಥಗಳನ್ನು ಭುಜಿಸುತ್ತಾರೆ, ಮತ್ತು ಧಾನ್ಯ ನೈವೇದ್ಯ ದೋಷಪರಿಹಾರಕಬಲಿದ್ರವ್ಯ, ಪ್ರಾಯಶ್ಚಿತ್ತಬಲಿದ್ರವ್ಯ ಎಂಬೀ ಮಹಾಪರಿಶುದ್ಧ ಪದಾರ್ಥಗಳನ್ನು ಅಲ್ಲಿಡುತ್ತಾರೆ. ಆ ಸ್ಥಳ ಪರಿಶುದ್ಧ.
14 : ಯಾಜಕರು ಪರಿಶುದ್ಧ ಪ್ರಾಕಾರವನ್ನು ಪ್ರವೇಶಿಸಿದ ಮೇಲೆ ಅದನ್ನು ಬಿಟ್ಟು ಹೊರಗಿನ ಪ್ರಾಕಾರಕ್ಕೆ ಹೋಗಕೂಡದು; ತಮ್ಮ ದೀಕ್ಷಾವಸ್ತ್ರಗಳನ್ನು ಅಲ್ಲೇ ತೆಗೆದಿಟ್ಟು ಕೊಳ್ಳಬೇಕು, ಅವೂ ಪರಿಶುದ್ಧವಾದುವು. ಆಮೇಲೆ ಬೇರೆ ವಸ್ತ್ರಗಳನ್ನು ಹಾಕಿಕೊಂಡು ಜನಸಾಮಾನ್ಯರ ಪ್ರಾಕಾರಕ್ಕೆ ಬರುತ್ತಾರೆ,’ ಎಂದನು.
15 : ಆ ಪುರುಷನು ಒಳಗಿನ ಮಂದಿರವನ್ನು ಅಳೆದ ನಂತರ ನನ್ನನ್ನು ಪೂರ್ವಹೆಬ್ಬಾಗಿಲ ಮಾರ್ಗವಾಗಿ ಈಚೆಗೆ ಕರೆದುತಂದು ಆಲಯವನ್ನೆಲ್ಲಾ ಸುತ್ತಮುತ್ತಲು ಅಳೆದನು.
16 : ಪೂರ್ವದಿಕ್ಕಿನಲ್ಲಿ ಉದ್ದಕ್ಕೂ ಅಳತೇ ಕೋಲಿನಿಂದ ಐನೂರು ಕೋಲಳೆದನು.
17 : ಉತ್ತರ ದಿಕ್ಕಿನಲ್ಲಿ ಉದ್ದಕ್ಕೂ ಅಳತೇಕೋಲಿನಿಂದ ಐನೂರು ಕೋಲಳೆದನು.
18 : ಪಶ್ಚಿಮ ಗೋಡೆಯ ಕಡೆಗೆ ತಿರುಗಿಕೊಂಡು ಅಳತೇಕೋಲಿನಿಂದ ಐನೂರು ಕೋಲಳೆದನು.
19 : ದಕ್ಷಿಣ ದಿಕ್ಕಿನಲ್ಲಿ ಉದ್ದಕ್ಕೂ ಅಳತೇ ಕೋಲಿನಿಂದ ಐನೂರು ಕೋಲಳೆದನು.
20 : ಆಲಯವನ್ನು ನಾಲ್ಕು ಪಾಶ್ರ್ವಗಳಲ್ಲಿಯೂ ಅಳೆದನು; ಪರಿಶುದ್ಧವಾದ ಮತ್ತು ಅಪರಿಶುದ್ಧವಾದ ಪ್ರದೇಶಗಳನ್ನು ವಿಂಗಡಿಸುವುದಕ್ಕೆ ಐನೂರಳತೇ ಕೋಲುದ್ದದ, ಐನೂರಳತೇ ಕೋಲಗಲದ ಗೋಡೆ ಸುತ್ತಮುತ್ತಲಿತ್ತು.

· © 2017 kannadacatholicbible.org Privacy Policy