1 :
ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ನೇರೀಯನ ಮಗ ಬಾರೂಕನು ಯೆರೆಮೀಯನ ಮಾತುಗಳನ್ನು ಅವನ ಬಾಯಿಂದ ಬಂದ ಹಾಗೆಯೇ ಪುಸ್ತಕದಲ್ಲಿ ಬರೆದನು. ಆಗ ಪ್ರವಾದಿ ಯೆರೆಮೀಯನು ಸರ್ವೇಶ್ವರನ ಆಜ್ಞೆಯ ಪ್ರಕಾರ ಈ ವಾಕ್ಯವನ್ನು ಬಾರೂಕನಿಗೆ ನುಡಿದನು.
2 : “ಬಾರೂಕನೇ, ಇಸ್ರಯೇಲಿನ ದೇವರಾದ ಸರ್ವೇಶ್ವರಸ್ವಾಮಿ ನಿನಗೆ ಹೇಳುವುದನ್ನು ಕೇಳು: ನೀನು, ‘ಅಯ್ಯೋ, ನನಗೆ ಕೇಡು!
3 : ವ್ಯಥೆಪಡುತ್ತಿದ್ದ ನನಗೆ ಸರ್ವೇಶ್ವರ ದುಃಖದ ಮೇಲೆ ದುಃಖ ಕಳುಹಿಸಿದ್ದಾರೆ. ನಾನು ನರಳಿ ದಣಿದು ಹೋಗಿದ್ದೇನೆ. ನನಗೆ ಯಾವ ನೆಮ್ಮದಿಯೂ ದೊರಕದಿದೆ’ ಎಂದು ಹೇಳುತ್ತಿರುವೆ ಅಲ್ಲವೆ?
4 : “ಸರ್ವೇಶ್ವರನ ಈ ವಾಣಿಯನ್ನು ಕೇಳು: ‘ನೋಡು, ನಾನು ಕಟ್ಟಿದ್ದನ್ನು ನಾನೇ ಕೆಡವುತ್ತೇನೆ. ನಾನು ನೆಟ್ಟಿದ್ದನ್ನು ನಾನೇ ಕಿತ್ತು ಹಾಕುತ್ತೇನೆ. ಹೌದು, ಜಗದಲ್ಲೆಲ್ಲ ಹಾಗೆ ಮಾಡುತ್ತೇನೆ.
5 : ನಿನಗೆ ಮಾತ್ರ ಪ್ರತ್ಯೇಕ ಸ್ಥಾನಮಾನಗಳನ್ನು ನಿರೀಕ್ಷಿಸುತ್ತಿಯೋ? ನಿರೀಕ್ಷಿಸಬೇಡ. ಹೌದು, ಮಾನವ ಜನಾಂಗವನ್ನೇ ನಾನು ದಂಡಿಸಲಿದ್ದೇನೆ. ಆದರೆ ನೀನು ಎಲ್ಲಿಗೆ ಹೋದರೂ ನಿನ್ನ ಪ್ರಾಣವೊಂದನ್ನು ಕೊಳ್ಳೆಯಂತೆ ಉಳಿಸಿಕೊಳ್ಳಲಿಕ್ಕೆ ಅವಕಾಶ ನೀಡುತ್ತೇನೆ. ಇದು ಸರ್ವೇಶ್ವರನಾದ ನನ್ನ ನುಡಿ.”