Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆರೆವಿೂಯ


1 : ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು, ಅವನ ಸಮಸ್ತ ಸೈನ್ಯವು, ಅವನ ಕೈಕೆಳಗಿನ ಭೂರಾಜರೆಲ್ಲರು ಹಾಗೂ ಸಕಲ ಪ್ರಜೆಗಳು ಜೆರುಸಲೇಮಿಗೂ ಅದಕ್ಕೆ ಸೇರಿದ ಎಲ್ಲ ಊರುಗಳಿಗೂ ವಿರುದ್ಧ ಯುದ್ಧ ಮಾಡುತ್ತಿದ್ದಾ ಸರ್ವೇಶ್ವರ ಯೆರೆಮೀಯನಿಗೆ ಈ ವಿಷಯವನ್ನು ತಿಳಿಸಿದರು:
2 : “ಇಸ್ರಯೇಲರ ದೇವರಾದ ಸರ್ವೇಶ್ವರನಾದ ನನ್ನ ನುಡಿ ಇದು: ನೀನು ಜುದೇಯದ ಅರಸ ಚಿದ್ಕೀಯನ ಬಳಿಗೆ ಹೋಗಿ ಅವನಿಗೆ ಹೀಗೆಂದು ಹೇಳು – ‘ಸರ್ವೇಶ್ವರನ ಮಾತನ್ನು ಆಲಿಸು: ಇಗೋ, ನಾನು ಈ ನಗರವನ್ನು ಬಾಬಿಲೋನಿನ ಅರಸನ ಕೈವಶಮಾಡುವೆನು. ಅವನು ಇದನ್ನು ಬೆಂಕಿಯಿಂದ ಸುಟ್ಟುಹಾಕುವನು.
3 : ನೀನು ಅವನ ಕೈಯಿಂದ ತಪ್ಪಿಸಿಕೊಳ್ಳಲಾರದೆ ಬಂಧಿತನಾಗಿ ಅವನ ವಶವಾಗುವೆ. ಬಾಬಿಲೋನಿನ ಅರಸನ ಸಮಕ್ಷಮದಲ್ಲಿ ನಿಲ್ಲುವೆ. ಅವನು ನಿನ್ನೊಡನೆ ಮುಖಾಮುಖಿಯಾಗಿ ಮಾತಾಡುವನು. ನೀನು ಬಾಬಿಲೋನಿಗೆ ಗಡಿ ಪಾರಾಗುವೆ.
4 : ಆದರೂ ಜುದೇಯದ ಅರಸನಾದ ಚಿದ್ಕೀಯನೇ, ಸರ್ವೇಶ್ವರನ ಮಾತನ್ನು ಕೈಗೊಳ್ಳು; ಸರ್ವೇಶ್ವರ ನಿನ್ನ ವಿಷಯವಾಗಿ ಹೀಗೆನ್ನುತ್ತಾರೆ - ನೀನು ಕತ್ತಿಯಿಂದ ಹತನಾಗುವುದಿಲ್ಲ.
5 : ನೆಮ್ಮದಿಯಿಂದ ಸಾಯುವೆ. ನಿನಗಿಂತ ಮುಂಚೆ, ನಿನ್ನ ಪೂರ್ವಜರಾದ ದಿವಂಗತ ಅರಸರ ಸ್ಮರಣಾರ್ಥ ಜನರು ಧೂಪ ಹಾಕಿದ ಪ್ರಕಾರ ನಿನಗೂ ಹಾಕುವರು. ‘ಅಯ್ಯೋ ಒಡೆಯಾ’ ಎಂದು ನಿನಗಾಗಿ ಗೋಳಾಡುವರು. ಇದು ನನ್ನ ನುಡಿ,’ ಎಂದಿದ್ದಾರೆ ಸರ್ವೇಶ್ವರ.”
6 : ಅಂತೆಯೇ, ಪ್ರವಾದಿ ಯೆರೆಮೀಯನು ಈ ವಿಷಯಗಳನ್ನೆಲ್ಲ ಜುದೇಯದ ಅರಸ ಚಿದ್ಕೀಯನಿಗೆ ಜೆರುಸಲೇಮಿನಲ್ಲೆ ತಿಳಿಸಿದನು.
7 : ಸರ್ವೇಶ್ವರನಾದ ನಾನು ಹೇಳುವುದನ್ನು ಕೇಳು: ಹಗಲಿರುಳೆಂಬ ಸ್ಥಿರವಾದ ನಿಬಂಧನೆಯನ್ನು ನಾನು ಮಾಡದೆ ಹೋಗಿದ್ದರೆ, ಭೂಮ್ಯಾಕಾಶಗಳಿಗೆ ನಿಯಮವನ್ನು ನಾನು ವಿಧಿಸದೆ ಹೋಗಿದ್ದರೆ, ಆಗ ಮಾತ್ರ ನಾನು ಯಕೋಬನ ಸಂತಾನದವರನ್ನು ತ್ಯಜಿಸುತ್ತಿದ್ದೆ. ಅಬ್ರಹಾಮ, ಇಸಾಕ, ಯಕೋಬ ಇವರ ಸಂತತಿಯನ್ನು ಆಳತಕ್ಕ ಒಡೆಯನನ್ನು ದಾಸ ದಾವೀದನ ವಂಶದಿಂದ ಆರಿಸದೆ ಆ ವಂಶವನ್ನು ನಿರಾಕರಿಸುತ್ತಿದ್ದೆ. ಆದರೆ ಈಗ ಗುಲಾಮಗಿರಿಯಿಂದ ಅವರನ್ನು ಬಿಡುಗಡೆ ಮಾಡುವೆನು. ಅವರಿಗೆ ಕರುಣೆಯನ್ನು ತೋರಿಸಿಯೇ ತೋರಿಸುವೆನು.”
8 : ಯೆರೆಮೀಯನಿಗೆ ಸರ್ವೇಶ್ವರನಿಂದ ಮತ್ತೊಂದು ವಾಣಿ ಉಂಟಾಯಿತು. ಇಷ್ಟರೊಳಗೆ ಅರಸ ಚಿದ್ಕೀಯನು ಮತ್ತು ಜೆರುಸಲೇಮಿನ ಜನರೆಲ್ಲರು ಸೇರಿ ಒಂದು ಒಪ್ಪಂದ ಮಾಡಿಕೊಂಡಿದ್ದರು.
9 : ಅದರ ಪ್ರಕಾರ ಅವರಲ್ಲಿ ಪ್ರತಿ ಒಬ್ಬನು ತನ್ನ ಜೀತದಾರರಲ್ಲಿ ಹಿಬ್ರಿಯರಾದವರನ್ನು ಬಿಡುಗಡೆಮಾಡಬೇಕಿತ್ತು. ಯೆಹೂದ್ಯರಾದ ಸಹೋದರ ಸಹೋದರಿಯರನ್ನು ಯಾರೂ ಇನ್ನು ಮುಂದೆ ಜೀತದಾರರನ್ನಾಗಿ ಇರಿಸಿಕೊಳ್ಳದೆ ಅವರಿಗೆ ವಿಮೋಚನೆಯನ್ನು ಪ್ರಕಟಿಸಬೇಕೆಂಬುದು ಆ ಒಪ್ಪಂದವಾಗಿತ್ತು.
10 : ತಮ್ಮ ತಮ್ಮ ಹೆಣ್ಣು ಗಂಡು ಜೀತದಾರರನ್ನು ಬಿಡುಗಡೆಮಾಡಿ ಅವರಿಂದ ಇನ್ನು ಜೀತಮಾಡಿಸಿಕೊಳ್ಳುವುದಿಲ್ಲ ಎಂಬ ಈ ಒಪ್ಪಂದಕ್ಕೆ ಸಮ್ಮತಿಸಿದ್ದ ಎಲ್ಲ ಅಧಿಕಾರಿಗಳೂ ಸಮಸ್ತ ಪ್ರಜೆಗಳೂ ಅದರಂತೆ ನಡೆದು ಜೀತದಾರರನ್ನು ಬಿಡುಗಡೆ ಮಾಡಿದ್ದರು. ಆದರೆ ಕೆಲವು ಕಾಲದ ಮೇಲೆ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡರು. ಬಿಡುಗಡೆ ಮಾಡಿದ್ದವರನ್ನು ಮತ್ತೆ ಜೀತದಾರರನ್ನಾಗಿ ಸೇರಿಸಿಕೊಂಡು ಅಧೀನದಲ್ಲಿ ಇಟ್ಟುಕೊಂಡಿದ್ದರು.
12 : ಹೀಗಿರಲು ಸರ್ವೇಶ್ವರ ಯೆರೆಮೀಯನಿಗೆ ಈ ವಾಕ್ಯವನ್ನು ದಯಪಾಲಿಸಿದರು:
13 : “ಇಸ್ರಯೇಲರ ದೇವರಾದ ಸರ್ವೇಶ್ವರನ ವಾಣಿ ಇದು – ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದ ನಿಮ್ಮ ಪೂರ್ವಜರನ್ನು ನಾನು ಅಲ್ಲಿಂದ ಕರೆದು ತಂದಾಗ ನಾನು ಅವರೊಡನೆ ಒಂದು ಒಪ್ಪಂದ ಮಾಡಿಕೊಂಡೆ.
14 : ಒಬ್ಬ ಹಿಬ್ರಯನು ತನ್ನನ್ನೇ ನಿಮಗೆ ಮಾರಿಕೊಂಡು ಆರು ವರ್ಷ ನಿಮ್ಮ ಜೀತಗಾರನಾಗಿದ್ದರೆ ಅಂಥ ಸಹೋದರನನ್ನು ಏಳನೆಯ ವರ್ಷದಲ್ಲಿ ಸ್ವತಂತ್ರನನ್ನಾಗಿ ಬಿಟ್ಟು ಬಿಡಿ ಎಂದು ವಿಧಿಸಿದ್ದೆ. ಆದರೆ ನಿಮ್ಮ ಪೂರ್ವಜರು ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲೂ ಇಲ್ಲ.
15 : ನೀವೋ ಕೂಡಲೆ ಮನಮರುಗಿ ನಿಮ್ಮ ನಿಮ್ಮ ನೆರೆಹೊರೆಯವರಿಗೆ ಬಿಡುಗಡೆಯನ್ನು ಪ್ರಕಟಿಸಿ ನನ್ನ ಚಿತ್ತಾನುಸಾರ ನಡೆದಿರಿ. ನನ್ನ ಹೆಸರಿನಿಂದ ಖ್ಯಾತಗೊಂಡಿರುವ ದೇವಾಲಯದಲ್ಲಿ, ನನ್ನ ಸಮ್ಮುಖದಲ್ಲಿ ಒಪ್ಪಂದ ಮಾಡಿಕೊಂಡಿರಿ. 1
16 : ಆದರೆ ಆಮೇಲೆ ನಿಮ್ಮ ಮನಸ್ಸನ್ನು ಮಾರ್ಪಡಿಸಿಕೊಂಡಿರಿ. ಸ್ವತಂತ್ರರನ್ನಾಗಿ ಬಿಟ್ಟಿದ್ದವರನ್ನು ಪುನಃ ಜೀತದಾರರನ್ನಾಗಿ ಸೇರಿಸಿಕೊಂಡು, ಶೋಷಣೆಗೆ ಗುರಿಮಾಡಿ, ನನ್ನ ನಾಮಕ್ಕೆ ಅಪಕೀರ್ತಿ ತಂದಿದ್ದೀರಿ.
17 : ಆದಕಾರಣ ಸರ್ವೇಶ್ವರನಾದ ನಾನು ಹೇಳುವುದು ಇದು - ನೀವು ನನ್ನ ಮಾತನ್ನು ಕೇಳಲಿಲ್ಲ, ನಿಮ್ಮ ಸಹೋದರರಿಗೂ ನೆರೆಹೊರೆಯವರಿಗೂ ಬಿಡುಗಡೆಯನ್ನು ಪ್ರಕಟಿಸಲಿಲ್ಲ. ಇಗೋ ಸರ್ವೇಶ್ವರನಾದ ನನ್ನ ನುಡಿ: ಖಡ್ಗ-ವ್ಯಾಧಿ-ಕ್ಷಾಮ ಇವುಗಳಿಗೆ ನೀವು ಗುರಿ ಆಗುವಂತೆ ನಾನು ನಿಮಗೆ ಬಿಡುಗಡೆಯನ್ನು ಪ್ರಕಟಿಸುತ್ತೇನೆ. ಲೋಕದ ಸಮಸ್ತ ರಾಜ್ಯಗಳ ಕಣ್ಣಿಗೆ ನೀವು ಭಯಾಸ್ಪದವಾಗುವಂತೆ ಮಾಡುವೆನು.
18 : ನನ್ನ ನಿಬಂಧನೆಗಳನ್ನು ಕೈಗೊಳ್ಳದೆ, ನನ್ನ ಒಡಂಬಡಿಕೆಯನ್ನು ಮೀರಿದವರಿಗೆ ಇಬ್ಭಾಗವಾಗಿ ಸೀಳಿದ ಕರುವಿನ ಗತಿ ಬರುವಂತೆ ಮಾಡುವೆನು.
19 : ಜುದೇಯದ ಹಾಗು ಜೆರುಸಲೇಮಿನ ರಾಜ್ಯಾಧಿಕಾರಿಗಳು, ಕಂಚುಕಿಗಳು, ಯಾಜಕರು, ಸೀಳಿದ ಕರುವಿನ ಹೋಳುಗಳ ನಡುವೆ ಹಾದು ನನ್ನ ಮುಂದೆ ಒಪ್ಪಂದ ಮಾಡಿದರು. ಆದರೆ ಆ ಒಪ್ಪಂದಕ್ಕೆ ತದ್ವಿರುದ್ಧವಾಗಿ ನಡೆದಿದ್ದಾರೆ ನಾಡಿನ ಎಲ್ಲ ಜನರು.
20 : ಇವರೆಲ್ಲರನ್ನು ಶತ್ರುಗಳ ವಶಕ್ಕೆ ಒಪ್ಪಿಸುವೆನು. ಇವರ ಪ್ರಾಣವನ್ನು ಹುಡುಕುವ ಶತ್ರುಗಳ ಕೈಗೆ ಕೊಡುವೆನು. ಇವರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಜಂತುಗಳಿಗೂ ಆಹಾರವಾಗುವುವು.
21 : ಜುದೇಯದ ಅರಸ ಚಿದ್ಕೀಯನನ್ನೂ ಅವನ ಮಂತ್ರಿಗಳನ್ನೂ ಅವರ ಶತ್ರುಗಳಿಗೆ ಅಂದರೆ, ಅವರ ಪ್ರಾಣಹತ್ಯಕ್ಕಾಗಿ ಕಾದಿರುವ, ತಕ್ಷಣಕ್ಕೆ ಹಿಂದಿರುಗಿ ಹೋಗಿರುವ, ಬಾಬಿಲೋನಿಯದ ಅರಸನ ಕೈಗೆ ಕೊಡುವೆನು.
22 : ಸರ್ವೇಶ್ವರನಾದ ನನ್ನ ಗುರಿಯನ್ನು ಗಮನಿಸಿರಿ - ನಾನು ಅಪ್ಪಣೆಕೊಟ್ಟು, ಶತ್ರುಗಳು ಈ ನಗರಕ್ಕೆ ಮತ್ತೆ ಬರುವಂತೆ ಮಾಡುವೆನು. ಅವರು ಇದರ ವಿರುದ್ಧ ಯುದ್ಧಮಾಡಿ, ಇದನ್ನು ಆಕ್ರಮಿಸಿಕೊಂಡು, ಬೆಂಕಿಯಿಂದ ಸುಟ್ಟು ಹಾಕುವರು. ನಾನು ಜುದೇಯದ ನಗರಗಳನ್ನು ನಿರ್ಜನವಾದ ಪಾಳುಭೂಮಿಯನ್ನಾಗಿಸುವೆನು

· © 2017 kannadacatholicbible.org Privacy Policy