1 :
ಸರ್ವೇಶ್ವರಾ, ನೀವು ಸತ್ಯಸ್ವರೂಪಿ.
ನಿಮ್ಮೊಡನೆ ವ್ಯಾಜ್ಯ ನನಗೆ ಅಸಾಧ್ಯ.
ಆದರೂ ನಿಮ್ಮೊಡನೆ
ಚರ್ಚಿಸಬೇಕೆಂದಿರುವೆ ಈ ನ್ಯಾಯ:
ದುರುಳರ ಬಾಳು ಬೆಳಗುತ್ತಿರುವುದು ಏಕೆ?
ದ್ರೋಹಿಗಳೆಲ್ಲರು ನೆಮ್ಮದಿಯಾಗಿರುವುದು
ಏಕೆ?
2 : ಅವರನ್ನು ನಾಟಿ ಮಾಡಿದವರು ನೀವು
ಬೇರೂರಿ ಬೆಳೆದು ಹಣ್ಣುಬಿಡುತ್ತಿದ್ದಾರೆ
ಅವರು.
ನೀವು ಅವರ ಅಧರಕ್ಕೆ ಹತ್ತಿರ, ಹೃದಯಕ್ಕೆ
ದೂರ.
3 : ಸರ್ವೇಶ್ವರಾ, ನನ್ನ ಪರಿಚಯ ನಿಮಗಿದೆ
ನಿಮ್ಮ ನೋಟ ನನ್ನ ಮೇಲಿದೆ.
ನನ್ನ ಹೃದಯ ನಿಮ್ಮೊಂದಿಗಿದೆ,
ಇದರ ಪರೀಕ್ಷೆ ನಿಮ್ಮಿಂದಾಗಿದೆ.
ಅವರನ್ನೋ, ಕುರಿಗಳೋ ಎಂಬಂತೆ ಕೊಲೆಗೆ
ಕರೆದೊಯ್ಯಿರಿ
ವಧ್ಯ ದಿವಸದವರೆಗೂ ಅವರನ್ನು ವಿಂಗಡಿಸಿಡಿ.
4 : ಇನ್ನೆಷ್ಟರವರೆಗೆ ನಾಡು ದುಃಖಿಸುತ್ತಿರಬೇಕು?
ಅದರ ಎಲ್ಲೆಎಲ್ಲೆಗಳಲ್ಲಿ ಹುಲ್ಲುಸೊಪ್ಪು
ಒಣಗಿರಬೇಕು?
ನಾಡಜನರ ನೀಚತನದ ನಿಮಿತ್ತ
ಮಾಯವಾಗಿವೆ ಪ್ರಾಣಿಪಕ್ಷಿಗಳು ಕೂಡ.
‘ನಮ್ಮ ನಡತೆಯನ್ನು ಗಮನಿಸರು ದೇವರು’
ಎಂದುಕೊಳ್ಳುತ್ತಿರುವರು ಆ ಜನರು.
5 : (ಆಗ ಸರ್ವೇಶ್ವರ ನನಗೆ):
“ಕಾಲಾಳುಗಳ ಸಂಗಡ ಓಡಲು
ಆಯಾಸಗೊಂಡೆಯಾದರೆ
ಕುದುರೆಗಳೊಂದಿಗೆ ಓಡಿ ಹೇಗೆ ಹೋರಾಡುವೆ?
ಪ್ರಶಾಂತ ಪ್ರದೇಶದಲ್ಲಿ ನಿರ್ಭಯನಾಗಿ
ನಿಲ್ಲಲಾರೆಯಾದರೆ
ಜೋರ್ಡಾನಿನ ದಟ್ಟ ಅಡವಿಯಲ್ಲಿ ಏನು
ಮಾಡಬಲ್ಲೆ?
6 : ನಿನ್ನ ಸೋದರರೇ, ನಿನ್ನ ತೌರುಮನೆಯವರೇ
ನಿನಗೆ ದ್ರೋಹವೆಸಗಿದ್ದಾರೆ.
ಇವರೇ ನಿನ್ನ ಬೆನ್ನಟ್ಟಿಬಂದು ಧಿಕ್ಕಾರ
ಕೂಗಿದ್ದಾರೆ.
ಇಂತಿರಲು, ಇವರು ಸವಿನುಡಿದರೂ ನಂಬಲೆ
ಬೇಡ.”
7 :
“ನಾನು ನನ್ನ ಮನೆಯನ್ನೇ ತೊರೆದಿದ್ದೇನೆ
ನನ್ನ ಸ್ವಂತ ಸೊತ್ತನ್ನೇ ನಿರಾಕರಿಸಿದ್ದೇನೆ
ನನಗೆ ಪ್ರಾಣಪ್ರಿಯರಾದ ಜನರನ್ನು
ಅವರ ಶತ್ರುಗಳ ಕೈಗೊಪ್ಪಿಸಿದ್ದೇನೆ.
8 : ನನ್ನ ಸೊತ್ತಾದ ಜನತೆ ನನ್ನ ಪಾಲಿಗೆ ಅರಣ್ಯದ
ಸಿಂಹದಂತೆ
ನನಗೆದುರಾಗಿ ಅದು ಗರ್ಜಿಸಿದೆ,
ಎಂದೇ ಅದನ್ನು ಹಗೆಮಾಡಿರುವೆ.
9 : ನನ್ನ ಸೊತ್ತಾದ ಜನತೆ
ನನ್ನ ದೃಷ್ಟಿಗೆ ಚಿತ್ರವರ್ಣದ ಪಕ್ಷಿಯಂತೆ
ಅದರ ಸುತ್ತ ರಣಹದ್ದುಗಳ ಕೂಟ ಸೇರಿದೆ
ಕಾಡುಮೃಗಗಳನ್ನೆಲ್ಲ ಕರೆದುತನ್ನಿ ಅದನ್ನು
ತಿಂದುಬಿಡಲಿಕ್ಕೆ.
10 : ತಿಂದುಬಿಡಲಿಕ್ಕೆ.
ಬಹು ಮಂದಿ ಕುರಿಗಾಹಿಗಳು ಬಂದು
ಹಾಳುಮಾಡಿದ್ದಾರೆ ನನ್ನ ದ್ರಾಕ್ಷಾತೋಟ
ವನ್ನು.
ತುಳಿದುಹಾಕಿದ್ದಾರೆ ನನ್ನಾ ಸೊತ್ತನ್ನು
ಕಾಡನ್ನಾಗಿಸಿದ್ದಾರೆ ಆ ನನ್ನ ಪ್ರಿಯ
ಆಸ್ತಿಯನ್ನು.
11 : ಹೌದು, ಹಾಳು ಮಾಡಿದ್ದಾರೆ
ಪಾಳುಬಿದ್ದು ಅದು ನನಗೆ ಗೋಳಿಡುತ್ತಿದೆ
ಯಾವನೂ ಗಮನಕ್ಕೆ ತಂದುಕೊಳ್ಳದೆ
ನಾಡೆಲ್ಲ ಬಿಕೋ ಎನ್ನುತ್ತಿದೆ.
12 : ನಾಡಿನ ಒಂದು ಕಡೆಯಿಂದ ಮತ್ತೊಂದು
ಕಡೆಯವರೆಗೆ
ಕೊಳ್ಳೆಗಾರರು ಕಾಡುಗುಡ್ಡೆಗಳ ಮೇಲೆಲ್ಲ
ಕಂಡುಬಂದಿದ್ದಾರೆ.
ಕಬಳಿಸಿಬಿಡುವುದು ನನ್ನ ಖಡ್ಗ
ಯಾರಿಗು ನೆಮ್ಮದಿಯಿಲ್ಲದ ಹಾಗೆ.
13 : ಜನರು ಗೋದಿಯನ್ನು ಬಿತ್ತಿದರು
ಆದರೆ ಮುಳ್ಳುಗಿಡವನ್ನು ಕೊಯ್ದರು !
ಕ್ಷೇಮಕೆಡುವಷ್ಟು ಪ್ರಯಾಸಪಟ್ಟರು
ಆದರೆ ಯಾವ ಲಾಭವೂ ಗಿಟ್ಟದೆ
ಹೋಯಿತು.
ತಮ್ಮ ಬೆಳೆಯ ವಿಷಯವಾಗಿ
ಹೇಸಬೇಕಾಯಿತು
ನನ್ನ ಕೋಪಾಗ್ನಿಯೆ ಇದಕ್ಕೆ
ಕಾರಣವಾಯಿತು.”
14 :
ಸರ್ವೇಶ್ವರ ಸ್ವಜನರಾದ ಇಸ್ರಯೇಲರಿಗೆ ದಯಪಾಲಿಸಿದ ಸೊತ್ತಿಗೆ ಕೈಹಾಕುವ ಕೆಟ್ಟ ನೆರೆಯವರಿಗೆ ಕೊಟ್ಟ ಎಚ್ಚರಿಕೆ: “ಈ ನಾಡಿನವರನ್ನು ಅವರವರ ನಾಡಿನಿಂದಲೇ ಸಸಿಯಂತೆ ಕಿತ್ತು ಬಿಡುವೆನು. (ಅವರ ಮಧ್ಯೆಯಿಂದ ಕಿತ್ತುಬಿಡುವೆನು ಯೆಹೂದ ವಂಶವನ್ನು).
15 : ಕನಿಕರಿಸುವೆನು. ಪ್ರತಿಯೊಬ್ಬನನ್ನು ಅವನವನ ಆಸ್ತಿಪಾಸ್ತಿಗೆ ಅವನವನ ನಾಡಿಗೆ ಮರಳಿ ಬರಮಾಡುವೆನು.
16 : ನನ್ನ ಜನರಿಗೆ ಬಾಳ್‍ದೇವತೆಯ ಹೆಸರೆತ್ತಿ ಪ್ರಮಾಣಮಾಡುವ ಅಭ್ಯಾಸವನ್ನು ಮೊದಲು ಕಲಿಸಿಕೊಟ್ಟವರು ಇವರೇ. ಈಗ ನನ್ನ ಜನರ ಮಾರ್ಗವನ್ನು ಅವಲಂಬಿಸಿ ನನ್ನ ಹೆಸರೆತ್ತಿ, “ಸರ್ವೇಶ್ವರನ ಜೀವದಾಣೆ” ಎಂದು ಪ್ರಮಾಣ ಮಾಡುವುದನ್ನು ಕಲಿತರೆ ನನ್ನ ಜನರ ನಡುವೆ ನೆಲೆಗೊಂಡು ವೃದ್ಧಿಯಾಗುವರು.
17 : ಆದರೆ ಯಾವ ಜನಾಂಗ ಕೇಳುವುದಿಲ್ಲವೋ ಅದನ್ನು ನಾನು ಕಿತ್ತುಹಾಕುವೆನು. ಹೌದು, ಬೇರುಸಹಿತ ಕಿತ್ತುಹಾಕಿ ನಾಶಮಾಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ.”