1 :
ಇಸ್ರಯೇಲ್ ವಂಶದವರೇ, ಸರ್ವೇಶ್ವರ
ಸ್ವಾಮಿ ನಿಮಗೆ ನುಡಿಯುವ ಮಾತನ್ನು
ಕೇಳಿರಿ;
ಅವರು ಹೇಳುವುದು ಇದು:
2 : “ಅನ್ಯಜನಾಂಗಗಳ ಆಚರಣೆಯನ್ನು
ಅನುಸರಿಸಬೇಡಿ
ಅವರು ಹೆದರುವ ಆಕಾಶದ ಉತ್ಪಾತಗಳಿಗೆ
ನೀವು ಹೆದರಬೇಡಿ.
3 : ಆ ಜನಾಂಗಗಳ ಧಾರ್ಮಿಕ ಪದ್ಧತಿಗಳು
ಶೂನ್ಯ.
ಅರಣ್ಯದ ಮರಗಳನ್ನು ಅವರು ಕತ್ತರಿಸು
ತ್ತಾರೆ
ಬಡಗಿಯ ಕೈಯಿಂದ, ಅವನ ಉಳಿಯಿಂದ,
ಅದನ್ನು ರೂಪಿಸುತ್ತಾರೆ.
4 : ಅದನ್ನು ಅಲಂಕರಿಸುತ್ತಾರೆ ಬೆಳ್ಳಿಬಂಗಾರ
ಗಳಿಂದ
ಅದು ಅಲುಗದ ಹಾಗೆ ಭದ್ರಪಡಿಸುತ್ತಾರೆ
ಮೊಳೆಸುತ್ತಿಗೆಯಿಂದ.
5 : ಸೌತೆ ತೋಟದ ಬೆದರುಗಂಬದಂತಿರುವ
ಈ ಬೊಂಬೆಗಳು ಮಾತನಾಡಲಾರವು.
ಅವನ್ನು ಹೊತ್ತುಕೊಂಡು ಹೋಗಬೇಕು, ಅವು
ನಡೆಯಲಾರವು.
ಅವುಗಳಿಗೆ ನೀವು ಅಂಜಬೇಕಾಗಿಲ್ಲ, ಅವು
ಕೇಡುಮಾಡಲಾರವು;
ಮೇಲುಮಾಡಲಿಕ್ಕೂ ಸಾಮಥ್ರ್ಯ
ವಿಲ್ಲದಿರುವುವು.”
6 : ಹೇ ಸರ್ವೇಶ್ವರಾ,
ನಿಮಗೆ ಸಮಾನನು ಇಲ್ಲ, ನೀವು
ಮಹೋತ್ತಮರು
ಸಾಮಥ್ರ್ಯದಿಂದ ಕೂಡಿರುವ ನಿಮ್ಮ ನಾಮವೂ
ಮಹತ್ತರವಾದುದು.
7 : ಜನಾಂಗಗಳ ಒಡೆಯಾ, ಅರಸರೇ,
ನಿಮಗೆ ಅಂಜದೆ ಇರುವವರಾರು?
ಹೌದು, ನೀವು ಭಯಭಕ್ತಿಗೆ ಪಾತ್ರರು.
ರಾಷ್ಟ್ರಗಳ ಜ್ಞಾನಿಗಳಲ್ಲೂ
ರಾಜಪರಂಪರೆಯಲ್ಲೂ
ಯಾವನೂ ಇಲ್ಲ ನಿಮಗೆ ಸಮಾನನು.
8 : ಕೇವಲ ಪಶುಪ್ರಾಯರು, ಮಂದಮತಿಗಳು,
ಅವರೆಲ್ಲರು
ಬೊಂಬೆ ಪೂಜೆಯಿಂದ ಬರುವ ಜ್ಞಾನ
ಮರದಂತೆ ಮೊದ್ದು.
9 : ಆ ಬೊಂಬೆಗಳ ಭೂಷಣಕ್ಕಾಗಿ ಸಾಗಿ
ಬರುತ್ತವೆ
ತಾರ್ಷೀಷಿನಿಂದ ಬೆಳ್ಳೀತಗಡುಗಳು,
ಊಫಜಿನಿಂದ ಚಿನ್ನ.
ಅವು ಕೆತ್ತನೆಗಾರನ, ಎರಕದವನ ಕೈಕೆಲಸಗಳು
ಅವುಗಳ ಉಡುಪು ನೀಲಧೂಮ್ರ ವರ್ಣದ
ವಸ್ತ್ರಗಳು.
ಇವೆಲ್ಲವು ಕೇವಲ ಕಲಾಕುಶಲರ ಕೌಶಲ್ಯಗಳು.
10 : ಹೇ ಸರ್ವೇಶ್ವರಾ, ನೀವಾದರೋ ಸತ್ಯದೇವರು,
ಜೀವಸ್ವರೂಪ ದೇವರು, ಶಾಶ್ವತ ರಾಜರು
ನಿಮ್ಮ ಕೋಪಕ್ಕೆ ನಡುಗುತ್ತದೆ ಭೂಲೋಕ
ನಿಮ್ಮ ರೋಷವನ್ನು ತಾಳಲಾರದು ಜನಾಂಗ.
11 : “ಭೂಮ್ಯಾಕಾಶಗಳನ್ನು ಸೃಷ್ಟಿಸದ ದೇವರುಗಳು ಭೂಮಿಯ ಮೇಲಿಂದಲೂ ಆಕಾಶದ ಕೆಳಗಿನಿಂದಲೂ ಅಳಿದುಹೋಗುವುವು” ಎಂದು ನೀವು ಆ ಜನಾಂಗಗಳಿಗೆ ತಿಳಿಸಿರಿ.
12 :
ಸರ್ವೇಶ್ವರ ಭೂಮಿಯನ್ನು ನಿರ್ಮಿಸಿದ್ದಾರೆ
ಶಕ್ತಿಯಿಂದ
ಲೋಕವನ್ನು ಸ್ಥಾಪಿಸಿದ್ದಾರೆ ಜ್ಞಾನದಿಂದ
ಆಕಾಶಮಂಡಲವನ್ನು ಹರಡಿದ್ದಾರೆ
ವಿವೇಕದಿಂದ.
13 : ಆಕಾಶದಲ್ಲಿ ನೀರು ಭೋರ್ಗರೆಯುವಂತೆ
ಭುವಿಯ ಕಟ್ಟಕಡೆಯಿಂದ ಮೋಡಗಳು
ಏರುವಂತೆ
ಮಳೆಗಾಗಿ ಮಿಂಚು ಹೊಳೆಯುವಂತೆ
ತಮ್ಮ ಭಂಡಾರದಿಂದ ಗಾಳಿ ಬೀಸುವಂತೆ
- ಮಾಡುತ್ತದೆ ಸರ್ವೇಶ್ವರನಾ ಗರ್ಜನೆ.
14 : ಇದರ ಮುಂದೆ ತಿಳುವಳಿಕೆಯಿಲ್ಲದ
ಪಶುಪ್ರಾಯರು ಜನರೆಲ್ಲರು.
ತಾನು ಕೆತ್ತಿದ ವಿಗ್ರಹಕ್ಕಾಗಿ ಹೇಸುವನು
ಪ್ರತಿಯೊಬ್ಬ ಅಕ್ಕಸಾಲಿಗನು.
ಅವನು ಎರಕ ಹೊಯ್ದ ವಿಗ್ರಹಗಳು
ಟೊಳ್ಳು, ಶ್ವಾಸವಿಲ್ಲದವುಗಳು.
15 : ಅವು ವ್ಯರ್ಥವಾದುವುಗಳು,
ಹಾಸ್ಯಾಸ್ಪದವಾದುವುಗಳು
ದಂಡನೆಯಕಾಲದಲ್ಲಿ ಅಳಿದು
ಹೋಗುವಂಥವುಗಳು.
16 : ಹಾಗಲ್ಲ ಯಕೋಬ್ಯರಿಗೆ ಸ್ವಂತವಾದ ದೇವರು
ಅವರು ಸಮಸ್ತವನ್ನು ಸೃಷ್ಟಿಸಿದವರು.
ಇಸ್ರಯೇಲ್ ಗೋತ್ರ ಅವರಿಗೆ ಸ್ವಾಸ್ತ್ಯ.
‘ಸೇನಾಧೀಶ್ವರ ಸರ್ವೇಶ್ವರ’ ಅವರ
ನಾಮಧೇಯ.
17 :
ಮುತ್ತಿಗೆಗೆ ತುತ್ತಾದ ಜನತೆಯೇ ಗಂಟು ಕಟ್ಟಿಕೊಂಡು ನಾಡುಬಿಟ್ಟು ನಡೆ.
18 : ಏಕೆಂದರೆ ಸರ್ವೇಶ್ವರ ನುಡಿವ ಮಾತಿದು: “ಇಗೋ, ಈ ಸಾರಿ ಈ ನಾಡಿನ ನಿವಾಸಿಗಳನ್ನು ಕವಣೆಯ ಕಲ್ಲಂತೆ ಎಸೆದುಬಿಡುವೆನು; ಬುದ್ಧಿಬರಲೆಂದು ಅವರನ್ನು ಬಾಧಿಸುವೆನು.”
19 : ಜೆರುಸಲೇಮಿನ ಗೋಳು: “ಅಯ್ಯೋ ನಾನು
ಗಾಯಗೊಂಡೆ
ನನಗೆ ಬಿದ್ದ ಪೆಟ್ಟು ಗಡಸು,
ತಗಲಿದೆ ವ್ಯಾಧಿ, ಸಹಿಸಲೇಬೇದಾ
ಕಾಯಿಲೆ.
20 : ನನ್ನ ಗುಡಾರ ಹಾಳಾಗಿದೆ,
ಹಗ್ಗಗಳು ಕಿತ್ತು ಹೋಗಿವೆ.
ಮಕ್ಕಳು ನನ್ನನ್ನು ಬಿಟ್ಟು ಕಾಣದೆ
ಹೋಗಿದ್ದಾರೆ
ಗುಡಾರ ಹಾಕಲು, ಪರದೆ ಬಿಗಿಯಲು,
ಯಾರೂ ಇಲ್ಲವಾಗಿದ್ದಾರೆ.”
21 :
ನಮ್ಮ ಪಾಲಕರು ಪಶುಪ್ರಾಯರು
ಸರ್ವೇಶ್ವರನ ಕಡೆಗೆ ಕಣ್ಣೆತ್ತದೆ ಹೋದರು.
ಆ ಕಾರಣ ಅವರ ಕಾರ್ಯಸಾರ್ಥಕವಾಗಲಿಲ್ಲ
ಚದರಿಹೋದವು ಅವರ ಹಿಂಡುಗಳೆಲ್ಲ.
22 : ಇದೋ ಸುದ್ಧಿ, ಕೇಳಿಬರುತ್ತಿದೆ ಸುದ್ದಿ!
ದೊಡ್ಡ ಕೋಲಾಹಲವೆದ್ದಿದೆ ಉತ್ತರ
ನಾಡಿನಲ್ಲಿ:
‘ಅದನ್ನು ನರಿಗಳ ಬೀಡಾಗಿಸಿರಿ
ಜುದೇಯದ ನಗರಗಳನ್ನು ನಾಶಮಾಡಿ.’
23 : ಸರ್ವೇಶ್ವರಾ,
ಮಾನವನ ಗುರಿಸಾಧನೆ ಅವನ
ಸ್ವಾಧೀನದಲ್ಲಿಲ್ಲ.
ಸರಿದಿಸೆಯಲ್ಲಿ ಅವನು ಹೆಜ್ಜೆಯಿಡಲಾರನೆಂದು
ನಿಮಗೆ ಗೊತ್ತಿದೆಯಲ್ಲಾ.
24 : ಹೇ ಸರ್ವೇಶ್ವರಾ, ನಮ್ಮನ್ನು ದಂಡಿಸಿ
ಸುಧಾರಿಸಿ
ಆದರೆ ಮಿತಿಮೀರಬೇಡ, ಕೋಪದಿಂದ
ದಂಡಿಸಬೇಡಿ.
ಇಲ್ಲವಾದರೆ ನಾವು ನಶಿಸಿ ನಾಶವಾದೇವು!
25 : ಸರ್ವೇಶ್ವರಾ, ನಿಮ್ಮನ್ನು ಅರಿತುಕೊಳ್ಳದವರ
ಮೇಲೆ
ನಿಮ್ಮ ನಾಮವನ್ನು ಉಚ್ಚರಿಸದವರ ಮೇಲೆ
ನಿಮ್ಮ ಕೋಪಾಗ್ನಿಯನ್ನು ಸುರಿದುಬಿಡಿ.
ಅವರು ಯಕೋಬ್ಯರನ್ನು ಕಬಳಿಸಿದ್ದಾರೆ
ಹೌದು, ಪೂರ್ತಿಯಾಗಿ ಕಬಳಿಸಿಬಿಟ್ಟಿದ್ದಾರೆ
ಅವರ ನಿವಾಸಗಳನ್ನು ನಾಶಮಾಡಿದ್ದಾರೆ.