1 : “ಹೇ ಸರ್ವೇಶ್ವರಾ, ನಿನಗೆನ್ನ
ವಂದನ;
ನಿನಗಿತ್ತು ಎನ್ನ ಮೇಲೆ ಕೋಪ ಮನ.
ಆದರೆ ಅದೀಗ ಆಗಿದೆ ಶಮನ,
ಬಂದಿತೆನ್ನ ಮನಕೆ ಸಾಂತ್ವನ.
2 : ದೇವರೇ ಉದ್ಧಾರಕನೆನಗೆ
ಆತನಲ್ಲಿದೆ ನನಗೆ ನಿರ್ಭೀತ ನಂಬಿಕೆ.
ದೇವಾದಿದೇವನೇ ಎನಗೆ ಶಕ್ತಿ
ಆತನೆನ್ನ ಕೀರ್ತನೆಯ ವ್ಯಕ್ತಿ
ತಂದಿಹನಾತ ಎನಗೆ ಮುಕ್ತಿ.”
3 : ಉದ್ಧರಿಸುವಾ ಒರತೆಗಳಿಂದ
ಸೇದುವಿರಿ ನೀರನು ಹರುಷದಿಂದ.
4 : ಹೇಳುವಿರಿ ನೀವು ಆ ದಿನದಂದು ಈ ಪರಿ-
“ಸಲ್ಲಿಸಿರಿ ಸರ್ವೇಶ್ವರನಿಗೆ ಕೃತಜ್ಞತೆಯನು
ಸ್ಮರಿಸಿರಿ ಆತನ ಶ್ರೀನಾಮವನು
ಸಾರಿರಿ ಜನತೆಗೆ ಆತನ ಕಾರ್ಯಗಳನು
ಘೋಷಿಸಿರಿ ಆತನ ನಾಮ ಘನತೆಯನು.
5 : ಹಾಡಿರಿ ಸರ್ವೇಶ್ವರನಿಗೆ ಸ್ತುತಿಯನು
ಎಸಗಿಹನಾತ ಮಹಿಮಾ ಕಾರ್ಯಗಳನು
ತಿಳಿಸಿರಿ ಜಗದಾದ್ಯಂತಕೆ ಈ ವಿಷಯವನು.
6 : ಸಿಯೋನಿನ ನಿವಾಸಿಗಳೇ, ಹಾಡಿರಿ, ಮಾಡಿರಿ
ಭಜನ
ನಿಮ್ಮ ಮಧ್ಯೆಯಿರುವ ಆ ಘನವಂತನ
ಇಸ್ರಯೇಲಿನಾ ಸ್ವಾಮಿ ಪರಮಪಾವನ.”