1 : ವಹಿಸಿಹನು ಪ್ರಭು
ರಾಜ್ಯಾಧಿಕಾರವನು :
ನಡುಗುತಿಹುದು ಜನಾಂಗವು /
ಕೆರೂಬಿಯರ ಮಧ್ಯೆ ಆಸೀನನಾಗಿಹನು:
ಕಂಪಿಸುತಿಹುದು ಜಗವು //
2 : ಸಿಯೋನಿನಲಿ ಪ್ರಭು ಶ್ರೇಷ್ಠನು /
ರಾಷ್ಟ್ರಗಳಲ್ಲೆಲ್ಲಾ ಉತ್ಕøಷ್ಠನು //
3 : ಆತ ಪರಮ ಪವಿತ್ರನು, ಸ್ತುತಿಸಲಿ ಅವರೆಲ್ಲರು |
ಆತ ಘನಗಂಭೀರನು, ಸ್ತುತಿಸಲಿ ಆತನ
ಶ್ರೀನಾಮವನು ||
4 : ಶಕ್ತಿಸ್ವರೂಪಿಯೇ, ನ್ಯಾಯಪ್ರಿಯ ರಾಜನೇ / ನ್ಯಾಯ ನೀತಿ, ಯಥಾರ್ಥತೆಗೆ ಸ್ಥಾಪಕ ನೀನೆ / ಇಸ್ರಯೇಲ ವಂಶಕ್ಕಿದನು ಮನದಟ್ಟಾಗಿಸಿದವ ನೀನೆ //
5 : ಪರಮ ಪಾವನನು ನವಿ್ಮೂ ಸ್ವಾಮಿ ದೇವನು /
ಹೊಗಳಿರಿ, ಆತನ ಪಾದಪೀಠಕೆ ಅಡ್ಡಬೀಳಿರಿ
ನೀವೆಲ್ಲರು //
6 : ಪ್ರಭುವಿನ ಯಾಜಕರು, ಮೋಶೆ ಮತ್ತು
ಆರೋನನು /
ಸಮುವೇಲನು ಸಹ ಆತನ ಶರಣರಲಿ ಒಬ್ಬನು /
ಪ್ರಾರ್ಥಿಸಲು ಇವರು, ಪ್ರಭುವು
ಸದುತ್ತರಿಸಿದನು //
7 : ಮೇಘಸ್ತಂಭದಲಿದ್ದು ಅವರೊಡನೆ
ಮಾತಾಡಿದನು /
ಕೈಗೊಂಡರು ಅವರು ಆತನಿತ್ತ
ವಿಧಿನಿಯಮಗಳನು //
8 : ಸ್ವಾಮಿ ದೇವಾ, ನೀನವರಿಗೆ ಸದುತ್ತರ
ಪಾಲಿಸಿದೆ /
ತಪ್ಪನು ದಂಡಿಸಿದೆಯಾದರೂ ಕ್ಷಮಿಸುವ
ದೇವನಾಗಿದ್ದೆ //
9 : ಘನಪಡಿಸಿರೆಮ್ಮ ಸ್ವಾಮಿ ದೇವನನು /
ಶ್ರೀಪರ್ವತದಲಿ ವಂದಿಸಿ ಆತನನು /
ಪರಮಪವಿತ್ರನು ಆ ನಮ್ಮ ದೇವನು //