1 : ಸ್ವರ್ಗಸಭೆಯಲಿ ದೇವ ಅಗ್ರಸ್ಥಾನ
ವಹಿಸಿಹನು |
ದೇವರುಗಳ ಸಮೂಹದಲಿ
ನ್ಯಾಯವಿಚಾರಿಸುತಿಹನು ||
2 : “ಎಲ್ಲಿಯತನಕ ನೀಡುವಿರಿ ಅನ್ಯಾಯವಾದ
ತೀರ್ಪನು? /
ಎಲ್ಲಿಯವರೆಗೆ ತೋರುವಿರಿ ದುಷ್ಟರಿಗೆ
ಪಕ್ಷಪಾತವನು?//
3 : ಅಬಲರಿಗೆ, ಅನಾಥರಿಗೆ ದೊರಕಿಸಿರಿ
ನ್ಯಾಯವನು /
ಕಾದಿರಿಸಿರಿ ದೀನದಲಿತರ ಹಕ್ಕು
ಬಾಧ್ಯತೆಯನು //
4 : ಬಿಡುಗಡೆಮಾಡಿರಿ ದೀನ ಬಡಬಗ್ಗರನು /
ದುರುಳರ ಕೈಯಿಂದ ರಕ್ಷಿಸಿರಿ ಅವರನು //
5 : ಬುದ್ಧಿಹೀನರು, ಮಂದಮತಿಗಳು, ಕತ್ತಲಲಿ ನಡೆವವರು ನೀವು / ಇದರಿಂದಲೆ ಕದಲುತ್ತಿರುವುವು ಧರೆಯ ಅಸ್ತಿವಾರಗಳು //
6 : ‘ನೀವು ದೇವರುಗಳು’, ‘ನೀವೆಲ್ಲರು ಪರಾತ್ಪರನ
ಮಕ್ಕಳು’ ನಾನೆಂದೆ /
7 : ಆದರೂ ಅಳಿಯುವಿರಿ ಅರಸರಂತೆ, ಸಾಯುವಿರಿ
ಬರಿ ಮಾನವರಂತೆ” //
8 : ಎದ್ದೇಳು ದೇವ, ಸ್ಥಾಪಿಸು ನ್ಯಾಯವನು
ಧರೆಯೊಳು /
ನಿನ್ನ ಸೊತ್ತಾಗಿವೆಯಲ್ಲವೆ ಸಮಸ್ತ
ರಾಷ್ಟ್ರಗಳು //