1 : ಕರುಣೆಯಿಂದೆನ್ನನು ದೇವಾ, ರಕ್ಷಿಸು /
ತ್ವರೆಯಾಗಿ ಬಂದು ಪ್ರಭು,
ಉದ್ಧರಿಸು //
2 : ಪಡಲಿ ಮಾನಭಂಗ ನನ್ನ ಹತ್ಯವನು
ಕೋರುವವರು /
ನಾಚಿ ಓಡಲಿ ಹಿಂದಕೆ ನನಗಾಪತ್ತನು
ಬಯಸುವವರು //
3 : “ಆಹಾಹಾ” ಎಂದೆನ್ನ ಜರೆಯುವವರು /
ಬೆಂಗೊಟ್ಟು ಓಡಲಿ ಆ ಲಜ್ಜೆಗೆಟ್ಟವರು //
4 : ನಿನ್ನ ದರ್ಶನಾರ್ಥಿಗಳು ಹರ್ಷಿಸಲಿ, ನಿನ್ನಲಿ
ನಲಿದು ಆನಂದಿಸಲಿ /
ನಿನ್ನ ಉದ್ಧಾರಕ ಶಕ್ತಿ ಪ್ರಿಯರು ಸತತ
“ದೇವನಿಗೆ ಉಘೇ” ಎನ್ನಲಿ //
5 : ದೇವಾ, ನಾ ದಿಕ್ಕಿಲ್ಲದವನು, ಕುಗ್ಗಿದವನು,
ನನ್ನ ಬಳಿಗೆ ಬಾ /
ನೀನೆನಗೆ ಸಹಾಯಕನು, ರಕ್ಷಕನು ಪ್ರಭು,
ತಡಮಾಡದೆ ಬಾ //