1 : ಕೈಬಿಟ್ಟೆ ದೇವಾ, ನಮ್ಮನು ಕೈಬಿಟ್ಟೆ /
ಕೋಪದಿಂದೆಮ್ಮನು ತಳ್ಳಿ
ಕೆಡವಿಬಿಟ್ಟೆ /
ಉದ್ಧಾರವಾಗ್ವೆವು ನೀ ಮರಳಿ ಬೆಂಗೊಡೆ //
2 : ನಾಡನು ನಡುಗಿಸಿ ಬಿಡಿಬಿಡಿಯಾಗಿಸಿದೆ /
ಅದರೊಡಕನು ಸರಿಮಾಡು ತಡವರಿಸದೆ //
3 : ನಿನ್ನ ಜನರನು ಗುರಿಪಡಿಸಿದೆ ಸಂಕಟಕೆ /
ಭ್ರಮಣಗೊಳಿಪ ಮದ್ಯವ ಕುಡಿಸಿದೆ ನಮಗೆ //
4 : ಪರಾಜಯ ಪತಾಕೆಯ ಹಾರಿಸಿದೆ ನಿನಗಂಜಿ ನಡೆದವರಿಗೆ / ಅವರು ಹೆದರಿ ಓಡುವಂತೆ ಮಾಡಿದೆ ಬಿಲ್ಲು ಬಾಣಗಳಿಗೆ //
5 : ಪರಾಜಯ ಪತಾಕೆಯ ಹಾರಿಸಿದೆ ನಿನಗಂಜಿ ನಡೆದವರಿಗೆ / ಅವರು ಹೆದರಿ ಓಡುವಂತೆ ಮಾಡಿದೆ ಬಿಲ್ಲು ಬಾಣಗಳಿಗೆ //
6 : ಗರ್ಭಗುಡಿಯಿಂದಲೇ ದೇವನಿಂತೆಂದನು :
“ಜಯಶೀಲ ನಾನು, ಹಂಚುವೆನು
ಶೆಖೆಮನು /
ಅಳೆದು ಕೊಡುವೆನು ಸುಖೋತೆಂಬ
ಬಯಲನು //
7 : ಗಿಲ್ಯಾದ ಸೀಮೆ, ಮನಸ್ಸೆ ನಾಡು ನನ್ನವೆ /
ಎಫ್ರಯಿಮ್ ಗೋತ್ರವು ಶಿರಸ್ತ್ರಾಣವು ನನಗೆ /
ಜೂದ ಕುಲವು ರಾಜದಂಡವು ನನ್ನ ಕೈಗೆ //
8 : ಮೋವಾಬ್ ಪ್ರಾಂತ್ಯವು ನನ್ನ ಸ್ನಾನ ಪಾತ್ರೆಯು /
ಎದೋಮ್ ಪ್ರಾಂತ್ಯವು ನನ್ನ ಕೆರಗಳಿಗೆ
ಎಡೆಯು /
ನನ್ನ ಗೆಲ್ವೆನೆಂದಿತೆ ಫಿಲಿಷ್ಟಿಯ ಪ್ರಾಂತ್ಯವು!”//
9 : ಕೋಟೆಯ ನಗರಕೆ ನನ್ನನು
ಕರೆದೊಯ್ಯುವರಾರು?/
ಎದೋಮ್ ಪ್ರಾಂತ್ಯಕೆ ನನ್ನ
ಕೊಂಡೊಯ್ಯುವವರಾರು?//
10 : ದೇವಾ ನೀ, ನಮ್ಮನು ಕೈ ಬಿಟ್ಟಿರುವುದು
ಸರಿಯೋ?/
ನಮ್ಮ ಸೈನ್ಯ ಸಮೇತ ನೀ
ಬರದೆಹೋದೆಯೋ?//
11 : ಶತ್ರುವಿರುದ್ಧ ಸಹಾಯಮಾಡಯ್ಯಾ/
ಮಾನವ ನೆರವು ನಮಗೆ ವ್ಯರ್ಥವಯ್ಯಾ //
12 : ನಮ್ಮ ಪರ ದೇವನಿರಲು ಹೆಣಗುವೆವು
ಶೂರರಾಗಿ /
ವೈರಿಗಳನು ತುಳಿದುಬಿಡುವನಾತ
ಖರೆಯಾಗಿ //