1 : ಕರುಣೆತೋರು ದೇವಾ, ಜನರೆನ್ನ
ಬೆನ್ನಟ್ಟಿ ಬರುತಿಹರು //
ದಿನವೆಲ್ಲ ಕದನ ಮಾಡಿ ಶತ್ರುಗಳೆನ್ನ
ಬಾಧಿಸುತಿಹರು //
2 : ವಿರೋಧಿಗಳು ದಿನವಿಡೀ ಬೆನ್ನಟ್ಟಿ ಬರುತಿಹರು /
ಸೊಕ್ಕಿನಿಂದ ನನಗೆದುರಾಗಿ ನಿಂತಿರುವರು
ಹಲವರು //
3 : ಹೆದರಿಕೆ ಉಂಟಾದಾಗ /
ನೀನೆ ನನಗೆ ಆಶ್ರಯ //
4 : ದೇವರಲ್ಲೇ ನಿರ್ಭೀತ ನಂಬಿಕೆ ನನಗೆ /
ಹೆಮ್ಮೆ ಪಡುವೆನು ಆತನಿತ್ತ ವಾಗ್ದಾನಕೆ /
ನರಮಾನವರು ಏನು ಮಾಡಿಯಾರೆನಗೆ?//
5 : ಸದಾ ಅಪಾರ್ಥ ಕಟ್ಟುವರೆನ್ನ ಮಾತಿಗೆ /
ಅವರು ಬಗೆವುದೆಲ್ಲಾ ಕೇಡೇ ನನಗೆ //
6 : ಒಟ್ಟುಗೂಡಿ ಹೊಂಚುಹಾಕುತಿಹರು /
ಹೆಜ್ಜೆಹಿಡಿದು ಕೊಲ್ಲ ಬರುತಿಹರು //
7 : ಇಂಥಾ ದ್ರೋಹಿಗಳು
ತಪ್ಪಿಸಿಕೊಳ್ಳಬಾರದಯ್ಯಾ //
ರೌದ್ರದಿಂದಾ ಜನರನು ನೀ ಕೆಡವಿಬಿಡು
ದೇವಾ //
8 : ನನ್ನ ಅಲೆಮಾರಿತನದ ಲೆಕ್ಕವಿಟ್ಟಿರುವೆ ನಿನ್ನಲಿ /
ನನ್ನ ಕಣ್ಣೀರನು ತುಂಬಿಡು ನಿನ್ನ ಬುದ್ದಲಿಯಲಿ /
ಅದರ ಕತೆ ಬರೆದಿದೆಯಲ್ಲವೆ ನಿನ್ನ
ಪುಸ್ತಕದಲಿ?//
9 : ನಾ ಮೊರೆಯಿಟ್ಟಾಗ ಶತ್ರುಗಳು ಪರಾರಿ
ಹಿಂದಕೆ /
ದೇವನಿರುವುದು ನನ್ನ ಕಡೆ, ಇದು
ಗೊತ್ತಿದೆ ನನಗೆ //
10 : ನಾ ಹೆಮ್ಮೆಪಡುವುದು ದೇವನಲಿ, ಆತನ
ವಾಗ್ದಾನದಲಿ /
ನಾ ಹೆಮ್ಮೆಪಡುವುದು ಪ್ರಭುವಿನಲಿ, ಆತನ
ವಾಗ್ದಾನದಲಿ //
11 : ದೇವರಲ್ಲೇ ನಿರ್ಭೀತ ನಂಬಿಕೆ ನನಗೆ /
ನರಮಾನವರು ಏನು ಮಾಡಿಯಾರೆನಗೆ //
12 : ನಿನ್ನ ಮುಂದೆ ಜೀವನ್ ಜ್ಯೋತಿಯಲಿ
ನಾ ನಡೆಯಮಾಡಿರುವೆ /
ಮೃತ್ಯುವಿನಿಂದೆನ್ನ ಪ್ರಾಣವನು
ನೀ ಮುಕ್ತಗೊಳಿಸಿರುವೆ /
ಜಾರಿ ಬೀಳದಂತೆನ್ನ ಪಾದಗಳನು
ಕಾದಿರಿಸಿರುವೆ //
13 :
ಎಂದೇ ನಿನಗೆ ಹೊತ್ತ ಹರಕೆಗಳನು
ಸಲ್ಲಿಸುವೆ /
ಕೃತಜ್ಞತಾಬಲಿಗಳನು ದೇವಾ,
ನಿನಗರ್ಪಿಸುವೆ //