1 : ರಕ್ಷಿಸೆನ್ನನು ದೇವ, ನಿನ್ನ ನಾಮ
ಶಕ್ತಿಯಿಂದ /
ನ್ಯಾಯದೊರಕಿಸೆನಗೆ ನಿನ್ನ
ಪರಾಕ್ರಮದಿಂದ //
2 : ನನ್ನ ಪ್ರಾರ್ಥನೆಯನು ಆಲಿಸಯ್ಯಾ /
ನನ್ನ ಮಾತುಗಳಿಗೆ ಕಿವಿಗೊಡು ದೇವಾ //
3 : ಗರ್ವಿಗಳು ನಿಂತಿಹರು ನನಗೆದುರಾಗಿ /
ಕ್ರೂರಿಗಳು ಕಾದಿಹರೆನ್ನ ಕೊಲೆಗಾಗಿ /
ಅವರಲಿಲ್ಲ ಮಾನ್ಯತೆ ದೇವರಿಗಾಗಿ //
4 : ನನಗಿದೋ ದೇವನೆ ಸಹಾಯಕನು /
ಆತನೆನಗೆ ಜೀವಪೋಷಕನು //
5 : ತಿರುಗುಬಾಣವಾಗಲಿ ಶತ್ರುಗಳೆನಗೆ
ಬಯಸುವ ಕೇಡು /
ಸತ್ಯಸ್ವರೂಪಿಯಾದ ನೀನು ಅವರನು
ನಾಶಮಾಡು //
6 : ಸರ್ವಾಪತ್ತುಗಳಿಂದ ತಪ್ಪಿಸಿದೆ ಪ್ರಭು,
ನನ್ನನು /
ಕಂಡಿವೆ ನನ್ನ ಕಣ್ಗಳೇ ಶತ್ರುಗೊದಗಿದ
ಸೋಲನು //
7 : ಎಂತಲೆ ಸ್ವಂತ ಇಚ್ಛೆಯಿಂದ ಬಲಿಯನರ್ಪಿಸುವೆ
ನಿನಗೆ /
ಧನ್ಯವಾದ ಪ್ರಭು, ನಿನ್ನ ಸರ್ವೋತ್ತಮ
ನಾಮಕೆ //