1 : ಮನದಲಿ “ದೇವನಿಲ್ಲ” ಎನ್ನುವವರು
ದುರ್ಮತಿಗಳು /
ಹೇಯಕೃತ್ಯವೆಸಗುವವರು ಆ
ಭ್ರಷ್ಟಾಚಾರಿಗಳು /
ಒಳಿತನ್ನು ಮಾಡುವವರಾರು ಇಲ್ಲ
ಅವರೊಳು //
2 : ಮಾನವರನು ದೇವ ಸ್ವರ್ಗದಿಂದ
ಸಮೀಕ್ಷಿಸುತಿಹನು /
ತನ್ನನು ಅರಸುವ ಸನ್ಮತಿಗಳಾರೆಂದು
ವೀಕ್ಷಿಸುತಿಹನು //
3 : ಒಳಿತನೆಸಗುವವರು ಒಬ್ಬರೂ ಇಲ್ಲ /
ದ್ರೋಹಿಗಳು, ದುಷ್ಕರ್ಮಿಗಳು ಅವರೆಲ್ಲ //
4 : ದುರ್ಜನರು ನನ್ನ ಜನರನು ಕೂಳಿನಂತೆ
ನುಂಗುವುದೇಕೆ?/
ದೇವರನು ನೆನೆಯದಾ ದುಷ್ಕರ್ಮಿಗಳಿಗೆ
ಅರಿವಿಲ್ಲವೇಕೆ?//
5 : ದಿಗ್ಭ್ರಾಂತರಾಗುವರಿದೋ ಹಿಂದೆಂದು
ಇಲ್ಲದಂತೆ ದುರುಳರು /
ದೇವರಿಂದ ತಿರಸ್ಕøತವಾದ ಅವರು
ಪರಾಜಿತರಾಗುವರು /
ದಿಕ್ಕುಪಾಲಾಗುವುವು ನಿಮ್ಮ ಮೇಲೆ ಬಿದ್ದವರ
ಮೂಳೆಗಳು //
6 : ಬರಲಿ ಇಸ್ರಯೇಲಿಗೆ ಜೀವೋದ್ಧಾರ
ಸಿಯೋನಿನಿಂದ /
ತರಲಿ ದೇವರು ತನ್ನ ಪ್ರಜೆಗೆ ಮರಳಿ ಸಿರಿಸಂಪದ /
ನೀಡಲಿ ಯಕೋಬ ಮೇಣ್ ಇಸ್ರಯೇಲ
ಜನತೆಗೆ ಹರ್ಷಾನಂದ //