1 : ನೀಚಕಾರ್ಯವೆಸಗಿ ಹಿಗ್ಗುವ
ಘನ ಮಾನವನೆ /
ದೇವರ ಅನಂತ ಕೃಪೆಯನು
ಪ್ರತಿಭಟಿಸುವವನೆ /
ದೇವರ ದೃಷ್ಟಿಯಲಿ ನೀನು ಹೀನಾಯನೆ //
2 : ಕ್ಷೌರಗತ್ತಿಗೂ ಹರಿತ ನಿನ್ನ ನಾಲಿಗೆ, ವಂಚಕನೆ /
ಕಲ್ಪಿಸುವೆಯಾ ದಿನವೆಲ್ಲಾ
ನಾಶವಿನಾಶವನೆ?//
3 : ಒಳಿತಿಗಿಂತ ಕೆಡಕು ಮಾಡುವುದು ನಿನಗಿಷ್ಟ /
ಸತ್ಯಕ್ಕಿಂತ ಸುಳ್ಳಾಡುವುದೇ ನಿನ್ನ ಚಟ /
4 : ಓ ನಾಲಿಗೆಯೇ, ನೀನು ಕಪಟ /
ಹಾನಿಕರ ಮಾತೇ ನಿನಗಪ್ಪಟ //
5 : ನಸುಕುವನು ದೇವರು ನಿನ್ನನು ನಿರುತ /
ದೂರಮಾಡುವನು ನಿನ್ನಾ ಗುಡಾರದಿಂದ /
ಕಿತ್ತೆಸೆದುಬಿಡುವನು ಜೀವದ ನಾಡಿಂದ //
6 : ಸಜ್ಜನರು ಚಕಿತರಾಗುವರು ಕಂಡಿದನು /
“ದೇವರನು ಆಶ್ರಯಿಸಿಕೊಳ್ಳದವನಿವನು /
7 :
ಸಿರಿ ಸಂಪತ್ತಿನಲೆ ಭರವಸೆಯಿಟ್ಟವನು /
ತುಚ್ಛಕಾರ್ಯಗಳಲೆ ಹೆಚ್ಚಳಪಟ್ಟವನು”/
ಎಂದು ಜರೆದು ಮಾಡುವರು ಪರಿಹಾಸ್ಯವನು
8 : ನಾನಾದರೋ ದೇಗುಲದಲಿ ಬೆಳೆದಿಹ ಎಣ್ಣೆ
ಮರದಂತಿರುವೆನು /
ದೇವರ ಸ್ಥಿರಪ್ರೀತಿಯನು ಯುಗಾಂತರಕು
ನಂಬಿಕೊಂಡಿರುವೆನು //
9 : ನಿನ್ನುಪಕಾರವನು ಹೇ ದೇವಾ, ನಾ ಸದಾ
ಸ್ಮರಿಸುವೆನು /
ನಿನ್ನ ಶ್ರೇಷ್ಠ ನಾಮವನು ಭಕ್ತರ ಮುಂದೆ
ಸ್ತುತಿಸುವೆನು //