1 : ಸರ್ವಜನಾಂಗಗಳೆ, ಗಮನಿಸಿರಿ /
ಭೂನಿವಾಸಿಗಳೆ, ನನಗೆ ಕಿವಿಗೊಡಿ
2 : ಜನಸಾಮಾನ್ಯರೆ, ಜನಾಧಿಪತಿಗಳೆ,
ದರಿದ್ರರೆ, ಧನವಂತರೆ /
ನೀವೆಲ್ಲರು ನನ್ನ ಮಾತುಗಳಿಗೆ ಕಿವಿಗೊಟ್ಟು
ಆಲಿಸಿರೈ //
3 : ನನ್ನ ಬಾಯಿ ಬೋಧಿಸುವುದು ಸುಜ್ಞಾನವನು /
ನನ್ನ ಮನ ಧ್ಯಾನಿಸುವುದು ವಿವೇಚನೆಯನು //
4 : ನಾ ಕಿವಿಗೊಟ್ಟು ಆಲಿಸುವೆನು ಧರ್ಮದ
ಗಾದೆಯನು /
ವೀಣೆ ನುಡಿಸುತ ವಿವರಿಸುವೆನು ಅದರ
ಗೂಡಾರ್ಥವನು //
5 : ಆಪತ್ಕಾಲದಲಿ ನಾನೇಕೆ ಭಯಪಡಬೇಕು?/
ದ್ವೇಷಿಗಳ ದಾಳಿಗೆ ನಾನೇಕೆ ಹೆದರಬೇಕು?//
6 : ಅವರ ಭರವಸೆ ಸಿರಿಸಂಪತ್ತಿನಲಿ / ಅವರ ಹಿರಿಮೆ ಅಧಿಕಾಸ್ತಿಪಾಸ್ತಿಯಲಿ //
7 : ತನ್ನನು ತಾನೇ ಮುಕ್ತಗೊಳಿಸಿಕೊಳ್ಳುವ
ಜೀವಾತ್ಮನಿಲ್ಲ /
ದೇವರಿಗೆ ಈಡುಕೊಟ್ಟು ಪ್ರಾಣ ಉಳಿಸಿಕೊಳ್ಳ
ಬಲ್ಲ ನರನಿಲ್ಲ //
8 : ಪ್ರಾಣಕೆ ತೆರಬೇಕಾದ ಈಡು ಅಮೂಲ್ಯ /
ಅದಕೆ ಸಾಕಷ್ಟು ತೆರಲು ಯಾರಿಗೂ ಅಸಾಧ್ಯ //
9 : ಸಮಾಧಿಗಿಳಿಯದೆ ಸದಾ ಬಾಳುವ ಬಯಕೆ /
ಮಾನವ ಶಕ್ತಿಗೆ ವಿೂರಿದುದು ಆ ಗಳಿಕೆ /
10 : ಬುದ್ಧಿಜೀವಿಗಳೂ ಸಾಯುವುದು ಖಂಡಿತ /
ಮೂರ್ಖ, ಮಂದಗತಿಗಳ ಅಳಿವೂ ನಿಶ್ಚಿತ /
ಅವರ ಸೊತ್ತು ಪರರ ಪಾಲು, ಇದೂ ಖಚಿತ //
11 : ತಮ್ಮ ಹೆಸರಲೆಷ್ಟೋ ಸೊತ್ತಿದ್ದರೂ /
ಸಮಾಧಿಯೇ ಅವರಿಗೆ ಶಾಶ್ವತ ಮಂದಿರವು /
ಅದುವದುವೇ ಅವರಿಗೆ ನಿತ್ಯ ನಿವಾಸವು //
12 : ನೆಲೆಯಾಗಿರನು ನರನು ಪಟ್ಟಪದವಿಯಲಿ /
ನಾಶವಾಗುವನು ಪಶುಪ್ರಾಣಿಗಳ ಪರಿ //
13 : ಮೂಢನಂಬಿಕೆಯುಳ್ಳವರ ಗತಿ ಇದುವೇ /
ಆ ಮೂಢರ ನಂಬಿ ನಡೆದವರಿಗು ಹಾಗೆಯೇ //
14 : ದೂಡುವನು ಅವರನು ಕುರಿಹಿಂಡಿನಂತೆ
ಪಾತಾಳಕೆ /
ಮರಣವೇ ಕುರಿಗಾಹಿ ಆ ನಿಧನ ನಿವಾಸಿ
ಗಳಿಗೆ /
ವಿನಾಶಗೊಳ್ವುದು ಆ ತಳದಲ್ಲಿ ಅವರ ರೂಪ
ರೇಖೆ /
ಆಳುವರು ಸಜ್ಜನರು ಅವರೆಲ್ಲರನು
ಉದಯಕಾಲಕೆ //
15 : ನನ್ನನ್ನಾದರೊ ಸ್ವಾಗತಿಸುವನು ದೇವನು /
ಪಾತಾಳದ ಹಿಡಿತದಿಂದ ಬಿಡಿಸುವನು //
16 : ಒಬ್ಬನು ಧನಿಕನಾದಾಗ ನೀ
ಕಳವಳಗೊಳ್ಳಬೇಡ /
ಅವನ ಮನೆಯ ಸೊಬಗನು ಕಂಡು
ನಿರಾಶೆಗೊಳ್ಳಬೇಡ //
17 : ಸಾಯುವಾಗ ಏನನೂ ಕೊಂಡು
ಹೋಗುವುದಿಲ್ಲ /
ಘನತೆ ಅವನ ಬೆನ್ನು ಹತ್ತಿ ಹೋಗುವಂತಿಲ್ಲ //
18 : ಸಿರಿಬಂದಾಗ ಕೊರತೆಯಿರದು ಹೊಗಳಿಕೆಗೆ /
ಆತ್ಮಸ್ತುತಿ, ಮುಖಸ್ತುತಿ, ಇವುಗಳ ಮೆರೆತಕೆ //
19 : ಸೇರದಿರನಾತ ಪಿತೃಗಳಧೋಗತಿಯನು /
ಅವಿವೇಕಿ ಕಾಣನು ಎಂದಿಗೂ
ಪರಂಜ್ಯೋತಿಯನು //
20 : ನೆಲೆಯಾಗಿರನು ಪಟ್ಟಪದವಿಯಲಿ /
ನಾಶವಾಗುವನು ಪಶುಪ್ರಾಣಿಗಳ ಪರಿ //