1 : ಸರ್ವಸ್ತುತಿಗೆ ಪಾತ್ರ, ಪ್ರಭುವು
ಪರಮೋನ್ನತ /
ದೇವನಗರದಲಿ ಆತನ ಪವಿತ್ರ ಪರ್ವತ //
2 : ಪರಾತ್ಪರನಾದ ಪ್ರಭುವು ಘನಗಂಭೀರನು |
ಪ್ರಪಂಚಕ್ಕೆಲ್ಲ ರಾಜಾಧಿರಾಜನು ||
3 : ಜನಾಂಗಗಳನಾತ ನಮಗಧೀನಪಡಿಸಿಹನು |
ರಾಷ್ಟ್ರಗಳನು ನಮಗೆ ಪಾದಪೀಠವಾಗಿಸಿಹನು ||
4 : ಆಯ್ದನಾಡನು ಸೊತ್ತಾಗಿ ನೀಡಿದನೆಮಗೆ |
ಪ್ರತಿಷ್ಠಿತರು ನಾವು, ಆತನೊಲಿದ ಯಕೋಬಿಗೆ ||
5 : ಏರಿದನು ಪ್ರಭು ಜಯಜಯಕಾರದೊಂದಿಗೆ |
ಆರೋಹಣವಾದನು ತುತೂರಿನಾದ ಜೊತೆಗೆ ||
6 : ಕೀರ್ತಿಸಿರಿ, ನಮ್ಮ ದೇವನನು ಸಂಕೀರ್ತಿಸಿರಿ |
ಕೀರ್ತಿಸಿರಿ, ನಮ್ಮ ರಾಜನನು ಸಂಕೀರ್ತಿಸಿರಿ ||
7 : ದೇವನು ಭೂಮಂಡಲಕ್ಕೆಲ್ಲಾ ಒಡೆಯನು |
ಕೀರ್ತನೆಯಿಂದ ಕೊಂಡಾಡಿರಿ ಆತನನು ||
8 : ಕಿವಿಯಾರೆ ಕೇಳಿದಂತೆಯೆ ಕಣ್ಣಾರೆ ಕಂಡೆವು /
ಸರ್ವಶಕ್ತ ಪ್ರಭುವನು ದೇವನಗರದಲಿ
ಕಂಡೆವು //
9 : ನಿನ್ನಚಲ ಪ್ರೀತಿಯನು ದೇವಾ, ಸ್ಮರಿಸುವೆವು /
ನಿನ್ನ ಮಹದಾಲಯದೊಳು ಅದನು
ಧ್ಯಾನಿಸುವೆವು //
10 : ನಿನ್ನ ನಾಮದಂತೆ ನಿನ್ನಾ ಹೊಗಳಿಕೆ /
ಮುಟ್ಟುತ್ತದೆ ಜಗದ ಎಲ್ಲೆ ಎಲ್ಲೆಗೆ /
ದೇವಾ, ನೀತಿಭರಿತ ನಿನ್ನ ಆಳ್ವಿಕೆ //
11 : ಸಿಯೋನ್ ಪಟ್ಟಣಿಗರು ಹರ್ಷಗೊಳ್ಳಲಿ /
ಯೆಹೂದ್ಯ ನಗರಗಳು ಆನಂದಪಡಲಿ /
ನಿನ್ನ ನ್ಯಾಯವನು ನೆನಪಿಸಿಕೊಳ್ಳಲಿ //
12 : ಸಂಚಾರಮಾಡಿರಿ ಸಿಯೋನ್ ನಗರದೊಳು /
ಮಾಡಿರಿ ಪ್ರದಕ್ಷಿಣೆ ಅದರ ಸುತ್ತಲು /
ಲೆಕ್ಕವಿಲ್ಲದಿವೆ ನೋಡಿ ಗೋಪುರಗಳು //
13 : ಕಣ್ಣಿಟ್ಟು ನೋಡಿರಿ ಅದರ ಕೋಟೆಗಳನು /
ಚೆನ್ನಾಗಿ ಗಮನಿಸಿರಿ ಅದರ ಪ್ರಾಕಾರಗಳನು //
14 : ಆಗ ತಿಳಿಸಿರಿ ಮುಂದಣ ಪೀಳಿಗೆಗಿಂತೆಂದು -
“ಈತನೀತನೇ ನಮ್ಮ ದೇವನು
ಯುಗಯುಗಕು /
ನಮಗೀತ ಮಾರ್ಗದರ್ಶಕ ತಲತಲಾಂತರಕು” /