1 : ಸರ್ವ ಜನಾಂಗಗಳೇ, ಚಪ್ಪಾಳೆ
ಹೊಡೆಯಿರಿ /
ಸರ್ವೇಶ್ವರನಿಗೆ ಜಯಜಯ
ಘೋಷ ಮಾಡಿರಿ //
2 : ಎತ್ತರದಲಿ ಸುಂದರ, ಉತ್ತರದಲಿ ಸಿಯೋನ್
ಶಿಖರ /
ಆನಂದದಾಯಕ ರಾಜಾಧಿರಾಜನ ಆ ನಗರ //
3 : ಅದರ ಕೋಟೆಕೊತ್ತಲಗಳ ನಡುವೆ ದೇವನು /
ತಾನೇ ಸುಭದ್ರ ದುರ್ಗವೆಂದು ತೋರಿಹನು //
4 : ಕೂಡಿದರೊಂದಾಗಿ ರಾಜರುಗಳು,
ದಾಳಿಮಾಡಬಂದರು /
ನೋಡಿ ನಿಬ್ಬೆರಗಾದರು, ತಲ್ಲಣಗೊಂಡು
ಓಡಿಹೋದರು //
5 : ಕೂಡಿದರೊಂದಾಗಿ ರಾಜರುಗಳು,
ದಾಳಿಮಾಡಬಂದರು /
ನೋಡಿ ನಿಬ್ಬೆರಗಾದರು, ತಲ್ಲಣಗೊಂಡು
ಓಡಿಹೋದರು //
6 : ಕೀರ್ತಿಸಿರಿ, ನಮ್ಮ ದೇವನನು ಸಂಕೀರ್ತಿಸಿರಿ / ಕೀರ್ತಿಸಿರಿ, ನಮ್ಮ ರಾಜನನು ಸಂಕೀರ್ತಿಸಿರಿ //
7 : ದೇವನು ಭೂಮಂಡಲಕ್ಕೆಲ್ಲಾ ಒಡೆಯನು /
ಕೀರ್ತನೆಯಿಂದ ಕೊಂಡಾಡಿರಿ ಆತನನು //
8 : ವಹಿಸಿಕೊಂಡನು ದೇವನು ಸರ್ವಾಧಿಪತ್ಯ /
ಅಲಂಕರಿಸಿಹನು ತನ್ನ ಪೂಜ್ಯ ಗದ್ದುಗೆಯ //
9 : ಒಟ್ಟುಗೂಡಿ ಬಂದರು ಪ್ರಜೆಯ ಪ್ರಮುಖರು /
ಅಬ್ರಹಾಮನ ದೇವಜನರೊಡನೆ
ಸೇರಿಕೊಂಡರು //
ಭೂಪಾಲರೆಲ್ಲರೂ ದೇವರಿಗೆ ಅಧೀನರು /
ಸರ್ವೋನ್ನತನು, ಸಾರ್ವಭೌಮನು ದೇವರು //