1 : ದೇವರೆಮಗೆ ಆಶ್ರಯ ದುರ್ಗ /
ಸಂಕಟದಲಿ ಸಿದ್ಧ ಸಹಾಯಕ //
2 : ಕಡಲಲ್ಲಿ ಗುಡ್ಡಗಳು ಮುಳುಗಿದರೂ ದಿಗಿಲಿಲ್ಲ / ಪೊಡವಿ ಕಂಪಿಸಿದರು ನಮಗೇನು ಭಯವಿಲ್ಲ //
3 : ಸಮುದ್ರ ಭೋರ್ಗರೆದರೇನು? ನೊರೆಕಾರಿದರೇನು?/ ಅದರೊಡನೆ ಪರ್ವತಗಳು ಅಲುಗಾಡಿದರೇನು?// ನಮ್ಮ ಕಡೆಗಿರುವನು ಸೇನಾಧೀಶ್ವರ ಪ್ರಭುವು / ಯಕೋಬ ಕುಲದೇವನು ನಮಗಾಶ್ರಯ ದುರ್ಗವು //
4 : ನದಿಯೊಂದು ಆನಂದಗೊಳಿಸುವುದು
ದೇವನಗರವನು |
ಪುನೀತಗೊಳಿಸುವುದು ಪರಾತ್ಪರನ
ನಿವಾಸವನು ||
5 : ದೇವನಿರುವನಾ ನಗರ ಮಧ್ಯೆ, ಅಳಿವಿಲ್ಲ ಅದಕೆ /
ಉದಯಕಾಲದಲೆ ದೇವ ಬರುವನು
ಅದರ ಸಹಾಯಕೆ //
5 : ಏರಿದನು ಪ್ರಭು ಜಯಜಯಕಾರದೊಂದಿಗೆ /
ಆರೋಹಣವಾದನು ತುತೂರಿನಾದ ಜೊತೆಗೆ //
6 : ನಡುಗಿದವು ರಾಷ್ಟ್ರಗಳು, ಉಡುಗಿದವು
ರಾಜ್ಯಗಳು /
ದೇವರ ಗರ್ಜನೆಗೆ ಕರಗಿತು ಧರೆಯೆಲ್ಲವು //
7 : ನಮ್ಮ ಕಡೆಯಿರುವನು ಸೇನಾಧೀಶ್ವರ
ಪ್ರಭುವು /
ಯಕೋಬ ಕುಲದೇವರು ನಮಗಾಶ್ರಯ
ದುರ್ಗವು //
8 : ಪ್ರಭುವಿನ ಕಾರ್ಯಗಳ ನೋಡಬನ್ನಿ /
ಇಳೆಯೊಳಗೆಸಗಿದ ಪವಾಡಗಳನು ನೋಡಿ //
9 : ಜಗದೆಲ್ಲೆಡೆ ಕದನ ಕಾಳಗ ನಿಲ್ಲಿಸಿಹನು /
ಬಿಲ್ಲು ಭಲ್ಲೆಗಳನು ಮುರಿದು ಹಾಕಿದನು /
ರಥಗಳನು ಬೆಂಕಿಯಿಂದ ಸುಟ್ಟುಹಾಕಿದನು //
10 : ‘ಶಾಂತರಾಗಿರಿ, ತಿಳಿಯಿರಿ ನಾನು ದೇವನೆಂದು /
ಜನಕ್ಕೂ ಜನಾಂಗಕ್ಕೂ ನಾನಧಿಪತಿಯೆಂದು’//
11 : ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು /
ಯಕೋಬ ಕುಲದೇವರು ನಮಗಾಶ್ರಯ
ದೇವರು //