1 : ಕೇಳಿದೆವು ಕಿವಿಯಾರೆ ದೇವಾ, ನೀ ಎಸಗಿದ ಘನಕಾರ್ಯಗಳನು / ವಿವರಿಸಿಹರು ನಮ್ಮ ಪೂರ್ವಜರು ನಿನ್ನಾ ಮಹತ್ಕಾರ್ಯಗಳನು //
2 : ಹೊರಗಟ್ಟಿದೆ ಪರಕೀಯರನು, ನಮ್ಮ
ಪೂರ್ವಜರ ನೆಲೆಗೊಳಿಸಲು /
ವಿನಾಶಗೊಳಿಸಿದೆ ಅನ್ಯರನು, ನಮ್ಮವರನು
ವಿಕಾಸಗೊಳಿಸಲು //
3 : ನಾಡಗೆದ್ದುದು ನಮ್ಮವರ ಕತ್ತಿಯಲ್ಲ /
ಜಯ ದೊರೆತದು ತಮ್ಮ ಭುಜ ಬಲದಿಂದಲ್ಲ //
ಜಯ ತಂದಿತು ನಿನ್ನ ಬಲಹಸ್ತ, ನಿನ್ನ ಮುಖ
ಕಾಂತಿ /
ನಿನ್ನ ಭುಜಬಲ, ನೀತೋರಿದಾ ಅಚಲಪ್ರೀತಿ //
4 : ಯಕೋಬಿಗೆ ವಿಜಯ ಗಿಟ್ಟಿಸಿದಾತ /
ನೀನಲ್ಲವೆ ದೇವಾ, ನನ್ನ ಅರಸ?//
5 : ಶತ್ರುಗಳನು ಸದೆಬಡಿವೆವು ನಿನ್ನ ಬೆಂಬಲದಿಂದ /
ಎದುರಾಳಿಯನು ತುಳಿವೆವು ನಿನ್ನ
ಆವೇಶದಿಂದ //
6 : ಬಿಲ್ಲುಬಾಣದಲಿ ನಾ ಭರವಸೆಯಿಡುವುದಿಲ್ಲ /
ಕತ್ತಿ ಕಠಾರಿ ನನಗೆ ರಕ್ಷಣೆ ತರುವುದಿಲ್ಲ //
7 : ಹಿಂಸಕರಿಂದ ಸಂರಕ್ಷಿಸುವಾತ ನೀನೆ /
ಹಗೆಗಳಿಗೆ ಆಶಾಭಂಗ ತರುವಾತ ನೀನೆ //
8 : ನಿನ್ನಲ್ಲಿಯೇ ದೇವಾ, ಹೆಮ್ಮೆಪಡುವೆವು ಸತತ /
ನಿನ್ನ ನಾಮವನೆ ಸಂಕೀರ್ತಿಸುವೆವು ನಿರುತ //
9 : ಆದರೀಗ ನಮ್ಮನು ಕಡೆಗಣಿಸಿರುವೆ, ಕೈ
ಬಿಟ್ಟಿರುವೆ /
ನಮ್ಮ ಸೇನೆಗಳ ಸಂಗಡ ದೇವ, ಹೊರಟು
ಬರದಿರುವೆ //
10 : ಶತ್ರುಗಳಿಗೆ ಬೆಂಗೊಟ್ಟು ನಾವೋಡುವಂತೆ
ಮಾಡಿರುವೆ /
ಹಗೆಗಳು ಹಾಯಾಗಿ ಸೊತ್ತನು ಸೂರೆಮಾಡ
ಬಿಟ್ಟಿರುವೆ //
11 : ನಮ್ಮ ನೊಪ್ಪಿಸಿರುವೆ ವಧ್ಯಸ್ಥಾನಕೊಯ್ದ
ಕುರಿಗಳಂತೆ /
ಚದರಿಸಿಬಿಟ್ಟಿರುವೆ ನಮ್ಮನು ಅನ್ಯಜನಾಂಗಗಳ
ಮಧ್ಯೆ //
12 : ಬಿಡುಕಾಸಿಗಿಂತ ಕಡೆಗಾಣಿಸಿರುವೆ ನಿನ್ನ
ಪ್ರಜೆಯನು /
ಲಾಭವಿಲ್ಲದವರಂತೆ ವಿಕ್ರಯಿಸಿರುವೆ
ಅದನು //
13 : ಪರರು ನಮ್ಮನು ಜರೆಯುವಂತೆ ಮಾಡಿರುವೆ /
ನೆರೆಯವರ ಪರಿಹಾಸ್ಯಕ್ಕೆ ಗುರಿಪಡಿಸಿರುವೆ //
14 : ಅನ್ಯಜನ ನಮ್ಮ ನಣಕಿಸಿ ತಲೆಯಾಡಿಸುವಂತೆ
ಮಾಡಿರುವೆ /
ಅನ್ಯಾಯಕ್ಕೆ ಅಡ್ಡಹೆಸರಾಗುವಂತೆ ನಮ್ಮನು
ಬಿಟ್ಟಿರುವೆ //
15 : ನನ್ನ ಕಣ್ಮುಂದಿದೆ ಈ ಅವಮಾನ ದಿನವೆಲ್ಲ /
ಲಜ್ಜೆಯಿಂದ ನಾ ಮುಖ
ಮುಚ್ಚಿಕೊಳ್ಳುವಂತಾಗಿದೆಯಲ್ಲಾ //
16 : ದೂಷಕರ ನಿಂದೆಗೆ ಆಸ್ಪದನಾದೆ /
ದ್ರೋಹಿಗಳ ವಕ್ರನೋಟಕೆ ಗುರಿಯಾದೆ //
17 : ನಿನ್ನ ಮರೆಯಲಿಲ್ಲ, ನಿನ್ನ ಒಪ್ಪಂದವನು
ವಿೂರಲಿಲ್ಲ /
ಆದರೂ ಒದಗಿವೆಯಲ್ಲ ನಮಗೀ
ಅನಾಹುತಗಳೆಲ್ಲ //
18 : ನಮ್ಮಂತರಂಗ ದೂರವಾಗಿಲ್ಲ ನಿನ್ನಿಂದ /
ನಾವು ಅಗಲಲಿಲ್ಲ ನೀನು ತೋರಿದ
ಮಾರ್ಗದಿಂದ //
19 : ಆದರೂ ನಮ್ಮನ್ನು ತಂದು ನಾಯಿನರಿಗಳ
ಪಾಲಾಗಿಸಿರುವೆ /
ಕಾರ್ಗತ್ತಲೆಮ್ಮನು ಸುತ್ತುವರಿಯುವಂತೆ
ಮಾಡಿರುವೆ //
20 : ನಮ್ಮ ದೇವನ ನಾಮವನು ಮರೆತಿದ್ದೆವಾದರೆ /
ಅನ್ಯದೇವರಿಗೆ ನಾವು ಕೈ ಮುಗಿದಿದ್ದೆವಾದರೆ, /
21 : ದೇವಾ, ನಿನಗದು ಬಂiÀiಲಾಗದಿರುತ್ತಿತ್ತೆ?/
ನಮ್ಮೆದೆ ಗುಟ್ಟು ನಿನಗೆ ತಿಳಿಯದಿರುತ್ತಿತ್ತೆ?//
22 : ಎಣಿಕೆಯಾಗಿಹೆವು ಕೊಯ್ಗುರಿಗಳಂತೆ ನಾವೆಲ್ಲ /
ಬಲಿಯಾಗುತಿಹೆವು ನಿನ್ನ ನಿಮಿತ್ತವೆ ದಿನವೆಲ್ಲ //
23 : ಪ್ರಭೂ, ಎದ್ದೇಳು, ನಿದ್ರಿಸಬೇಡ /
ನಮ್ಮನು ಎಂದೆಂದಿಗೂ ತೊರೆಯಬೇಡ //
24 : ಮರೆಸಿಕೊಂಡಿರುವೆಯೇಕೆ ನಿನ್ನ ಮುಖವನು?/
ಮರೆತಿರುವೆಯೇಕೆ ನಮ್ಮ ಹಿಂಸೆ
ಬಾಧೆಯನು?//
25 : ಮಣ್ಣುಪಾಲಾಗಿದೆ ನಮ್ಮ ಪ್ರಾಣ /
ನೆಲ ಕಚ್ಚಿಕೊಂಡಿದೆ ನಮ್ಮ ದೇಹ //
26 : ಎದ್ದು ಬಂದು ಪ್ರಭು ನಿನ್ನ ನೆರವನ್ನೊದಗಿಸು /
ನಿನ್ನ ಚಲ ಪ್ರೇಮದಿಂದ ನಮ್ಮನು ಉದ್ಧರಿಸು //