1 : ಬಾಯಾರಿದ ಜಿಂಕೆ ಹಾತೊರೆಯು
ವಂತೆ ತೊರೆಯಾಗಿ /
ದಣಿದೆನ್ನ ಮನ ದೇವಾ, ಹಂಬಲಿಸುತಿದೆ
ನಿನಗಾಗಿ
2 : ಜೀವಂತ ದೇವನಿಗಾಗಿ ದಾಹದಿಂದಿದೆ
ಎನ್ನ ಮನ /
ನಾ ತೆರಳಿ ಪಡೆವುದೆಂತು ಆ ದೇವನ
ಮುಖದರ್ಶನ? //
3 : “ಎಲ್ಲಿ? ನಿನ್ನ ದೇವನೆಲ್ಲಿ?” ಎಂದು ಜನ
ಜರೆಯುತಿರಲು /
ಕಂಬನಿಯೆ ನನಗನ್ನಪಾನವಾಗಿಹುದು
ಹಗಲಿರುಳು //
4 : ಜನಸಮೂಹದೊಡನೆ ನಾ ಜಯಜಯಕಾರ
ಮಾಡುತ /
ಸ್ತುತಿಗೀತೆಗಳ ಹಾಡುತ, ತೀರ್ಥಯಾತ್ರೆ
ಗೈಯುತ /
ದೇಗುಲಕೆ ತೆರಳಿದಾ ಸವಿನೆನಪು
ಮನಕರಗಿಪುದು ನಿರುತ //
5 : ಎನ್ನ ಮನವೆ, ಚಿಂತಿಸುವೆಯೇಕೆ?
ವ್ಯಥೆಪಡುವುದೇಕೆ? ದೇವನಲ್ಲಿಡು ನಂಬಿಕೆ /
ಮತ್ತೆ ಸ್ತುತಿಸುವೆ ನಾನಾತನನು, ಮುಕ್ತಿದಾತ,
ಪರಮಾತ್ಮ ಆತನೆನಗೆ //
6 : ನನಗಾಗುತ್ತದೆ ನಿನ್ನ ಸ್ಮರಣೆ ಮನ ಕುಗ್ಗಿದಾಗ /
ಜೋರ್ದನ್, ಹೆರ್ಮನ್ ನಾಡಿಂದ,
ವಿೂಸಾರ್ ಗುಡ್ಡೆಯಿಂದ //
7 : ನಿನ್ನ ಜಲಪಾತಗಳ ಘನನಿನಾದ, ಮಡುವು
ಮಡುವನು ಕರೆದಂತಿದೆ /
ನಿನ್ನಲೆಗಳು, ಎಲ್ಲ ತರಂಗಗಳು ತಲೆಯ ಮೇಲೆ
ಹಾದು ಹೋದಂತಿವೆ //
8 : ಹಗಲಲಿ ಪ್ರೀತಿಯನುಗ್ರಹಿಸಲಿ ದೇವನೆನಗೆ /
ಇರುಳಲಿ ಎನ್ನಯ ಬಾಯಲ್ಲಿರಲಿ ಆತನ
ಗೀತೆ /
ಪ್ರಾರ್ಥನೆ ಸಲ್ಲಲಿ ಎನ್ನ ಜೀವಾದಾರ ದೇವಗೆ //
9 : ಶರಣ ದೇವನಿಗೆ “ದೇವಾ, ನನ್ನನೇಕೆ ಮರೆತೆ?/
ನಾನಲೆಯಬೇಕೆ ಶತ್ರುಬಾಧೆಪೀಡಿತನಾಗಿ
ಭಿಕಾರಿಯಂತೆ?” //
10 : “ನಿನ್ನ ದೇವನೆಲ್ಲಿ?” ಎಂದು ವಿರೋಧಿಗಳು
ಸತತ ಹಂಗಿಸುವಾಗ /
ನನ್ನೆಲುಬುಗಳು ಮುರಿದಂತಾಗುತ್ತದೆ ಆ
ಜರೆಯ ಕೇಳಿದಾಗ //
11 : ಎನ್ನ ಮನವೆ, ಚಿಂತಿಸುವೆಯೇಕೆ?
ವ್ಯಥೆಪಡುವುದೇಕೆ? ದೇವನಲ್ಲಿಡು ನಂಬಿಕೆ /
ಮತ್ತೆ ಸ್ತುತಿಸುವೆ ನಾನಾತನನು, ಮುಕ್ತಿದಾತ,
ಪರಮಾತ್ಮ ಆತನೆನಗೆ//