1 : ಸತ್ಯಸ್ವರೂಪನಾದ ದೇವಾ, ಭಕ್ತನ ಮೊರೆಗೆ
ಸದುತ್ತರ ಪಾಲಿಸೊ /
ಆಪತ್ತಿನಲ್ಲಿ ಆಶ್ರಯವಿತ್ತ ದೇವಾ, ಎನ್ನ
ಪ್ರಾರ್ಥನೆಯ ಆಲಿಸೊ /
2 : ಎಲೆ ಮಾನವ, ಎಲ್ಲಿಯತನಕ ಕೆಡಿಸುವೆ ಎನ್ನ
ಘನತೆಯ? /
ಅದೆಷ್ಟು ಕಾಲ ಹುರುಳಿಲ್ಲದನು ಬಯಸಿ
ಅರಸುವೆ ಹುಸಿಯ? //
3 : ಭಕ್ತನನು ಪ್ರಭು ಪ್ರತ್ಯೇಕಿಸಿಕೊಂಡನೆಂದು
ತಿಳಿದುಕೊ /
ನಾ ಮೊರೆಯಿಟ್ಟಾಗ ಆತ ಕಿವಿಗೊಡುವನೆಂದು
ಅರಿತುಕೊ //
4 : ಕೋಪಗೊಂಡರೂ ದೂರವಿರು ಪಾಪದಿಂದ /
ಶಯನದಲ್ಲಿದ್ದರೂ ಧ್ಯಾನಿಸು
ಹೃದಯದಿಂದ //
5 : ಅರ್ಪಿಸಿರಿ ಯೋಗ್ಯ ಬಲಿಗಳನೆ /
ಇಡಿರಿ ಭರವಸೆ ಪ್ರಭುವಿನಲೆ //
6 : “ಒಳಿತು ಮಾಳ್ಪರೆಲ್ಲಿ !” ಎಂದು ಕೇಳುತಿಹರು
ಜನತೆ /
ಬೆಳಗಿಸಲಿ ನಮ್ಮನು, ಓ ಪ್ರಭು, ನಿನ್ನ ಮೊಗದ
ಘನತೆ //
7 : ಧಾನ್ಯದ್ರಾಕ್ಷಿಗಳ ಸುಗ್ಗಿಸಂತಸಕ್ಕಿಂತಲು / ಮಿಗಿಲಾನಂದ ತುಂಬಿಸಿರುವೆ ನೀ ಎನ್ನೆದೆಯೊಳು //
8 : ಮಲಗಿ ನಿದ್ರಿಸುವೆನು ನಾ ನಿಶ್ಚಿಂತನಾಗಿ /
ಪ್ರಭು ನೀ ಕಾಯುವೆ ಎನ್ನ ಸುರಕ್ಷಿತವಾಗಿ //