Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಕೀರ್ತನೆ


1 : ಜಿನುಗುಟ್ಟುತಿಹುದು ಪಾಪವು ದುಷ್ಟನ ಮನದಲಿ / ದೇವ ಭಯವೇ ಇಲ್ಲ ಅವನ ಕಣ್ಣೆದುರಿನಲಿ //
2 : “ಬೈಲಿಗೆ ಬಾರದು ನಿನ್ನ ದೋಷವು, ನಿನಗದು ಕೇಡು ತರದು” / ಇಂತುಲಿದು ಆ ಪಾಪವ ಜಿನುಗು ಅವನನು ವಂಚಿಸುತಿಹುದು //
3 : ಅವನ ಕೀಳು ಬಾಯಿಯ ತುಂಬ ಕೇಡು ಕಪಟ / ಸನ್ಮತಿ ಸತ್ಕಾರ್ಯಗಳನ್ನು ಬಿಟ್ಟೇ ಬಿಟ್ಟ //
4 : ಆಲೋಚಿಸುತ್ತಿಹನು ಅಕ್ರಮವನು ಹಾಸಿಗೆಯಿಂದಲೆ / ಹೇಸನು ದುಷ್ಕøತ್ಯಕ್ಕೆ, ಮುನ್ನುಗ್ಗುವನು ದುರ್ಮಾರ್ಗದಲೆ //
5 : ನಿನ್ನ ಪ್ರೀತಿ ಪ್ರಭು, ಚುಂಬಿಸುತಿಹುದು ಗಗನವನು / ನಿನ್ನ ಸತ್ಯವು ಮುಟ್ಟುತಿಹುದು ಮೇಘ ಮಂಡಲವನು //
6 : ನಿನ್ನ ನೀತಿ ಸುರಗಿರಿಯಂತೆ, ನಿನ್ನ ನ್ಯಾಯ ಮಹಾಸಾಗರದಂತೆ / ಮಾನವರನು, ಪಶು ಪ್ರಾಣಿಗಳನು ಪ್ರಭು, ಸಲಹುವೆ ರಕ್ಷಕನಂತೆ //
7 : ನಿನ್ನಚಲ ಪ್ರೀತಿ, ಹೇ ದೇವಾ, ಎಷ್ಟೋ ಅಮೂಲ್ಯ / ನಿನ್ನಕ್ಕರೆಯ ರೆಕ್ಕೆಗಳಡಿ ನರಮಾನವರಿ ಗಾಶ್ರಯ //
8 : ಅವರ ತೃಪ್ತಿ ನಿನ್ನ ಮಂದಿರದ ಸಮೃದ್ಧಿಯಿಂದ / ಅವರ ಪಾನೀಯ ನಿನ್ನ ಸಂಭ್ರಮ ಪ್ರವಾಹದಿಂದ //
9 : ನಿನ್ನಲ್ಲಿದೆ ಜೀವದ ಬುಗ್ಗೆ / ನಿನ್ನ ಬೆಳಕಿಂದ ಬೆಳಕೆಮಗೆ //
10 : ನಿನ್ನನರಿತವರನು ಪ್ರೀತಿಸು ಮುಂದಕ್ಕೂ / ಒಳಿತನ್ನು ಮಾಡು ನೇರಮನಸ್ಕರಿಗೂ //
11 : ಗರ್ವಿಗಳ ಕಾಲಿಗೆ ನಾ ಬೀಳುವುದು ಬೇಡ / ದುರುಳರ ಕೈ ನನ್ನ ಹೊರದೂಡುವುದು ಬೇಡ //
12 : ಕೇಡು ಮಾಡಿದವರಿದೋ ಕೆಳಗೆ ಬಿದ್ದಿಹರು / ಮರಳಿ ಏಳಲಾಗದೆ ಮಡಿದು ಬಿದ್ದಿಹರು //

· © 2017 kannadacatholicbible.org Privacy Policy