1 : ಪ್ರಭೂ, ನನಗೆ ವಿರೋಧಿಗಳು ಅನೇಕ /
ನನಗೆದುರಾಗಿ ನಿಂತವರು ಅತ್ಯಧಿಕ //
2 : “ಈತನಿಗೆ ದೇವರ ನೆರವೆನಿತು?” /
ಇಂತಿದೆ ಹಲವರ ಕೆಣಕು ಮಾತು //
3 : ನೀನಾದರೋ ಪ್ರಭು, ನನಗೆ ರಕ್ಷೆ,
ವಿಜಯದಾತ /
ನಾನು ತಲೆಯೆತ್ತಿ ನಡೆಯುವಂತೆ
ಮಾಡುವಾತ //
4 : ಸ್ವರವೆತ್ತಿ ಎನ್ನ ಪ್ರಭುವಿಗೆ ನಾ
ಮೊರೆಯಿಡುವೆನು /
ಸಿರಿಶಿಖರದಿಂದಾತನು ಸದುತ್ತರ
ನೀಡುವನು //
5 : ಹಾಯಾಗಿ ಮಲಗಿ ನಿದ್ರಿಸುವೆನು /
ಸುಖಿಯಾಗಿ ಮರಳಿ ಎದ್ದೇಳುವೆನು /
ಕಾಯ್ದು ಕಾಪಾಡುವನು ಪ್ರಭು ನನ್ನನು //
6 : ಶತ್ರುಗಳು ಸಾವಿರಾರಿದ್ದರೂ ನಾನವರಿಗಂಜೆನು //
ಸುತ್ತುವರಿದು ಸನ್ನದ್ಧರಾಗಿದ್ದರೂ
ಭಯಪಡೆನು //
7 : ಎದ್ದೇಳು ದೇವ, ಕಾಪಾಡ ಬಾ ಪ್ರಭುವೆ /
ವೈರಿಗಳ ದವಡೆ ಬಡಿದವನು ನೀನಲ್ಲವೆ? /
ದುರುಳರ ಹಲ್ಲುದುರಿಸಿದವನು ನೀನಲ್ಲವೆ? //
8 : ಜಯ ವಿಜಯ ಲಭಿಸುವುದು ಪ್ರಭುವಿನಿಂದಲೆ /
ನಿನ್ನಾಶೀರ್ವಾದವಿರಲಿ, ಪ್ರಭು,
ಪ್ರಜೆಯ ಮೇಲೆ //