1 : ಸುರಪುತ್ರರೇ, ಪ್ರಭುವಿನ ಸ್ತುತಿ
ಮಾಡಿರಿ /
ಒಲುಮೆ, ಮಹಿಮೆ, ಅವನದೇ ಎಂದು ಸಾರಿರಿ //
2 : ಸ್ತುತಿಸಿರಿ ಆತನ ಶ್ರೀನಾಮ ಮಹಿಮೆಯನು |
ಪೂಜಿಸಿರಿ ಪವಿತ್ರಾಂಬರರಾಗಿ ಆತನನು ||
3 : ಪ್ರಭು ಆಸೀನನು ಆಗಸದ ಜಲರಾಶಿಗಳ ಮೇಲೆ |
ಪ್ರತಿಭಾಸ್ವರೂಪನಾದ ದೇವನಿದೋ,
ಗುಡುಗುತ್ತಲೇ |
ಆತನಾಡಂಬರ ಧ್ವನಿ ಮೇಘಮಂಡಲದ
ಮೇಲೆ ||
4 : ಪ್ರಭುವಿನ ಧ್ವನಿ ಶಕ್ತಿಯುತ |
ಆತನ ಶಬ್ದ ವೈಭವಯುತ ||
5 : ಆತನ ಗರ್ಜನೆಗೆ ಮುರಿದುಬೀಳುವುವು
ದೇವದಾರು ಮರಗಳು |
ಹೌದ್ಹೌದು, ಸೀಳಿ ಹೋಳಾಗುವುವು
ಲೆಬನೋನಿನ ಮಹಾ ವೃಕ್ಷಗಳು ||
6 : ಜಿಗಿಯುವುದು ಲೆಬನೋನ್ ಪರ್ವತ
ಎಳೆಗರುವಿನಂತೆ |
ನೆಗೆಯುವುದು ಗಿರಿ ಸಿಯೋನ್
ಕಾಡೆಮ್ಮೆಯ ಕರುವಂತೆ ||
7 : ಆತನ ಮಹಾ ಗರ್ಜನೆಗೆ
ಥಳಥಳಿಸುವುವು ಕೋಲ್ಮಿಂಚುಗಳು /
8 : ಕಂಪಿಸುವುದು ಕಾದೇಶ ಅರಣ್ಯ,
ಕದಲುವುವು ಕಾಡುಮೇಡುಗಳು ||
9 : ಈಯುವುವು ಜಿಂಕೆಗಳು, ನಗ್ನವಾಗುವುವು
ವೃಕ್ಷಗಳು /
ಜಯಜಯ ಘೋಷಮಾಡುವರೆಲ್ಲರು
ಆತನಾಲಯದೊಳು //
10 : ಜಲಪ್ರಳಯದೊಳು ಪ್ರಭು ಆಸೀನ
ನಾಗಿಹನು /
ಯುಗಯುಗಾಂತರಕು ಅರಸನಾಗಿ ಆಳುವನು //
11 : ಅನುಗ್ರಹಿಸಲಿ ಪ್ರಭು ತನ್ನ ಜನರಿಗೆ
ಶಕ್ತಿಯನು /
ದಯಪಾಲಿಸಲಿ ತನ್ನ ಪ್ರಜೆಗೆ ಸುಕ್ಷೇಮವನು //