1 : ನನ್ನ ಮೊರೆ ಕೇಳು ಪ್ರಭು, ದುರ್ಗ
ನೀನೆನಗೆ /
ನೀ ಕಿವಿಗೊಡದಿರೆ, ನಾ ಸಮಾನ ಸತ್ತವರಿಗೆ //
2 : ನಿನ್ನ ಪರಿಶುದ್ಧಾಲಯದತ್ತ ಕೈಯೆತ್ತಿ ಮುಗಿವೆನು / ಕರುಣೆಯಿಂದಾಲಿಸು ಪ್ರಭು, ನನ್ನಾರ್ತ ಮನವಿಯನು //
3 : ದುರುಳರೊಡನೆ ದೂಡಬೇಡ, ದುರ್ಜನ ರೊಡನೆ ವಿಸರ್ಜಿಸಬೇಡೆನ್ನನು / ಪರರಿಗವರು ನುಡಿವರು ಶಾಂತಿಯನು ಉದರದಲ್ಲಿಡುವರು ಕ್ರೋಧವನು //
4 : ಕೇಡಿಗರು ಪರರಿಗೆ ಮಾಡಿದುದ ತಾವೇ ಉಣ್ಣಮಾಡು / ಅವರ ದುಷ್ಟಕಾರ್ಯಗಳಿಗೆ ತಕ್ಕುದಾದ ಶಿಕ್ಷೆ ನೀಡು //
5 : ಅರಿಯರವರು ಪ್ರಭುವಿನ ಕಾರ್ಯಗಳನು, ಆತನ ಕೈ ಕೆಲಸಗಳನು / ಈ ಕಾರಣ ಕೆಡವಿಬಿಡುವನು ಪ್ರಭು, ಮರಳಿ ಏಳಬಿಡನವರನು //
6 : ಪ್ರಭುವಿಗೆನ್ನ ಕೃತಜ್ಞತಾ ವಂದನೆ / ಆಲಿಸಿದನವನು ನನ್ನ ವಿಜ್ಞಾಪನೆ //
7 : ಪ್ರಭುವೇ ಶಕ್ತಿ, ಎನಗೆ ರಕ್ಷೆ, ಎನ್ನೆದೆಯ
ನಂಬುಗೆ /
ಎನ್ನ ಮನಃಪೂರ್ವಕ ಕೀರ್ತನೆ, ಆತನಿತ್ತ
ನೆರವಿಗೆ //
8 : ಪ್ರಭುವೆ ತನ್ನ ಪ್ರಜೆಯ ಪ್ರಾಬಲ್ಯವು /
ತನ್ನಭಿಷಿಕ್ತನಿಗೆ ಆಶ್ರಯ ದುರ್ಗವು //
9 : ರಕ್ಷಿಸು ನಿನ್ನ ಪ್ರಜೆಯನು, ಆಶೀರ್ವದಿಸು ನಿನ್ನ
ಜನರನು /
ಕುರಿಗಾಹಿ ನೀನಾಗಿರು ಪ್ರಭೂ, ಹೊತ್ತು
ಸಾಗಿಸು ಅವರನು //